ಬುಧವಾರ, ನವೆಂಬರ್ 20, 2013

ಸೌದಿ ಅರೇಬಿಯಾ: ಸೌದಿ ಅರೇಬಿಯಾದಲ್ಲಿ ಅಪರೂಪಕ್ಕೆ ಎಂಬಂತೆ ಮಳೆಯ ಸಿಂಚನವಾಗಿದೆ. ಮಳೆಯನ್ನೇ ಕಾಣದ ಇಲ್ಲಿನ ಜನತೆಗೆ ವರುಣ ಸೆಳೆತ ಫುಲ್ ಖುಷ್ ಮೂಡನ್ನು ತಂದಿದೆ. ಮಾಮೂಲಿಯಾಗಿ ಸೌದಿ ಅರೇಬಿಯಾದಲ್ಲಿ ಯಾವ ಸಮಯದಲ್ಲಿ ಚಳಿಗಾಲ ಮತ್ತು ಬೆಸಿಗೆಗಾಲ ಇರುತ್ತದೆ, ಈ ಹೊತ್ತಿನಲ್ಲೂ ತತ್ತರಿಸಿದ ಜನತೆಗೆ ವರುಣನ ಆಗಮನ ತಂಪಾದ ವಾತವರಣವನ್ನು ಮೂಡಿಸಿದೆ. ಆಕಸ್ಮಿಕವಾಗಿ ಬಂದ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದ್ದು ವಾಹನ ಓಡಟಕ್ಕೂ ಕಷ್ಟವಾಗಿದೆ. ಆದರೂ ಸೌದಿಯ ಜನರು ಮಳೆಯ ಸಿಂಚನದಿಂದ ಫುಲ್ ಖುಷ್ ಆಗಿದ್ದಾರೆ.
Madeena
19112012057
ಕುಂದಾಪುರ :ಹಬ್ಬದ ಆಚರಣೆಯೇ ಆವಾಂತರ ಸೃಷ್ಟಿಸಿದ ಘಟನೆ ಕುಂದಾಪುರ ತಾಲೂಕಿನ ಕೋಟೇಶ್ವರದಲ್ಲಿ ನಡೆದಿದೆ. ಕೊಡಿ ಹಬ್ಬದ ಸಂದರ್ಭದಲ್ಲಿ ನಡೆಯುವ ಸಾಂಪ್ರದಾಯಿಕ ಅಕ್ಕಿ ಸುತ್ತವ ಆಚರಣೆಯೇ ದೇವರ ಮೀನುಗಳಿಗೆ ಉರುಳಾಗಿ ಪರಿಣಮಿಸಿದೆ.ಕೋಟೇಶ್ವರ ಕೋಟಿಲಿಂಗೇಶ್ವರ ತೀರ್ಥಕೆರೆಯಲ್ಲಿ ಈ ಘಟನೆ ಸಂಭವಿಸಿದ್ದು ನೂರಾರು ದೇವರ ಮೀನುಗಳು ಸಾವನ್ನಪ್ಪುತ್ತಿದೆ.
DSCN0409  222
ಕುಂದಾಪುರ ತಾಲೂಕಿನ ಕೋಟೇಶ್ವರದಲ್ಲಿ ವರ್ಷಂಪ್ರತಿಯಂತೆ ಕೊಡಿಹಬ್ಬ ಸಂಭ್ರಮದಿಂದ ನಡೆಯುತ್ತೆ. ಎರಡು ದಿನಗಳ ಹಿಂದೆ ಸಾವಿರಾರು ನವ ಜೋಡಿಗಳು ಕೋಟಿಲಿಂಗೇಶ್ವರ ತೀರ್ಥಕೆರೆಯಲ್ಲಿ ಸ್ನಾನ ಮಾಡಿ ಕೊಡಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದರು. ಇದೇ ಸಂದರ್ಭ ಹಬ್ಬಕ್ಕೆ ಬಂದ ಹೆಚ್ಚಿನ ಭಕ್ತರು ಅಕ್ಕಿ ಸುತ್ತು ಸೇವೆಯನ್ನು ನೆರವೇರಿಸುತ್ತಾರೆ. ಇದೇ ಅಕ್ಕಿಯನ್ನು ತಿಂದ ಮೀನುಗಳು ಕಳೆದರೆಡು ದಿನಗಳಿಂದ ಸಾವನ್ನಪ್ಪುತ್ತಿದ್ದು ದೇವಳದ ಭಕ್ತರಲ್ಲಿ ಆತಂಕ ಹುಟ್ಟಿಸಿದೆ.
DSCN0414 88
ಗಂಟೆ ಗಂಟೆಗೂ ನೂರಾರು ಮೀನುಗಳು ಸಾವನ್ನಪ್ಪುತ್ತಿದ್ದು ತೀರ್ಥ ಕೆರೆಯ ಸ್ಥಳಕ್ಕೆ ಮೀನುಗಾರಿಕಾ ಅಧಿಕಾರಿಗಳು ಬಂದು ತಪಾಸಣೆ ನಡೆಸುತ್ತಿದ್ದಾರೆ. ಅಕ್ಕಿಯನ್ನು ತಿಂದ ಮೀನುಗಳು ಜೀರ್ಣಿಸಿಕೊಳ್ಳಲಾಗದೆ ಸಾವನ್ನಪ್ಪುವ ಸಾಧ್ಯತೆ ಇದೆ ಅಂತಾ ಆಧಿಕಾರಿಗಳು ತಿಳಿಸಿದ್ದಾರೆ. ಅಕ್ಕಿಯಲ್ಲಿರುವ ಕೆಮಿಕಲ್ ಅಂಶಗಳು ಕೂಡಾ ಮೀನಿನ ಸಾವಿಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.
66
ಅಕ್ಕಿಸುತ್ತುವ ಸಂಪ್ರದಾಯದ ಸಂದರ್ಭ ಕೆರೆಗೆ ಅಕ್ಕಿ ಬೀಳಬಾರದು ಅಂತಾ ಕೆರೆಯ ಸುತ್ತಲೂ ಸೀರೆ ಹಾಸಲಾಗುತ್ತಿತ್ತು ಆದ್ರೆ ಈ ಬಾರಿ ಇದ್ಯಾವುದೇ ಕ್ರಮವನ್ನು ಕೈಗೊಳ್ಳದೇ ಇರುವುದರಿಂದ ಈ ಆವಾಂತರ ಸಂಭವಿಸಿದೆ. ಮೇಲ್ನೋಟಕ್ಕೆ ಅಕ್ಕಿ ತಿಂದು ಮೀನು ಸಾವನ್ನಪ್ಪತ್ತಿದ್ದು ಸಾವಿಗೆ ಸ್ಪಷ್ಟ  ಕಾರಣ ಮಾತ್ರ ಇನ್ನು ಗೊತ್ತಾಗಿಲ್ಲ. ಮೀನುಗಾರಿಕಾ ಅಧಿಕಾರಿಗಳು ಫಾರೆನ್ಸಿಕ್ ಲ್ಯಾಬ್ ಗೆ ಈ ವರದಿಯನ್ನು ಕೊಟ್ರೆ ಮೀನಿನ ಸಾವಿಗೆ ನಿಖರ ಕಾರಣ ಗೊತ್ತಾಗಬಹುದು.
