ಸೋಮವಾರ, ಸೆಪ್ಟೆಂಬರ್ 30, 2013

ಹುಲಿಕಲ್ ನಟರಾಜ್ ಅವರಿಂದ ಪವಾಡ ರಹಸ್ಯ ಬಯಲು ದೇಶದ ನಿಜವಾದ ಭಯೋತ್ಪಾದನೆ ವಾಮಾಚಾರ: ನಟರಾಜ್ ಅಭಿಪ್ರಾಯ

ಉಡುಪಿ:ದೇಶದ ನಿಜವಾದ ಭಯೋತ್ಪಾದನೆ ವಾಮಾಚಾರ ಎಂದು ವಿಚಾರವಾದ ಹುಲಿಕಲ್ ನಟರಾಜ್ ಅಭಿಪ್ರಾಯಪಟ್ಟಿದ್ದಾರೆ. ವಾಮಾಚಾರದಲ್ಲಿ ಭಾರೀ ನಂಬಿಕೆ ಇರುವ ಮಂತ್ರವಾದಿಗಳು ದುರ್ಬಲ ಮನಸ್ಸಿಗೆ ಮೋಸ ಮಾಡುವುದರ ಬದಲು ತಮ್ಮ ಶಕ್ತಿಯನ್ನು ಬಳಸಿ ದೇಶಕ್ಕೆ ನುಸುಳಿ ಬರುತ್ತಿರುವ ಉಗ್ರರನ್ನು ಹೊಡೆದೋಡಿಸಲು ಬಳಸಿದರೆ ಪ್ರಯೋಗ ಮಾಡಿದರೆ ಒಳ್ಳೆಯದು ಎಂದು ಅವರು ಹೇಳಿದರು.
[youtuber youtube='http://www.youtube.com/watch?v=3lImOt1W3V8&feature=c4-overview&list=UUs0k8vSBwTqzHjMqn8PYrzQ']
ಉಡುಪಿಯಲ್ಲಿ ವಿಚಾರ ವೇದಿಕೆ ಮತ್ತು ಬಡಗುಬೆಟ್ಟಿ ಸಹಕಾರಿ ಸಂಘದ ಜಂಟಿ ಆಶ್ರಯದಲ್ಲಿ ನಡೆದ ಪವಾಡ ರಹಸ್ಯ ಬಯಲು ಕಾರ್ಯಕ್ರಮದಲ್ಲಿ ಮಾತನಾಡಿದರು.ಭಾನಾಮತಿ, ಮಾಟ ಮಂತ್ರಗಳ ಹೆಸರಿನಲ್ಲಿ ತೆಂಗಿನ ಕಾಯಿಯ ಜುಟ್ಟಿಗೆ ಸೋಡಿಯಂನ್ನು ಸೇರಿಸಿ ನಂತರ ಅದಕ್ಕೆ ನೀರನ್ನು ಚುಮುಕಿಸಿ ಒಮ್ಮೆಲೆ ಬೆಂಕಿಯನ್ನು ಸೃಷ್ಟಿಸುವ ತಂತ್ರಗಾರಿಕೆಯನ್ನು ಬಯಲು ಮಾಡಿದರು. ಜಾಲಿ ಮುಳ್ಳಿನ ಕುರ್ಚಿಯನ್ನು ಕುಳ್ಳಿರಿಸಿ ಪವಾಡ ಬಯಲು ಮಾಡುವುದರ ಮೂಲಕ ಒಂದು ಮುಳ್ಳಿನಲ್ಲು ಕುಳಿತರೆ ಮಾತ್ರ ನೋವಾಗುತ್ತದೆ ಎಂಬುವುದನ್ನು ಸಾಬೀತುಪಡಿಸಿದರು.
9/28/2013 11:20 PM
ಕಾರ್ಯಕ್ರಮ ಮಾಡಬಾರದು ಅಂತಾ ಹಿಂದೂ ಸಂಘಟನೆಗಳು ಹುಲಿಕಲ್ ನಟರಾಜ್ ಅವರ ಕಾರ್ಯಕ್ರಮವನ್ನು ವಿರೋಧಿಸಿದ್ದರು. ಒಂದು ದಿನ ಮುಂಚಿತವಾಗಿ ಈ ಬಗ್ಗೆ ನಗರ ಠಾಣೆಯಲ್ಲಿ ದೂರು ಕೂಡಾ ದಾಖಲಾಗಿತ್ತು. ಹುಲಿಕಲ್ ನಟರಾಜ್  ಪವಾಡ ಬಯಲು ಕಾರ್ಯಕ್ರಮ ಮೂಲಕ ಹಿಂದೂ ಧರ್ಮ , ದೇವತೆಗಳಿಗೆ ಅಗೌರವ ತೋರಿಸುತ್ತಾರೆ ಎಂದು ಹಿಂದೂ ಸಂಘಟನಾ ಮುಖಂಡರು ದೂರಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮ ನಡೆದ ಜಗನ್ನಾಥ ಸಭಾಭವನದಲ್ಲಿ ಬಿಗು  ಪೋಲಿಸ್ ಬಂದೋ ಬಸ್ತ್ ಮಾಡಲಾಗಿತ್ತು. ಯಾವುದೇ ಗಲಾಟೆ ನಡೆಯದಂತೆ ಪೋಲಿಸರು ಮುಂಜಾಗೃತೆ ವಹಿಸಿದ್ದರು.

ಉಡುಪಿ: ಬಂಟರ ಸಂಘದ ವಾರ್ಷಿಕ ಸಮಾವೇಶ

ಉಡುಪಿ:ಉಡುಪಿ ಬಂಟರ ಸಂಘದ ೧೯ ನೇ ವಾರ್ಷಿಕ ಸಮಾವೇಶ ಉಡುಪಿಯಲ್ಲಿ ನಡೆಯಿತು. ಬೆಂಗಳೂರು ಬಂಜಾರ ಗ್ರೂಫ್ಸ್‌ನ ಚೇರ್‌ಮೇನ್ ಪ್ರಕಾಶ್ ಶೆಟ್ಟಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ದಕ್ಷಿಣ ಕನ್ನಡ ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಸದಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
[youtuber youtube='http://www.youtube.com/watch?v=Js4oNo76pVw&feature=c4-overview&list=UUs0k8vSBwTqzHjMqn8PYrzQ']
ಮುಂಬಯಿ ಬಂಟರ ಸಂಘದ ಅಧ್ಯಕ್ಷ ಶಂಕರ್ ಶೆಟ್ಟಿ, ಚಿತ್ರ ನಟ ರಕ್ಷಿತ್ ಶೆಟ್ಟಿ, ಅಂತರಾಷ್ಟ್ರೀಯ ಕ್ರೀಡಾಪಟು ಜ್ಯೋತಿ ಶೆಟ್ಟಿ ಮೊದಲಾದವರನ್ನು ಸಮ್ಮಾನಿಸಲಾಯಿತು. ಮಂಗಳೂರು ರಾಷ್ಟ್ರೀಯ ಸೇವಾಯೋಜನೆಯ ಸಂಯೋಜನೆ ವಿನೀತ್ ರೈ ದಿಕ್ಸೂಚಿ ಭಾಷಣ ಮಾಡಿದರು. ವಿದ್ಯಾರ್ಥಿ ದತ್ತಿನಿಧಿ ದೇಣಿಗೆ ನೀಡಿದ ಗಣ್ಯರನ್ನು ಸಮ್ಮಾನಿಸಲಾಯಿತು.
ಸಂಘದ ವೆಬ್‌ಸೈಟ್‌ನ್ನು ಮಾತೃ ಸಂಘದ ಉಪಾಧ್ಯಕ್ಷ ರವೀಂದ್ರನಾಥ್ ಶೆಟ್ಟಿ ಬಿಡುಗಡೆಗೊಳಿಸಿದರು.ವಾಸುದೇವ ಶೆಟ್ಟಿ, ಇಂದ್ರಾಳಿ ಜಯಕರ ಶೆಟ್ಟಿ, ಮನೋಹರ್ ಶೆಟ್ಟಿ, ನಾಗೇಶ್ ಹೆಗ್ಡೆ, ಉಪಸ್ಥಿತರಿದ್ದರು.
30_udupi_bantara_sangaha_ 007

ಉಡುಪಿ ಬುಲೆಟ್ ಕ್ಲಬ್ ನಲ್ಲಿ ಜಾಲಿ ರೈಡ್

ಉಡುಪಿ: ಉಡುಪಿಯ ಬುಲೆಟ್ ಕ್ಲಬ್ ವತಿಯಿಂದ ಜಾಲಿ ರೈಡ್ ಕಾರ್ಯಕ್ರಮ ನಡೆಯಿತು. ಉಡುಪಿಯ ಬುಲೆಟ್ ಕ್ಲಬ್ ನ ಸುಮಾರು ೫೦ ಮಂದಿ ಸದಸ್ಯಯರು ಎನ್ ಫೀಡ್ ಶೋ ರೋಮಿಯಿಂದ ಬಜಗೋಳಿವರೆಗೆ ಜಾಲಿ ರೈಡ್ ನಡೆಸಿ ಗಮನ ಸೆಳೆದರು.
vlcsnap-2013-09-29-21h01m43s2
vlcsnap-2013-09-29-21h01m47s39
vlcsnap-2013-09-29-21h01m41s230

ಎರ್ಮಾಳು: ವೃದ್ಧೆಯನ್ನು ವಂಚಿಸಿ ಸರ ಎಗರಿಸಿದ ಕದೀಮರು

ವರದಿ-ಸುರೇಶ್ ಎರ್ಮಾಳ್
ವಯೋವೃದ್ಧೆಯೋರ್ವರನ್ನು ಯುವಕರ ತಂಡವೊಂದು ವಂಚಿಸಿ ಅವರ ಕತ್ತಲ್ಲಿದ್ದ ಚಿನ್ನದ ಸರವನ್ನು ಎಗರಿಸಿ ಪರಾರಿಯಾದ ಘಟನೆ ತೆಂಕ ಎರ್ಮಾಳು ಗ್ರಾ.ಪಂ. ಸಮೀಪ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಶನಿವಾರ ಸಂಜೆ ಘಟಿಸಿದೆ. ಮೂರು ಮಂದಿ ಇದ್ದ ಯುವಕರ ತಂಡದಿಂದ ವಂಚನೆಗೆ ಸಿಲುಕಿದವರು  ಸ್ಥಳೀಯ ನಿವಾಸಿ ಮುತ್ತು(೭೫).ಯಾವತ್ತಿನಂತ್ತೆ ಈ ದಿನವೂ  ಪಕ್ಕದ ಅಂಗಡಿಗೆ ಹೋಗಿ ಮರಳುತ್ತಿರುವಾಗ ಎರಡು ಬೈಕ್ಕಿನಲ್ಲಿ ಬಂದ ಮೂರು ಮಂದಿ ಇವರನ್ನು ತಡೆದು, ನಾವು ಪೊಲೀಸಿನೋರು ಅಲ್ಲಿ ಗಲಾಟೆ ನಡೆಯುತ್ತಿದೆ ನಮ್ಮಲ್ಲಿದ್ದ ಚಿನ್ನಾಭರಣಗಳನ್ನು ಭದ್ರವಾಗಿ ಇಟ್ಟುಕೊಳ್ಳಿ ಎಂಬುದಾಗಿ ಒಬ್ಬರ ಮೇಲೋಬ್ಬರು ಮಾತನಾಡಿ ವೃದ್ಧೆಯನ್ನು ತಮ್ಮ ವಂಚನೆಯ ಜಾಲಕ್ಕೆ ಸಿಲುಕಿಸಿದ ಯುವಕರ ತಂಡ,  ಸರವನ್ನು ಕತ್ತಿನಲ್ಲಿ ಹಾಕಿಕೊಳ್ಳ ಬೇಡಿ ನಿಮ್ಮ ಸೆರಗಿನಲ್ಲಿ ಕಟ್ಟಿಕೊಳ್ಳಿ ಎಂಬುದಾಗಿ ಹೇಳಿದ್ದೇ ತಡ ಅವರನ್ನು ನಂಬಿದ ವೃದ್ದೆ ಸರವನ್ನು ತೆಗೆಯುತ್ತಿದ್ದಂತ್ತೆ ಅವರಿಂದ ಪಡೆದ ತಂಡದ ಸದಸ್ಯನೋರ್ವ ಅವರ ಸೆರಗಿನಲ್ಲಿ ಏನೋ ಕಟ್ಟಿ ಹೋಗುವಂತ್ತೆ ತಿಳಿಸಿ, ತಾವೂ ಅಲ್ಲಿಂದ ಮರೆಯಾದರು. ಸುಮಾರು ೮ ನಿಮಿಷಗಳ ಕಾಲ ಈ ವಂಚಿಸುವ ನಾಟಕ ಜನ ನಿಬಿಡ ಪ್ರದೇಶದಲ್ಲಿ ನಡೆದಿದ್ದರೂ ಯಾರ ಗಮನಕ್ಕೂ ಬಾರದೆ. ಯಾರೋ ಸಂಬಂಧಿಗಳಲ್ಲಿ ಮಾತನಾಡುತ್ತಿರ ಬೇಕು ಎಂಬುದಾಗಿ ತಮ್ಮಷ್ಟಕ್ಕೆ  ತಾವು ಹೋಗುತ್ತಿದ್ದರು.

ಅಲ್ಲಿಂದ ನೇರ ಪಕ್ಕದ ಹೋಟೆಲೊಂದಕ್ಕೆ ತೆರಳಿದ ವೃದ್ಧೆ ನಡೆದ ಘಟನೆ ತನಗೆ ಪೊಲೀಸರು ಮಾಡಿದ ಉಪಕಾರ ಎಲ್ಲವನ್ನೂ ವಿವರಿಸಿ, ಯುವಕರು ತನ್ನ ಸೆರಗಲ್ಲಿ ಕಟ್ಟಿದ ಗಂಟನ್ನು ತೆರದಾಗ ಗಾಬರಿಗೊಂಡ ವೃದ್ಧೆಗೆ ತಾನು ಮೋಸ ಹೋದ ವಿಚಾರ ಆಗ ತಿಳಿಯಿತು. ಬಂಗಾರ ಚೈನಿನ ಬದಲು ಒಂದಿಷ್ಟು ಮಣ್ಣು ಹಾಕಿ ಸೆರಂಗಿನ ಒಂದು ತುದಿಯಲ್ಲಿ ಕಟ್ಟಲಾಗಿತ್ತು. ಸ್ಥಳೀಯರ ಸಹಾಯದಿಂದ ಪಡುಬಿದ್ರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ವೃದ್ಧೆಯನ್ನು ವಿಚಾರಿಸಿದರಾದರೂ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ತಕ್ಷಣ ಪೊಲೀಸರು ಸುತ್ತಲ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಿದ್ದು, ಪೊಲೀಸರು ನಾಕಬಂಧಿ ನಿರ್ಮಿಸಿದ್ದಾರೆ.

