ಗುರುವಾರ, ಅಕ್ಟೋಬರ್ 24, 2013

ಅನ್ಯಕೋಮಿನ ಯುವತಿಗೆ ಕಿರುಕುಳ ನೀಡುತ್ತಿದ್ದ ಭೂಪನಿಗೆ ಬಿಸಿಬಿಸಿ ಕಜ್ಜಾಯ ನೀಡಿದ ಸಾರ್ವಜನಿಕರು....!
ಕಾರ್ಕಳ: ತನ್ನ ವಿಪರೀತ ಕಾಮತೃಷೆ ತೀರಿಸಲು ಮುಗ್ದ ಯುವತಿಯರನ್ನು ಪುಸಲಾಯಿಸಿ ತನ್ನ ಬಲೆಗೆ ಬೀಳಿಸಲು ಹೊಂಚುಹಾಕುತ್ತಿದ್ದ ಯುವಕನಿಗೆ ಸಾರ್ವಜನಿಕರು ರೆಡ್ ಹ್ಯಾಂಡ್ ಆಗಿ ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ನೆಲ್ಲಿಕಟ್ಟೆ ಎಂಬಲ್ಲಿ ಮಂಗಳವಾರ ನಡೆದಿದೆ.
ಕಾರ್ಕಳದ ಮುರೂರು ಬಳಿಯ ಹಾರ್‌ಜೆಡ್ಡು ನಿವಾಸಿ ಮುನಾಫ್ ಎಂಬಾತ ಸಾರ್ವಜನಿಕರಿಂದ ಗೂಸಾ ತಿಂದ ವ್ಯಕ್ತಿ. ಈತ ಸಿಕ್ಕಸಿಕ್ಕ ಯುವತಿರಿಗೆ ಕರೆ ಮಾಡಿ ಅವರನ್ನು ಲೈಗಿಂಕತೆಗೆ ಪೀಡಿಸುತ್ತಿದ್ದ ಚಟಹೊಂದಿದ್ದ.ಈತ ಯುವತಿಯ ಮೊಬೈಲ್ ನಂಬರ್ ಸಂಪಾದಿಸಿ ಆಕೆಗೆ ನಿರಂತರ ಮೆಸೇಜ್ ಮಾಡುತ್ತಿದ್ದ ಅಲ್ಲದೇ ಆಗಾಗ ಯುವತಿಯ ಮನೆಯ ಪರಿಸರದಲ್ಲಿ ಓಡಾಡಿ ಮಾನಸಿಕವಾಗಿ ಹಿಂಸಿಸುತ್ತಿದ್ದನ್ನೆನ್ನಲಾಗಿದೆ. ಇದರಿಂದ ಬೇಸತ್ತ ಯುವತಿ ಮನೆಯವರಿಗೆ ವಿಷಯ ತಿಳಿಸಿ ಬಳಿಕ ಸ್ಥಳೀಯರೊಂದಿಗೆ ಸೇರಿ ಈ ಚಪಲಚೆನ್ನಿಗರಾಯನಿಗೆ ಬುದ್ದಿಕಲಿಸುವ ತಂತ್ರ ರೂಪಿಸಿದರು. ಎಂದಿನಂತೆ ಈತ ಮತ್ತೆ ಮಂಗಳವಾರ ಯುವತಿಗೆ ಮೆಸೇಜ್ ಮಾಡಿದಾಗ ಯುವತಿ ಈತನಿಗೆ ತಕ್ಕಶಾಸ್ತಿ ಮಾಡಬೇಕೆಂದು ಬರುವಂತೆ ಮೆಸೇಜ್ ರವಾನಿಸಿದಳು. ಇತ್ತ ಮುನಾಫ್ ಯುವತಿ ಬರಹೇಳಿದ್ದಾಳೆ ಇನ್ನು ಸ್ವರ್ಗಕ್ಕೆ ಮೂರೇ ಗೇಣು ಎಂಬಂತೆ ತನ್ನ ಸ್ನೇಹಿತನ ಪಲ್ಸರ್ ಬೈಕ್ ಏರಿ ಶರವೇಗದಲ್ಲಿ ಬಂದೇಬಿಟ್ಟ. ಇನ್ನೇನು ಯುವತಿಯ ಮನೆಯೊಳಗೆ ನುಗ್ಗಿದ್ದೇ ತಡ ಸ್ಥಳಿಯರು ಈತನನ್ನು ರೆಡ್‌ಹ್ಯಾಂಡ್ ಆಗಿ ಹಿಡಿದು ಚಿನ್ನಾಗಿಯೇ ಬಿಸಿಬಿಸಿ ಕಜ್ಜಾಯದ ರುಚಿ ತೋರಿಸಿದರು. ಕಂಡಕಂಡ ಮುಗ್ದ ಯುವತಿಯರನ್ನು ರಾಸಲೀಲೆಗೆ ಕರೆದು ಸಮಾಜದ ಸ್ವಾಸ್ಥ್ಯ ಕೆಡಿಸುವ ನೀಚನಿಗೆ ಸರಿಯಾಗಿ ಧರ್ಮದೇಟು ಬಿದ್ದಿದೆ.

ಶನಿವಾರ, ಅಕ್ಟೋಬರ್ 19, 2013

ವೀರೇಂದ್ರ ಹೆಗ್ಗಡೆ ವಿರುದ್ಧ ಅವಹೇಳನಕಾರಿ ಹೇಳಿಕೆ ಖಂಡನೀಯ : ರಘುಪತಿ ಭಟ್

bhatt-28mar13_in
ಉಡುಪಿ : ಸೌಜನ್ಯ ಕೊಲೆ ಪ್ರಕರಣದಲ್ಲಿ ಯಾವುದೇ ಪುರಾವೆಯಿಲ್ಲದೇ ವಿನಾ ಕಾರಣ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಸರ್ವಧರ್ಮ ಸಮನ್ವತೆಯ ಹರಿಕಾರರಾಗಿ ಮೂಡಿ ಬಂದಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಯವರ ವಿರುದ್ಧ ಅವಹೇಳನಕಾರಿಯಾಗಿ ಶಬ್ದಗಳನ್ನು ಬಳಸಿ ಹೇಳಿಕೆ ನೀಡಿ ಚಾರಿತ್ರ್ಯ ಹರಣ ಮಾಡುವ ಪ್ರವೃತ್ತಿ  ಖಂಡನೀಯ ಎಂದು ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸೌಜನ್ಯ ಪ್ರಕರಣವು ಅಮಾನವೀಯವಾಗಿದ್ದು, ಆ ದುಷ್ಕೃತ್ಯವನ್ನು ಎಸಗಿದ ತಪ್ಪಿತಸ್ಥರ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ರಾಜ್ಯ ಸರ್ಕಾರ ತಕ್ಷಣ ಪ್ರಕರಣವನ್ನು ಸಿ.ಬಿ.ಐ. ತನಿಖೆಗೆ ವಹಿಸಿಕೊಡಬೇಕಾಗಿ ಒತ್ತಾಯಿಸಿದ ಅವರು, ಧರ್ಮಾಧಿಕಾರಿಗಳ ಬಗ್ಗೆ ನಾಡಿನ ಜನತೆಗೆ ತುಂಬು ಗೌರವವಿದ್ದು, ಅವರು ತಮ್ಮ ಬದುಕನ್ನು ಸಮಾಜದ ಏಳಿಗೆಗಾಗಿ ಮೀಸಲಿಟ್ಟಿರುವಾಗ ಅವರನ್ನು ನಿಂದಿಸುತ್ತಿರುವುದು  ಖಂಡನೀಯ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬ್ರಹ್ಮಾವರದಲ್ಲಿ ಕೃಷಿ ಮೇಳ

19_udupi_krashi_mela_2 001
ಉಡುಪಿ:ಬ್ರಹ್ಮಾವರ ಕೃಷಿ , ತೋಟಗಾರಿಕೆ ಮತ್ತು ವಲಯ ಸಂಶೋಧನಾ ಕೇಂದ್ರದ ವತಿಯಿಂದ ಕೃಷಿ ಮೇಳ ನಡೆಯಿತು. ಕೃಷಿ  ಕುರಿತ ಆಧುನಿಕ ಯಂತ್ರೋಪಕರಣಗಳು , ಭತ್ತದ ತಳಿಗಳು ಮತ್ತು ವಿವಿಧ ವಸ್ತು ಪ್ರದರ್ಶಗಳು ಗಮನ ಸೆಳೆಯಿತು. ಕೃಷಿ ಮೇಳವನ್ನು ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಮಾರ್ ಸೊರಕೆ ಉದ್ಘಾಟಿಸಿದರು. ನಂತರ ಕೃಷಿ ಕುರಿತು ವಿವಿಧ ಸಂಶೋಧನೆಗಳು ಹಾಗೂ ವೈಜ್ನಾನಿಕ ಕೃಷಿ ಕುರಿತು ವಿಚಾರ ಸಂಕಿರಣ ನಡೆಯಿತು.
[youtuber youtube='http://www.youtube.com/watch?v=HAzeNxQT9q8&feature=c4-overview&list=UUs0k8vSBwTqzHjMqn8PYrzQ']

ಹೂಡೆ: ಕಾರ್‌ಗೆ ದುಷ್ಕರ್ಮಿಗಳ ಬೆಂಕಿ

vlcsnap-2013-10-19-13h41m30s47
ಉಡುಪಿ:ಉಡುಪಿ ಜಿಲ್ಲೆಯ ಹೂಡೆಯಲ್ಲಿ ಮನೆಯಲ್ಲಿ ನಿಲ್ಲಿಸಿದ್ದ ಕಾರ್‌ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಕಳೆದ ತಡರಾತ್ರಿ ಘಟನೆ ಸಂಭವಿಸಿದ್ದು ಸ್ಥಳದಲ್ಲಿ ಹೆಚ್ಚಿನ ಬಂದೋಬಸ್ತ್‌ಗೆ ಪೋಲಿಸರನ್ನು ನಿಯೋಜಿಸಲಾಗಿದೆ. ಹೂಡೆಯ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಹರ್ಷವರ್ಧನ್ ಎಂಬುವವರಿಗೆ ಸೇರಿದ ಕಾರ್ ಇದಾಗಿದೆ. ಹೂಡೆಯಲ್ಲಿರುವ ಮನೆಯ ಶೆಡ್‌ನಲ್ಲಿ ರಿಟ್ಜ್ ಕಾರನ್ನು ನಿಲ್ಲಿಸಲಾಗಿತ್ತು.