DSCN0442DSCN0457DSCN0428 33
DSCN0439 22ಯುವ ಪ್ರಸಂಗಕರ್ತ ಕಂಜಾರುಗಿರಿ ನವೀನಕುಮಾರ್ ವಿರಚಿತ ಮೊದಲ ಕಲಾಕ್ರತಿ " ದಾತ್ರಿ ವೈಭವ" ಯಕ್ಷಗಾನ ಪ್ರಸಂಗದ ಬಿಡುಗಡೆ ಹಾಗೂ ಪ್ರದರ್ಶನವು ದಸಂಬರ್ ತಿಂಗಳ ೯ರಂದು ರಾತ್ರಿ ೯.೧೫ಕ್ಕೆ ಉಡುಪಿ ಶ್ರೀಕ್ರಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ. ಪರ್ಯಾಯ ಸೋದೆ ವಾದಿರಾಜ ಮಠದ ಯತಿ ಶ್ರೀ ಶ್ರೀ ವಿಶ್ವವಲ್ಲಭ ಶ್ರೀಪಾದರು ಪ್ರಸಂಗವನ್ನು ಬಿಡುಗಡೆಗೊಳಿಸುವರು ಎಂದು ನೀಲಾವರ ಮೇಳದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.


naveen kunjar
ಕುಂದಾಪುರ: ಕರ್ನಾಟಕ ಕರಾವಳಿಯ ಸಪ್ತ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಕೋಟೇಶ್ವರದಲ್ಲಿ ಕೊಡಿ ಹಬ್ಬ. ಕೊಟೇಶ್ವರದ ಅಧಿದೇವ ಶ್ರೀ ಕೋಟಿಲಿಂಗೇಶ್ವರನ ವಾರ್ಷಿಕ ಬ್ರಹ್ಮರಥೋತ್ಸವವೇ 'ಕೊಡಿಹಬ್ಬ'. ಈ ಉತ್ಸವದ ಹಿಂದೆ ಪರಂಪರಾನುಗತ ನಂಬಿಕೆ ಇದೆ. ವ್ಯವಹಾರಸ್ಥರಿಗೆ ಹೊಸ ಲೆಕ್ಕಚಾರ ಪ್ರಾರಂಭವಾಗಿ ಅಭಿವೃದ್ಧಿಯ ಕುಡಿಯೊಡೆಯುತ್ತದೆ, ಅವಿವಾಹಿತರಿಗೆ ಬಾಳಜೋಡಿ ಸಿಗುತ್ತದೆ, ನವ ವಿವಾಹಿತರಿಗೆ ಕರುಳ ಕುಡಿ ಚಿಗುರಿ ಸಂತಸ ಚಿಮ್ಮುತ್ತದೆ, ಕೃಷಿಕರಿಗೆ ಫಸಲು ತುಂಬಿ ಸಮೃದ್ಧಿಯ ಕುಡಿ ಮೊಳೆಯುತ್ತದೆ ಎಂಬ ನಂಬಿಕೆಯೇ  ಜಿಲ್ಲೆಯ ಈ ಅತಿದೊಡ್ಡ ರಥೋತ್ಸವಕ್ಕೆ `ಕೊಡಿಹಬ್ಬ' ಎಂದು ಹೆಸರು ಬರಲು ಕಾರಣವಾಯಿತು. ಒಟ್ಟಿನಲ್ಲಿ ಎಲ್ಲೆಡೆ ಸಂತಸ, ಸಮೃದ್ಧಿಯ ಕುಡಿಯೊಡೆಯುವಿಕೆಯ ನಂಬಿಕೆ ಇದೆ.
kodi habba (7)
ಇತಿಹಾಸ ಪ್ರಸಿದ್ದ ಮಾಹಿಷ್ಮತಿ ನಗರದ ಚಕ್ರವರ್ತಿ ವಸುದೇವ ತೀರ್ಥಯಾತ್ರೆ ನಡೆಸುತ್ತಾ ಈ ಭಾಗಕ್ಕೆ ಬಂದಾಗ ನಾರದರ ಉಪದೇಶದಂತೆ ಶ್ರೀ ಕೋಟಿಲಿಂಗೇಶ್ವರನನ್ನು ಪೂಜಿಸಿ, ಇಲ್ಲಿ ಭವ್ಯ ಶಿಲಾದೇಗುಲ ನಿರ್ಮಿಸಿದ ಎಂದು ಪುರಾಣದಲ್ಲಿ ಉಲ್ಲೇಖಿತಗೊಂಡಿದೆ. ದೇವಾಲಯದ ಎದುರು ಆತ ನೂರ ಹದಿನಾಲ್ಕು ಹಸ್ತ ಪ್ರಮಾಣದ ದ್ವಜಸ್ಥಂಭ ನಿರ್ಮಿಸಿದ. ಈ ದ್ವಜಸ್ಥಂಭದ ಖ್ಯಾತಿಯಿಂದಾಗಿ ಕೋಟೇಶ್ವರನಿಗೆ `ಧ್ವಜೇಶ್ವರ' ಎಂದು ಹೆಸರು ಬಂದಿದೆ. ಈ ಕಾರಣಕ್ಕೆ ಊರಿಗೆ `ಧ್ವಜಪುರ' ಎಂದು ಹೆಸರಾಯಿತು. ಯಕ್ಷಗಾನ ಪ್ರಸಂಗಗಳಲ್ಲಿ ಉಲ್ಲೇಖಗೊಂಡ ಧ್ವಜಪುರಾಧೀಶ ಎಂದರೆ ಕೋಟಿಲಿಂಗೇಶ್ವರನೇ ಆಗಿದ್ದಾನೆ.
kodi habba (29)
ಕೊಟೇಶ್ವರದ ಅಧಿದೇವ ಶ್ರೀ ಕೋಟಿಲಿಂಗೇಶ್ವರನ ವಾರ್ಷಿಕ ಬ್ರಹ್ಮರಥೋತ್ಸವವೇ 'ಕೊಡಿಹಬ್ಬ'. ರಥ ಹೊರಡುವ ಮುನ್ನ `ದೀವಟಿಗೆ ಸಲಾಂ' ಎಂಬ ವಿಶಿಷ್ಟ ಆಚರಣೆ ನಡೆಸಲಾಯಿತು. ಅಸಂಖ್ಯ ಭಕ್ತರು ಕ್ಷೇತ್ರಕ್ಕಾಗಮಿಸಿ ದೇವರ ದರ್ಶನ ಪಡೆದರು.