ಉದ್ಯಾವರದಲ್ಲಿ ಒಂದು ತಂಡ ಪರಾರಿಯಾಗಿದೆ ಎಂಬ ಮಾಹಿತಿ ಪಡುಬಿದ್ರಿ ಪೊಲೀಸರಿಗೆ ಲಭ್ಯವಾಗಿದೆ ಎಂಬುದಾಗಿ ಪೊಲೀಸರು ತಿಳಿಸಿದರಾದರೂ ಆರೋಪಿಗಳ ಬಗ್ಗೆ ಯಾವುದೇ ಸುಳಿವು ಲಭ್ಯವಾಗಿಲ್ಲ. ಇಂಥಹ ಮಾದರಿಯಲ್ಲಿ ಕೆಲ ತಿಂಗಳ ಹಿಂದೆ ಕಾಪುವಿನಲ್ಲಿ ವಂಚನೆ ನಡೆದು ಉಚ್ಚಿಲದ ವೃದ್ಧೆಯೋರ್ವಯೋರ್ವರು ಮೋಸ ಹೋಗಿದ್ದಲ್ಲದೆ ಎರ್ಮಾಳಿನ ಮಹಿಳೆಯೋರ್ವರೂ ಮೋಸ ಹೋದ ಘಟನೆ ಅಚ್ಚ ಹಸುರಾಗಿರುವಂತ್ತೆ ಮತ್ತೊಂದು ಪ್ರಕರಣ ದಾಖಲಾಗಿದೆ. ಇಂಥಹ ಪ್ರಕರಣಗಳು ದಿನ ನಿತ್ಯ ಮಾದ್ಯಮಗಳಲ್ಲಿ ಕೇಳಿ ಬರುತ್ತಿದ್ದರೂ ಮೋಸ ಹೋಗುವವರ ಸಂಖ್ಯೆ ಕಡಿಮೆಯಾಗುತ್ತಿಲ್ಲ. ವಂಚನೆಗೋಳಗಾಗುವವರು ಇರುವ ತನಕ ವಂಚಿಸುವವರು ಇರುತ್ತಾರೆ ಎಂಬ ಮಾತು ಇಲ್ಲಿ ನಿಜವಾಗಿದೆ.

ಆಕ್ಟೋಬರ್ ೧ ರಿಂದ ಹೊಸ ಖಾಸಗಿ ಬಸ್ಸು ಮಾರ್ಗಗಳಲ್ಲಿ ರಿಯಾಯಿತಿ ದರದ ಕಾರ್ಡ್ ವಿಸ್ತರಣೆ.

ಉಡುಪಿ: ಕರಾವಳಿ ಜಿಲ್ಲೆಗಳ ಜೀವನಾಡಿಯಾಗಿರುವ  ಖಾಸಗಿ ಬಸ್ಸುಗಳ   ನಿತ್ಯ ಪ್ರಯಾಣಿಕರಿಗೆ ಕೆನಾರ ಬಸ್ಸು ಮಾಲಕರ ಸಂಘ ಸಿಹಿ ಸುದ್ದಿಯೊಂದನ್ನ ನೀಡಿದೆ. ಉಡುಪಿ ಮಂಗಳೂರು ಖಾಸಗಿ ಬಸ್ಸು ಮಾಲಕರ ಸಂಘಟನೆಯಾಗಿರುವ  ಕೆನಾರ ಬಸ್ಸು ಮಾಲಕರ ಸಂಘದ ಪ್ರಯೋಜಕತ್ವದ ಸಿಸಿಟಿ  ತನ್ನ ಬಸ್ಸುಗಳಲ್ಲಿ ಪ್ರಯಾಣ ಮಾಡುವ ನಿತ್ಯ  ಪ್ರಯಾಣಿಕರಿಗೆ ನೀಡುತ್ತಿದ್ದ ರಿಯಾಯಿತಿ  ಕಾರ್ಡಿನ  ಸೇವೆಯನ್ನು ಉಡುಪಿ ಜಿಲ್ಲೆಯ ಇನ್ನಷ್ಟು ಭಾಗಗಳಲ್ಲಿ ವಿಸ್ತರಿಸಲು ನಿರ್ಧರಿಸಿದೆ. ಈಗಾಗಲೇ ಕೆನರಾ ಕಂಬೈನ್ಸ್  ಟ್ರಾನ್ಸ್ ಪೋರ್ಟ್ (ಸಿಸಿಟಿ) ಕಳೆದ ೩ ವರುಷದಿಂದ ಆರ್ ಏಫ್ ಟಿ ಕಾರ್ಡಿನ ಮುಖಾಂತರ ನಿತ್ಯ ಪ್ರಯಾಣಿಕರಿಗೆ ಶೇಕಡ ೨೫ ರಿಂದ ೩೫ ರ ವರೆಗೆ ನೀಡುತ್ತಿದ್ದು  ಸುಮಾರು ೬,೫೦೦ ಪ್ರಯಾಣಿಕರು ಇದರ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ .ಸಿಸಿಟಿಯ  ಈ ಆರ್ ಏಫ್  ಟಿ  ಕಾರ್ಡಿನ ಪ್ರಯೋಗ ಯಶಸ್ವಿಯಾದ ಹಿನ್ನಲೆಯಲ್ಲಿ   ಬಸ್ಸು ಮಾಲಕರು ಇದೀಗ ಈ ಸೇವೆಯನ್ನು ಉಡುಪಿ ಜಿಲ್ಲೆಯ ಮತ್ತಷ್ಟು ಭಾಗಗಳಿಗೆ ವಿಸ್ತರಿಸಲು ನಿರ್ಧರಿಸಿದ್ದು ಕುಂದಾಪುರ-ಭಟ್ಕಳ, ಕುಂದಾಪುರ-ಕಂಡ್ಲೂರು-ಸಿದ್ದಪುರ,ಕುಂದಾಪುರ-ಕೊಲ್ಲೂರು, ಉಡುಪಿ -ಬಾರ್ಕೂರು-ಸಿದ್ದಪುರ ಹಾಗೂ ಕಾರ್ಕಳ ಮಂಗಳೂರು ಮಾರ್ಗಗಳಿಗೆ  ವಿಸ್ತರಿಸಿದೆ. ಆಕ್ಟೋಬರ್ ೧ ರಿಂದ ಈ ಸೇವೆ ಲಭ್ಯವಾಗಲಿದ್ದು ಇನ್ನು ಈ ಭಾಗಗಳಲ್ಲಿ ಪ್ರಯಾಣಿಸುವ ಶಾಲಾ ವಿದ್ಯಾರ್ಥಿಗಳು ಹಾಗೂ ನಿತ್ಯ ಪ್ರಯಾಣಿಕರು ಇದರ ಸೇವೆ ಪಡೆದುಕೊಳ್ಳ ಬಹುದು ಎಂದು ಕೆನಾರ ಬಸ್ಸು ಮಾಕಲರ ಸಂಘ ಪ್ರಕಣೆಯಲ್ಲಿ ತಿಳಿಸಿದೆ.
ಆರ್ ಎಫ್ ಐಡಿ ಹೇಗೆ ಪಡೆದುಕೊಳ್ಳುವುದು.
೧:೧೦೦ ರೂಪಾಯಿ  ಶುಲ್ಕ ನೀಡಿ ಅರ್ಜಿ ನೀಡುವುದು
೨:ಕಾರ್ಡಿನ ಅವಧಿ ಎರಡು ವರ್ಷ
೩:ಪ್ರತಿದಿನ ೨ ಬಾರಿ ಉಪಯೋಗಿಸಬಹುದು
೪: ದಿನ ಅಥವಾ ೩೦ ದಿನಗಳವರೆಗೆ ರಿಚಾರ್ಜ್ ಮಾಡಿಸಿಕೊಳ್ಳ ಬಹುದು

ಕೌಟುಂಬಿಕ ಕಲಹ: ತಂದೆ ಮಗು ದಾರುಣ ಸಾವು (video news)

ಉಡುಪಿ: ಕೌಟುಂಬಿಕ ಕಲಹದಿಂದಾಗಿ ತಂದೆ ಮತ್ತು ಮಗು ದಾರುಣ ಸಾವುಂಡ ಘಟನೆ ಉಡುಪಿಯಲ್ಲಿ ನಡೆದಿದೆ. ಮಗುವಿನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಹೆಂಡತಿಯನ್ನು ಬಚಾವ್ ಮಾಡಲು ಹೋದ ಗಂಡನೇ ಸಾವಿಗೀಡಾಗಿದ್ದಾನೆ. ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ೯ ತಿಂಗಳ ಹಸುಳೆ ಕೂಡಾ ಅಪ್ಪನೊಂದಿಗೆ ಇಹ ಲೋಕವನ್ನು ತ್ಯಜಿಸಿದೆ.
[youtuber youtube='http://www.youtube.com/watch?v=KprflDeqXOU&feature=c4-overview&list=UUs0k8vSBwTqzHjMqn8PYrzQ']
ಉಡುಪಿ ಜಿಲ್ಲೆಯ ತೆಂಕನಿಡಿಯೂರು ಗ್ರಾಮದ ಬೆಳ್ಕಲೆ ನಿವಾಸಿಗಳಾದ ಚಂದ್ರಕಾಂತ ಮತ್ತು ನಾಗರತ್ನ ಕಳೆದ ಎರಡು ವರ್ಷಗಳ ಕುಟುಂಬದ ಸಮ್ಮತಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಚಂದ್ರಕಾಂತ್ ಮೇಸ್ತ್ರಿ ಕೆಲಸದಲ್ಲಿದ್ದರೆ ನಾಗರತ್ನ ಕಾನೂನು ಪದವಿ ಪಡೆದು ಮನೆಯಲ್ಲಿಯೇ ಇದ್ದಾಕೆ. ಮದುವೆ ಆಗಿ ಮಗು ಆಯಿತು ಅನ್ನೋವಷ್ಟರಲ್ಲಿ ಕುಟುಂಬದಲ್ಲಿ ಸಣ್ಣ ಪುಟ್ಟ ಜಗಳದಲ್ಲಿ ವಿರಸ ಆರಂಭವಾಗಿತ್ತು. ಗಂಡ - ಹೆಂಡತಿಯಿಬ್ಬರಲ್ಲಿ ಮಾತಿಗೆ ಮಾತು ಬೆಳೆದು ತಂದೆ ಮಗುವಿನ ಸಾವಿನೊಂದಿಗೆ ಅಂತ್ಯಕಂಡಿದೆ.
28_udupi_harsha_family_dispute_sucide_WMV V9 001

ನಿನ್ನೆ ರಾತ್ರಿ ೧೦ ಗಂಟೆಯ ಹೊತ್ತಿಗೆ ಪತಿ - ಪತ್ನಿ ನಡುವೆ ಕೋಳಿ ಜಗಳ ನಡೆದಿದೆ. ಇದ್ದಕ್ಕಿಂದಂತೆ ನಾಗರತ್ನ ಮನೆಯ ಎದುರಿನ ಬಾವಿಗೆ ೯ ತಿಂಗಳ ಮಗುವನ್ನು ಎಸೆದು ತಾನು ಹಾರಿದ್ದಾಳೆ. ವಿಷಯ ತಿಳಿದು ಬಾವಿಗೆ ಹಾರಿದ ಮಡದಿಯನ್ನು ರಕ್ಷಿಸಲು ಚಂದ್ರಕಾಂತ ಕೂಡಾ ಬಾವಿಗೆ ಹಾರಿದ್ದಾನೆ. ಹೆಂಡತಿಯನ್ನು ಬಚಾವ್ ಮಾಡಿ ಮಗುವನ್ನು ಬಚಾವ್ ಮಾಡೋ ಹೊತ್ತಿಗೆ ತಾನು ಮುಳುಗಿ ಮೃತಪಟ್ಟಿದ್ದಾನೆ. ಗಂಡ ಹೆಂಡತಿಯ ಜಗಳ ಎರಡು ಜೀವಗಳ ಸಾವಿನೊಂದಿಗೆ ಅಂತ್ಯಕಂಡಿದೆ. ಚಂದ್ರಕಾಂತ ಮತ್ತು ಮಗು ದೀಕ್ಷಾ ಮೃತದೇಹದ ಮರಣೋತ್ತರ ಪರೀಕ್ಷೆ ಉಡುಪಿ ಅಜ್ಜರಕಾಡು ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ತಾಯಿ ನಾಗರತ್ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

28_udupi_harsha_family_dispute_sucide_WMV V9 002
28_udupi_harsha_family_dispute_sucide (1)_WMV V9 001

ಅಂತರ್‌ಕಾಲೇಜು ಮಹಿಳಾ ಕಬಡ್ಡಿ ಪಂದ್ಯಾಟ: ಆಳ್ವಾಸ್‌ಗೆ ಪ್ರಶಸ್ತಿ

ಉಡುಪಿ:ಉಡುಪಿ ಜಿಲ್ಲಾ ಕಬಡ್ಡಿ ಅಸೋಸಿಯೇಶನ್. ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಅಜ್ಜರಕಾಡು ಮಹಿಳಾ ಕಾಲೇಜು, ಸ್ನಾತಕೋತ್ತರ ಕೇಂದ್ರ ವತಿಯಿಂದ ಮಂಗಳೂರು ವಿಶ್ವ ವಿದ್ಯಾನಿಲಯ ಅಂತರ್‌ಕಾಲೇಜು ಮಹಿಳಾ ಕಬಡ್ಡಿ ಪಂದ್ಯಾಟದಲ್ಲಿ ಆಳ್ವಾಸ್ ಕಾಲೇಜಿನ ಮಹಿಳಾ ತಂಡ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
[youtuber youtube='http://www.youtube.com/watch?v=5MJzd_Pf-JI&feature=c4-overview&list=UUs0k8vSBwTqzHjMqn8PYrzQ']
ಫೈನಲ್ ಪಂದ್ಯಾಟದಲ್ಲಿ ಆಳ್ವಾಸ್ ತಂಡ ಕೆ ಎಸ್‌ಎಸ್ ಸುಬ್ರಹ್ಮಣ್ಯ ತಂಡವನ್ನು ೫೧- ೧೦ ಅಂಕಗಳ ಅಂತರದಿಂದ ಸೋಲಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತು.ಮೊದಲ ಸೆಮಿಫೈನಲ್ ಹಣಾಹಣಿಯಲ್ಲಿ ಕೆ‌ಎಸ್‌ಎಸ್ ಸುಬ್ರಹ್ಮಣ್ಯ ತಂಡ ವಾಮಪದವವು ಸರಕಾರಿ ಕಾಲೇಜನ್ನು ಸೋಲಿಸಿದರೆ, ಆಳ್ವಾಸ್ ತಂಡ ಅಜ್ಜರಕಾಡು ಮಹಿಳಾ ಕಾಲೇಜು ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿತ್ತು. ಬೆಸ್ಟ್ ರೈಡರ್ ಪ್ರಶಸ್ತಿಯನ್ನು ಕೆ‌ಎಸ್‌ಎಸ್ ಸುಬ್ರಹ್ಮಣ್ಯದ ರಮ್ಯ ಪಡೆದುಕೊಂಡರೆ, ಆಳ್ವಾಸ್ ಮೂಡುಬಿದಿರೆಯ ಕೀರ್ತಿಕಾ ಬೆಸ್ಟ್ ಕ್ಯಾಚರ್ ಹಾಗೂ ಸುಶ್ಮಿತಾ ಬೆಸ್ಟ್ ಆಲ್‌ರೌಂಡರ್ ಪ್ರಶಸ್ತಿ ಪಡೆದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷ ಉಪೇಂದ್ರ ನಾಯಕ್ ಪ್ರಶಸ್ತಿಯನ್ನು ವಿತರಿಸಿದರು.