[youtuber youtube='http://www.youtube.com/watch?v=a3Mz-O1yfZo&feature=c4-overview&list=UUs0k8vSBwTqzHjMqn8PYrzQ']

ಈ ವೇಳೆ ದುಷ್ಕರ್ಮಿಗಳು ಕಾರ್‌ನ ಬಾನೆಟ್ ತೆರೆದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಘಟನೆ ಕುರಿತು ಮಾಹಿತಿ ಸಿಕ್ಕಿದ ಕೂಡಲೇ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿದರು. ಈ ಸಂದರ್ಭ ಮಾತನಾಡಿದ ವಿಶ್ವ ಹಿಂದೂ ಪರಿಷತ್‌ನ ಅಧ್ಯಕ್ಷ  ಸುಪ್ರಸಾದ್ ಶೆಟ್ಟಿ ಮಾತನಾಡಿ ಮುಂದಿನ ೨೪ ಗಂಟೆಯೊಳಗೆ ಬಂಧಿಸಬೇಕು. ಇಲ್ಲದಿದ್ದಲ್ಲಿ ನಾಳೆ ಸಂಜೆ ಬ್ರಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ತಡರಾತ್ರಿ ಘಟನೆ ಸಂಭವಿಸಿದ್ರೂ ಬೆಳಗ್ಗೆ ೧೧ ಗಂಟೆವರೆಗೆ ಯಾವುದೇ ಕೇಸು ದಾಖಲಿಸಲಿಲ್ಲ. ಮಲ್ಪೆ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆಯದಿದ್ದು ಎಸ್ಪಿಗೆ ದೂರು ನೀಡಲಾಗಿದೆ.
vlcsnap-2013-10-19-13h41m10s22
vlcsnap-2013-10-19-13h41m20s203
vlcsnap-2013-10-19-13h41m24s250
vlcsnap-2013-10-19-13h41m53s24

ಅಕಾಲಿಕ ಮಳೆಯ ಆವಾಂತರ: ಭತ್ತ ಬೆಳೆ ಅಪಾರ ಹಾನಿ - ಕೈಗೆ ಬಂದ ತುತ್ತು ಬಾಯಿಗೆ ಸಿಗುತ್ತಾ?

vlcsnap-2013-10-18-20h01m54s251

ಕರಾವಳಿಯಾದ್ಯಂತ ಅಕಾಲಿಕ ಮಳೆ ಸುರಿಯುತ್ತಿದೆ. ಭತ್ತ ಬೆಳೆಗೆ ಅನುಕೂಲವಾಗಬೇಕಿದ್ದ ವಾತಾವರಣವಿಲ್ಲದೆ ರೈತರು ಕಂಗಾಲಾಗಿದ್ದಾರೆ. ಮಳೆಯ ಕಣ್ಣಾಮುಚ್ಚಾಲೆಯ ನಡುವೆ ಕಣ್ತಪ್ಪಿಸಿ ಕಟಾವು ಮಾಡಲು ಪರದಾಡುತ್ತಿದ್ದಾರೆ.ಉಡುಪಿ ಜಿಲ್ಲೆಯಲ್ಲಿ ಈ ಬಾರಿ ಅತೀಹೆಚ್ಚು ಮಳೆ ಸುರಿದಿದೆ. ಅಕ್ಟೋಬರ್ ತಿಂಗಳಲ್ಲೂ ಮಳೆಯ ತೀವ್ರತೆ ಕಡಿಮೆಯಾಗಿಲ್ಲ. ಈ ಭಾಗದಲ್ಲಿ ಹೆಚ್ಚಾಗಿ ಭತ್ತ ಬೆಳೆಯೋದರಿಂದ ಈ ಅಕಾಲಿಕ ಮಳೆಯಿಂದ ಕಟಾವಿಗೆ ಸಿದ್ದವಾದ ಬೆಳೆ ನಷ್ಟವಾಗುತ್ತಿದೆ.ಭತ್ತದ ತೆನೆಯಲ್ಲಿರುವ ಹಾಲು ಘಟ್ಟಿಯಾಗಿ ಅಕ್ಕಿಯ ಕಾಳಾಗಿ ಪರಿವರ್ತನೆಗೊಳ್ಳುವ ಸಮಯ ಇದು. ಈ ಪ್ರಕ್ರಿಯೆಗೆ ಖಾರವಾದ ಬಿಸಿಲಿನ ಅಗತ್ಯವಿದೆ. ಆದರೆ ಮಳೆ ಬಂದ ಕಾರಣ ಉತ್ತಮ ಬೆಳೆಯಾದರೂ ರೈತ ಸಂಕಷ್ಟ ಅನುಭವಿಸುವಂತಾಗಿದೆ.

vlcsnap-2013-10-18-20h02m41s215
ಉತ್ತಮ ಮಳೆಯಾದ ಕಾರಣ ಉಡುಪಿ ತಾಲೂಕಿನಲ್ಲಿ ೧೭ ಸಾವಿರ ಹೆಕ್ಟೇರ್, ಕುಂದಾಪುರ ತಾಲೂಕಿನಲ್ಲಿ ಸುಮಾರು ೧೭,೫೦೦ ಹಾಗೂ ಕಾರ್ಕಳ ತಾಲೂಕಿನಲ್ಲಿ ಅಂದಾಜು ೮ ಸಾವಿರ ಹೆಕ್ಟೇರ್ ಭೂಮಿಯಲ್ಲಿ ಭತ್ತ ಭಿತ್ತನೆ ಮಾಡಲಾಗಿತ್ತು. ಉತ್ತಮ ಫಸಲು ಕಟಾವಿಗೂ ಸಿದ್ದವಾಗಿದೆ. ಆದ್ರೆ ಮಳೆ ಎಲ್ಲವನ್ನೂ ನುಂಗಿ ನೀರು ಕುಡಿಯುವ ಅಪಾಯ ಎದುರಾಗಿದೆ. ತರಾತುರಿಯಲ್ಲಿ ಕಟಾವು ನಡೆಸುವಂತಾಗಿದೆ. ಬಿಟ್ಟರೆ ಮೊಳಕೆಯೊಡೆದು ಬೆಳೆ ನಷ್ಟವಾಗುವ ಅಪಾಯವೂ ಇದೆ.ಕೃಷಿ ಕೂಲಿ ಕಾರ್ಮಿಕರ ಕೊರತೆಯಿಂದ ಮೊದಲೇ ರೈತ ನಲುಗಿದ್ದಾನೆ. ಕೈಗೆ ಬಂದ ತುತ್ತು ಬಾಯಿಗೆ ಸಿಗೋದಿಲ್ಲ ಅಂದ್ರೆ ಇದೇ ಅಲ್ವಾ?
vlcsnap-2013-10-18-20h01m50s212
vlcsnap-2013-10-18-20h02m07s128
vlcsnap-2013-10-18-20h01m25s217

ಪುಟ್ಟ ವಾಚ್ ನ ಗಿನ್ನಿಸ್ ಕನಸು

vlcsnap-2013-10-18-20h11m10s180
ಸೂರ್ಯನ ರಶ್ಮಿಯಲ್ಲಿ ನೆರಳು ನೋಡಿ ಟೈಂ ಹೇಳೋ ಕಾಲವೊಂದಿತ್ತು. ಆನಂತ್ರ ವಾಚ್ ಬಂತು, ಈಗಂತೂ ಮೊಬೈಲ್ ನಲ್ಲೇ ಟೈಂ ನೋಡ್ಕೋತೇವೆ. ಆದರೆ ಕಿರುಬೆರಳಲ್ಲಿ ಟೈಂ ನೋಡೋ ವಾಚ್ ತಯಾರಿಸಿ ಲಿಮ್ಕಾ ದಾಖಲೆಯ ಸಾಧನೆ ಮಾಡಿದ ವ್ಯಕ್ತಿಯೊಬ್ರು ಉಡುಪಿಲಿದ್ದಾರೆ. ಕಿರುಬೆರಳಲ್ಲಿ ಟೈಂ ನೋಡೋದು ಹೇಗೆ ಅಂತೀರಾ ಇಲ್ನೋಡಿ........
vlcsnap-2013-10-18-20h11m16s236
ಉಡುಪಿಯಲ್ಲಿ ಇನೋವಾ ವಾಚ್‌ವಕ್ಸ್ ಅಂದ್ರೆ ಭಾರೀ ಜನಪ್ರಿಯ ಮಳಿಗೆ. ಕಳೆದ ಮೂರು ದಶಕಗಳಿಂದ ವಿ.ಗಣೇಶ್ ಎಂಬ ಈ ವ್ಯಕ್ತಿ ಕಾಯಕವೇ ಕೈಲಾಸ ಅಂತ ವಾಚ್‌ರಿಪೇರಿಯಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಹೊಟ್ಟೆ ಪಾಡಿಗೆ ಉದ್ಯೋಗ ಮಾಡೋದು ಒಂದ್ಕಡೆ ಆದ್ರೆ ವೃತ್ತಿಯನ್ನು ಅತಿಯಾಗಿ ಪ್ರೀತಿಸೋರು, ವೃತ್ತಿ ಕ್ಷೇತ್ರದಲ್ಲಿ ಏನಾದ್ರೂ ಸಾಧನೆ ಮಾಡುವ ಆಸೆ ಇಟ್ಕೋತಾರೆ. ಗಣೇಶ್ ಕೂಡಾ ಅದೇ ರೀತಿ ಕನಸು ಕಂಡವರು. ಈಗವರ ಕನಸು ನನಸಾಗಿದೆ. ಸದ್ಯ ಇವರು ವಿಶ್ವದ ಅತೀ ಚಿಕ್ಕದಾದ ವಾಚನ್ನು ತಯಾರಿಸಿ ಕಿರುಬೆರಳ ಉಂಗುರಕ್ಕೆ ಅಳವಡಿಸಿದ್ದಾರೆ. ಈ ಮೂಲಕ ಲಿಮ್ಕಾ ಬುಕ್ ಆಫ್ ರೆಕಾರ್ಡ್‌ನಲ್ಲಿ ತಮ್ಮ ಹೆಸರು ದಾಖಲಿಸೋಕೆ ರೆಡಿಯಾಗಿದ್ದಾರೆ. ಈ ಸಾಧನೆಗೆ ಗಣೇಶ್ ಬರೋಬ್ಬರಿ ೬ ತಿಂಗಳು ತೆಗೆದುಕೊಂಡಿದ್ದಾರೆ. ಕೇವಲ ೧ ಸೆಂಟಿಮೀಟರ್ ಸುತ್ತಳತೆಯಿರುವ,  ಕಾಲು ಇಂಚು ದಪ್ಪದ ಉಂಗುರದ ವಾಚನ್ನು ತಯಾರು ಮಾಡಿದ್ದಾರೆ.