kodi habba (39)
ರವಿವಾರ ಬೆಳಿಗ್ಗೆ ನಡೆದ ಶ್ರೀ ಮನ್ಮಹಾರಥೋತ್ಸವದಲ್ಲಿ ಸಾವಿರಾರು ಜನ ಪಾಲ್ಘೋಂಡು ಭಕ್ತಿ ಸಮರ್ಪಿಸಿದರು. ಕೋಟಿ ತೀರ್ಥ'  ಸುಮಾರು ೫ ಎಕರೆ ವೀಸ್ತೀರ್ಣದ ವಿಶಾಲವಾದ ಈ ಕೆರೆಗೆ ಸುತ್ತಕ್ಕಿ ಸಮರ್ಪಿಸಿದರೆ ತಮ್ಮ ಇಷ್ಟಾರ್ಥ ಈಡೇರುತ್ತದೆ ಎಂಬ ನಂಬಿಕೆ ಇದ್ದು ಹಬ್ಬದ ದಿನ ಬೆಳಿಗ್ಗೆ ೩ ಗಂಟೆಯಿಂದಲೇ ಹರಕೆ ಹೊತ್ತ ಊರ - ಪರವೂರ ಭಕ್ತರು ಕೆರೆಯಲ್ಲಿ ತೀರ್ಥ ಸ್ನಾನ ಮಾಡಿ ಮನೆಯಲ್ಲಿಯೇ ಬೆಳೆದ ಭತ್ತದ ಅಕ್ಕಿಯನ್ನು `ಸುತ್ತಕ್ಕಿ' ಹೆಸರಿನಲ್ಲಿ ಈ ಕೆರೆಯ ಸುತ್ತ ಹಾಸಿದ ಬಟ್ಟೆಯ ಮೇಲೆ ಚೆಲ್ಲುವ ಕ್ರಮ ನಡೆಯಿತು.
kodi habba (37)
ಕಬ್ಬಿನ ಕೊಡಿಗಳ ವ್ಯಾಪಾರ ಜೋರಾಗಿತ್ತು. ಉತ್ಸವದ ಸಮಯದಲ್ಲಿ ಆಕರ್ಷಣೀಯ ಚಂಡೆವಾದನವೂ ಜಾತ್ರೆಗೆ ಇನ್ನಷ್ಟು ಮೆರಗು ನೀಡಿತು. ಸಂಜೆ ನಡೆದ ರಥೋತ್ಸವದಲ್ಲಿಯೂ ಸಾವಿರಾರು ಜನರು ಪಾಲ್ಘೋಂಡಿದ್ದರು.
ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಎಲ್ಲಾ ಭಕ್ತಾಧಿಗಳಿಗೂ ದೇವಸ್ಥಾನದ ವತಿಯಿಂದ ಪಾನಕ ಸೇವೆ ಹಾಗೂ ಹಿಂದೂ ಜಾಗರಣ ವೇದಿಕೆ ಕೋಟೇಶ್ವರ ಘಟಕದ ವತಿಯಿಂದ ಉಚಿತ ಮಜ್ಜಿಗೆ ವಿತರಣೆ ನಡೆಯಿತು.
kodi habba (4)
ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎಂ. ಪ್ರಭಾಕರ ಶೆಟ್ಟಿ ಹಾಗೂ ಸದಸ್ಯರು, ದೇವಳದ ಆಡಳಿತಾಧಿಕಾರಿ ಗಣೇಶ್ ರಾವ್, ವಿವಿಧ ಸಂಘಟನೆಯವರು ಸ್ಥಳೀಯರು, ಸಹಕಾರ ಒದಗಿಸಿದ್ದರು. ಕುಂದಾಪುರ ಪೊಲೀಸರು ವಿಶೇಷ ಭದ್ರತೆ ಒದಗಿಸಿದ್ದರು. ಸಂಚಾರಿ ಪೊಲೀಸರು  ಸಂಚಾರ ನಿಯಂತ್ರಣವನ್ನು ಸುಗಮಗೊಳಿಸುವಲ್ಲಿ ಶ್ರಮಿಸಿದ್ದರು.
kodi habba (40)
kodi habba (2)
kodi habba (9)
kodi habba (10)
ಕಾರ್ಕಳ: ಗೊಮ್ಮಟ್ಟನ ನಾಡು ಕಾರ್ಕಳವನ್ನೀಗ ಹೊಂಡಗಳ ನಾಡು ಅಂದ್ರೆ ತಪ್ಪಲಾಗರಲಾರದು . ಯಾಕೆಂದ್ರೆ ಕಾರ್ಕಳ ತಾಲೂಕಿನ ಯಾವುದೇ  ಭಾಗದಲ್ಲಿ  ಸಂಚರಿಸಿದರು ಬರೀ ..ಹೊಂಡಗಳು ಹೊರತು ಪಡಿಸಿದರೆ..ರಸ್ತೆಗಳು ಕಾಣಸಿಗುವುದು ಬಾರೀ ವಿರಳ. ಬೃಹತ್ತ್ ಹೊಂಡ ಗುಂಡಿಗಳ ಮದ್ಯೆ ಕಷ್ಟ ಪಟ್ಟು ವಾಹನ ಚಲಾಯಿಸ ಬೇಕಾದ ಪರಿಸ್ತಿತಿ  ಚಾಲಕರದಾದ್ರೆ....ಅದರಲ್ಲಿ ಕುಳತುಕೊಳ್ಳುವ ಪ್ರಯಾಣಿಕರ ಪಾಡಂತೂ ಆ ದೇವರಿಗೇ  ಪ್ರೀತಿ.
blm-15nov-6
ಕಾರ್ಕಳದ ಪುರಸಭೆ ವ್ಯಾಪ್ತಿಯಲ್ಲಿಯೂ ಕೂಡ  ರಸ್ತೆಗಳ ಕಥೆ ಹೇಳ ತೀರದು,ಹೊಂಡ ಗುಂಡಿಗಳಿಂದ ತುಂಬಿದ ರಸ್ತೆಗಳಿಂದ ನಗರ ತುಂಬಾ ಧೂಳು ತುಂಬಿ ಕೊಂಡಿದೆ. ಇದರಿಂದ ಪದಾಚಾರಿಗಳು ಧೂಳಿನಿಂದ ರಕ್ಷಣೆಗಾಗಿ  ಮೂಗು ಮುಚ್ಚಿ ನಡೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಈ ಬಗ್ಗೆ ಪುರ ಸಭೆಗೆ ಸಾರ್ವಜನಿಕರು ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.
vlcsnap-2013-11-18-12h00m34s35
ಇತ್ತ ಬಜಗೋಳಿಯಿಂದ ಕಾರ್ಕಳ ,ಬೆಳ್ಮಣ್ಣಿನಿಂದ ಕಾರ್ಕಳ ರಸ್ತೆ ಹಾಗೂ ಮಣಿಪಾಲದಿಂದ ಬೈಲೂರು ಮಾರ್ಗವಾಗಿ ಕಾರ್ಕಳಕ್ಕೆ ಸೇರುವ ರಾಜ್ಯ ಹೆದ್ದಾರಿಗಳು ಸಂಪೂರ್ಣ ಕೆಟ್ಟು ಹೋಗಿದೆ.ರಸ್ತೆಗಳಲ್ಲಿ ಬೃಹತ್ ಹೊಂಡಗಳು ಉಂಟಾಗಿದ್ದು ಹೊಂಡ ತಪ್ಪಿಸಲು ಹೋಗುವ ವಾಹನಗಳು ನಿಯತಂತ್ರಣ ತಪ್ಪಿ ಅಪಘಾತಗಳು ಸಂಭವಿಸಿದ ಘಟನೆಗಳು ನಡದಿವೆ. ರಸ್ತೆಗಳ ದುವಸ್ಥೆಯ ಬಗ್ಗೆ  ಕಾರ್ಕಳದ ಜನತೆ ಅದೆಷ್ಟು ಬಾರೀ.....ಜನಪ್ರತಿನಿಧಿಗಳು ಹಾಗೂ ಲೋಕೋಪಯೋಗಿ ಇಲಾಖೆಯ ಆಧಿಕಾರಿಗಳ ಗಮನಕ್ಕೆ ತಂದರೂ ಜಾಣ ಕುರಡರಂತೆ ವರ್ತಿಸುತ್ತಿರುವುದು ಜನರ ಆಕ್ರೋಷಕ್ಕೆ ಕಾರಣವಾಗಿದೆ.