28_udupi_ajjarakadu_kabaddi_samaropa 022
ನಗರಸಭಾ ಉಪಾಧ್ಯಕ್ಷೆ ಅಮೃತಾ ಕೃಷ್ಣ ಮೂರ್ತಿ, ಜಿಲ್ಲಾ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ರಾಜೇಂದ್ರ ಸುವರ್ಣ, ಕಾಂಗ್ರೆಸ್ ಮುಖಂಡ ಪ್ರಕಾಶ್ ಕೊಡವೂರು, ಮಂಗಳೂರು ದೈಹಿಕ ಶಿಕ್ಷಣ ವಿಭಾಗದ ನಿರ್ಧೇಶಕ ನಾಗಲಿಂಗಪ್ಪ, ಕಾಲೇಜಿನ ಪ್ರಾಂಶುಪಾಲೆ ಅಶ್ವಥ್ಥಮ್ಮ ಉಪಸ್ಥಿತರಿದ್ದರು.
28_udupi_ajjarakadu_kabaddi_samaropa 022

ಯುವ ನ್ಯಾಯವಾದಿ ಗಣೇಶ ಪಡಿಯಾರ್ ನ್ಯಾಯಾಧೀಶರಾಗಿ ಆಯ್ಕೆ

ಕುಂದಾಪುರ: ಕುಂದಾಪುರ ಬಾರ್ ಅಸೋಸಿಯೇಶನ್ ಸದಸ್ಯ ಬಹುಮುಖ ಪ್ರತಿಭೆಯ ಯುವ ನ್ಯಾಯವಾದಿ ಉಪ್ಪುಂದ ಗಣೇಶ ಪಡಿಯಾರ್ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ. ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯ ನಡೆಸಿದ ನ್ಯಾಯಾಧೀಶರುಗಳ ಆಯ್ಕೆ ಪರೀಕ್ಷೆಯ ೧೫೨ ಅಭ್ಯರ್ಥಿಗಳಲ್ಲಿ ಪಡಿಯಾರ್ ರಾಜ್ಯದಲ್ಲೇ ೧೦ ನೇ ರ್‍ಯಾಂಕ್ ಪಡೆದು ಆಯ್ಕೆಯಾಗಿದ್ದಾರೆ.
ಪ್ರತಿಷ್ಠಿತ ಉಪ್ಪುಂದ ಪಡಿಯಾರ್ ವಂಶದ ರಾಘವೇಂದ್ರ ಪಡಿಯಾರ್ ಮತ್ತು ಪ್ರೇಮಾ ಬಾ ದಂಪತಿಯ ಪುತ್ರರಾದ ಗಣೇಶ ಪಡಿಯಾರ್ ಪಿ.ಯು.ಸಿ.ವರೆಗಿನ ವಿದ್ಯಾಭ್ಯಾಸವನ್ನು ಹುಟ್ಟೂರು ಉಪ್ಪುಂದದಲ್ಲಿ ನಡೆಸಿ, ಬೈಂದೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಪಡೆದರು. ನಂತರ ಉಡುಪಿಯ ವೈಕುಂಠ ಬಾಳಿಗ ಕಾನೂನು ಮಹಾ ವಿದ್ಯಾಲಯದಿಂದ ಪ್ರಥಮ ದರ್ಜೆಯಲ್ಲಿ ಕಾನೂನು ಪದವಿ ಗಳಿಸಿದರು. ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಇವರು ಕಾನೂನು ವ್ಯಾಸಂಗ ಮಾಡುತ್ತಲೇ ಚಾರ್ಟರ್ಡ್ ಎಕೌಂಟೆಟರ ಬಳಿ ಕೆಲಸ ಮಾಡುತ್ತಾ, ವಿವಿಧ ಬ್ಯಾಂಕುಗಳು, ಸಂಘ ಸಂಸ್ಥೆಗಳ ಲೆಕ್ಕ ಪರಿಶೋಧನೆಯಲ್ಲೂ ಅನುಭವ ಗಳಿಸಿದ್ದರು. ಕಾನೂನು ಪದವಿಯ ನಂತರ ಕುಂದಾಪುರದ ಹಿರಿಯ ವಕೀಲ ಎ.ಎಸ್.ಎನ್.ಹೆಬ್ಬಾರ್ ಅವರಲ್ಲಿ ಜೂನಿಯರ್ ಆಗಿ ವಕಾಲತ್ತು ಪ್ರಾರಂಭಿಸಿದರು. ಭಾರತೀಯ ಸ್ಟೇಟ್ ಬ್ಯಾಂಕ್, ಎಂಸಿಸಿ ಬ್ಯಾಂಕ್, ಭಟ್ಕಳ್ ಅರ್ಬನ್ ಬ್ಯಾಂಕ್, ಚೆನ್ನೈಯ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ಮೊದಲಾದ ಪ್ರತಿಷ್ಠಿತ ಸಂಸ್ಥೆಗಳ ಕಾನೂನು ಸಲಹೆಗಾರರಾಗಿಯೂ ಸೇವೆ ಸಲ್ಲಿಸುತ್ತಿದ್ದರು.
ಸಾಮಾಜಿಕ ಚಡುವಟಿಕೆಗಳಲ್ಲೂ ತೊಡಗಿಸಿಕೊಂಡ ಪಡಿಯಾರ್, ಉಪ್ಪುಂದ ಜೇಸಿಯ ಅಧ್ಯಕ್ಷನಾಗಿ ಅದು ಅತ್ಯುತ್ತಮ ಜೇಸಿ ಪ್ರಶಸ್ತಿ ಗಳಿಸುವಲ್ಲಿ ಕಾರಣರಾದರು. ಜೇಸಿಯ ಪ್ರತಿಷ್ಠಿತ ಕಮಲ ಪತ್ರ ಪ್ರಶಸ್ತಿ ಪುರಸ್ಕೃತರೂ ಆದ ಗಣೇಶ ಪಡಿಯಾರ್, ಪರಿಣಾಮಕಾರಿ ಭಾಷಣ ಕಲೆ, ಸಂಸದೀಯ ನಡವಳಿಕೆ ಮೊದಲಾದ ವಿಷಯಗಳಲ್ಲಿ ತರಬೇತುದಾರರಾಗಿಯೂ ಹೆಸರು ಗಳಿಸಿದ್ದರು.
sept27- ganesh padiyar-(3)

ಅರೆಬರೆ ಹೆದ್ದಾರಿ ಕಾಮಗಾರಿಗೆ ಮತ್ತೊಂದು ಬಲಿ !! ನ್ಯಾನೋ ಕಾರು ಮತ್ತು ಬುಲೇಟ್ ಡಿಕ್ಕಿ- ರಸ್ತೆಗೆ ಬಿದ್ದ ಬುಲೇಟ್ ಸವಾರನ ಮೇಲೆ ಟ್ರಕ್ ಚಲಿಸಿ ಸಾವು

ಕುಂದಾಪುರ: ಬುಲೇಟ್ ಹಾಗೂ ನ್ಯಾನೋ ಕಾರು ಮುಖಾಮುಖಿ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಬೈಕ್ ಸವಾರನ ಮೇಲೆ ಟ್ರಕ್ ಹರಿದ ಪರಿಣಾಮ ಆತ ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ತೆಕ್ಕಟ್ಟೆ ದುರ್ಗಾಪರಮೇಶ್ವರಿ ಕಲ್ಯಾಣ ಮಂಟಪದ ಎದುರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ. ತೆಕ್ಕಟ್ಟೆ ನಿವಾಸಿ ಮಂಜುನಾಥ ಮಧ್ಯಸ್ಥರ ಪುತ್ರ ಅಶ್ವತ್ ಮಧ್ಯಸ್ಥ (೩೪) ಮೃತ ಬುಲೇಟ್ ಸವಾರ.
sept27- tekkate accident-(2)- ASHVATH
ಘಟನೆಯ ವಿವರ: ಕುಂದಾಪುರ ಕಡೆಯಿಂದ ತೆಕ್ಕಟ್ಟೆಯೆಡೆಗೆ ರಾಷ್ಟ್ರೀಯ ಹೆದ್ದಾರಿಯ ಒನ್‌ವೇಯಲ್ಲಿ ರಾಂಗ್ ಸೈಡ್‌ನಿಂದ ಬಂದ ವಾಸುದೇವ ಎನ್ನುವವರ ನ್ಯಾನೋ ಕಾರು ತೆಕ್ಕಟ್ಟೆಯಿಂದ ಕುಂದಾಪುರಕ್ಕೆ ಸಾಗುತ್ತಿದ್ದ ಅಶ್ವತ್ ಅವರ ಬುಲೇಟ್‌ಗೆ ಮುಖಾಮುಖಿಯಾಗಿ ಡಿಕ್ಕಿ ಆಗಿದೆ. ಪರಿಣಾಮವಾಗಿ ಬುಲೇಟ್‌ನಿಂದ ರಸ್ತೆಗೆ ಬಿದ್ದ ಅಶ್ವತ್ ಮೇಲೆ ಉಡುಪಿಯಿಂದ ಕುಂದಾಪುರಕ್ಕೆ ಸಾಗುತ್ತಿದ್ದ ಟ್ರಕ್‌ವೊಂದು ಚಲಿಸಿದ್ದರಿಂದ ಗಂಭೀರ ಗಾಯಗೊಂಡ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ. ಅಪಘಾತದ ಪರಿಣಾಮ ನ್ಯಾನೋ ಕಾರು ಮುಂಭಾಗ ನಜ್ಜುಗುಜ್ಜಾಗಿದೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೃತ ಅಶ್ವತ್ ವಕ್ವಾಡಿಯ ಹೆಗ್ಗಾರ್‌ಬೈಲ್ ಎಂಬಲ್ಲಿ ಸ್ವಸ್ಥಿಕ್ ಹೋಲೋ ಬ್ಲಾಕ್ ಪ್ಯಾಕ್ಟರಿ ನಡೆಸುತ್ತಿದ್ದರು. ವರ್ಷಗಳ ಹಿಂದೆ ಮದುವೆ ಆದ ಇವರಿಗೆ ಒಂದು ತಿಂಗಳ ಮಗು ಇದೆ. ಸಂಘ ಸಂಸ್ಥೆಗಳಲ್ಲಿ ಸಕ್ರೀಯರಾಗಿದ್ದ ಇವರು ಕುಂದಾಪುರ ದಕ್ಷಿಣ ರೋಟರ್‍ಯಾಕ್ಟ್‌ನ ನಿಕಟಪೂರ್ವ ಅಧ್ಯಕ್ಷರಾಗಿದ್ದರು.
sept27- tekkatte accident_(2)

ಈ ಕುಟುಂಬದ ಸದಸ್ಯರಿಗೆ ವಯಸ್ಸು ದಾಟಿದರೂ ಮದುವೆ ಭಾಗ್ಯವಿಲ್ಲ.. ಆಗಲೋ-ಈಗಲೋ ಧರೆಗುರುಳುವಂತ್ತಿರುವ ಮುರುಕಲು ಮನೆಯಲ್ಲಿ ವಾಸ