vlcsnap-2013-10-18-20h12m05s217
ಗಣೇಶ್ ಯಾವತ್ತೂ ಪ್ರಯೋಗಶೀಲ. ಈ ಹಿಂದೆ ಅವರು  ಚೋಟಾ ವಾಲ್ ಕ್ಲಾಕ್, ಟ್ರಾನ್ಸ್ಪರೆಂಟ್ ವಾಚ್ ತಯಾರಿಸಿದ್ದರು. ಆದ್ರೆ ಇದೇ ಮೊದಲ ಬಾರಿಗೆ ದಾಖಲೆಗಾಗಿ ಉಂಗುರದೊಳಗೆ ವಾಚ್ ತಯಾರಿಸಿದ್ದಾರೆ. ಗಿನಿಸ್ ರೆಕಾರ್ಡ್‌ಗೂ ಈ ಸಾಧನೆಯನ್ನು ಸೇರ್ಪಡೆಗಳಿಸಬೇಕು ಅನ್ನೋ ಕನಸು ಗಣೇಶ್‌ಗಿದೆ. ಆದರೆ ತಾಂತ್ರಿಕ ಕಾರಣಕ್ಕೆ ತೊಡಕಾಗಿದೆ. ಕೇವಲ ೧೯ ಗ್ರಾಂ ತೂಕವಿರುವ ಈ ವಾಚ್ ಸುಮಾರು ೨೭ ಸಾವಿರ ರೂಪಾಯಿ ಬೆಲೆಬಾಳುತ್ತದೆ. ೨೦೧೩ರ ಲಿಮ್ಕಾ ಬುಕ್ ಆಫ್ ರೆಕಾರ್ಡ್‌ಗೆ ಗಣೇಶ್ ಹೆಸರಿನ ಜೊತೆ ಈ ಉಂಗುರವೂ ಸೇರ್ಪಡೆಯಾಗಲಿದೆ.
vlcsnap-2013-10-18-20h13m19s189
vlcsnap-2013-10-18-20h13m06s58
vlcsnap-2013-10-18-20h12m17s87vlcsnap-2013-10-18-20h11m10s180
ಸೂರ್ಯನ ರಶ್ಮಿಯಲ್ಲಿ ನೆರಳು ನೋಡಿ ಟೈಂ ಹೇಳೋ ಕಾಲವೊಂದಿತ್ತು. ಆನಂತ್ರ ವಾಚ್ ಬಂತು, ಈಗಂತೂ ಮೊಬೈಲ್ ನಲ್ಲೇ ಟೈಂ ನೋಡ್ಕೋತೇವೆ. ಆದರೆ ಕಿರುಬೆರಳಲ್ಲಿ ಟೈಂ ನೋಡೋ ವಾಚ್ ತಯಾರಿಸಿ ಲಿಮ್ಕಾ ದಾಖಲೆಯ ಸಾಧನೆ ಮಾಡಿದ ವ್ಯಕ್ತಿಯೊಬ್ರು ಉಡುಪಿಲಿದ್ದಾರೆ. ಕಿರುಬೆರಳಲ್ಲಿ ಟೈಂ ನೋಡೋದು ಹೇಗೆ ಅಂತೀರಾ ಇಲ್ನೋಡಿ........
vlcsnap-2013-10-18-20h11m16s236
ಉಡುಪಿಯಲ್ಲಿ ಇನೋವಾ ವಾಚ್‌ವಕ್ಸ್ ಅಂದ್ರೆ ಭಾರೀ ಜನಪ್ರಿಯ ಮಳಿಗೆ. ಕಳೆದ ಮೂರು ದಶಕಗಳಿಂದ ವಿ.ಗಣೇಶ್ ಎಂಬ ಈ ವ್ಯಕ್ತಿ ಕಾಯಕವೇ ಕೈಲಾಸ ಅಂತ ವಾಚ್‌ರಿಪೇರಿಯಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಹೊಟ್ಟೆ ಪಾಡಿಗೆ ಉದ್ಯೋಗ ಮಾಡೋದು ಒಂದ್ಕಡೆ ಆದ್ರೆ ವೃತ್ತಿಯನ್ನು ಅತಿಯಾಗಿ ಪ್ರೀತಿಸೋರು, ವೃತ್ತಿ ಕ್ಷೇತ್ರದಲ್ಲಿ ಏನಾದ್ರೂ ಸಾಧನೆ ಮಾಡುವ ಆಸೆ ಇಟ್ಕೋತಾರೆ. ಗಣೇಶ್ ಕೂಡಾ ಅದೇ ರೀತಿ ಕನಸು ಕಂಡವರು. ಈಗವರ ಕನಸು ನನಸಾಗಿದೆ. ಸದ್ಯ ಇವರು ವಿಶ್ವದ ಅತೀ ಚಿಕ್ಕದಾದ ವಾಚನ್ನು ತಯಾರಿಸಿ ಕಿರುಬೆರಳ ಉಂಗುರಕ್ಕೆ ಅಳವಡಿಸಿದ್ದಾರೆ. ಈ ಮೂಲಕ ಲಿಮ್ಕಾ ಬುಕ್ ಆಫ್ ರೆಕಾರ್ಡ್‌ನಲ್ಲಿ ತಮ್ಮ ಹೆಸರು ದಾಖಲಿಸೋಕೆ ರೆಡಿಯಾಗಿದ್ದಾರೆ. ಈ ಸಾಧನೆಗೆ ಗಣೇಶ್ ಬರೋಬ್ಬರಿ ೬ ತಿಂಗಳು ತೆಗೆದುಕೊಂಡಿದ್ದಾರೆ. ಕೇವಲ ೧ ಸೆಂಟಿಮೀಟರ್ ಸುತ್ತಳತೆಯಿರುವ,  ಕಾಲು ಇಂಚು ದಪ್ಪದ ಉಂಗುರದ ವಾಚನ್ನು ತಯಾರು ಮಾಡಿದ್ದಾರೆ.

vlcsnap-2013-10-18-20h12m05s217
ಗಣೇಶ್ ಯಾವತ್ತೂ ಪ್ರಯೋಗಶೀಲ. ಈ ಹಿಂದೆ ಅವರು  ಚೋಟಾ ವಾಲ್ ಕ್ಲಾಕ್, ಟ್ರಾನ್ಸ್ಪರೆಂಟ್ ವಾಚ್ ತಯಾರಿಸಿದ್ದರು. ಆದ್ರೆ ಇದೇ ಮೊದಲ ಬಾರಿಗೆ ದಾಖಲೆಗಾಗಿ ಉಂಗುರದೊಳಗೆ ವಾಚ್ ತಯಾರಿಸಿದ್ದಾರೆ. ಗಿನಿಸ್ ರೆಕಾರ್ಡ್‌ಗೂ ಈ ಸಾಧನೆಯನ್ನು ಸೇರ್ಪಡೆಗಳಿಸಬೇಕು ಅನ್ನೋ ಕನಸು ಗಣೇಶ್‌ಗಿದೆ. ಆದರೆ ತಾಂತ್ರಿಕ ಕಾರಣಕ್ಕೆ ತೊಡಕಾಗಿದೆ. ಕೇವಲ ೧೯ ಗ್ರಾಂ ತೂಕವಿರುವ ಈ ವಾಚ್ ಸುಮಾರು ೨೭ ಸಾವಿರ ರೂಪಾಯಿ ಬೆಲೆಬಾಳುತ್ತದೆ. ೨೦೧೩ರ ಲಿಮ್ಕಾ ಬುಕ್ ಆಫ್ ರೆಕಾರ್ಡ್‌ಗೆ ಗಣೇಶ್ ಹೆಸರಿನ ಜೊತೆ ಈ ಉಂಗುರವೂ ಸೇರ್ಪಡೆಯಾಗಲಿದೆ.
vlcsnap-2013-10-18-20h13m19s189
vlcsnap-2013-10-18-20h13m06s58
vlcsnap-2013-10-18-20h12m17s87