vlcsnap-2013-11-18-12h00m39s79
ಜಿಲ್ಲೆಯಲ್ಲಿ ಇಬ್ಬರು ಕೇಂದ್ರ ಸಚಿವ ಇದ್ದರೂ... ನಿಷ್ಪ್ರಯೋಜಕ :
ಹೌದು ....ಕೇಂದ್ರ ಸರಕಾರದ ಕ್ಯಾಬಿನೆಟ್ ದರ್ಜೆಯಲ್ಲಿರುವ ಇಬ್ಬರು ಮಂತ್ರಿಗಳು ಉಡುಪಿಯ ಜಿಲ್ಲೆಯವರೇ.....ಅದರೂ ಕೂಡ ಇಬ್ಬರು ಮಂತ್ರಿಗಳಿಂದ ಜಿಲ್ಲೆಯ ಜನತೆಗೆ ಕಿಂಚಿತ್ತೂ ಲಾಭಾವಿಲ್ಲ ಅಂತ ಆಕ್ರೋಷ ವ್ಯಕ್ತ ಪಡಿಸುತ್ತಾರೆ ಸಾರ್ವಜನಿಕರು.ಕಾರ್ಕಳವರೇ ಆದ ವಿರಪ್ಪ ಮೊಯ್ಲಿಯವರು ಮನಸ್ಸು ಮಾಡಿದರೆ ಕಾರ್ಕಳವನ್ನು ಆಭಿವೃದ್ದಿ ಪಥದೆಡೆಗೆ ಸಾಗಿಸಬಹುದಿತ್ತು ,ಅದರೆ ವೀರಪ್ಪ ಮೊಯ್ಲಿಯವರು ಮಾತ್ರ ಚುನಾವಣಾ ಸಂಧರ್ಭದಲ್ಲಿ ಹಾಗೂ ಪಕ್ಷದ ಕಾರ್ಯಕ್ರಮಗಳಿಗೆ ಆಗಮಿಸಿ ಜನರತ್ತ ಕೈ ಬೀಸಿ ಹೋಗುತ್ತಾರೆ ಹೊರತು ಪಡಿಸಿದರೆ....  ಜನರ ಕಷ್ಡಗಳಿಗೆ ಸ್ಪಂದಿಸುತ್ತಿಲ್ಲ ಅಂತಾ ಮೋಯ್ಲಿ ವಿರುದ್ದ ಆಕ್ರೋಷ ವ್ಯಕ್ತ  ಪಡಿಸುತ್ತಾರೆ .
vlcsnap-2013-11-18-12h00m49s179
ಉಡುಪಿ : ಹಕ್ಕುಗಳೆಂಬುವುದು ಎಲ್ಲೋ ಕಡತದ ವಿಷಯ ವಸ್ತುವಲ್ಲ. ಅದು ಪ್ರತಿಯೊಬ್ಬ ನಾಗರೀಕರ ದಿನನಿತ್ಯದ ಬದುಕಿನ ಅನಿವಾರ್ಯ ಭಾಗ. ಹಕ್ಕು ಅಂದರೇನು ಎಂದು ತಿಳಿಯದೇ ಇರುವ ಜನಸಮುದಾಯವೂ ನಮ್ಮ ನಡುವೆ ಇದ್ದಾರೆ. ಹಕ್ಕುಗಳನ್ನು ಪರಿಚಯಿಸುವ ಅದನ್ನು ಪಡೆಯುವತ್ತ ಪ್ರೇರೇಪಿಸುವ ಕೆಲಸವನ್ನು ಬ್ರೇಕ್ ಥ್ರೂ ತಂಡವು ೫ ವರ್ಷಗಳಿಂದ ಮಾಡುತ್ತಿವೆ. ಮಹಿಳಾ ಮತ್ತು ಅಭಿವೃದ್ದಿ ಇಲಾಖೆ ರಾಜೇಂದ್ರ ಬೇಕಲ್ ಇವರಿಂದ ಸಿಟಿಬಸ್ ನಿಲ್ದಾಣದ ಪಾರ್ಕಿಂಗ್ ಏರಿಯಾದಲ್ಲಿ ಇಂದು ಬೆಳಿಗ್ಗೆ " ಬೆಲ್ ಮಾಡಿ ಆಂದೋಲನ" ಹಮ್ಮಿಕೊಳ್ಳಲಾಯಿತು.
vlcsnap-2013-11-18-12h15m54s24
ಹಿಂಸೆ ಮಾಡುವವರು ಒಮ್ಮೆ ಯೋಚಿಸುವಂತಾಗಬೇಕು ಎಂಬ ಧ್ಯೇಯವನ್ನಿಟ್ಟುಕೊಂಡು ಈ ತಂಡ ಕಾರ್ಯನಿರ್ವಹಿಸುತ್ತಿದೆ. ಈ ವೀಡಿಯೋ ವ್ಯಾನ್ ನಲ್ಲಿ ಬೀದಿನಾಟಕ, ಜನಜಾಗೃತಿ ಹಾಡುಗಳು, ಫಿಲಂ ಶೋಗಳು, ಮಾಹಿತಿ ನೀಡುವ ಸರಳ ಕೈಪಿಡಿಗಳು ಹಾಗೂ ಸಾರ್ವಜನಿಕರ ಅನಿಸಿಕೆ ಹಂಚಿಕೊಳ್ಳುವ ಮುಕ್ತ ಅವಕಾಶವಿದೆ.
vlcsnap-2013-11-18-12h15m58s59
ಬ್ರೇಕ್ ಥ್ರೂ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂರಕ್ಷಣಾ ಸಂಸ್ಥೆ. ಶಿಕ್ಷಣ, ಮಾದ್ಯಮ ಮತ್ತು ಜನಪ್ರಿಯ ಸಂಸ್ಕೃತಿಗಳ ಮೂಲಕ ಸಾರ್ವಜನಿಕ ಧೋರಣೆಗಳನ್ನು ಸುಧಾರಣೆ ಮಾಡುವ ಹಾಗೂ ನ್ಯಾಯ, ಶಾಂತಿ ಘನತೆಯ ಮೌಲ್ಯಗಳನ್ನು ಬೆಳೆಸುವತತ್ತ ಕೆಲಸ ಮಾಡುತ್ತಿದೆ.