ವರದಿ-ಸುರೇಶ್ ಎರ್ಮಾಳ್
ಪಡುಬಿದ್ರಿ : ಆಗಲೋ-ಈಗಲೋ ಬಿದ್ದು ಹೋಗುವಂತ್ತಿರುವ ವಿದ್ಯುತ್ ಸಂಪರ್ಕವೂ ಇಲ್ಲದ ಮುರುಕಲು ಮನೆ.. ವಯಸ್ಸು ೬೦ ದಾಟಿದರೂ ಇಲ್ಲಿ ವಾಸವಾಗಿರುವ ಮನೆ ಮಂದಿಗೆ ಮದುವೆ ಎಂಬುದು ಮರಿಚೀಕೆ.. ಅನಾರೋಗ್ಯ ಪೀಡಿತರಾದ ತಾಯಿ-ಮಾವ ಈ ಎಲ್ಲಾ ಸಮಸ್ಯೆಯ ಸುಳಿಗಳ ಮಧ್ಯೆ ಜೀವಿಸುತ್ತಿರುವ ಕುಟುಂಬವೊಂದು ವಾಸವಾಗಿರುವುದು, ಪಡುಬಿದ್ರಿ ಸಮೀಪದ ಪಲಿಮಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅವರಾಲು ಎಂಬಲ್ಲಿ.
ಅವರಾಲು ಮೂಡುಮನೆ ವಾಗು ಪೂಜಾರ್‍ತಿಯವರಿಗೆ ಮೂವರು ಮಕ್ಕಳು ಒಂದು ಗಂಡು ಎರಡು ಹೆಣ್ಣು, ವಿಶ್ವನಾಥ(೫೯),ಸುನಂದ(೫೨) ಹಾಗೂ ಭವಾನಿ(೪೪). ಹಾಗೂ ಇವರೊಂದಿಗೆ ವಾಸವಾಗಿರುವ ವಾಗು ಪೂಜಾರ್‍ತಿಯವರ ಸಹೋದರ ಅನಾರೋಗ್ಯ ಪೀಡಿತ ವಾಸು ಪೂಜಾರಿಯವರಿಗೆ ಸಹಿತ ಯಾರಿಗೂ ವಿವಾಹ ಭಾಗ್ಯವಿಲ್ಲ. ಕಾರಣ ಹುಟ್ಟು ಬಡತನದಿಂದ ಬೆಂದು ನೊಂದ ಜೀವಗಳಿವು.
27 (2)
ಸುಮಾರು ೬೫ ವರ್ಷಗಳ ಹಿಂದೆ ಸ್ಥಳದ ಮಾಲಿಕರ ಸೂಚನೆಯ ಮೇರೆಗೆ ವಾಗು ಪೂಜಾರ್‍ತಿ ಕುಟುಂಬ ಈ ಕ್ರೈಸ್ತ ಕುಟುಂಬಕ್ಕೆ ಸೇರಿದ ಸ್ಥಳದಲ್ಲಿ ಬದುಕು ಆರಂಭಿಸಿತು.ಆ ಬಳಿಕ ಗಂಡನ ಸಾವು, ಮನೆಬಿಟ್ಟು ತೆರಳಿದ ಸಹೋದರ, ಈ ಮಧ್ಯೆ ಮಕ್ಕಳನ್ನು ಸಾಕುವ ಜವಾಬ್ದಾರಿ ವಾಗು ಪೂಜಾರ್‍ತಿ ಹೆಗಲ ಮೇಲೆ ಬಿತ್ತು. ಅಂದು ಆರಂಭಗೊಂಡ ಆರ್ಥಿಕ ಮುಗ್ಗಟ್ಟು ಏಳಿಗೆ ಕಾಣದೆ ಇಂದಿಗೂ ಮುಂದುವರಿದ ಪರಿಣಾಮ, ಮಕ್ಕಳು ವಯಸ್ಸಿಗೆ ಬಂದರೂ ಮದುವೆ ಮಾಡದ ದುಸ್ಥಿತಿ.
ಬಹಳ ವರ್ಷಗಳ ಬಳಿಕ ಸಹೋದರ ವಾಸುಪೂಜಾರಿ ಮತ್ತೆ ಈ ಕುಟುಂಬವನ್ನು ಸೇರಿಕೊಂಡಿದ್ದಾರೆ. ಆ ಬಳಿಕ ಕೃಷಿ ಚಟುಟಿಕೆಗಳನ್ನು ನಡೆಸಿ ಮನೆಗೆ ಆಧಾರವಾಗುತ್ತಿದ್ದ ಅವರೂ ಇದೀಗ ನಡೆದಾಡುವುದೇ ಕಷ್ಟ, ಸರಿಯಾಗಿ ಕಣ್ಣು ಕಾಣದು ಸರ್ಕಾರದಿಂದ ದೊರಕುವ ೪೦೦ ಹೊರತು ಪಡಿಸಿ ಯಾವುದೇ ಸಂಪಾದನೆ ಇವರಿಗಿಲ್ಲ. ಆದ್ದರಿಂದ ಇವರನ್ನು ಸಾಕುವ ಹೊರೆಯೂ ಬೀಡಿ ಕೂಲಿ ಮಾಡಿ ಜೀವನ ನಡೆಸುವ ಈ ಕುಂಟುಂಬದ್ದಾಗಿದೆ.

27 (1)
ವಯೋವೃದ್ಧೆ ವಾಗು ಪೂಜಾರ್‍ತಿ ಹೇಳುವಂತ್ತೆ ನನಗೆ ಯಾರೂ ದಿಕ್ಕಿಲ್ಲ. ಸ್ಥಳದ ಮಾಲಿಕರ ಮನೆಯಲ್ಲಿ ಕೂಲಿ-ನಾಲಿ ಮಾಡಿ ಮಕ್ಕಳನ್ನು ಸಾಕಿದೆ. ದಿನ ಹೋಗುವುದೇ ಕಷ್ಟ ಎಂಬಂತ್ತಿದ್ದ ಆ ಕಾಲದಲ್ಲಿ ಹಣ ಹೊಂದಿಸಿಡುವ ಬಗ್ಗೆ ಚಿಂತಿಸಿಯೂ ಇಲ್ಲ. ಮಕ್ಕಳು ವಯಸ್ಸಿಗೆ ಬಂದರೂ ಅವರಿಗೆ ಮದುವೆ ಮಾಡಲು ನನ್ನಿಂದಾಗದೆ ಉಳಿದು ಹೋದರು. ಆ ಬಗ್ಗೆ ನನಗೆ ಏನು ಹೇಳ ಬೇಕೂ ತಿಳಿಯದು. ಇದೀಗ ನನ್ನ ಇಳಿ ವಯಸ್ಸು, ನಾನು ಎಷ್ಟು ದಿನ ಈ ಭೂಮಿ ಮೇಲೆ ಇರುತ್ತೇನೋ ಗೊತ್ತಿಲ್ಲ. ಆದರೆ ನಾನು ಸಾಯೋದಕ್ಕೆ ಮೊದಲು ಬಿದ್ದು ಹೋಗುವಂತ್ತಿರುವ ಈ ಮನೆಯನ್ನು ಕೆಡಹಿ ಸರ್ಕಾರದ ಯೋಜನೆ ಹಾಗೂ ಸಹೃದಯಿಗಳ ಸಹಾಯದ ಮೂಲಕ ಮನೆಯೊಂದು ನಿರ್ಮಿಸ ಬೇಕೆಂಬ ಮಹಾದಾಸೆ ಇದೆ. ಆದರೆ ಸ್ಥಳದ ಮಾಲಿಕರು ನಮ್ಮ ಹೆಸರಿಗೆ ಒಂದಿಷ್ಟು ಜಾಗವನ್ನು ಬಿಟ್ಟು ಕೊಡದೆ ಮುಂದುವರಿಯಲು ಸಾಧ್ಯವಾಗುತ್ತಿಲ್ಲ. ಹೊರ ದೇಶದಲ್ಲಿರುವ ಅವರು ಮುಂದಿನ ಸಲ ಬಂದಾಗ ಸ್ಥಳ ನೀಡುವ ಭರವಸೆ ನೀಡಿದ್ದಾರೆ. ಆದರೆ ಅವರು ಬರುವ ವರಗೆ ನನ್ನ ಪ್ರಾಣ ನನ್ನ ದೇಹದಲ್ಲಿರುತ್ತೋ ಇಲ್ಲವೋ ಗೊತ್ತಿಲ್ಲ ಎಂಬುದಾಗಿ ಕಣ್ಣೀರಿಡುತ್ತಿದೆ ಆ ಮುದಿ ದೇಹ.
27

ಡಾ|| ಕೇಶವಶ್ವರರಿಗೆ “ ಸಮಾಜ ಜ್ಯೋತಿ” ಬಿರುದು.

ಸಮಾಜ ಸುಧಾರಕ, ಸಮಾಜರತ್ನ, ಬಿರುದು ಪಡೆದಿರುವ ಡಾ|| ಕೇಶವ ಕೋಟೇಶ್ವರರಿಗೆ ಪಡುಬಿದ್ರಿಯ ಶ್ರೀನಾರಾಯಣ ಗುರು ಸ್ವ-ಉದ್ಯೋಗ ತರಬೇತಿ ಕೇಂದ್ರದಲ್ಲಿ ಪಡುಬಿದ್ರಿ ಲಯನ್ಸ್ ಕ್ಲಬ್, ಲಯನೆಸ್ ಕ್ಲಬ್ ಹಾಗೂ ಸುಜ್ಞಾನ್ ಪೌಂಡೇಶನ್ ವತಿಯಿಂದ ಶ್ರೀ ನಾರಾಯಣ ಗುರುಗಳ ೧೫೯ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಸನ್ಮಾನಿಸಿ “ಸಮಾಜ ಜ್ಯೋತಿ” ಬಿರುದು ಪ್ರಧಾನಿಸಲಾಯಿತು.
ಶ್ರೀ ನಾರಾಯಣ ಗುರು ಸ್ವ-ಉದ್ಯೋಗ ಕೇಂದ್ರದ ಮುಖ್ಯಸ್ಥರಾದ ಮದ್ವರಾಜ ಸುವರ್ಣರು ಡಾ|| ಕೇಶವ ಕೋಟೇಶ್ವರರನ್ನು ಸನ್ಮಾನಿಸಿ ಬಿರುದು ಪ್ರಧಾನ ಮಾಡಿ ಮಾತನಾಡುತ್ತಾ ಡಾ|| ಕೋಟೇಶ್ವರರಂತವರು ಸಮಾಜದ ಆಸ್ತಿ. ಸತತ ೨೫ ವರ್ಷಗಳಿಂದ ಸಮಾಜಕ್ಕಾಗಿ ದುಡಿಯುತ್ತಿರುವ ಇವರು ಯುವ ಜನತೆಗೆ ಮಾದರಿ ಎಲ್ಲರೂ ಡಾ|| ಕೋಟೇಶ್ವರರ ಮಾರ್ಗದಲ್ಲಿ ಸಾಗುವಂತಾದರೆ ನಮ್ಮದು ರಾಮ ರಾಜ್ಯವಾಗುವುದೆಂದು ಹೇಳಿದರು.
ಪಡುಬಿದ್ರಿ ಲಯನ್ಸ್ ಕ್ಲಬಿನ ಅಧ್ಯಕ್ಷ ಸುಧಾಕರ ಶೆಟ್ಟಿ, ಡಾ|| ಎನ್.ಟಿ. ಅಂಚನ್, ಲಯನೆಸ್ ಅಧ್ಯಕ್ಷೆ ರಶ್ಮಿ ಸುಧಾಕರ ಶೆಟ್ಟಿ, ಸುಜ್ಞಾನ್ ಪೌಂಡೇಷನ್ನಿನ ಪ್ರಸಾದ್, ಮುಶ್ತಾಕ್ ಮುಂತಾದವರು ಉಪಸ್ಥಿತರಿದ್ದರು.ಶ್ರೀ ನಾರಾಯಣ ಗುರು ಸ್ವ-ಉದ್ಯೋಗ ಕೇಂದ್ರದ ಹಳೆವಿದ್ಯಾರ್ಥಿ ತಯಾರಿಸಿದ ಫಿನಾಯ್ಲು, ಸೋಪು, ಕಾರ್‌ವಾಷ್‌ನಂತಹ ವಸ್ತುಗಳನ್ನು ಡಾ|| ಕೇಶವ ಕೋಟೇಶ್ವರ ಬಿಡುಗಡೆಗೊಳಿಸಿದರು. ಇದೇ ಸಂದರ್ಭದಲ್ಲಿ ಸ್ಫೂರ್ತಿಧಾಮದ ಮಕ್ಕಳಿಗೆ ವ್ಯಕ್ತಿತ್ವ ವಿಕಸನ ತರಬೇತಿ ಹಾಗೂ ಸ್ವ-ಉದ್ಯೋಗ ಮಾರ್ಗದರ್ಶನ ಕೂಡ ನೀಡಲಾಯಿತು.

ಪಾಲಕರ ಪತ್ತೆಗೆ ಸಹಕರಿಸಿ

ಉಡುಪಿ ಪರಿಸರದಲ್ಲಿ ಪತ್ತೆಯಾದ ಈಗ ೧೦ ತಿಂಗಳು ಪ್ರಾಯದ ಹೆಣ್ಣು ಮಗುವೊಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮೂಲಕ ಸ್ಫೂರ್ತಿಧಾಮದ ಆರೈಕೆಯಲ್ಲಿದೆ. ಮಗುವಿನ ವಾರೀಸುದಾರರು ಯಾರಾದರೂ ಇದ್ದರೆ ಅಧಿಕೃತ ದಾಖಲೆಗಳೊಂದಿಗೆ ಸಂಪರ್ಕಿಸುವಂತೆ ಸಂಸ್ಥೆಯ ಮುಖ್ಯಕಾರ್ಯನಿರ್ವಾಹಕರಾದ ಡಾ|| ಕೇಶವ ಕೋಟೇಶ್ವರ ವಿನಂತಿಸಿದ್ದಾರೆ. ಮೊಬೈಲ್:-೮೨೭೭೨೫೮೮೩೦. ಮಗುವಿನ ಚಹರೆ:- ಗೋದಿ ಬಣ್ಣ, ತಲೆ ತುಂಬಾ ಕೂದಲು, ಬೊಗಸೆ ಕಣ್ಣು, ಎತ್ತರ ೨೬ ಇಂಚು.
Spoorthi_baby