ಶುಕ್ರವಾರ, ಅಕ್ಟೋಬರ್ 18, 2013

ಶ್ರೀ ಕ್ಷೇತ್ರದ ತೇಜೋವಧೆ ಖಂಡನೀಯ: ಬಂಟ್ಸ್ ಬಹರೈನ್

1/1/2003 10:35 PM

ಉಡುಪಿ:ಸಮಾಜ ಘಾತುಕ ಶಕ್ತಿಗಳು ಹಾಗೂ ಸಂಘಟನೆಗಳು ಶ್ರೀ ಕ್ಷೇತ್ರದ ಮೇಲೆ ಹಾಗೂ ಹೆಗ್ಗಡೆಯವರ ಮೇಲೆ ನೀಡುತ್ತಿರುವ ಹೇಳಿಕೆಗಳು ಖಂಡನೀಯ ಎಂದು ಬಂಟ್ಸ್ ಬಹರೈನ್ ಮಾಜಿ ಅದ್ಯಕ್ಷ ಪ್ರದೀಪ್ ಶೆಟ್ಟಿ ಹೇಳಿದ್ದಾರೆ. ಉಡುಪಿ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾ ಗೋಷ್ಟಿ ನಡೆಸಿದ ಅವರು ಹೆಗ್ಗಡೆಯವರು ಮಾಡುತ್ತಿರುವ ಜನಪರ ಕಾರ್ಯಗಳು ಪ್ರಪಂಚಕ್ಕೆ ಮಾದರಿಯಾಗಿದೆ. ಅವರ ಮೇಲೆ ನಡೆಯುತ್ತಿರುವ ಅವಹೇಳನಕಾರಿ ಹೇಳಿಕೆಗಳನ್ನು ಸಹಿಸಲಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
[youtuber youtube='http://www.youtube.com/watch?v=mD6GgAAEdX4&feature=c4-overview&list=UUs0k8vSBwTqzHjMqn8PYrzQ']

ಉಡುಪಿ: ವಾಲ್ಮೀಖಿ ಜಯಂತಿ ಆಚರಣೆ

1/1/2003 9:16 PM
ಉಡುಪಿ:ಉಡುಪಿ ಜಿಲ್ಲಾಡಳಿತದ ವತಿಯಿಂದ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು. ಜಿಲ್ಲಾಧಿಕಾರಿ ಕಚೇರಿಯ ವಾಜಪೇಯಿ ಸಭಾಭವನದಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಮಾರ್ ಸೊರಕೆ ಉದ್ಘಾಟಿಸಿದರು. ಗಣನಾಥ ಎಕ್ಕಾರ್ ದಿಕ್ಸೂಚಿ ಭಾಷಣ ಮಾಡಿದರು.ಜಿಲ್ಲಾ ಪಂಚಾಯತ್ ಅಧ್ಯಕ್ಷ  ಉಪೇಂದ್ರ ನಾಯಕ್ , ತಾಲೂಕು ಪಂಚಾಯತ್ ಅಧ್ಯಕ್ಷೆ ಗೌರಿ ಪೂಜಾರ್ತಿ, ನಗರಸಭಾ ಅಧ್ಯಕ್ಷ ಯುವರಾಜ್ ಉಪಸ್ಥಿತರಿದ್ದರು.

[youtuber youtube='http://www.youtube.com/watch?v=OYv0o329kIM&feature=c4-overview&list=UUs0k8vSBwTqzHjMqn8PYrzQ']

ಗುರುವಾರ, ಅಕ್ಟೋಬರ್ 17, 2013

ಉಗ್ಗೆಲ್‌ಬೆಟ್ಟು ಗರಡಿ ಮುಖ್ಯಸ್ಥರಿಂದ ವಂಚನೆ: ಆರೋಪ

16_udupi_garodi_prob_avb 001
ಉಡುಪಿ :  ಗರಡಿ ಎನ್ನುವುದು ಪುರಾತನ ಕಾಲದಿಂದಲೂ ಧಾರ್ಮಿಕ ಶ್ರದ್ಧಾ ಕೇಂದ್ರ ಬೆಳೆದುಬಂದಿದೆ. ಜಾತಿ ಮತ ಭೇದವಿಲ್ಲದೆ  ಇಲ್ಲಿ ಎಲ್ಲರೂ ಒಟ್ಟು ಸೇರುವುದು , ದೇವರಿಗೆ ಪೂಜೆ ಸಲ್ಲಿಸುವುದು ವಾಡಿಕೆ. ಆದರೆ ಉಡುಪಿ ಜಿಲ್ಲೆಯ ಉಗ್ಗೆಲುಬೆಟ್ಟು ಎಂಬ ಗರಡಿಯೊಂದರಲ್ಲಿ ಗ್ರಾಮಸ್ಥರಿಗೂ ಮತ್ತು ದೇವಳದ ಆಡಳಿತ ಮೊಕ್ತೇಸರರಿಗೂ ಮನಸ್ತಾಪ ಶುರುವಾಗಿದೆ. ದೇವರಿಗೆ ಬಂದ ಹರಕೆಯ ಕಾಣಿಕೆಗಳನ್ನು, ಒಡವೆಗಳನ್ನು ದೇವಳದ ಮುಖ್ಯಸ್ಥರು ರಶೀದಿ ನೀಡದೆ  ತಮ್ಮ ಸ್ವಂತಕ್ಕೆ ಬಳಸಿಕೊಳ್ಳುತ್ತಿದ್ದಾರೆ ಜನತೆ ಆರೋಪಿಸಿದ್ದಾರೆ.

ಉಡುಪಿ ಜಿಲ್ಲೆಯ  ಬ್ರಹ್ಮಬೈದರ್ಕಳ ಚಿಕ್ಕಮ್ಮ ಗರಡಿ ಇದೀಗ ವಿವಾದದ ಕೇಂದ್ರ ಬಿಂದುವಾಗಿದೆ. ೩೦೦ ವರ್ಷಗಳ ಇತಿಹಾಸವಿರುವ ಗರಡಿಯಲ್ಲಿ ನೇಮೋತ್ಸವ ಮತ್ತು ಸಂಕ್ರಮಣ ಪೂಜೆಯ ಸಂದರ್ಭದಲ್ಲಿ ನಂಬಿದ ಭಕ್ತರು ಅತೀ ಹೆಚ್ಚು ಹರಕೆಯನ್ನು ಸಲ್ಲಿಸುತ್ತಾರೆ. ಆದರೆ ಈ ಹರಕೆಗಳಿಗೆ , ಸೇವೆಗಳಿಗೆ ಯಾವುದೇ ರೀತಿಯ ರಸೀದಿಯನ್ನು ನೀಡಲ್ಲ. ಕಳೆದ ಹಲವಾರು ವರ್ಷಗಳಿಂದ ಈ ಪ್ರಕ್ರಿಯೆ ನಡೆದುಕೊಂಡೇ ಬಂದಿದೆ. ದೇವಳದ ಮುಖ್ಯಸ್ಥರಾಗಿರುವ ಮಹಾಬಲ ಶೆಟ್ಟಿ ಅವರು ದೇವಸ್ಥಾನಕ್ಕೆ ಬಂದ ಆದಾಯವನ್ನು ಲೆಕ್ಕವನ್ನು ಕೊಡದೇ ಸ್ವಂತಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಆಡಳಿತ ಮಂಡಳಿಯ ಸದಸ್ಯರು ಆರೋಪವನ್ನು ಮಾಡಿದ್ದಾರೆ.

ಕಳೆದ ೨೫ ವರ್ಷಗಳಿಂದ ಶೆಟ್ಟರ ಈ ವ್ಯವಹಾರವನ್ನು ಆಡಳಿತ ಮಂಡಳಿ ಪ್ರಶ್ನಿಸಿದರೆ ಉಡಾಫೆ ಮಾತನಾಡಿ ದೇವಸ್ಥಾನದ ಜಾಗ ನಂದು ಅಂತಾ ಅಹಂಕಾರದಿಂದ ವರ್ತಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ಗರಡಿಯಲ್ಲಿ  ಸೇವೆ ಸಲ್ಲಿಸುತ್ತಿರುವ ೮ ಅರ್ಚಕರ ನಡುವೆ ಭಿನ್ನಾಭಿಪ್ರಾಯ ಮೂಡಿಸುವ ಕೆಲಸವನ್ನು ಮಹಾಬಲ ಶೆಟ್ರು ಮಾಡುತ್ತಿದ್ದು  ಗ್ರಾಮಸ್ಥರ ಅಕ್ರೋಶಕ್ಕೆ ಕಾರಣವಾಗಿದೆ. ದೇವಸ್ಥಾನ ಅಭಿವೃದ್ಧಿ ಕೆಲಸಗಳು ನೆನೆಗುದಿಗೆ ಬಿದ್ದಿದ್ದು ಶೆಟ್ಟರ ಮತ್ತು ಆಡಳಿತ ಮಂಡಳಿಯ ಇತರ ಸದಸ್ಯರ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ. ದೇವಸ್ಥಾನಕ್ಕೆ ಬರುವ ಆದಾಯಗಳು ಪ್ರಾಮಾಣಿಕವಾಗಿ ಅಭಿವೃದ್ಧಿ ಕೆಲಸಕ್ಕೆ ವಿನಯೋಗ ಆಗಬೇಕೆಂದು , ಹರಕೆ ಸೇವೆಗಳು ರಶೀದಿ ಮುಖಾಂತರ ನಡೆಯಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಇಲ್ಲದಿದ್ದಲ್ಲಿ ಆಡಳಿತ ಮುಖ್ಯಸ್ಥರ ವಿರುದ್ಧ ಉಗ್ರ ಪ್ರತಿಭಟನೆ ನಡೆಸಲಿದ್ದೇವೆ ಅಂತಾರೆ ಗ್ರಾಮಸ್ಥರು.