ಬೆಳ್ಮಣ್: ಡಾಮರೀಕೃತ ಈ ರಸ್ತೆಯಲ್ಲಿ ಡಾಮರು ಎಲ್ಲಿ ಎಂದು ಹುಡುಕಿದರು ನಮ್ಮ ಕಣ್ಣಿಗೆ ಗೊಚರಿಸುವುದಿಲ್ಲ ಏಕೆಂದರೆ ಈ ರಸ್ತೆಯ ಪರಿಸ್ಥಿತಿ ಅಷ್ಟು ದುಸ್ಥಿತಿಗೆ ತಲುಪಿದೆ. ರಸ್ತೆಗೆ ಹಾಕಲಾದ ಎಲ್ಲಾ ಜಲ್ಲಿ, ಟಾರುಗಳು ಎದ್ದು  ಚೆಲ್ಲ ಪಿಲ್ಲಿಯಾಗಿ ರಸ್ತೆಯಲ್ಲಿ ದೊಡ್ದ ದೊಡ್ಡ ಗಾತ್ರದ ಹೊಂಡ ಗುಂಡಿ ನಿರ್ಮಾಣವಾಗಿದ್ದು ಈ ರಸ್ತೆಯಲ್ಲಿ ಸಂಚಾರ ನಡೆಸುವುದೇ ಇದೀಗ ಅಸಾದ್ಯವಾಗಿದೆ.
ಕಾರ್ಕಳ ತಾಲೂಕಿನ ಬೆಳ್ಮಣ್ ಸಮೀಪದ ಸೂಡದಿಂದ ನಂದಳಿಕೆ ಗ್ರಾಮವನ್ನು ಸಂಪರ್ಕಿಸುವ ಈ ಭಗತ್ ಸಿಂಗ್ ರಸ್ತೆ ಇದೀಗ  ತೀರ ಹದಗೆಟ್ಟ ಪರಿಣಾಮ ಇಲ್ಲಿ ದೊಡ್ಡ ಪ್ರಮಾಣದ ವಾಹನಗಗಳು ಸಂಚರ ನಡೆಸುವುದು ಬಿಡಿ ಸಣ್ಣ ಪುಟ್ಟ ವಾಹನ ಸಂಚಾರ ನಡೆಸುವುದೇ ಇಲ್ಲಿ ಅಸಾಧ್ಯವಾಗಿದೆ.
ನಂದಳಿಕೆಯಿಂದ ಸೂಡ ಮಾರ್ಗವಾಗಿ ಉಡುಪಿ, ಮಂಚಕಲ್, ಪಳ್ಳಿ, ಮೂಡುಬೆಳ್ಳೆ ಪ್ರದೇಶವನ್ನು ತಲುಪಲು ಬಹು ಹತ್ತಿರದ ಮಾರ್ಗ ಇದಾಗಿತ್ತು ಅದರೆ ಇದೀಗ ಹೊಂಡ ಗುಂಡಿ ತುಂಬಿದ ರಸ್ತೆ ಇದಾದ ಪರಿಣಾಮ ಸವಾರರು ೭ -೮ ಕಿ.ಮೀ ಸುತ್ತಿ ಬಳಸಿಕೊಂಡು ಸಾಗಬೇಕಾದ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಿದೆ. ಕಳೆದ ಕೆಲ ವರ್ಷಗಳ ಹಿಂದೆ ಈ ರಸ್ತೆಗೆ ಡಾಮರೀಕರಣಗೊಂಡಾಗ ಈ ಭಾಗದ ಜನತೆ ಸಂತೋಷಗೊಂಡಿದರು ಆದರೆ ಈ ರಸ್ತೆ ತೀರ  ಹದಗೆಟ್ಟ ಪರಿಣಾಮ ಜನತೆ ನಿತ್ಯ ಕಣ್ಣೀರು ಸುರಿಸುವಂತಾಗಿದೆ.
ರಸ್ತೆಯಲ್ಲಿ ಎಲ್ಲೂ ಕೂಡ ಡಾಮರಿನ ಮಟ್ಟವೇ ಕಾಣುತಿಲ್ಲ , ಜಲ್ಲಿಕಲ್ಲು, ಚೆಲ್ಲ ಪಿಲ್ಲಿಯಾಗಿ ಬಿದ್ದಿರುವ ಪರಿಣಾಮ ಇಲ್ಲಿ ಸಂಚಾರ ನಡೆಸುವ ಸಣ್ಣ ಪುಟ್ಟ ವಾಹನ ಸವಾರರು ಕಷ್ಟಪಟ್ಟು ತಮ್ಮ ವಾಹನವನ್ನು ಸಾಗಿಸಬೇಕಾಗಿದೆ. ಸ್ವಲ್ಪ ಎಡವಿದರು ಇಲ್ಲಿ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಬೈಕ್ ಸವಾರರಂತು ನಿತ್ಯ ಬಿದ್ದೇಳುವ  ಪರಿಸ್ಥಿತಿ ಇಲ್ಲಿ ಸರ್ವೆ ಸಾಮಾನ್ಯ. ಡಾಮರಿಕೃತವಾದ ಈ ರಸ್ತೆಯನ್ನು ಕಂಡಾಗ ಇದು ಮಣ್ಣಿನ  ರಸ್ತೆಯೋ..? ಡಾಮರಿನ ರಸ್ತೆಯೋ..? ಎನ್ನುವ ಮಟ್ಟಕ್ಕೆ ಇಲ್ಲಿನರಸ್ತೆಯ ಪರಿಸ್ಥಿತಿ ತಲುಪಿದೆ.
ಈ ರಸ್ತೆಯಲ್ಲಿ ಘನ ವಾಹನಗಳು ಸಂಚರಿಸಬಾರದು ಎಂದು ನಿಯಮವನ್ನು ಮಾಡಿದರೂ ಇಲ್ಲಿ ಸಂಚಾರ ನಡೆಸುವ ಘನ ವಾಹನದ ಸಂಖ್ಯೆ  ಮಾತ್ರ ಕಮ್ಮಿಯಾಗಿಲ್ಲ. ಸೂಡ ನಂದಳಿಕೆ ಸುತ್ತ  ಮುತ್ತ ಹಲವಾರು ಕಲ್ಲಿನ ಕೋರೆಗಳಿರುವ ಕಾರಣ ಜಲ್ಲಿ ಕಲ್ಲುಗಳನ್ನು ತುಂಬಿದ ಲಾರಿ, ಟಿಪ್ಪರ್ ನಂತಹ ಘನ ವಾಹನಗಳು ಉಡುಪಿ, ಮಣಿಪಾಲವನ್ನು ತಲುಪಲು ಈ ಮಾರ್ಗ ಹತ್ತಿರದ ರಸ್ತೆಯಾದರಿಂದ ಇಲ್ಲೆ ಹೆಚ್ಚಾಗಿ ಸಂಚಾರ ನದೆಸುತ್ತದೆ. ಘನ ವಾಹನಗಳ ಆರ್ಭಟಕ್ಕೆ ಇಲ್ಲಿ ಈ ಭಗತ್ ಸಿಂಗ್ ರಸ್ತೆಯ ಜಲ್ಲಿ , ಟಾರು ಎಲ್ಲವೂ ಇದೀಗ ಕಿತ್ತು ಹೋದ ಕಾರಣ ಇಲ್ಲಿ ಸಣ್ಣ ಪುಟ್ಟ ವಾಹನ ಓಡಾಡುವುದೇ ಕಷ್ಟಕರವಾಗಿದೆ.