ಕುಂದಾಪುರ ಬಿಜೆಪಿ ಯಿಂದ ಪಂಡಿತ್ ದೀನ್ ದಯಾಳ್‌ರ ಜನ್ಮ ದಿನಾಚರಣೆ

ಕುಂದಾಪುರ: ಭಾರತೀಯ ಜನಸಂಘದ ಸಂಸ್ಥಾಪಕರಾದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ೯೭ ನೇ ಜನ್ಮ ದಿನಾಚರಣೆಯನ್ನು ಬಿ.ಜೆ.ಪಿ ಪಕ್ಷದ ಕಛೇರಿಯಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಕುಂದಾಪುರ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಶಂಕರ ಅಂಕದಕಟ್ಟೆ ಮಾತನಾಡಿ, ಇಂದು ಬಿಜೆಪಿಯು ಸ್ಮರಣೆ ಮಾಡತಕ್ಕಂತಹ ದಿನವಾಗಿದ್ದು, ದೀನ್ ದಯಾಳ್ ಉಪಾಧ್ಯಾಯರು  ಈ ದೇಶದ ರಾಜಕೀಯದ  ಬಗ್ಗೆ ಚಿಂತನೆ ಮಾಡಿ ಏಕತಾ ಮಾನವತಾವಾದ ಪುಸ್ತಕ ಬರೆದಿದ್ದರು. ಅಖಂಡ ಭಾರತವನ್ನ ಬಲಪಡಿಸಬೇಕೆಂದು  ದಿನದ ಹೆಚ್ಚಿನ ಸಮಯವನ್ನು ಜನಸಂಘದ ಬಗ್ಗೆ ಚಿಂತಿಸಿದವರು. ಕೊನೆಗೂ ದೇಶಕ್ಕಾಗಿಯೇ ತನ್ನ ಪ್ರಾಣವನ್ನು ತ್ಯಾಗಮಾಡಿದರು. ಅವರು ಹಾಕಿಕೊಟ್ಟ ಸನ್ಮಾರ್ಗವನ್ನು ನಾವೆಲ್ಲ ಕಾರ್ಯಕರ್ತರು ಅನುಸರಿಸಬೇಕೆಂಧು ಹೇಳಿದರು.
ಜಿಲ್ಲಾ ಮಹಿಳಾ ಮೋರ್ಚಾದ ಪ್ರದಾನ ಕಾರ್ಯದರ್ಶಿ ಸಂಧ್ಯಾ ಮಾತನಾಡಿ ದೀನದಯಾಳ್‌ರು ಸಂಘಟಿಕರಾಗಿ ಸಂಘದ ಪ್ರಚಾರಕರಾಗಿ, ಜನಸಂಘದ ಪದಾಧಿಕಾರಿಯಾಗಿಯೂ, ಸಂಘಟನಾ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ ದೀನ್ ದಯಾಳ್‌ರ ಕಾರ್ಯಶೈಲಿಯನ್ನು ನೋಡಿದ ಡಾ. ಶ್ಯಾಮ ಪ್ರಸಾದ್ ಮುಖರ್ಜಿಯವರು ನನಗೆ ಇಂತಹ ಇನ್ನಿಬ್ಬರು ದೀನದಯಾಳರು ಸಿಕ್ಕರೆ ದೇಶದ ರಾಜಕೀಯ ಚಿತ್ರವನ್ನೇ ಬದಲಾಯಿಸುತ್ತೇನೆ ಎಂದಿದ್ದರು. ರಾಜಕೀಯವಾಗಿ ಎಲ್ಲರಿಗೂ ಮಾರ್ಗದರ್ಶಕರಾಗಿದ್ದರು ರಾಷ್ಟ್ರ ಮಟ್ಟದಲ್ಲಿ ನಾವು ವ್ಯಕ್ತಿಗತವಾಗಿ ಹೇಗಿರಬೇಕೆಂಧು ತೋರಿಸಿಕೊಟ್ಟಂತಹ ಮಹಾನ್ ವ್ಯಕ್ತಿಯಾಗಿದ್ದರು. ಸ್ವದೇಶಿ ಸ್ವಾವಲಂಬನೆಗಳೇ ತಮ್ಮ ಅರ್ಥ ನೀತಿಯ ಅಡಿಗಲ್ಲಾಗಬೇಕೆಂದು ಪ್ರತಿಪಾದಿಸಿದ ಆದರ್ಶ ವ್ಯಕ್ತಿಯಾಗಿದ್ದರು ಎಂದರು.
ಈ ಸಂದರ್ಭದಲ್ಲಿ  ಕ್ಷೇತ್ರಾಧ್ಯಕ್ಷ ರಾಜೇಶ್ ಕಾವೇರಿ, ಸಂಘಟನಾ ಪ್ರಧಾನ ಕಾರ್ಯದರ್ಶಿ ಜಗನ್ನಾಥ ಅಮೀನ್, ಹಿರಿಯರಾದ ಪುಂಡಲೀಕ ನಾಯಕ್,  ಪುರಸಭಾ ಉಪಾಧ್ಯಕ್ಷ ನಾಗರಾಜ ಕಾಮಧೇನು, ಪುರಸಭಾ ಸದಸ್ಯರು, ಶಕ್ತಿ ಕೇಂದ್ರದ ಅಧ್ಯಕ್ಷರು, ಸ್ಥಾನೀಯ ಸಮಿತಿಯ ಅಧ್ಯಕ್ಷರು, ಕುಂದೇಶ್ವರ ವ್ಯ ಸೇ. ಸಹಕಾರಿ ಬ್ಯಾಂಕಿನ ಸದಸ್ಯರು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು. ಮಧುಕರ ಬರೆಕಟ್ಟು ಸ್ವಾಗತಿಸಿದರು. ಮಹೇಶ ಪೂಜಾರಿ ಧನ್ಯವಾದ ಸಲ್ಲಿಸಿದರು.sept25-bjp news-(10)

೨ ವರ್ಷಗಳ ಹೋರಾಟಕ್ಕೆ ಸಂದ ಜಯ- ಜನತೆ ಫುಲ್ ಖುಷ್ ;ಮುಂಬಯಿ-ಮಂಗಳೂರು ಎಕ್ಸ್‌ಪ್ರೆಸ್ ರೈಲಿಗೆ ಕುಂದಾಪುರದಲ್ಲಿ ಅದ್ದೂರಿ ಸ್ವಾಗತ

ಕುಂದಾಪುರ: ಜನತೆಯ ಬಹುನಿರೀಕ್ಷಿತ ಮಂಗಳೂರು-ಮುಂಬೈ ಸೂಪರ್ ಪಾಸ್ಟ್ ರೈಲು ಕುಂದಾಪುರದಲ್ಲಿ ನಿಲುಗಡೆಯಾಗುವ ಮೂಲಕ ಕುಂದಾಪುರ ಜನತೆಗೆ ಸಿಹಿ ಉಣಿಸಿದೆ. ಮಂಗಳೂರಿನಿಂದ ಮುಂಬಯಿವರೆಗೂ ಕೇವಲ ೯ ನಿಲುಗಡೆ ಸ್ಥಾನಗಳನ್ನು ಮಾತ್ರ ಹೊಂದಿದ್ದ ಈ ರೈಲು ನಿನ್ನೆಯಿಂದ ಅಧೀಕೃತವಾಗಿ ಕುಂದಾಪುರ ರೈಲ್ವೇ ನಿಲ್ದಾಣದಲ್ಲಿಯೂ ನಿಲುಗಡೆಗೊಳ್ಳಲಿದೆ.ಬುಧವಾರ ಸಂಜೆ ೬.೨೫ ರ ಸುಮಾರಿಗೆ ಆಗಮಿಸಿದ ಈ ರೈಲನ್ನು ಕುಂದಾಪುರದಲ್ಲಿ ಆದರದಿಂದ ಬರಮಾಡಿಕೊಳ್ಳಲಾಯಿತು.

sept25- railu nilugade_(13)-1
ಈ ಸಂದರ್ಭದಲ್ಲಿ ಉಡುಪಿ ಮಂಗಳೂರು ಸಂಸದ ಕೆ. ಜಯಪ್ರಕಾಶ ಹೆಗ್ಡೆ, ವಲಯದ ರೈಲ್ವೇ ಬಳಕೆದಾರರ ಸಮಿತಿ ಸದಸ್ಯ ರಾಧಾಕೃಷ್ಣ ಶೈಣೈ, ಕುಂದಾಪುರ ರೈಲ್ವೇ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕೆಂಚನೂರು ಸೋಮಶೇಖರ ಶೆಟ್ಟಿ, ವಿಭಾಗೀಯ ರೈಲ್ವೇ ಬಳಕೆದಾರರ ಸಮಿತಿ ಸದಸ್ಯ ಹಾಗೂ ಕುಂದಾಪುರ ರೈಲ್ವೇ ಹಿತರಕ್ಷಣಾ ಸಮಿತಿ ಕಾರ್ಯದರ್ಶಿ ಸಚ್ಚಿದಾನಂದ ಶೆಟ್ಟಿ, ರೈಲ್ವೇ ಹಿತರಕ್ಷಣಾ ಸಮಿತಿ ಸಂಘಟನಾ ಕಾರ್ಯದರ್ಶಿಗಳಾದ ಶುಭಚಂದ್ರ ಹತ್ವಾರ್, ವಿವೇಕ ನಾಯಕ್, ಕುಂದಾಪುರ ಬಿಜೆಪಿ ಕ್ಷೇತ್ರಾಧ್ಯಕ್ಷ ರಾಜೇಶ ಕಾವೇರಿ, ಮಾಜಿ ಕ್ಷೇತ್ರಾಧ್ಯಕ್ಷ ಬಿ. ಕಿಶೋರ ಕುಮಾರ್, ಬಸ್ರೂರು ಗ್ರಾ.ಪಂ. ಉಪಾದ್ಯಕ್ಷ ಜಗದೀಶ ನಾಯಕ್, ಕಾಂಗ್ರೆಸ್ ಮುಖಂಡ ಗಣೇಶ ಶೇರುಗಾರ್, ಕೋಣಿ ಗ್ರಾ.ಪಂ. ಸದಸ್ಯ ಶೀನ ಪೂಜಾರಿ, ಗಣೇಶ ಪುತ್ರನ್ ಗೋಪಾಡಿ, ನಾಗರಾಜ ಆಚಾರ್ ಕೋಣಿ, ಸುರೇಶ ಶೆಟ್ಟಿ ಬೀಜಾಡಿ, ಶ್ರೀಶನ್, ಕಿಶನ್ ಕೆಂಚನೂರು, ಕೊಡ್ಲಾಡಿ ಸುಭಾಶ್ಚಂದ್ರ ಹೆಗ್ಡೆ, ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ ಸೇರಿದಂತೆ ಸ್ಥಳೀಯ ರೋಟರಿ ಹಾಗೂ ಲಯನ್ಸ್ ಕ್ಲಬ್ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.

ಇಸ್ಪೀಟ್ ಆಡ್ಡೆಗೆ ದಾಳಿ . ಬೈಂದೂರಿನ ನಾಲ್ವರ ಬಂಧನ

ಬೈಂದೂರು: ಹೇರೂರು ಗ್ರಾಮದ ಬಳಿಯಿರುವ ಉಳ್ಳುರು ಕ್ರಾಸ್ ಸಮೀಪದ ಹಾಡಿಯೊಂದರಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಇಸ್ಪೀಟ್ ಆಡುತ್ತಿದ್ದ ಅಡ್ಡೆಗೆ ಬೈಂದೂರು ಪೊಲೀಸರು ದಾಳಿ ನಡೆಸಿದ್ದಾರೆ. ಜುಗಾರಿ ಆಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಬೈಂದೂರು ಪೊಲೀಸರು ಆಟವಾಡುತ್ತಿದ್ದ ಐವರನ್ನು ಬಂಧಿಸಿ ಜೂಜಾಟಕ್ಕೆ ಬಳಸಿದ 8160 ರೂಪಾಯಿಗಳನ್ನ ವಶಪಡಿಸಿಕೊಂಡಿದ್ದಾರೆ.ಬಂಧಿತರೆಲ್ಲಿ ಶೇಖ್ ಕುಂಝ್ ,ಜಗನ್ನಾಥ ಶೆಟ್ಟಿ ,ಸುರೇಶ್ ಪುಜಾರಿ,ಹೆರಿಯಣ್ಣ ಶೆಟ್ಟಿ ಎನ್ನುವವರಾಗಿದ್ದು ಇವರೆಲ್ಲಾರು ಸ್ಥಳಿಯರಾಗಿದ್ದು ಬೈಮದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ .

ಹಫ್ತಾ ವಸೂಲಿಗಾಗಿ ಉದ್ಯಮಿಗಳಿಗೆ ಬೆದರಿಕೆ ,ಬನ್ನಂಜೆ ರಾಜ ಸಹಚರರ ಅರೆಸ್ಟ್

ಉಡುಪಿ: ಉದ್ಯಮಿಗಳಿಗೆ ಫೊನ್ ಮೂಲಕ ಹಫ್ತಾ ನೀಡುವಂತೆ ಬೆದರಿಕೆ ಕರೆ ಮಾಡಿದ್ದ ಕೂಖ್ಯಾತ ಭೂಗತ ದೊರೆ ಬನ್ನಂಜೆ ರಾಜನ ಸಹಚರರನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.ಬಂಧಿತರು ಉಡುಪಿ ಸಮೀಪದ ಅಂಬಾಗಿಲುವಿನ ಸಚಿನ್ ಪೂಜಾರಿ,ಹನುಮಂತ ನಗರದ ಶಂಶುದ್ದಿನ್ ,ಕಾಪುವಿನ ಸಯ್ಯದ್ ಬುರಾನ್ ,ಕಾರ್ಕಳ ಹನೀಫ್, ಹಾಗೂ ಮೂಡಬಿದ್ರಿ ನಿವಾಸಿಯಾದ ಮಹಮ್ಮದ್ ಮಖ್ ಸುದ್ ಎನ್ನುವವರಾಗಿದ್ದಾರೆ.ಇವರೆಲ್ಲಾರು ದುಬ್ಯಾಯಿಯಲ್ಲಿ ತಲೆ ಮರೆಸಿಕೊಂಡಿರುವ ಕುಖ್ಯಾತ ಭೂಗತ ದೊರೆ ಬನ್ನಂಜೆ ರಾಜ ಹಾಗೂ ಸಿರಾಜ್ ಹಸನ್ ರವರ ಸಹಚರರಾಗಿದ್ದು ಇವರ ಆದೇಶದಂತೆ ಉಡುಪಿಯ ಪ್ರಖ್ಯಾತ ಉದ್ಯಮಿಗಳಿಗೆ ಕರೆ ಮಾಡಿ ಹಫ್ತಾ ನೀಡುವಂತೆ ಬೆದರಿಸುತ್ತಿದ್ದರು. ಕಳೆದ 26 ರಂದು ಈ ತಂಡ ಉಡುಪಿಯ ಯುವ ಉದ್ಯಮಿಯೋರ್ವರಿಗೆ ಬೆದರಿಕೆ ಹಾಕಿದ್ದು ಈ ಬಗ್ಗೆ ಉದ್ಯಮಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸ್ ತಂಡ ಆರೋಪಿಗಳ ಜಾಡು ಹಿಡಿದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಒಂದು ಝೆನ್ ಕಾರು ಮಾರಾಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
bannanje