ಡಾ. ವೀರೇಂದ್ರ ಹೆಗ್ಗಡೆ ಅವರ ಮಾನಹಾನಿಕರ ಹೇಳಿಕೆಗೆ ಪ್ರಮೋದ್ ಖಂಡನೆ

16_udupi_harsha_pramod_sowjanya_pressmeet 004


ಉಡುಪಿ:ಸೌಜನ್ಯ ಪ್ರಕರಣದಡಿಯಲ್ಲಿ ಡಾ. ವೀರೇಂದ್ರ ಹೆಗ್ಗಡೆ ಯವರ ಹೆಸರನ್ನು ಸೇರಿಸುವದರ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಅವಮಾನ ಮಾಡಿದಂತಾಗಿದೆ ಎಂದು ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ. ಉಡುಪಿ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು ವೀರೇಂದ್ರ ಹೆಗ್ಗಡೆಯವರನ್ನು ಅವಮಾನ ಮಾಡುವಂತಹ ಹೇಳಿಕೆಗಳನ್ನು ನೀಡುತ್ತಿರುವುದು ಖಂಡನೀಯ ಎಂದು ತಿಳಿಸಿದ ಅವರು ಮುಂದಿನ ದಿನದಲ್ಲಿ ಈ ಬಗ್ಗೆ ಉಡುಪಿಯಲ್ಲಿ ಪ್ರತಿಭಟನೆ ನಡೆಸಲು ಸಿಧ್ಧ ಅಂತಾ ತಿಳಿಸಿದ್ರು. ಪತ್ರಿಕಾ ಗೋಷ್ಟಿಯಲ್ಲಿ ನಗರ ಸಭಾದ್ಯಕ್ಷ ಯುವರಾಜ್, ಉಪಾಧ್ಯಕ್ಷೆ ಅಮೃತಾ ಕೃಷ್ಣಮೂರ್ತಿ ಉಪಸ್ಥಿತರಿದ್ದರು.
[youtuber youtube='http://www.youtube.com/watch?v=j-3x7nri-v0&feature=c4-overview&list=UUs0k8vSBwTqzHjMqn8PYrzQ']

೧೯ ರಂದು ಬ್ರಹ್ಮಾವರದಲ್ಲಿ ಕೃಷಿ ಮೇಳ

16_udupi_krashi_mela_pressmeet 001
ಉಡುಪಿ:ಬ್ರಹ್ಮಾವರ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದಲ್ಲಿ ಅಕ್ಟೋಬರ್ ೧೯ ರಿಂದ ೨೦ ರವರೆಗೆ ಕೃಷಿ ಮೇಳ ೨೦೧೩ ನಡೆಯಲಿದೆ. ಜಿಲ್ಲಾ ಉಸ್ತುವಾರ ಸಚಿವ ವಿನಯ್ ಕುಮಾರ್ ಸೊರಕೆ ಉದ್ಘಾಟಿಸಲಿದ್ದು, ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡೀಸ್ ಕೃಷಿ ವಸ್ತು ಪ್ರದರ್ಶನ ಉದ್ಘಾಟಿಸಲಿದ್ದಾರೆ. ಮೇಳದಲ್ಲಿ ಕೃಷಿ ವಸ್ತು ಪ್ರದರ್ಶನ, ಯಾಂತ್ರಿಕ ಉಪಕರಣಗಳ ಪ್ರದರ್ಶನ ಕೂಡಾ ನಡೆಯಲಿದೆ ಎಂದು ಕೃಷಿ ಸಂಶೋಧನಾ ಕೇಂದ್ರದ ನಿರ್ಧೇಶಕ ಎಂ. ಹನುಮಂತಪ್ಪ ಹೇಳಿದ್ದಾರೆ.
[youtuber youtube='http://www.youtube.com/watch?v=Dt9vsfaufi4&feature=c4-overview&list=UUs0k8vSBwTqzHjMqn8PYrzQ']

ಅಜಲು ಪದ್ಧತಿ ಬಗ್ಗೆ ಕೃಷ್ಣಪ್ಪ ಉಪ್ಪೂರು ಚಲನಚಿತ್ರ.


koraga
ಉಡುಪಿ:ಕೊರಗ ಜನಾಂಗದ ಅಜಲು ಪದ್ಧತಿ ಬಗ್ಗೆ ಕೃಷ್ಣಪ್ಪ ಉಪ್ಪೂರು ಚಲನಚಿತ್ರವನ್ನು ಮಾಡ್ತಾ ಇದ್ದಾರೆ. ಕೊರಗರ ಬದುಕು, ಬವಣೆಗಳು, ಜೀವನ ಪದ್ಧತಿ, ಕಲೆ ಸಂಸ್ಕೃತಿ ಬಗ್ಗೆ ಅಧ್ಯಯನ ನಡೆಸಿದ ಉಪ್ಪೂರು ಅವರು ಚಲನಚಿತ್ರದ ಮೂಲಕ ಕೊರಗರ ಜನಾಂಗದ ಸಮಸ್ಯೆಯನ್ನು ಬಿಂಬಿಸಲು ಹೊರಟಿದ್ದಾರೆ. ಕೊರಗ ಜನಾಂಗದ ಹೀನಾಯ ಪದ್ಧತಿಯಾದ ಅಜಲು ಕ್ರಮವನ್ನು ಸರಕಾರ ಈಗಾಗಲೇ ರದ್ದುಗೊಳಿಸಿದೆ.
Koraga_tribesman

ಆದರೂ ಈ ಪದ್ಧತಿ ಇಂದಿಗೂ ಅಲ್ಲಲ್ಲಿ ಜಾರಿಗೆಯಲ್ಲಿದೆ ಎಂದು ತಿಳಿಸಿದ ಅವರು ಮುಂದಿನ ಡಿಸೆಂಬರ್‌ನಲ್ಲಿ ಚಲನಚಿತ್ರ ಸೆಟ್ಟೆರಲಿದೆ ಅಂತಾ ತಿಳಿಸಿದ್ರು. ಬಾಲಿವುಡ್ ಪ್ರಮುಖ ನಟ - ನಟಿಯರು ಚಿತ್ರದಲ್ಲಿ ನಟಿಸಲಿದ್ದು, ಉಳಿದಂತೆ ಕನ್ನಡ - ತುಳು ರಂಗನಟರು ಕೊರಗ ಸಮಾಜದ ಪ್ರತಿಭೆಗಳು ಚಲನಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪತ್ರಿಕಾ ಗೋಷ್ಟಿಯಲ್ಲಿ ರವಿರಾಜ್ ಉಡುಪಿ, ಅಶೋಕ್ ಪೂಜಾರಿ, ಡಾ. ವಿಜಯೇಂದ್ರ ಉಪಸ್ಥಿತರಿದ್ದರು.
16_udupi_ajalu_film_pressmeet 004

[youtuber youtube='http://www.youtube.com/watch?v=727lArc26J8&feature=c4-overview&list=UUs0k8vSBwTqzHjMqn8PYrzQ']

ಕಂಬಳ ಕ್ರೀಡೆಗೆ ಹೈಟೆಕ್ ಸ್ಪರ್ಶ: ಫಲಿತಾಂಶಕ್ಕಾಗಿ ಎಫ್.ಟಿ.ಡಿ.ಪಿ.ಡಿ ತಂತ್ರಜ್ಞಾನ..

IMG_3573 copy

ಕಾರ್ಕಳ: ಕರಾವಳಿಯ ಅತ್ಯಂತ ಪ್ರಾಚೀನ ಹಾಗೂ ಜನಪ್ರಿಯ ಕ್ರೀಡೆಯಾದ ಕಂಬಳ ಕ್ರೀಡೆಗೆ ನಾಡಿನೆಲ್ಲಡೆ ಲಕ್ಷಾಂತರ ಜನ ಅಭಿಮಾನಿಗಳಿದ್ದು, ಕಂಬಳ ಕ್ರೀಡೆಯಲ್ಲೂ ತಂತ್ರಜ್ಞಾನವನ್ನು ಅಳವಡಿಸಿದರೆ ಹೇಗಿರಬಹುದೆಂಬ ಲೆಕ್ಕಾಚಾರವನ್ನು ಕಾರ್ಕಳದಲ್ಲಿ ಪ್ರಾಯೋಗಿಕವಾಗಿ ನಡೆಸಲು ಅಂತಿಮ ಸಿದ್ದತೆ ನಡೆದಿದೆ. ಪ್ರತಿಷ್ಠಿತ ಕಂಬಳಗಳಲ್ಲಿ ಕೋಣಗಳ ಮಾಲೀಕರು ಲಕ್ಷಾಂತರ ರೂ ವ್ಯಯಿಸಿ ಕೋಣಗಳನ್ನು ಸ್ಪರ್ಧೆಗಿಳಿಸಿ ಪ್ರಶಸ್ತಿಗಾಗಿ ಉಳಿದ ಸ್ಪರ್ಧಿಗಳೊಂದಿಗೆ ಪೈಪೋಟಿಗಳಿಯುತ್ತಾರೆ. ಆದರೆ ಕೋಣಗಳು ತಲುಪುವ ಸಮಯದ ಲೆಕ್ಕಾಚಾರವನ್ನು ಹಳೆಯ ಟೈಮರ್ ವ್ಯವಸ್ಥೆಯ ಮೂಲಕ ದಾಖಲಿಸುವ ವ್ಯವಸ್ಥೆಯಲ್ಲಿ ಲೋಪವಾಗುತ್ತದೆ ಎಂದು ಕೋಣಗಳ ಮಾಲೀಕರು ಪ್ರತೀ ಸಮವೂ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು.ಆದರೆ ಇನ್ನುಮುಂದೆ ಇಂತಹ ಗೊಂದಲಕ್ಕೆ ತೆರೆಬೀಳಲಿದೆ, ಕಾರಣ ೦.೯೯ ಪ್ರತಿಶತ ನಿಖರತೆಯ ಗುಣಮಟ್ಟದಲ್ಲಿ ಫಲಿತಾಂಶ ನೀಡುವ ವಿನೂತನ ವ್ಯವಸ್ಥೆ ಈ ಎಲ್ಲಾ ಗೊಂದಲಗಳನ್ನು ನಿವಾರಿಸಲಿದೆ ಎಂದು ಜಿಲ್ಲಾ ಕಂಬಳ ಸಮಿತಿಯ ಸ್ಥಾಪಕ ಕಾರ್ಯದರ್ಶಿ ಹಾಗೂ ಕಂಬಳ ಅಕಾಡೆಮಿಯ ಸಂಚಾಲಕ ಪ್ರೊ..ಕೆ ಗುಣಪಾಲ ಕಡಂಬ ಸುದ್ದಿಗೋಷ್ಠಿಯಲ್ಲಿ‌ಈ ವಿವರಗಳನ್ನು ನೀಡಿದ್ದಾರೆ.