ಭಗತ್ ಸಿಂಗ್ ರಸ್ತೆಗೆ ಏನಾದರು ರಿಕ್ಷವನ್ನು ಬಾಡಿಗೆಗೆ ಕರೆದರೆ ಯಾರೊಬ್ಬರು ಈ ಮಾರ್ಗದಲ್ಲಿ ಸುಳಿಯಲು ಮನಸ್ಸೇ ಮಾಡುವುದಿಲ್ಲ , ಹೇಗಾದರೂ ಕಾಡಿ ಬೇಡಿ ರಿಕ್ಷವನ್ನು ಹತ್ತಿ ಬಂದರೂ ಬಾಡಿಗೆ ಮಾತ್ರ ಎರಡು ಪಟ್ಟು ಹೆಚ್ಚು ನೀಡಬೇಕಾಗುತ್ತದೆ.
ರಾತ್ರಿ ಹೊತ್ತಿನಲ್ಲಿ ಅಗತ್ಯ ಪರಿಸ್ಥಿತಿಯ ಸಂದರ್ಭದಲ್ಲಿ ವಾಹನದವರನ್ನು ಕರೆದರು ಈ ರಸ್ತೆಯ ಅವ್ಯವಸ್ಥೆಯಿಂದಾಗಿ ಯಾರೊಬ್ಬರೂ ಈ ರಸ್ತೆಯಲ್ಲಿ ಸಂಚರಿಸಲು ಮನ ಮಾಡುತ್ತಿಲ್ಲ. ಸೂಡ ಮತ್ತು ನಂದಳಿಕೆ ಗ್ರಾಮಗನ್ನು ಬಹು ಹತ್ತಿರದಿಂದ ಕೂಡಿಸುತ್ತಿದ್ದ ಈ ರಸ್ತೆ ಹದಗೆಟ್ಟ ಪರಿಣಾಮ ಇಲ್ಲಿನ ಗ್ರಾಮಸ್ಥರು ೭-೮ ಕಿ.ಮೀ ಸುತ್ತಿ ಬಳಸಿಯೇ ಸಾಗಬೇಕಾಗಿದೆ. ರಸ್ತೆಯ ತುಂಬೆಲ್ಲ ಜಲ್ಲಿ ಕಲ್ಲುಗಳು ಬಿದ್ದು ಕೊಂಡಿವೆ, ಕೆಲವೊಂದು ಕಡೆಗಳಲ್ಲಿ ಬೃಹತ್ ಗಾತ್ರದ ಹೊಂಡಳು ನಿರ್ಮಣವಾಗಿದೆ ಇದರಿಂದಾಗಿ ಈ ಭಾಗದ ಜನ್ತೆ ನಿತ್ಯ ಸಂಕಟವನ್ನು ಅನುಭವಿಸಬೇಕಾಗಿದೆ.
ಇನ್ನಾದರೂ ಸಂಬಂದ ಪಟ್ಟ ಅಧಿಕಾರಿಗಳು ಈ ರಸ್ತೆಯ ಕಡೆ ತಮ್ಮ ಚಿತ್ತವನ್ನು ಹಾಯಿಸಿ ಭಗತ್ ಸಿಂಗ್ ರಸ್ತೆ ಜನತೆಯ ಉಪಯೋಗಕ್ಕೆ ಬರುವಂತೆ ಮಾಡಬೇಕಾಗಿದೆ. ಅಲ್ಲದೆ ಸ್ಥಳೀಯ ಗ್ರಾಮ ಪಂಚಾಯತ್ ಇಲ್ಲಿ ನಿತ್ಯ ಸಂಚರಿಸುವ ಘನ ವಾಹನಗಳಿಗೆ ಬ್ರೇಕ್ ಹಾಕಬೇಕಾಗಿದೆ.
varadi: Hariprasad nandalike
ಮೋದಿ ಬದಲಾಗಿದ್ದಾರೆ. ಹೌದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮಾತಿನಲ್ಲಿ ಛೂ ಬಾಣ ಇರಲಿಲ್ಲ. ಮಾತಿನ ಮೊನಚು ಜಾರಿತ್ತು. ಮೋದಿ ಒಂಥರಾ ಲೆಕ್ಷರರ್ ಥರ ಭಾಸವಾದ್ರು. ವಾಯ್ಸ್ ವೇರಿಯೇಶನ್ ಮಾಡಿ ಮಾತನಾಡುತ್ತಾ ಕಾರ್ಯಕರ್ತರಿಗೆ ಪ್ರಶ್ನೆ ಹಾಕಿದರು. ಉತ್ತರ ಅವರಿಂದಲೇ ಪಡೆದರು. ಬೆಂಗಳೂರಿನಲ್ಲಿ ನಡೆದ ಭಾರತ ಗೆಲ್ಲಿಸಿ ರ್‍ಯಾಲಿಯಲ್ಲಿ ನರೇಂದ್ರ ಮೋದಿ ಒಂದು ಗಂಟೆಗೂ ಮಿಕ್ಕಿ ಮಾತನಾಡಿದ್ರು. ಬಿಜೆಪಿ ಪ್ರಧಾನಿ ಅಭ್ಯರ್ಥಿ ಅಂತ ಘೋಷಣೆಯಾಗುವ ಹಿಂದಿದ್ದ ಖಾರದ ಮಾತುಗಳನ್ನು ಕರ್ನಾಟಕದಲ್ಲಿ ಆಡಲಿಲ್ಲ. ಮೋದಿ ಮಾತಿನ ಕೆಲ ಪಾಯಿಂಟ್ಸ್ ನಿಮಗಾಗಿ.
# ಕನ್ನಡದಲ್ಲಿ ಮಾತನಾಡಿದ ಮೋದಿ. ಭಾಷಣದ ಶುರುವಿನಲ್ಲಿ ನರೇಂದ್ರ ಮೋದಿ ಕನ್ನಡದಲ್ಲಿ ಮಾತನಾಡಲು ಪ್ರಯತ್ನಿಸಿದರು. ಲಕ್ಷಾಂತರ ಕಾರ್ಯಕರ್ತರನ್ನು ಈ ಮೂಲಕ ಸೆಳೆದರು.
# ಇತಿಹಾಸ ಕೆಣಕಿ ಕೈ ಸುಟ್ಟುಕೊಂಡಿರುವ ಮೋದಿ ಕನಕ, ಬಸವಣ್ಣ, ಚೆನ್ನಮ್ಮ, ಕೆಂಪೇಗೌಡರನ್ನು ನೆನೆದರು. ಭಾರತ ರತ್ನ ವಿಜೇತ ಸಿ‌ಎನ್‌ಆರ್ ರಾವ್‌ಗೆ ಅಭಿನಂದನೆ.
# ಮೊನ್ನೆ ವಾಂಖೆಡೆಯಲ್ಲಿ ಸಚಿನ್ ರಿಟೈರ್‍ಡ್‌ಮೆಂಟ್‌ಗಿಂತ ನೀರುಳ್ಳಿ ರೇಟಿನ ಬಗ್ಗೆಯೇ ಹೆಚ್ಚು ಚರ್ಚೆಯಾಯ್ತು. ೨೬ ರೂಪಾಯಿಗೆ ಹೊಟ್ಟೆ ತುಂಬುತ್ತೆ ಅಂತೀರ. ೩೦೦ ಗ್ರಾಂ ಈರುಳ್ಳಿ ಸಿಗುತ್ತಾ..?