ತೋನ್ಸೆ ಗ್ರಾಮ ಪಂಚಾಯತ್ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ

ಉಡುಪಿ:ತೋನ್ಸೆ ಗ್ರಾಮ ಪಂಚಾಯಿತಿನ ವತಿಯಿಂದ ಪ್ರತಿಭಾನ್ವಿತ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ಸೇರದಿ ಸುಮಾರು 60 ಮಂದಿ ವಿದ್ಯಾರ್ಥಿಗಳಿಗೆ ಪಂಚಾಯಿತಿನ ಶೆಕಡ 25ರ ನಿಯಮದಡಿಯಲ್ಲಿ ವಿಧ್ಯಾರ್ಥಿ ವೇತನವನ್ನು ನೀಡುವ ಕಾರ್ಯಕ್ರಮ ತೋನ್ಸೆ ಪಂಚಯತಿನ ಸಂಭಾಗಣದಲ್ಲಿ ಜರಗಿತು.
ವಿದ್ಯಾರ್ಥಿ ವೇತನವನ್ನು ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದ ಕೆಮ್ಮಣ್ಣು ಗ್ರಾಮ ಪಂಚಾಯತ್ ಆಧ್ಯಕ್ಷರಾದ ಶ್ರೀ ಕೆಮ್ಮಣ್ಣು ನಿತ್ಯಾನಂದ ಕೆಮ್ಮಣ್ಣು ವಿಧ್ಯಾರ್ಥಿಗಳಿಗೆ ವಿತರಿಸಿದರು.ಕಾರ್ಯಕ್ರಮದಲ್ಲಿ ತೋನ್ಸೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಸುಲೋಚನಾ,ತಾಲೂಕು ಪಂಚಾಯತ್ ಸದಸ್ಯ ರೆಹಮತುಲ್ಲಾ ತೋನ್ಸೆ,ಗ್ರಾಮ ಪಂಚಾಯತ್ ಸದಸ್ಯರಾದ ಭಾಸ್ಕರ್ ಕರ್ಕೆರಾ,ಉಸ್ತಾದ ಸಾದಿಕ್ ,ಶ್ರೀ ಇದ್ರೀಸ್,ಕುಸುಮಾ ಆಶಾ ಅರಣ್ ಫೆರ್ನಾಂಡೀಸ್,ಮತ್ತು ಗ್ರಾಮ ಪಂಚಯತ್ ಸಿಂಬದಿಗಳು ಉಪಸ್ಥಿತರಿದ್ದರು.
DSC09184
DSC09185
DSC09183
DSC09180
DSC09181
DSC09192
DSC09193
DSC09184
DSC09199

ಕೃಷ್ಣಮಠದಲ್ಲಿ ಜನಪದ ಕಲಾ ಸಂಸ್ಕೃತಿಯ ವಿರಾಟ್ ದರ್ಶನ

ಉಡುಪಿ:ಕೃಷ್ಣನ ನಗರಿ ಉಡುಪಿಯಲ್ಲಿ ಮಿನಿ ಭಾರತವೇ ಬೀಡು ಬಿಟ್ಟಿದೆ. ದೇಶದ ಎಲ್ಲಾ ರಾಜ್ಯಗಳ ಜನಪದ ಸಂಸ್ಕೃತಿಯನ್ನು ಪರಿಚಯಿಸುವ ವಿಶಿಷ್ಟ ಜನಪದ ಮೇಳವನ್ನು ಕೃಷ್ಣಮಠದಲ್ಲಿ ಆಯೋಜಿಸಲಾಗಿದೆ. ಗ್ರಾಮೀಣ ಸೊಗಡಿನ ಅಪರೂಪದ ಕಲೆಗಳ ಕಲರ್‌ಫುಲ್ ಪ್ರದರ್ಶನ ಮುಂದಿನ ಐದು ದಿನಗಳ ಕಾಲ ಕರಾವಳಿ ಜನರಿಗೆ ರಸದೌತಣ ನೀಡಲು ಸಜ್ಜಾಗಿದೆ.
9/15/2013 6:35 AM

ಹಳ್ಳಿ ಸೊಗಡಿನ ಸಂಗೀತ, ಚರ್ಮ ವಾದ್ಯಗಳ ಅಬ್ಬರದಲ್ಲಿ ಮೈ ರೋಮಾಂಚನ ಹುಟ್ಟಿಸುವ ಕುಣಿತ, ಚಿತ್ತಾಕರ್ಷಕ ದೀಪಾಲಂಕಾರದಲ್ಲಿ ಜನಪದ ಜಗತ್ತಿನ ವರ್ಣ ಚಿತ್ತಾರ. ಹೀಗೊಂದು ಜನಪದ ಅಬ್ಬರದ ವಿಸ್ಮಯ ಲೋಕ ಸೃಷ್ಟಿಯಾಗಿದ್ದು ಉಡುಪಿಯ ಕೃಷ್ಣ ಮಠದಲ್ಲಿ . ಪರ್ಯಾಯ ಸೋದೆ ಮಠದ ಆಶ್ರಯದಲ್ಲಿ ಐದು ದಿನಗಳ ರಾಷ್ಟ್ರೀಯ ಜನಪದ ಮೇಳವನ್ನು ಆಯೋಜಿಸಲಾಗಿದೆ. ಈ ಉತ್ಸವದಲ್ಲಿ ಬಹುತೇಕ ದೇಶದ ಎಲ್ಲಾ ರಾಜ್ಯಗಳ ಜನಪದ ಸಂಸ್ಕೃತಿಯ ವಿರಾಟ್ ದರ್ಶನವಾಗಲಿದೆ. ಉತ್ಸವದ ಮೊದಲ ದಿನದಲ್ಲಿ ಗುಜರಾತ್ ಸಿದ್ಧಿ ಜನಾಂಗದ ಆಫ್ರಿಕನ್ ಡ್ಯಾನ್ಸ್, ಅಸ್ಸಾಂನ ಬಿಹು ನೃತ್ಯ, ಮಹಾರಾಷ್ಟ್ರದ ಲಾವಣಿ, ಕರ್ನಾಟಕದ ಪೂಜಾ ಕುಣಿತ , ಮಧ್ಯಪ್ರದೇಶದ ನೃತ್ಯ ಪ್ರಕಾರಗಳು ಜನರನ್ನು ರಂಜಿಸಿದವು..
9/15/2013 7:05 AM
ಪೇಜಾವರ ಸ್ವಾಮೀಜಿ ಸಹಿತ ಅಷ್ಟಮಠಾಧೀಶರು ಈ ಕಲಾ ಮೇಳದಲ್ಲಿ ಭಾಗವಹಿಸಿದ್ದರು.ಜನಪದಲ್ಲಿ ಭಾರತೀಯ ಅಂತಸತ್ವ ಅಡಗಿದ್ದು ಯುವಜನಾಂಗವನ್ನು ಮತ್ತೆ ಮೂಲ ಸಂಸ್ಕೃತಿಯತ್ತ ಕೊಂಡಯ್ದರೆ ಭಾರತೀಯ ಸಂಸ್ಕೃತಿ ರ ಕ್ಷಣೆಯಾಗುತ್ತೆ ಅನ್ನೋದು ಈ ಯೋಜನೆಯ ಆಶಯ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಬದಲಾಗುವ ಜನಪದ ಕಲೆಗಳ ಬಹುಮುಖಗಳು ಇಲ್ಲಿ ಪ್ರದರ್ಶನಗೊಳ್ಳುತ್ತಿದೆ. ರಾಷ್ಟ್ರದ ವಿವಿಧ ಭಾಗಗಳಿಂದ ಬಂದ ೫೦೦ ಕಲಾವಿದರು ಈ ಜನಪದ ಉತ್ಸವದಲ್ಲಿ ಭಾಗವಹಿಸುತ್ತಿದ್ದಾರೆ.
ವೈದಿಕ ಮಠಮಂದಿರಗಳಲ್ಲಿ ಶಾಸ್ತ್ರೀಯ ಕಲೆಗಳಿಗೆ ವಿಶೇಷ ಪ್ರೋತ್ಸಾಹ ನೀಡುವುದನ್ನು ಕಾಣಬಹುದು. ಆದರೆ ಕೃಷ್ಣಮಠದಲ್ಲಿ ಜನಪದ ಮೇಳ ಆಯೋಜಿಸುವ ಮೂಲಕ ಹಳ್ಳಿ ಸೊಗಡಿನ ಮೂಲ ಸಂಸ್ಕೃತಿಗೂ ವಿಶೇಷ ಸ್ಥಾನ ನೀಡಿದಂತಾಗಿದೆ.
[youtuber error='Not a YouTube, Vimeo or Google Video URL: ']

9/15/2013 7:48 AM
9/15/2013 7:52 AM
.....................................

ಸೇವಾ ಭದ್ರತೆ ಒದಗಿಸುವಂತೆ ಉಪನ್ಯಾಸಕರ ಪ್ರತಿಭಟನೆ

25_udupi_lectureres_protest 003
ಉಡುಪಿ: ಲಕ್ಷಾಂತರ ಪದವಿ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಿದ ಅತಿಥಿ ಉಪನ್ಯಾಸಕರಿಗೆ ಭವಿಷ್ಯ ಬರಡಾಗುತ್ತಿದೆ. ಕೆಲವಾರು ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ವಿವಿಧ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿರುವ ಉಪನ್ಯಾಸಕರಿಗೆ ಹಲವಾರು ಸಮಸ್ಯೆಗಳು ಕಾಡಲಾರಂಬಿಸಿದೆ. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹಲವಾರು ಪ್ರತಿಭಟನೆ ಮಾಡಿದ ಉಪನ್ಯಾಸಕರು ಮತ್ತೆ ಬೀದಿಗಿಳಿದಿದ್ದಾರೆ. ಉಡುಪಿ ಜಿಲ್ಲೆಯ ೧೧ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮಣಿಪಾಲದಲ್ಲಿ ಜಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
25_udupi_lectureres_protest 001
ಮಣಿಪಾಲ ಸಿಂಡಿಕೇಟ್ ಸರ್ಕಲ್ ಮೂಲಕ ಉಡುಪಿ ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆ ಮೂಲಕ ತೆರಳಿ ಮನವಿ ಸಲ್ಲಿಸಿದರು. ಸೇವಾ ಭದ್ರತೆಯನ್ನು ಖಾಯಂಗೊಳಿಸುವುದರ ಜೊತೆಗೆ ಯುಜಿಸಿ ನಿಯಮದಂತೆ ತಿಂಗಳಿಗೆ ೨೫ ಸಾವಿರ ರೂಪಾಯಿ ವೇತನ ನಿಗದಿಗೊಳಿಸಬೇಕು. ವರ್ಷದ ೧೨ ತಿಂಗಳು ವೇತನವನ್ನು ನೀಡುವುದರ ಜೊತೆಗೆ ಖಾಲಿ ಇರುವ ಕಾಲೇಜು ಶಿಕ್ಷಣ ಇಲಾಖೆಯ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು.ಉಪನ್ಯಾಸಕರ ನೇಮಕಾತಿಯಲ್ಲಿ ಅತಿಥಿ ಉಪನ್ಯಾಸಕರಿಗೆ ಆದ್ಯತೆ ನೀಡಿ ಪದವಿ ಕಾಲೇಜುಗಳ ಮೂಲಭೂತ ಸೌಕರ್ಯವನ್ನು ಒದಗಿಸಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಯಿತು. ಉಪನ್ಯಾಸಕರ ಸಂಘದ ಅಧ್ಯಕ್ಷ ರಂಜಿತ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಗುಲಾಬಿ ಮಧುಸೂದನ್, ದಯಾನಂದ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
25_udupi_lectureres_protest 011
25_udupi_lectureres_protest 014
25_udupi_lectureres_protest 009
25_udupi_lectureres_protest 004

ನಿಡ್ಡೋಡಿ ಓಡಿಸಲು ಜನಾಂದೋಲನ ಆಗಬೇಕಿದೆ: ಹೋರಾಟಕ್ಕೆ ಬೆಂಬಲ ಸೂಚಿಸಿ ಪೇಜಾವರ ಶ್ರೀ ಅಭಿಮತ

ಉಡುಪಿ:ನಿಡ್ಡೋಡಿ ಉಷ್ಣ ವಿದ್ಯುತ್ ಸ್ಥಾವರವನ್ನು ಹೊಡೆದೊಡಿಸಲು ಜನಾಂದೋಲನ ಆಗಬೇಕಿದೆ. ಜನತೆ ಸಂಘಟತಿರಾದರೆ ಮಾತ್ರ ಉಷ್ಣ ವಿದ್ಯುತ್ ಸ್ಥಾವರಕ್ಕೆ ಗತಿ ಕಾಣಿಸಲು ಸಾಧ್ಯ ಅಂತಾ ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಹೇಳಿದ್ದಾರೆ.

[youtuber youtube='http://www.youtube.com/watch?v=NKHWfvRZYV4&feature=c4-overview&list=UUs0k8vSBwTqzHjMqn8PYrzQ']
ಮುಂಬಯಿನ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಹಮ್ಮಿಕೊಂಡಿ ನಿಡ್ಡೋಡಿ ಉಷ್ಣ ವಿದ್ಯುತ್ ಸ್ಥಾವರದ ಬಗ್ಗೆ ಜನಜಾಗೃತಿ ಸಮಾವೇಶವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಉಡುಪಿ ಜಿಲ್ಲೆಯ ನಂದಿಕೂರು ಉಷ್ಣ ವಿದ್ಯುತ್ ಸ್ಥಾವರದ ಅವಘಡಗಳು ಕಣ್ಮುಂದೆ ಇರುವಾಗಲೇ ಅವಿಭಜಿತ ಜಿಲ್ಲೆಯಲ್ಲಿ ಇನ್ನೊಂದು ಉಷ್ಣವಿದ್ಯುತ್ ಸ್ಥಾವರ ತಲೆ‌ಎತ್ತಲು ಸಜ್ಜಾಗಿದೆ. ಕರಾವಳಿ ಜಿಲ್ಲೆಗಳ ಧಾರಣಾ ಶಕ್ತಿಯನ್ನು ಅರಿತು ಬೃಹತ್ ಉದ್ದಿಮೆಗಳನ್ನು ಸ್ಥಾಪಿಸಲು ಸರಕಾರ ಅನುಮತಿ ನೀಡಬೇಕು. ನಿಡ್ಡೋಡಿ ಉಷ್ಣವಿದ್ಯುತ್ ಸ್ಥಾವರದ ಹೋರಾಟಕ್ಕೆ ಸಂಪೂರ್ಣ ಬೆಂಬಲವಿದೆ ಅಂತಾ ಶ್ರೀಗಳು ಘೋಷಣೆ ಮಾಡಿದ್ದಾರೆ. ನಿಡ್ಡೋಡಿಯಲ್ಲಿ ಉಷ್ಣ ಸ್ಥಾವರವನ್ನು ಸರಕಾರ ತುದಿಗಾಲಿನಲ್ಲಿ ನಿಂತಿದೆ. ಅವಿಭಜಿತ ಜಿಲ್ಲೆಯ ಜನತೆ ನಿಷ್ಕ್ರೀಯರಾಗದೆ ತಮ್ಮ ಪೂರ್ಣ ಬೆಂಬಲವನ್ನು ನೀಡದರೆ ಮಾತ್ರ ಮೊಳಕೆಯಲ್ಲಿರುವ ಯೋಜನೆಯನ್ನು ಆರಂಭದಲ್ಲಿಯೇ ಚಿವುಟಿಹಾಕಬಹುದು ಎಂದು ತಿಳಿಸಿದರು.
ಮೂಡಬಿದರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ ಹಚ್ಚ ಹಸಿರಿನ ಹೊದಿಕೆಯ ನಾಡನ್ನು ನಾಶ ಮಾಡುವ ನಿಟ್ಟಿನಲ್ಲಿ ಜಾಗತೀಕರಣ ಹೆಸರಿನಲ್ಲಿ ಸ್ಥಾಪಿಸಲ್ಡಡುವ ಯೋಜನೆಗಳಿಗೆ ಸರಕಾರ ಪ್ರೋತ್ಸಾಹ ನೀಡಬಾರದು ಎಂದು ತಿಳಿಸಿದರು. ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಯ ಅಧ್ಯಕ್ಷ ತೋನ್ಸೆ ಜಯಕೃಷ್ಣ ಶೆಟ್ಟಿ ದಿಕ್ಸೂಚಿ ಭಾಷಣ ಮಾಡಿದರು.
ಮಣಿಪಾಲ ವಿವಿಯ ವಿಶ್ರಾಂತ ಕುಲಪತಿ ಡಾ. ಬಿ ಎಂ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ ಜಯ ಸಿ. ಸುವರ್ಣ, ಸಮಿತಿಯ ಜಗದೀಶ್ ಅಧಿಕಾರಿ, ಸುರೇಶ್ ಶೆಟ್ಟಿ ಯಯ್ಯಾಡಿ, ಫೆಲಿಕ್ಸ್ ಡಿಸೋಜ, ಶೇಖರ್ ಗುಜ್ಜರ್‌ಬೆಟ್ಟು, ಪಿ.ಡಿ. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.25_udupi_niddodi_janajagrathi_sabhe_1 016