sky view

ಕಾರ್ಕಳದಲ್ಲಿ ಎಲೆಕ್ಟ್ರಾನಿಕ್ಸ್ ಮಳಿಗೆ ನಡೆಸುತ್ತಿರುವ  ರತ್ನಾಕರ್ ನಾಯ್ಕ್ ಹವ್ಯಾಸಕ್ಕಾಗಿ ಇಂತಹ ತಂತ್ರಜ್ಞಾನವನ್ನು ಕಂಬಳಕ್ಕೆ ಅಳವಡಿಸುವ ನಿಟ್ಟಿನಲ್ಲಿ ಸ್ಕೈವಿವ್ ಹೆಸರಿನ ಸಂಸ್ಥೆಯು ಕಂಬಳ ಕ್ರೀಡೆಯ ನಿಖರ ಫಲಿತಾಂಶ ನೀಡಬಲ್ಲ ಎಫ್.ಟಿ.ಡಿ.ಪಿ.ಡಿ ಎಂಬ ಸಾಧನವನ್ನು ಆರಂಭದಲ್ಲಿ ಅಡ್ವೆ ಹಾಗೂ ಬಳಿಕ ಕಾರ್ಕಳದ ಮಿಯ್ಯಾರು ಕಂಬಳದಲ್ಲಿ ಪ್ರಾಯೋಗಿಕವಾಗಿ ಅಳವಡಿಸುವ ಸಿದ್ದತೆ ನಡೆಸುತ್ತಿದ್ದಾರೆ. ಈ ತಂತ್ರಜ್ಞಾನದಲ್ಲಿ ಸೆನ್ಸಾರ್ ಹಾಗೂ ಹೈ ಡೆಫಿನಿಶನ್ ಫ್ಲೈಯಿಂಗ್ ಸ್ಪೈಡರ್ ಕ್ಯಾಮೆರಾಗಳು ವೀಕ್ಷಕರಿಗೆ ನೇರ ದೃಶ್ಯಾವಳಿ ಹಾಗೂ ನಿಖರ ಕೋಣಗಳು ಗುರಿತಲುಪಿದಾಗ ಅತ್ಯಂತ ನಿಖರ ಫಲಿತಾಂಶ ನೀಡುತ್ತವೆ. ಈ ತಂತ್ರಜ್ಞಾನದ ಒಂದು ಭಾಗವಾದ ಸೆನ್ಸಾರ್ ೨ ಕೋಣಗಳು ಗುರಿಮುಟ್ಟುವ ೨ ಬದಿಯಲ್ಲಿ ಭೂಮಿಯ ಕೆಳಗಡೆ ೧ ಅಡಿ ಆಳದಲ್ಲಿ ಅಳವಡಿಸಲಾಗುತ್ತದೆ. ಕೋಣಗಳು ಓಟ ಆರಂಭಿಸುವ ಹಂತದಲ್ಲಿ ಟೈಮರ್ ಸ್ವಿಚ್ ಒತ್ತಿದಾಗ  ಸಮಯ ಆರಂಭಗೊಳ್ಳುತ್ತದೆ ಅಲ್ಲದೇ ಓಟ ಮುಕ್ತಾಯದ ಹಂತದಲ್ಲಿ ಸೆನ್ಸಾರ್‌ಗೆ ಕೋಣಗಳ ಗೊರಸುಗಳು ಸ್ಪರ್ಶಿಸಿದ ತಕ್ಷಣವೇ ಟೈಮರ್ ನಿಂತು ಕೋಣಗಳು ತಲುಪಿದ ಸಮಯ ದಾಖಲಾಗುತ್ತದೆ ಹಾಗೂ ಪ್ರಥಮ ಸ್ಥಾನ ಪಡೆದ ಕೋಣಕ್ಕೆ ಹಸಿರು ದೀಪ ಹಾಗೂ ೨ನೇ ಸ್ಥಾನ ಪಡೆದ ಕೋಣಕ್ಕೆ ಕೆಂಪು ದೀಪ ಉರಿಯುವ ವ್ಯವಸ್ಥೆ ಕಲ್ಪಿಸಲಾಗಿದೆ.

images 77
ಇದರಿಂದ ಕೋಣಗಳು ತಲುಪಿರುವ ಅತ್ಯಂತ ಸೂಕ್ಷ್ಮ ಸಮಯವೂ ಈ ವ್ಯವಸ್ಥೆಯಲ್ಲಿ ದಾಖಲಾಗಿ ನಿಖರ ಫಲಿತಾಂಶವನ್ನು ಈ ತಂತ್ರಜ್ಞಾನದಲ್ಲಿ ಸ್ಪಷ್ಟವಾಗಿ ಕಂಡುಕೊಳ್ಳಬಹುದಾಗಿದೆ. ಅಲ್ಲದೇ ೧೦ ಮೀಟರ್ ಎತ್ತರದಲ್ಲಿ ಕೋಣಗಳ ಚಲನೆಯ ವಿಡಿಯೋ ದಾಖಲಿಸಲು  ಹಗ್ಗದ ಸಹಾಯದಿಂದ ಸ್ವಯಂಚಾಲಿತವಾಗಿ ಚಲಿಸಬಲ್ಲ ಫ್ಲೈ ಲೈನ್ ಕೇಬಲ್ ಕ್ಯಾಮ್( ಸ್ಪೈಡರ್ ಕ್ಯಾಮೆರಾದಂತೆ) ಕೋಣಗಳ ಓಟಕ್ಕೆ ಅಣಿಯಾಗುವ ಸಂದರ್ಭದಿಂದ ಅವುಗಳ ವೇಗಕ್ಕೆ ತಕ್ಕಂತೆ ಮೇಲಿನಿಂದಲೇ ಕೋಣಗಳನ್ನು ಹಿಂಬಾಲಿಸಿ ಎಚ್.ಡಿ ಗುಣಮಟ್ಟದ ವಿಡಿಯೋಗ್ರಫಿಯನ್ನು ವಿಡಿಯೋ ಮಿಕ್ಸರ್‌ಗೆ ನಿಸ್ತಂತು ಮೂಲಕ ರವಾನಿಸುತ್ತದೆ. ಹೀಗೆ ರವಾನಿಸಲ್ಪಟ್ಟ ವಿಡಿಯೋವನ್ನು ಎಲ್‌ಇಡಿ ಟಿವಿ ಪರದೆ ಮೂಲಕ ವೀಕ್ಷಕರಿಗೆ ನೇರದೃಶ್ಯಾವಳಿಗಳನ್ನು ರವಾನಿಸಲಾಗುತ್ತದೆ. ಅಲ್ಲದೇ ಈ ತಂತ್ರಜ್ಞಾನದಲ್ಲಿ ಕಂಬಳದಲ್ಲಿ ಭಾಗವಹಿಸುವ ಎಲ್ಲಾ ಕೋಣಗಳ ಯಜಮಾನರ ಹಾಗೂ ಕೋಣಗಳ ಸಂಪೂರ್ಣ ಪರಿಚಯದ ವಿಡಿಯೋಗಳನ್ನು ಕೂಡಾ ಪ್ರಸಾರ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಗುಣಪಾಲ ಕಡಂಬ ಹಾಗೂ ರತ್ನಾಕರ್ ನಾಯ್ಕ್ ಜಂಟೀ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈ ತಂತ್ರಜ್ಞಾನ ಅಳವಡಿಸಲು ಸುಮಾರು ೫ಲಕ್ಷರೂ ವೆಚ್ಚ ತಗಲುವುದರಿಂದ ದುಬಾರಿ ಎನಿಸಿದರೂ, ಕಂಬಳಕ್ಕೆ ಮಾತ್ರ ಹೈಟೆಕ್ ಕಳೆ ಬರುವುದಂತೂ ಸತ್ಯ.

images 44

ಅಕ್ಟೋಬರ್ ೧೭ರಿಂದ ೨೬ರವರೆಗೆ ಆರಂಭವಾಗುವ ಕಂಬಳ ತರಬೇತಿ ಶಿಬಿರದಲ್ಲಿ ತರಬೇತಿ ಪಡೆದವರಿಗೆ ನವೆಂಬರ್ ೧೦ರಂದು ಕಂಬಳ ಅಕಾಡೆಮಿ ವತಿಯಿಂದ ವಿಶೇಷ ಕಂಬಳ ಸ್ಪರ್ಧೆ ನಡೆಸಲಾಗುತ್ತಿದ್ದು, ಈವೇಳೆಗೆ ಪ್ರಾಯೋಗಿಕವಾಗಿ ಈ ತಂತ್ರಜ್ಞಾನವನ್ನು ಅಳವಡಿಸಲಾಗುವುದು ಅಲ್ಲದೇ ನಂದಿಕೂರು, ಮೂಡಬಿದ್ರೆ,ಪುತ್ತೂರು ಹಾಗೂ ವಾಮಂಜೂರಿನ ತಿರುವೈಲುಗುತ್ತು ಕಂಬಳದಲ್ಲಿಯೂ ಅಳವಡಿಸುವ ಚಿಂತನೆ ನಡೆದಿದೆ ಎಂದು ತಿಳಿಸಿದರು.
images99