# ಮೋದಿ ಮಾತಿನುದ್ದಕ್ಕೂ ಕೇಂದ್ರ ಯುಪಿ‌ಎ ಸರ್ಕಾರವನ್ನು ಜಾಡಿಸಿದ ಮೋದಿ. ಯುಪಿ‌ಎ ಪ್ರಜಾಪ್ರಭುತ್ವದ ಕುತ್ತಿಗೆ ಹಿಸುಕುತ್ತಿದೆ ಎಂದು ವಾಗ್ದಾಳಿ.
# ದೇಶದಲ್ಲಿ ಕಾಂಗ್ರೆಸ್ ಜಾಗ ಖಾಲಿಮಾಡುವ ಕಾಲಬಂದಿದೆ. ಮುಂದಿನ ಚುನಾವಣೆಯಲ್ಲಿ ಯುವಶಕ್ತಿಯ ಶಕ್ತಿ ಏನೆಂಬೂದು ಗೊತ್ತಾಗುತ್ತೆ.
# ಯುಪಿ‌ಎಯಿಂದ ಪಿಂಕ್ ರೆವಲ್ಯೂಷನ್. ಕಸಾಯಿಖಾನೆಗಳಿಗೆ ಹೆಚ್ಚಿನ ಪರ್ಮಿಷನ್. ಸರ್ಕಾರ ಕಟುಕರಿಗೆ ಇನ್ಸೆಂಟಿವ್ ಕೊಡುತ್ತಿದೆ.
# ಕಾಂಗ್ರೆಸ್ ೬೦ ವರ್ಷ ಏನೂ ಮಾಡಿಲ್ಲ. ದೇಶ ಅಮೃತ ಮಹೋತ್ಸವ ಆಚರಿಸುವ ಸಂದರ್ಭದಲ್ಲಾದ್ರೂ ಅಭಿವೃದ್ಧಿ ಕಾಣೋಣ.
# ಅರಮನೆ ಮೈದಾನದಲ್ಲಿ ಕಾರ್ಯಕರ್ತರು ಕೇಸರಿ ಸಾಗರವಾಗಿ ಕಂಡರು. ಮೋದಿ ಕ್ಷಣಕಾಲ ಮಾತು ನಿಲ್ಲಿಸಿದರು. ಇದು ಕರ್ನಾಟಕದ ಐತಿಹಾಸಿಕ ರ್‍ಯಾಲಿ ಎಂದು ಮಾತು ಮುಂದುವರೆಸಿದರು.
# ವಾಜಪೇಯಿ ಮಾದರಿಯಲ್ಲಿ ದೇಶದ ಅಭಿವೃದ್ಧಿ. ಐಟಿ ಕರ್ನಾಟಕದ ಶಕ್ತಿ ಎಂದ ಮೋದಿ.
# ಎನ್‌ಡಿ‌ಎ ಅಧಿಕಾರದಲ್ಲಿದ್ದಾಗ ಐಟಿ ಕ್ಷೇತ್ರ ೪೦ಶೇ. ಅಭಿವೃದ್ಧಿಯಾಗಿತ್ತು. ಈಗ ಶೇ.೨೦ಕ್ಕೆ ಕುಸಿದಿದೆ.
# ಯುಪಿ‌ಎಯ ರೂಪಾಯಿ ಐಸಿಯುನಲ್ಲಿದೆ.
# ಬಿಜೆಪಿ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಮಸೂದೆ ಜಾರಿಗೊಳಿಸಿತ್ತು. ಕಾಂಗ್ರೆಸ್ ಒಂದೇ ತಿಂಗಳೊಳಗೆ ಅದನ್ನು ಕಿತ್ತು ಬಿಸಾಕಿತು.
# ದೇಶದಲ್ಲಿ ಕಲ್ಲಿದ್ದಲು ನುಂಗಿದ್ರು.., ಕೋಟಿ ಕೋಟಿ ಹಣ ನುಂಗಿದ್ರು.., ಕೊನೆಗೆ ಸಂಬಂಧಪಟ್ಟ ಕಡತಗಳನ್ನೂ ನುಂಗಿ ನೀರು ಕುಡಿದ್ರು.
# ಮೌನಿ ಪ್ರಧಾನಿ.., ಮೌನ.., ಸದಾ ಮೌನ.., ಮಾತಿಲ್ಲ.., ಬರೀ ಮೌನ.., ಅಂತ ಪ್ರಧಾನಿ ಸಿಂಗ್‌ರನ್ನು ಲೇವಡಿ ಮಾಡಿದ ಮೋದಿ.
# ಲತಾ ಮಂಗೇಶ್ಕರ್ ನಾನು ಪ್ರಧಾನಿಯಾಗಲಿ ಅಂದ್ರು. ಕೇಂದ್ರ ಅವರ ಭಾರತ ರತ್ನ ಹಂಪಡೆಯಲು ಹೊರಟಿದೆ. ಈ ದೇಶದಲ್ಲಿ ಅಭಿಪ್ರಾಯ ಮಂಡಿಸುವ ಹಕ್ಕೂ ಇಲ್ವಾ..?
# ಯುಪಿ‌ಎ ಸರ್ಕಾರ ಬಹುಮತದಿಂದ ಉಳಿದಿಲ್ಲ. ಸಿಬಿ‌ಐ ಬೆಂಬಲದಿಂದ ಜೀವಂತಯಿದೆ.
ರಾಜ್ಯಕ್ಕೆ ಮೋದಿ ಬರ್‍ತಾರೆ ಅಂದಾಗ ಎಲ್ಲರೂ ನಿರೀಕ್ಷೆಯಿಟ್ಟುಕೊಂಡಿದ್ದರು. ರಾಜ್ಯ ಕಾಂಗ್ರೆಸ್‌ನ ಶಾದಿ ಭಾಗ್ಯ, ಅಹಿಂದಾ ಟೂರ್ ಯೋಜನೆಗಳಿಗೆ ಕುಟುಕುತ್ತಾರೆ ಅಂತ ಎಲ್ಲರೂ ಅಂದುಕೊಂಡಿದ್ದರು. ಮೋದಿ ಅದನ್ನು ಹುಸಿಗೊಳಿಸಿದ್ರು. ರಾಜಕೀಯ ವಿಶ್ಲೇಷಕರ ಪ್ರಕಾರ ಅದು ಜಾಣ್ಮೆಯ ಪಾಲಿಟಿಕ್ಸ್..!