ಮಂಗಳವಾರ, ಸೆಪ್ಟೆಂಬರ್ 24, 2013

ಒಳಾಂಗಣ ಕ್ರೀಡಾಂಗಣದ ಕಳಪೆ ಕಾಮಗಾರಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಸಚಿವ ಜೈನ್

24_udupi_abay_ajjarkadu_ground_visit 002ಉಡುಪಿ:ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದ ಬ್ಯಾಡ್ಮಿಂಟನ್ ಕೋರ್ಟ್‌ನ ವುಡನ್ ಫ್ಲೊರಿಂಗ್ ಸಂಪೂರ್ಣ ಕಿತ್ತು ಹೋಗಿದ್ದು , ಕಳಪೆ ಕಾಮಗಾರಿ ನಿರ್ವಹಿಸಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕ್ರೀಡಾ ಸಚಿವ ಅಭಯಚಂದ್ರ ಜೈನ್ ಹೇಳಿದ್ದಾರೆ.
ಅಜ್ಜರಕಾಡು ಒಳಾಂಗಣ ಕ್ರೀಡಾಂಗಣವನ್ನು ವೀಕ್ಷಿಸಿ ಸುದ್ಧಿಗೋಷ್ಟಿಯಲ್ಲಿ ಅವರು ಮಾತನಾಡಿದರು.ಬಿಜೆಪಿ ಸರಕಾರದ ಅವಧಿಯಲ್ಲಿ ಬಹಳ ತರಾತುರಿಯಲ್ಲಿ ಒಳಾಂಗಣ ಕ್ರೀಡಾಗಣದ ಕಾಮಗಾರಿ ಪೂರ್ಣವಾಗಿತ್ತು. ಬ್ಯಾಡ್ಮಿಂಟನ್ ಕೋರ್ಟ್ ವುಡನ್ ಫ್ಲೋರ್ ಕಿತ್ತುಹೋಗಿದ್ದು ಸರಿಪಡಿಸಿಲು ೨೫ ಲಕ್ಷ ವೆಚ್ಚ ತಗುಲಲಿದೆ. ಮುಖ್ಯಮಂತ್ರಿ ಅವರ ಬಳಿ ಚರ್ಚಿಸಿ ಕೂಡಲೇ ಅನುದಾನ ಬಿಡುಗಡೆಗೊಳಿಸಿ ಕೋರ್ಟ್‌ನ್ನು ಸುಸಜ್ಜಿತಗೊಳಿಸಲಾಗುವುದು ಎಂದು ತಿಳಿಸಿದರು.
ಒಳಾಂಗಣದ ಕ್ರೀಡಾಗಣದ ಪಕ್ಕದಲ್ಲಿ ಸುಸಜ್ಜಿತ ಈಜುಕೊಳ ನಿರ್ಮಾಣವನ್ನು ಕೂಡಲೇ ಆರಂಭಿಸಲಾಗುವುದು ಎಂದ ಸಚಿವರು ಅಜ್ಜರಕಾಡು ಕ್ರೀಡಾಂಗಣದಲ್ಲಿ ನಿರ್ಮಾಣವಾಗುತ್ತಿರುವ ಸಿಂಥೆಟಿಕ್ ಟ್ರ್ಯಾಕ್ ಕಾಮಗಾರಿಯನ್ನು ವೀಕ್ಷಿಸಿದರು. ಮಣಿಪಾಲದ ಮಣ್ಣಪಳ್ಳದ ೩ ಎಕರೆ ಕೊಳದಲ್ಲಿ ವಾಟರ್ ಸ್ಪೋರ್ಟ್ಸನ್ನು ಆರಂಭಿಸಲು ಚಿಂತನೆ ನಡೆಸಲಾಗುತ್ತಿದ್ದು ಕೂಡಲೇ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ಹೇಳಿದರು.
ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ನಿರ್ಧೇಶಕ ವಿಕಾಸ್, ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್, ಜಿಲ್ಲಾಧಿಕಾರಿ ಎಂ. ಟಿ. ರೇಜು,ನಗರಸಭಾಧ್ಯಕ್ಷ ಯುವರಾಜ್. ಅಮೃತ ಹೆಗ್ಡೆ, ಪ್ರಕಾಶ್ ಕೊಡವೂರು, ಚಂದ್ರ ಶೇಖರ್ ಹೆಗ್ಡೆ ಉಪಸ್ಥಿತರಿದ್ದರು
....................................................

ನಿಡ್ಡೋಡಿ ಓಡಿಸಲು ಜನಾಂದೋಲನ ಆಗಬೇಕಿದೆ: ಹೋರಾಟಕ್ಕೆ ಬೆಂಬಲ ಸೂಚಿಸಿ ಪೇಜಾವರ ಶ್ರೀ ಅಭಿಮತ

ಉಡುಪಿ:ನಿಡ್ಡೋಡಿ ಉಷ್ಣ ವಿದ್ಯುತ್ ಸ್ಥಾವರವನ್ನು ಹೊಡೆದೊಡಿಸಲು ಜನಾಂದೋಲನ ಆಗಬೇಕಿದೆ. ಜನತೆ ಸಂಘಟತಿರಾದರೆ ಮಾತ್ರ ಉಷ್ಣ ವಿದ್ಯುತ್ ಸ್ಥಾವರಕ್ಕೆ ಗತಿ ಕಾಣಿಸಲು ಸಾಧ್ಯ ಅಂತಾ ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಹೇಳಿದ್ದಾರೆ.

[youtuber youtube='http://www.youtube.com/watch?v=NKHWfvRZYV4&feature=c4-overview&list=UUs0k8vSBwTqzHjMqn8PYrzQ']
ಮುಂಬಯಿನ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಹಮ್ಮಿಕೊಂಡಿ ನಿಡ್ಡೋಡಿ ಉಷ್ಣ ವಿದ್ಯುತ್ ಸ್ಥಾವರದ ಬಗ್ಗೆ ಜನಜಾಗೃತಿ ಸಮಾವೇಶವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಉಡುಪಿ ಜಿಲ್ಲೆಯ ನಂದಿಕೂರು ಉಷ್ಣ ವಿದ್ಯುತ್ ಸ್ಥಾವರದ ಅವಘಡಗಳು ಕಣ್ಮುಂದೆ ಇರುವಾಗಲೇ ಅವಿಭಜಿತ ಜಿಲ್ಲೆಯಲ್ಲಿ ಇನ್ನೊಂದು ಉಷ್ಣವಿದ್ಯುತ್ ಸ್ಥಾವರ ತಲೆ‌ಎತ್ತಲು ಸಜ್ಜಾಗಿದೆ. ಕರಾವಳಿ ಜಿಲ್ಲೆಗಳ ಧಾರಣಾ ಶಕ್ತಿಯನ್ನು ಅರಿತು ಬೃಹತ್ ಉದ್ದಿಮೆಗಳನ್ನು ಸ್ಥಾಪಿಸಲು ಸರಕಾರ ಅನುಮತಿ ನೀಡಬೇಕು. ನಿಡ್ಡೋಡಿ ಉಷ್ಣವಿದ್ಯುತ್ ಸ್ಥಾವರದ ಹೋರಾಟಕ್ಕೆ ಸಂಪೂರ್ಣ ಬೆಂಬಲವಿದೆ ಅಂತಾ ಶ್ರೀಗಳು ಘೋಷಣೆ ಮಾಡಿದ್ದಾರೆ. ನಿಡ್ಡೋಡಿಯಲ್ಲಿ ಉಷ್ಣ ಸ್ಥಾವರವನ್ನು ಸರಕಾರ ತುದಿಗಾಲಿನಲ್ಲಿ ನಿಂತಿದೆ. ಅವಿಭಜಿತ ಜಿಲ್ಲೆಯ ಜನತೆ ನಿಷ್ಕ್ರೀಯರಾಗದೆ ತಮ್ಮ ಪೂರ್ಣ ಬೆಂಬಲವನ್ನು ನೀಡದರೆ ಮಾತ್ರ ಮೊಳಕೆಯಲ್ಲಿರುವ ಯೋಜನೆಯನ್ನು ಆರಂಭದಲ್ಲಿಯೇ ಚಿವುಟಿಹಾಕಬಹುದು ಎಂದು ತಿಳಿಸಿದರು.
ಮೂಡಬಿದರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ ಹಚ್ಚ ಹಸಿರಿನ ಹೊದಿಕೆಯ ನಾಡನ್ನು ನಾಶ ಮಾಡುವ ನಿಟ್ಟಿನಲ್ಲಿ ಜಾಗತೀಕರಣ ಹೆಸರಿನಲ್ಲಿ ಸ್ಥಾಪಿಸಲ್ಡಡುವ ಯೋಜನೆಗಳಿಗೆ ಸರಕಾರ ಪ್ರೋತ್ಸಾಹ ನೀಡಬಾರದು ಎಂದು ತಿಳಿಸಿದರು. ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಯ ಅಧ್ಯಕ್ಷ ತೋನ್ಸೆ ಜಯಕೃಷ್ಣ ಶೆಟ್ಟಿ ದಿಕ್ಸೂಚಿ ಭಾಷಣ ಮಾಡಿದರು.
ಮಣಿಪಾಲ ವಿವಿಯ ವಿಶ್ರಾಂತ ಕುಲಪತಿ ಡಾ. ಬಿ ಎಂ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ ಜಯ ಸಿ. ಸುವರ್ಣ, ಸಮಿತಿಯ ಜಗದೀಶ್ ಅಧಿಕಾರಿ, ಸುರೇಶ್ ಶೆಟ್ಟಿ ಯಯ್ಯಾಡಿ, ಫೆಲಿಕ್ಸ್ ಡಿಸೋಜ, ಶೇಖರ್ ಗುಜ್ಜರ್‌ಬೆಟ್ಟು, ಪಿ.ಡಿ. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
25_udupi_niddodi_janajagrathi_sabhe_1 016

ಕರಾವಳಿಯಲ್ಲಿ ಮತ್ತೆ ಬಿಜೆಪಿ ಭದ್ರಕೋಟೆ ಕಟ್ಟುತ್ತೇನೆ: ನೂತನ ಬಿಜೆಪಿ ಅಧ್ಯಕ್ಷ ತಿಂಗಳೆ ವಿಶ್ವಾಸ

ಉಡುಪಿ:ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಆಯ್ಕೆಯಾಗಿದ್ದಾರೆ. ಉಡುಪಿ ಬಿಜೆಪಿ ಕಚೇರಿಯಲ್ಲಿ ನಡೆದ ಜಿಲ್ಲಾ ಪದಾಧಿಕಾರಿಗಳ ಆಯ್ಕೆಯಲ್ಲಿ ಉದಯ್‌ಕುಮಾರ್ ಶೆಟ್ಟಿ ಅವರಿಂದ ತಿಂಗಳೆ ಅಧಿಕಾರ ಸ್ವೀಕರಿಸಿದ್ದಾರೆ. ಮುಂದಿನ ಮೂರು ವರ್ಷಗಳ ಕಾಲ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಉಡುಪಿ ಜಿಲ್ಲೆಯಲ್ಲಿ ಬಿಜೆಪಿಯನ್ನು ಮುನ್ನೆಡಸಲಿದ್ದಾರೆ.
23_udupi_bjp_president_ayke 009
ಉಡುಪಿ ಜಿಲ್ಲಾ ಬಿಜೆಪಿಗೆ ಮೂರು ವರ್ಷಗಳ ಕಾಲ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷ ಕಟ್ಟುವಲ್ಲಿ ಶ್ರಮಿಸಿದ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಯವರು ನೂತನ ಬಿಜೆಪಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. ಬಿಜೆಪಿ ಸ್ಥಾನೀಯ ಸಮಿತಿಯಿಂದ ಆರಂಭವಾಗಿ ಪಕ್ಷದ ಎಲ್ಲಾ ಸ್ಥರಗಳಲ್ಲಿ ಕಾರ್ಯನಿರ್ವಹಿಸಿದ ಇವರು ಕಳೆದ ಬಾರಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಉತ್ತಮ ಕೆಲಸವನ್ನು ನಿರ್ವಹಿಸಿದ್ದರು.
ನೂತನ ಅಧ್ಯಕ್ಷರ ಆಯ್ಕೆಯನ್ನು ಮಾಜಿ ಅದ್ಯಕ್ಷ ಉದಯ್ ಕುಮಾರ್ ಶೆಟ್ಟಿ ಘೋಷಿಸಿದರು. ತಿಂಗಳೆ ಅವರ ಅಧಿಕಾರವಧಿಯಲ್ಲಿ ಪಕ್ಷ ಇನ್ನಷ್ಟು ಅಭಿವೃಧ್ಧಿ ಹೊಂದಲಿ ಅಂತಾ ಶುಭ ಹಾರೈಸಿದರು. ಇದೇ ಸಂದರ್ಭ ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ ಆಯ್ಕೆಯಾಗು ಕಾರ್ಕಳ ಸುನೀಲ್ ಕುಮಾರ್ ಅವರಿಗೆ ಮತ್ತು ಕಾರ್ಯದರ್ಶಿಯಾಗಿ ಆಯ್ಕೆಯಾದ ಶ್ಯಾಮಲಾ ಕುಂದರ್ ಅವರನ್ನು ಅಭಿನಂದಿಸಲಾಯಿತು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಮಾತನಾಡಿ ಕರಾವಳಿ ಬಿಜೆಪಿ ಭದ್ರಕೋಟೆಯಾಗಿದ್ದು ಇತ್ತೀಚಿನ ವರ್ಷಗಳಲ್ಲಿ ನೆಲೆ ಕಳೆದುಕೊಂಡಿದೆ. ಮತ್ತೆ ಕರಾವಳಿಯಲ್ಲಿ ಬಿಜೆಪಿ ಭದ್ರಕೋಟೆಯನ್ನಾಗಿ ಕಾರ್ಯಕರ್ತರೊಂದಿಗೆ ಅವಿರತವಾಗಿ ಶ್ರಮಿಸುತ್ತೇನೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕ ಲಾಲಾಜಿ ಮೆಂಡನ್. ಜಿಲ್ಲಾ ಪಂಚಾಯತ್ ಅಧ್ಯಕ್ಷ ಉಪೇಂದ್ರ ನಾಯಕ್, ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಸುವರ್ಣ, ಕುಯಿಲಾಡಿ ಸುರೇಶ್ ನಾಯಕ್, ರವಿ ಅಮೀನ್ ಉಪಸ್ಥಿತರಿದ್ದರು.
ವರದಿ:ಹರ್ಷರಾಜ್ ಉಡುಪಿ
[youtuber error='Not a YouTube, Vimeo or Google Video URL:
']
..........................................