ಧರ್ಮಸ್ಥಳ ಹೆಗ್ಗಡೆಯವರ ಬಗ್ಗೆ ಲಘು ಅಪಾದನೆಗಳು ; ಯಕ್ಷಗಾನ ಕಲಾರಂಗ ಖಂಡನೆ

index veera
ಉಡುಪಿ : ವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣದ ಹಿನ್ನಲೆಯಲ್ಲಿ ಶ್ರದ್ಧಾಕೇಂದ್ರ ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಜತೆಗೆ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯರ ಕುರಿತಾಗಿ ತೀರಾ  ಲಘುವಾಗಿ ಆಪಾದನೆಗಳನ್ನು ಮಾಡುತ್ತಿರುವ ವಿಚಾರ ಒಟ್ಟು ಸಮಾಜದ ಸ್ವಾಸ್ಥ್ಯಕ್ಕೆ ಆಘಾತಕಾರಿ ಬೆಳವಣಿಗೆ. ಸಮಾಜಮುಖಿ ಕಾರ್ಯಕ್ರಮಗಳಿಂದ ಶ್ರೀಕ್ಷೇತ್ರ ಎಲ್ಲರಿಗೆ ಮಾದರಿಯಾಗಿದೆ. ನಮಗೆಲ್ಲ ಆದರ್ಶಪ್ರಾಯರಾಗಿರುವ ಡಾ. ಡಿ. ವೀರೇಂದ್ರ ಹೆಗ್ಗಡೆಯವರನ್ನು ಮತ್ತು ಅವರ ಕುಟುಂಬವನ್ನು ಈ ಘಟನೆಯೊಂದಿಗೆ ತಳುಕು ಹಾಕಿರುವುದನ್ನು ಯಕ್ಷಗಾನ ಕಲಾರಂಗ ತೀವ್ರವಾಗಿ ಖಂಡಿಸುತ್ತದೆ ಎಂದು ಸಂಸ್ಥೆಯ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಕಾರ್ಯದರ್ಶಿ ಮುರಲಿ ಕಡೆಕಾರ್ ಹಾಗೂ ಸರ್ವ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಡಾ.ವೀರೇಂದ್ರ ಹೆಗಡೆಯವರ ಕುಟುಂಬದ ಮೇಲೆ ಅನಗತ್ಯ ಆರೋಪ ; ಪೇಜಾವರ ಶ್ರೀ ಖೇದ

UDGVPHI-W059_GV02TD_657542e
ಉಡುಪಿ: ಸೌಜನ್ಯಳ ಕೊಲೆ ಪ್ರಕರಣದಲ್ಲಿ ಧರ್ಮಸ್ಥಳ ದೇವಸ್ಥಾನ, ಡಾ. ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬದ ಮೇಲೆ ಆರೋಪಗಳನ್ನು ಹೊರಿಸಲಾಗುತ್ತಿರುವುದನ್ನು ಪೇಜಾವರಶ್ರೀಗಳು ಬಲವಾಗಿ ಖಂಡಿಸಿದ್ದಾರೆ. ಈ ಆರೋಪ, ನಿಂದನೆಗಳಿಂದ ತಮಗೆ ಅತ್ಯಂತ ಖೇದವಾಗಿದೆ. ಸೌಜನ್ಯಳ ಕೊಲೆ ವಿಷಯದಲ್ಲಿ ಸರಿಯಾದ ತನಿಖೆ ನಡೆಯಬೇಕೆಂದು ತಾವು ಒತ್ತಿ ಹೇಳುತ್ತೇವೆ. ಇದನ್ನು ಡಾ. ಹೆಗ್ಗಡೆ ಅವರೂ ಒಪ್ಪಿದ್ದಾರೆ. ತಮ್ಮ ತಮ್ಮನ ಮಗನ ಕೈವಾಡ ಇಲ್ಲ ಎಂದೂ, ಆ ದಿನಗಳಲ್ಲಿ ಆತ ವಿದೇಶದಲ್ಲಿದ್ದನೆಂಬುದನ್ನೂ ಅವರು ದಾಖಲೆ ಸಮೇತ ಸ್ಪಷ್ಟಪಡಿಸಿದ್ದಾರೆ. ಇಂತಹ ಸ್ಥಿತಿಯಲ್ಲಿ ಏನೂ ಆಧಾರ ಇಲ್ಲದೆ ಅವರು ಮತ್ತು ಅವರ ಕುಟುಂಬದ ಮೇಲೆ ನಿರಾಧಾರ ಆರೋಪ ಉಚಿತವಲ್ಲ ಎಂದು ಶ್ರೀಗಳು ಹೇಳಿದ್ದಾರೆ.

ಕಾರ್ಕಳ:ಕಂಪ್ಯೂಟರ್ ಕ್ಲಾಸಿಗೆಂದು ತೆರಳಿದ ಯುವತಿ ನಾಪತ್ತೆ

Shanthi
ಕಾರ್ಕಳ: ಕಂಪ್ಯೂಟರ್ ಕ್ಲಾಸಿಗೆ ತೆರಳಿದ ಯುವತಿ ವಾಪಸ್ಸು ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ನಡೆದಿದೆ.ಕುಕ್ಕೂಂದರು ಗ್ರಾಮದ ಅಯ್ಯಪ್ಪ ನಗರದ ಶ್ರೀಮತಿ ಮಾಲತಿ ಎಂಬವರ ಮಗಳು ಕುಮಾರಿ ಶಾಂತಿ ಎನ್ನುವ ಯುವತಿ ಕಾಣೆಯಾಗಿದ್ದು ,ಅಕ್ಟೋಬರ್ 15 ರಂದು ಕಾರ್ಕಳ ನಗರದಲ್ಲಿರುವ ಡಾಟಾ ನೆಟ್ ಎನ್ನುವ ಕಂಪ್ಯೂಟರ್ ತೆರಬೇತಿ ಕ್ಲಾಸಿಗೆ ತೆರಳುತ್ತೇನೆಂದು ಹೇಳಿ ಹೋಗಿದ್ದಳು ಅದರೆ ಯುವತಿ ತಡರಾತ್ರಿಯಾದರೂ ಮನೆಗೆ ಬಾರದಿರುವುದರಿಂದ ಗಾಬರಿಯಾದ ಹೆತ್ತವರು ಕಾರ್ಕಳ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

“ಪೆ. ಕೃಷ್ಣ ಭಟ್ ಪ್ರಶಸ್ತಿ”

Perla_Krishna_Bhat
ಉಡುಪಿ:  ಬಹುಶ್ರುತ ವಿದ್ವಾಂಸ, ಬಹುಭಾಷಾ ವಿಶಾರದ, ಲೇಖಕ, ಅರ್ಥಧಾರಿಯಾಗಿದ್ದ ಇತ್ತೀಚಿಗೆ ನಮ್ಮನ್ನಗಲಿದ ಪೆಕೃಷ್ಣ ಭಟ್ಟರ ಹೆಸರಿನಲ್ಲಿ ಪ್ರಶಸ್ತಿಯೊಂದನ್ನು ಸ್ಥಾಪಿಸಲಾಗಿದೆ. ಕೊಲ್ಲೂರು ಶ್ರೀ ಮೂಕಾಂಬಿಕ ದೇವಳದ ಧರ್ಮದರ್ಶಿಗಳೂ, ಸಾಮಾಜಿಕ ಕಳಕಳಿಗೆ ಸದಾ ಸ್ಪಂಧಿಸುವ ಕೃಷ್ಣಪ್ರಸಾದ ಅಡ್ಯಂತಾಯರು ತಮ್ಮ ವಿದ್ಯಾಗುರುವಿನ ಸ್ಮರಣಾರ್ಥ ಅವರ ಹೆಸರಿನಲ್ಲಿ ಉಡುಪಿಯ ಯಕ್ಷಗಾನ ಕಲಾರಂಗದ ಮೂಲಕ ನೀಡಲಾಗುವುದು. ಪ್ರಶಸ್ತಿ ರೂ. ೧೦೦೦೦/- ನಗದು ಪುರಸ್ಕಾರ ಒಳಗೊಂಡಿದ್ದು, ತಾಳಮದ್ದಲೆ ಕ್ಷೇತ್ರದ ಹಿರಿಯ ಸಾಧಕರನ್ನು ಗೌರವಿಸಲಾಗುವುದು. ಸಂಸ್ಥೆ ಎಂಟು ವರ್ಷಗಳ ಹಿಂದೆ ತಾಳಮದ್ದಲೆ ಅರ್ಥಧಾರಿಗೆ ನೀಡಲೆಂದೇ “ಮಟ್ಟಿ ಮುರಳೀಧರ ರಾವ್” ಪ್ರಶಸ್ತಿ ಸ್ಥಾಪಿಸಿದಾಗ ಪೆರ್ಲಕೃಷ್ಣಭಟ್ ಈ ಪ್ರಶಸ್ತಿಯ ಮೊದಲ ಗೌರವಕ್ಕೆ ಪಾತ್ರರಾಗಿದ್ದರು.

ಇಂದು ಅವರ ಶಿಷ್ಯ ಇಂತಹದೇ ಪ್ರಶಸ್ತಿಯನ್ನು ಅವರ ಹೆಸರಿನಲ್ಲೇ ಸ್ಥಾಪಿಸಿದ್ದು ಯೋಗಾಯೋಗ. ಅಡ್ಯಂತಾಯರ ಗುರುಭಕ್ತಿ ಮತ್ತು ಸಂಸ್ಥೆಯ ಮೇಲೆ ಅವರಿಗಿರುವ ಪ್ರೀತಿ, ವಿಶ್ವಾಸಕ್ಕೆ ನಾವು ಧನ್ಯರು ಎಂದು, ಸಂಸ್ಥೆಯ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿರುತ್ತಾರೆ.
ಇದರಿಂದ ಸಂಸ್ಥೆ ಕಲಾವಿದರಿಗೆ ನೀಡುವ ರೂ ೧೦೦೦೦/- ನಗದು ಪುರಸ್ಕಾರದ ಸಂಖ್ಯೆ ಹದಿನೈದಕ್ಕೆರಿದೆ.

ಸೌಜನ್ಯ ಪ್ರಕರಣದಲ್ಲಿ ಕ್ಷೇತ್ರದ ಹೆಸರಿಗೆ ಮಸಿಬಳಿಯುವವರ ವಿರುದ್ಧ ಅಕ್ರೋಶ

15_udupi_sowjanya_prakarana_pressmeet 003ಉಡುಪಿ:
ಸೌಜನ್ಯ ಪ್ರಕರಣದಲ್ಲಿ ನಿಜವಾದ ಆರೋಪಿಗಳಿಗೆ ಶಿಕ್ಷೆಯಾಗುವುದರ ಜೊತೆಗೆ ಪೋಷಕರ ನ್ಯಾಯ ಸಿಗಬೇಕು. ಆದರೆ ಈ ಪ್ರಕರಣದ ಹೆಸಸರಿನಲ್ಲಿ ಕ್ಷೇತ್ರದ ಹೆಸರಿಗೆ ಕಳಂಕ ತರುವವರ ವಿರುದ್ಧ ಉಡುಪಿ ಜಿಲ್ಲೆಯ ಎಲ್ಲಾ ದೇವಸ್ಥಾನಗಳ ಆಡಳಿತ ಮಂಡಳಿ ಖಂಡಿಸುತ್ತದೆ ಎಂದು ಮಣಿಪಾಲ ಪ್ರಸನ್ನ ಗಣಪತಿ ದೇವಸ್ಥಾನದ ಆಡಳಿತ ಧರ್ಮದರ್ಶಿ ಹರಿಪ್ರಸಾದ್ ರೈ ಹೇಳಿದ್ದಾರೆ.
ಉಡುಪಿ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು ಸೌಜನ್ಯ ಪ್ರಕರಣದ ಹೆಸರಿನಲ್ಲಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಕ್ಷೇತ್ರದ ಹೆಸರನ್ನು ಕೆಡಿಸಿ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಅವರ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿವೆ. ಇವರ ವಿರುದ್ಧ ಉಡುಪಿ ಜಿಲ್ಲೆಯ ಎಲ್ಲಾ ದೇವಸ್ಥಾನಗಳ ಆಡಳಿತ ಮಂಡಳಿ ಪ್ರತಿಭಟನೆ ನಡೆಸಲಿದೆ ಎಂದು ಹೇಳಿದರು.
[youtuber youtube='http://www.youtube.com/watch?v=cjfriZEOKyY&feature=c4-overview&list=UUs0k8vSBwTqzHjMqn8PYrzQ']

ಮಣಿಪಾಲ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಮರು ತನಿಖೆಗೆ ಒತ್ತಾಯಿಸಿ ಡಿ‌ಎಸ್‌ಎಸ್ ಪ್ರತಿಭಟನೆ

15_udupi_manipal_rape_dalitha_protest 006
ಉಡುಪಿ:ಮಣಿಪಾಲ ಮಾಧವ ಕೃಪಾ ಆಂಗ್ಲಮಾಧ್ಯಮ ಶಾಲಾ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣವನ್ನು ಮರು ತನಿಖೆಗೆ ಒತ್ತಾಯಿಸಿ ಉಡುಪಿ ಜಿಲ್ಲಾ ದಲಿತ ಸಂಘರ್ಷ ಸಮಿತಿ ಮತ್ತು ಶಾಲಾ ಪೋಷಕರಿಂದ ಪ್ರತಿಭಟನೆ ನಡೆಯಿತು. ಮಣಿಪಾಲ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಮೇಲೆ ಲೈಂಗಿಕ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಪೋಷಕರ ದೂರಿನ ಮೇರೆಗೆ ಬಸ್ ನಿರ್ವಾಹಕರಾದ ಸುಧೀರ್ ಮತ್ತು ಶುಭಕುಮಾರ್ ಅವರ ಮೇಲೆ ಪ್ರಕರಣ ದಾಖಲಾಗಿತ್ತು. ಆರೋಪಿ ಸುಧೀರ್ ಮತ್ತು ಶುಭ ಕುಮಾರ್ ಕಡುಬಡವರಾಗಿದ್ದು ವಿನಾಕಾರಣ ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಡಿ‌ಎಸ್‌ಎಸ್ ಆರೋಪಿಸಿದೆ. ಕೂಡಲೇ ಈ ಆರೋಪಿಗಳೆಂದು ಪ್ರಕರಣ ದಾಖಲಿಸಿದ ಬಸ್ ಡ್ರೈವರ್‌ರಿಬ್ಬರನ್ನು ಬಿಡುಗಡೆಗೊಳಿಸಿ ಪ್ರಕರಣವನ್ನು ಮರುತನಿಖೆ ಮಾಡಬೇಕೆಂದು ಡಿ‌ಎಸ್‌ಎಸ್ ಒತ್ತಾಯಿಸಿದೆ.
[youtuber youtube='http://www.youtube.com/watch?v=Uoue76TuWAo&feature=c4-overview&list=UUs0k8vSBwTqzHjMqn8PYrzQ']

ನೇಜಾರು ಮಸೀದಿ ವಿವಾದ-ಹಿಂದು ಸಂಘಟನೆಗಳಿಂದ ಪ್ರತಿಭಟನೆ

vlcsnap-2013-10-16-19h49m38s59

ಉಡುಪಿ: ಉಡುಪಿಯ ನೇಜಾರುವಿನಲ್ಲಿ ರುವ ಮಸೀದಿಯ ವಿಚಾರವಾಗಿ ಇಂದು ಹಿಂದು ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು.  ಕಳೆದ ಹತ್ತು ವರುಷಗಳಿಂದ ಈ ಮಸೀದಿ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು. ಈ ಮಸೀದಿಯು ಇರುವ ಪರಿಸರದಲ್ಲಿ ಕಡಿಮೆ ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದವರಿದ್ದೂ ಇಲ್ಲಿ ಮಸೀದಿಯ ಅಗತ್ಯವಿಲ್ಲವೆಂದು ಕಳೆದ ಹಲವು ವರುಷಗಳಿಂದ ಹಿಂದು ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದವು.ತಾಂತ್ರಿಕ ಕಾರಣಗಳಿಂದ ಸ್ಥಳೀಯ ಪಂಚಾಐತ್ ಕೂಡ ಅನುಮತಿಯನ್ನು ನೀಡಿರಲಿಲ್ಲ. ಆದರೆ ಕಳೆದ ಹತ್ತು ದಿನಗಳಿಂದ ಇಲ್ಲಿ ನಮಾಜ್ ನಡೆಯುತ್ತಿದೆ ಎಂದು ಹಿಂದು ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದೆ.

vlcsnap-2013-10-16-19h53m15s190

ಈ ಮಸೀದಿಯಲ್ಲಿ ಕಾಮಗಾರಿ ನಡೆಸಬಾರದು ಮತ್ತು ಪ್ರಾರ್ಥನೆಯನ್ನು ಸಲ್ಲಿಸಬಾರದೆಂದು ನ್ಯಾಯಲಯದ ಆದೇಶವಿದ್ದರೂ ನ್ಯಾಯಲಯದ ಆದೇಶ ಉಲ್ಲಂಘಿಸಿ ಇಲ್ಲಿ ನಮಾಜ್ ನಡೆಸಲಾಗುತ್ತಿದೆ ಎಂದು ಆರೋಪಿಸಿರುವ ಹಿಂದು ಸಂಘಟನೆಗಳು ಇಂದು ಪ್ರತಿಭಟನೆ ನಡೆಸಿದೆ. ಕಲ್ಯಾಣಪುರ ಗ್ರಾಮಪಂಚಾತ್ ಮುಂದೆ ಪ್ರತಿಭಟನೆ ನಡೆಸಿದ ಹಿಂದು ಸಂಘಟನೆಗಳುನಮಾಜ್ ಮಾಡುವುದನ್ನು ತಡೆಯುವಂತೆ ಒತ್ತಾಯಿಸಿದವು. ಬಿಜೆಪಿ ಯುವ ಮುಖಂಡ ವಿಲಾಸ್ ನಾಯಕ್, ಹಿಂದು ಸಂಘಟನೆ ಮುಖಂಡ ಸುಪ್ರಸಾದ್ ಶೆಟ್ಟಿ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆದಿದ್ದು ನೂರಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಸ್ಥಳಕ್ಕೆ ಜಿಲ್ಲಾ ಎಸ್ ಪಿ ಬರಬೇಕೆಂದು ಪ್ರತಿಭಟನಕಾರರು ಪಟ್ಟು ಹಿಡಿದಿದ್ದು ಸ್ಥಳದಲ್ಲಿ ಬಿಗುವಿನ ವಾತವರಣ ನಿರ್ಮಾಣವಾಗಿತ್ತು.

vlcsnap-2013-10-16-19h50m45s220
vlcsnap-2013-10-16-19h52m34s36
vlcsnap-2013-10-16-19h53m06s101

ಮಂಗಳವಾರ, ಅಕ್ಟೋಬರ್ 15, 2013

ಉಡುಪಿಯಲ್ಲಿ ದೈವಜ್ನ ಸಮಾಜ ಭಾಂಧವರಿಂದ ದಸರಾ ದಾಂಡಿಯಾ ಡ್ಯಾನ್ಸ್

15_udupi_dandiya_dance 010
ಉಡುಪಿ:ದಸರಾ ಅಂಗವಾಗಿ ದೈವಜ್ನ  ಸಮಾಜಬಾಂದವರಿಂದ ದಾಂಡಿಯಾ ನೃತ್ಯ ಒಳಕಾಡು ದೈವಜ್ನ ಸಭಾಭವನದಲ್ಲಿ ನಡೆಯಿತು.

[youtuber youtube='http://www.youtube.com/watch?v=ro0ae827jKg&feature=c4-overview&list=UUs0k8vSBwTqzHjMqn8PYrzQ']

೧೨ ವರ್ಷದ ದಾಂಡಿಯಾ ನೃತ್ಯ ಕಾರ್ಯಕ್ರಮದಲ್ಲಿ ಮಕ್ಕಳು, ಯುವಕರು, ಯುವತಿಯರು ಸಂಭ್ರಮದಿಂದ ಪಾಲ್ಗೊಂಡರು.
15_udupi_dandiya_dance 012   15_udupi_dandiya_dance 008