ಏಕರೂಪ ಶಿಕ್ಷಣಕ್ಕಾಗಿ ಜಯಕರ್ನಾಟಕ ರಥಯಾತ್ರೆ ಉಡುಪಿಗೆ

23_udupi_jayakarnataka_rathayatre 007
ಉಡುಪಿ:ಸರ್ಕಾರ ಸಮಾನ ಶಾಲಾ ಶಿಕ್ಷಣ ನೀತಿಯನ್ನು ರೂಪಿಸುವಂತೆ ಆಗ್ರಹಿಸಿ ಜಯಕರ್ನಾಟಕ ಸಂಘಟನೆ ರಾಜ್ಯಾದ್ಯಂತ ಜನಾಂದೋಲನ ಹಮ್ಮಿಕೊಂಡಿದ್ದು ಸಂಘಟನೆ ಹಮ್ಮಿಕೊಂಡ ರಥಯಾತ್ರೆ ಉಡುಪಿಗೆ ಆಗಮಿಸಿದೆ. ಉಡುಪಿಗೆ ಆಗಮಿಸಿದ ರಥಯಾತ್ರೆಯನ್ನು ಜಯಕರ್ನಾಟಕ ಸಂಘಟನೆಯ ಕಾರ್ಯಕರ್ತರು ಅಭೂತಪೂರ್ವವಾಗಿ ಸ್ವಾಗತಿಸಿದರು.
ಉಡುಪಿ ಜಿಲ್ಲೆಯಾದ್ಯಂತ ಸಂಚರಿಸಿದ ರಥಯಾತ್ರೆಯನ್ನು ಕರಾವಳಿ ಜಂಕ್ಷನ್ ಬಳಿ ಸ್ವಾಗತಿಸಲಾಯಿತು. ಈ ಸಂದರ್ಭ ಮಾತನಾಡಿದ ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಏಕರೂಪ ಸಮಾನ ಶಿಕ್ಷಣ ನೀತಿ ಜಾರಿಗೆ ತರಲು ಒತ್ತಾಯಿಸಿ ಜಯಕರ್ನಾಟಕ ಸಂಘಟನೆ ರಥಯಾತ್ರೆಯನ್ನು ಹಮ್ಮಿಕೊಂಡಿದೆ. ರಥಯಾತ್ರೆಯಲ್ಲಿ ಮಾತನಾಡಿದ ಜಯಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಜಗದೀಶ್ ಮಾತನಾಡಿ ರಾಜ್ಯದಲ್ಲಿ ಏಕರೂಪ ಶಿಕ್ಷಣ ಜಾರಿಗೆ ತರಲು ಒತ್ತಾಯಿಸಿ ಈಗಾಗಲೇ ಜನಪ್ರತಿನಿಧಿಗಳಿಗೆ ಮನವಿ ನೀಡಿದ್ದೇವೆ. ಶಿಕ್ಷಣದಲ್ಲಿ ಸಮಾನತೆಯನ್ನು ಭಾಷಣದಲ್ಲಿ ಹೇಳುವ ಜನಪ್ರತಿನಿಧಿಗಳು ಕೂಡಲೇ ಜಾರಿಗೆ ತರುವಲ್ಲಿ ಶ್ರಮಿಸಬೇಕು ಎಂದು ತಿಳಿಸಿದರು.
23_udupi_jayakarnataka_rathayatre 013
[youtuber error='Not a YouTube, Vimeo or Google Video URL: ']
ಜಯಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಜನನಿ ದಿವಾಕರ ಶೆಟ್ಟಿ, ರಾಜ್ಯ ಹಾಗೂ ಜಿಲ್ಲಾ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ:ಹರ್ಷರಾಜ್ ಉಡುಪಿ

ಪರಿವಾರ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ. ವಾರ್ಷಿಕ ಮಹಾಸಭೆ ೧೨% ಡಿವಿಡೆಂಡ್ ಘೋಷಣೆ

ಉಡುಪಿ: ಪರಿವಾರ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ. ಉಡುಪಿ-ಇದರ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ದಿನಾಂಕ: ೧೪-೦೯-೨೦೧೩ನೇ ಶನಿವಾರದಂದು ಉಡುಪಿಯ ಡಯಾನಾ ರೆಸ್ಟೋರೆಂಟ್ನಲ್ಲಿ ಸಂಘದ ಅಧ್ಯಕ್ಷ ಶ್ರೀ ಕೆ. ರಘುಪತಿ ಭಟ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಸಂಘದ ನಿರ್ದೇಶಕಿ ಶ್ರೀಮತಿ ಸ್ನೇಹಪ್ರಭಾ ಕಮಲಾಕ್ಷ ಸ್ವಾಗತಿಸಿದರು. ಸಂಘದ ಅಧ್ಯಕ್ಷ ಶ್ರೀ ಕೆ. ರಘುಪತಿ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು ಹಾಗೂ ಸಲಹೆಗಾರರಾದ ಶ್ರೀ ರಘುರಾಮ ಎಸ್. ಶೆಟ್ಟಿಯವರು ಸಂಘದ ಅಭಿವೃದ್ಧಿಯ ಬಗ್ಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಮಹಾಸಭೆಯಲ್ಲಿ ಸಂಘದ ಸದಸ್ಯರಿಗೆ ೧೨% ಡಿವಿಡೆಂಡ್ ಘೋಷಿಸಲಾಯಿತು.
ಸಂಘದ ಉಪಾಧ್ಯಕ್ಷ ಶ್ರೀ ರಮೇಶ್ ಶೆಟ್ಟಿ ಕಾರ್ಕಳ ಹಾಗೂ ನಿರ್ದೇಶಕರಾದ ಶ್ರೀ ರಾಮಚಂದ್ರ ಸನಿಲ್, ಶ್ರೀ ರಮೇಶ್ ಶೆಟ್ಟಿ ಜಾರ್ಕಳ, ಶ್ರೀ ಶ್ರೀಶ ಕೊಡವೂರು, ಶ್ರೀ ಶಿವಪ್ರಸಾದ್ ಶೆಟ್ಟಿ, ಶ್ರೀ ಸುರೇಶ್ ಪ್ರಭು, ಸಲಹೆಗಾರರಾದ ಪ್ರೊ. ಕೆ. ಕಮಲಾಕ್ಷ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಶ್ರೀಮತಿ ರಂಜಿತಾ ಪ್ರವೀಣ್ರವರು ೨೦೧೨-೧೩ರ ಆಡಳಿತ ವರದಿಯನ್ನು ಮಂಡಿಸಿ, ಕಾರ್ಯಕ್ರಮ ನಿರೂಪಿಸಿದರು. ಶಾಖಾ ವ್ಯವಸ್ಥಾಪಕ ಶ್ರೀ ಮನೋಜ್ ರಾವ್ ಅವರ ಧನ್ಯವಾದದೊಂದಿಗೆ ಸಭೆಯು ಮುಕ್ತಾಯವಾಯಿತು.
DSC_0261 (Copy) 44

ಮೂರು ವರ್ಷದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಪೋಷಕರ ಆಕ್ರೋಶ: ಆರೋಪಿಗಳಿಬ್ಬರಿಗೆ ಅಕ್ಟೋಬರ್ ೫ ರವರೆಗೆ ನ್ಯಾಯಾಂಗ ಬಂಧನ

ಮಣಿಪಾಲ: ಮಣಿಪಾಲ ಮಾಧವಕೃಪಾ ಸ್ಕೂಲ್‌ನ ಎಲ್‌ಕೆಜಿ ವಿದ್ಯಾರ್ಥಿನಿ ಮೇಲಿನ ಲೈಂಗಿಕ ಕಿರುಕುಳ ವಿರುದ್ಧ ಅಕ್ರೋಷ ವ್ಯಕ್ತಪಡಿಸಿದ್ದಾರೆ. ಇಂದು ಬೆಳಗ್ಗೆ ಶಾಲೆ ಮುಂದೆ ಜಮಾಯಿಸಿದ ಇತರ ವಿದ್ಯಾರ್ಥಿಗಳ ಪೋಷಕರು ಆಡಳಿತ ಮಂಡಳಿ ವಿರುದ್ಧ ಅಕ್ರೋಶವ್ಯಕ್ತಪಡಿಸಿ ಪ್ರಾಂಶುಪಾಲರ ವರ್ತನೆಯನ್ನುಖಂಡಿಸಿದರು. ಶಾಲಾ ಆಡಳಿತ ಮಂಡಳಿ ಸರಿಯಾದ ಜವಬ್ದಾರಿ ನಿರ್ವಹಿಸುತ್ತಿಲ್ಲ ಅಂತಾ ಅಸಮಾಧಾನ ವ್ಯಕ್ತಪಡಿಸಿದರು. ಲೈಂಗಿಕ ಕಿರುಕುಳ ನೀಡಿದ ಆರೋಪಿಗಳಿಗೆ ಉಗ್ರ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದರು.
[youtuber youtube='http://www.youtube.com/watch?v=GZ3SrB4jdck&feature=c4-overview&list=UUs0k8vSBwTqzHjMqn8PYrzQ']
ಪಿಯರ್ಸನ್ ಸಂಸ್ಥೆಯ ಆಡಳಿತಕ್ಕೊಳಪಟ್ಟು ಮಣಿಪಾಲದಲ್ಲಿ ಮಾಧವಕೃಪಾ ಶಾಲೆ ಕಾರ್ಯಾಚರಿಸುತ್ತಿದೆ. ಕಳೆದ ಸೆಪ್ಟೆಂಬರ್ ೧೬ ರಂದು ಶಾಲೆಯ ಎಲ್‌ಕೆಜಿ ವಿಭಾಗದಲ್ಲಿ ಕಲಿಯುತ್ತಿದ್ದ ಬಾಲಕಿಯೊಬ್ಬಳು ಸ್ಕೂಲ್ ಬಸ್‌ನಲ್ಲಿ ಬಾರದೇ ಮನೆಗೆ ತಡವಾಗಿ ಬಂದಿದ್ದ ಬಾಲಕಿಯ ಪೋಷಕರು ಶಾಲಾ ಆಡಳಿತ ಮಂಡಳಿಗೆ ದೂರು ನೀಡಿದ್ದರು. ಶಾಲಾ ಪೋಷಕರ ದೂರಿಗೆ ಕ್ಯಾರೇ ಎನ್ನದ ಆಡಳಿತ ಮಂಡಳಿ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ ಪೋಷಕರು ಸೆಪ್ಟೆಂಬರ್ ೨೧ ರಂದು ಲೈಂಗಿಕ ಕಿರುಕುಳ ನೀಡಿದ ಸ್ಕೂಲ್ ಬಸ್ ನಿರ್ವಾಹಕರಿಬ್ಬರ ವಿರುದ್ಧ ಮಣಿಪಾಲ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೋಷಕರ ದೂರಿನ ಮೇರೆ ಆರೋಪಿಗಳಾದ ಶುಭಕುಮಾರ್ ಮತ್ತು ಸುಧೀರ್‌ನನ್ನು ಬಂಧಿಸಲಾಗಿತ್ತು.

23_udupi_manipal_sexual_harasement_pkg 025
ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿ ಶಾಲಾ ಆಡಳಿತ ಮಂಡಳಿಗೆ ದೂರು ನೀಡಿದ  ನಂತರವೂ ಆರೋಪಿಗಳಿಬ್ಬರಿಗೆ ಕರ್ತವ್ಯ ನಿರ್ವಹಿಸಲು ಶಾಲಾ ಆಡಳಿತ ಮಂಡಳಿ ಅವಕಾಶ ನೀಡಿತ್ತು.  ಶಾಲಾ ಆಡಳಿತ ಮಂಡಳಿ ಲಕ್ಷಗಟ್ಟಲ್ ಪೀಸುಗಿಟ್ಟಿಸಿಕೊಂಡು ಸರಿಯಾದ ಜವಬ್ದಾರಿ ನಿರ್ವಹಿಸುತ್ತಿಲ್ಲ ರೊಚ್ಚಿಗೆದ್ದ ಪೋಷಕರು ಶಾಲಾ ಮುಂದೆ ಜಮಾಯಿಸಿ ಆಡಳಿತ ಮಂಡಳಿ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಆಗಮಿಸಿದ ಮಣಿಪಾಲ ಪೋಲಿಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ಸ್ಥಳಕ್ಕೆ ಆಗಮಿಸಿ ಪೋಷಕರ ಜೊತೆ ಮಾತುಕತೆ ನಡೆಸಿದರು.ಆಡಳಿತ ಮಂಡಳಿ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

23_udupi_manipal_sexual_harasement_pkg 019
ಇಬ್ಬರು ಆರೋಪಿಗಳನ್ನು ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಅಕ್ಟೋಬರ್ ೫ ರವರೆಗೆ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ.
23_udupi_manipal_sexual_harasement_pkg 004