[youtuber error='Not a YouTube, Vimeo or Google Video URL: ']
modhi3 modhi4 modhi2 modhi1

ಗುರುವಾರ, ನವೆಂಬರ್ 14, 2013

ಮೂಡಬಿದಿರೆ : ಮೂಡಬಿದಿರೆಯಲ್ಲಿ ನಡೆಯಲಿರುವ ಆಳ್ವಾಸ್ ನುಡಿಸಿರಿ ವಿರಾಸತ್ ಗೆ ಸಿದ್ದತೆಗಳು ಆರಂಭಗೊಂಡಿದೆ. ಡಿಸೆಂಬರ್ ೧೯ ರಿಂದ ೨೨ ರವೆರೆಗೆ ಮುಡಬಿದಿರೆಯ ವಿದ್ಯಾಗಿರಿಯಲ್ಲಿ ನಡೆಯಲಿರುವ ವಿಶ್ವ ನುಡಿಸಿರಿ ವಿರಾಸತ್ ಗೆ ಡಾ ಬಿ ಎ ವಿವೇಕ್ ರೈ ಅವರನ್ನು ಆಯ್ಕೆ ಮಾಡಲಾಗಿದೆ. ಈ ಬಾರಿ ನುಡಿಸಿರಿಗೆ ಹತ್ತರ ಸಂಭ್ರಮ ಮತ್ತು ವಿರಾತ್ ಗೆ ೨೦ ರ ಸಂಭ್ರಮವಾಗಿರುವುದರಿಂದ ಏಕಕಾಲದಲ್ಲಿ ಈ ಬಾರಿ ಕಾರ್ಯಕ್ರಮ ಆಯೋಜಿಸಲಾಗಿದ್ದು ವಿವೇಕ್ ರೈ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ
ರಾಜ್ಯದ ಕಲಾಸಕ್ತರು, ಸಾಹಿತ್ಯಾಭಿಮಾನಿಗಳು ನಿರೀಕ್ಷೆಯಿಂದ ಕಾಯುತ್ತಿರುವ ಆಳ್ವಾಸ್ ನುಡಿಸಿರಿ ಮತ್ತು ಆಳ್ವಾಸ್ ವಿರಾಸತ್ ಸಂಭ್ರಮಕ್ಕೆ ಮತ್ತೆ ತಯಾರಿ ಆರಂಭಗೊಂಡಿದೆ. ಈ ಬಾರಿ ಡಿಸೆಂಬರ್ ೧೯ ರಿಂದ ೨೨ ರವರೆಗೆ ಈ ಸಂಭ್ರಮ ನಡೆಯುತ್ತಿದ್ದು ಈ ಬಾರಿ ನುಡಿಸಿರಿ ಮತ್ತು ವಿರಾಸತ್ ಒಂದೆ ವೇದಿಕೆಯಲ್ಲಿ ನಡೆಯುತ್ತಿರುವುದು ವಿಶೇಷವಾಗಿದೆ. ಈವರೆಗೆ ನುಡಿಸಿರಿ ಮತ್ತು ವಿರಾಸತ್ ಪ್ರತ್ಯೇಕ ಪ್ರತ್ಯೇಕವಾಗಿ ನಡೆಯುತ್ತಿದ್ದರೆ ಈ ಬಾರಿ ನುಡಿಸಿರಿಗೆ ಹತ್ತರ ಸಂಭ್ರಮ ಮತ್ತು ವಿರಾತ್ ಗೆ ೨೦ ರ ಸಂಭ್ರಮವಾಗಿರುವುದರಿಂದ ಏಕಕಾಲದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಅಧ್ಯಕ್ಷರಾಗಿ ಡಾ ಬಿ ಎ ವಿವೇಕ್ ರೈ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ ಎಂ ಮೋಹನ್ ಆಳ್ವ ತಿಳಿಸಿದ್ದಾರೆ.
ಕನ್ನಡ ಮನಸ್ಸು ಅಂದು ಇಂದು ಮುಂದು ಎಂಬ ಪರಿಕಲ್ಪನೆಯಡಿಯಲ್ಲಿ ನಡೆಯುತ್ತಿರುವ ಈ ಜಾಗತಿಕ ಸಮ್ಮೇಳನದಲ್ಲಿ ೪೦ ಸಾವಿರ ಪ್ರತಿನಿಧಿಗಳು ಭಾಗವಹಿಸಲಿದ್ದು ಪ್ರತಿದಿನ ಎರಡು ಲಕ್ಷ ಜನರಂತೆ ಒಟ್ಟು ಹತ್ತು ಲಕ್ಷ ಜನರು ಭಾಗವಹಿಸುವ ನಿರೀಕ್ಷೆಯನ್ನು ಸಂಘಟಕರು ಹೊಂದಿದ್ದಾರೆ. ೪ ವೇದಿಕೆಗಳಲ್ಲಿ ಚಿಂತನೆ , ೧೦ ವೇದಿಕೆಗಳಲ್ಲಿ ಸಾಂಸ್ಕೃತಿಕ ವೈಭವ ಆಯೋಜಿಸಲಾಗಿದೆ. ಯಕ್ಷಗಾನ, ನಾಟಕ, ಜಾನಪದ, ನೃತ್ಯ, ಸಂಗೀತ, ಬಾಲಪ್ರತಿಭೆ ಮೊದಲಾದ ಕಲಾ ಪ್ರಕಾರಗಳು ಈ ವೇದಿಕೆಯಲ್ಲಿ ಪ್ರದರ್ಶಿತಗೊಳ್ಳಲಿದೆ.
ಈ ಸಮ್ಮೇಳನದಲ್ಲಿ ಕೃಷಿ ಮತ್ತು ಜಾನಪದಕ್ಕೆ ವಿಶೇಷ ಒತ್ತು ನೀಡಿಕೊಂಡು ನಾಡು ನುಡಿಯನ್ನು ಪ್ರತಿಬಿಂಬಿಸುವ ಹಲವು ಪ್ರದರ್ಶನಗಳನ್ನು ಆಯೋಜಿಸಲಾಗಿದೆ. ಕನ್ನಡ ಸಂಸ್ಕೃತಿ ಗ್ರಾಮ, ೧೦೦೦ಕ್ಕೂ ಅಧಿಕ ಚಿತ್ರ ಕಲಾವಿದರು ಭಾಗವಹಿಸುವ ಆಳ್ವಾಸ್ ಚಿತ್ರಸಿರಿ, ಪುಸ್ತಕ ಪ್ರದರ್ಶನ, ವಸ್ತು ಪ್ರದರ್ಶನ, ಆಹಾರೋತ್ಸವವನ್ನು ಆಯೋಜಿಸಲಾಗಿದೆ.  ಒಟ್ಟು ಕಲಾರಸಿಕರನ್ನು ಮತ್ತು ಸಾಹಿತ್ಯಾಸಕ್ತರನ್ನು ಆಕರ್ಷಿಸುತ್ತಿದ್ದ ನುಡಿಸಿರಿ ಮತ್ತು ವಿರಾಸತ್ ಏಕಕಾಲದಲ್ಲಿ ಈ ಬಾರಿ ಆಯೋಜಿಸಲಾಗಿದ್ದು ಕಾರ್ಯಕ್ರಮ ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿದೆ.
Darmanema1ಮಂಗಳೂರು: ಕರಾವಳಿಯ ಪ್ರತಿಷ್ಟಿತ ಚುನಾವಣೆಯಾಗಿದ್ದ ಬಂಟ್ಸ್ ಮತ್ತು ನಾಡವರ ಮಾತೃಸಂಘಕ್ಕೆ ನಡೆದ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು ಅಜಿತ್ ಕುಮಾರ್ ಮಾಲಾಡಿ ಬಣ ಭರ್ಜರಿ ಜಯ ಸಾಧಿಸಿದೆ. ದಕ್ಷಿಣ ಕನ್ನಡ, ಕಾಸರಗೋಡು, ಉಡುಪಿ ಜಿಲ್ಲೆಗಳ ಸದಸ್ಯರು ಮತದಾನ ಮಾಡಿದ್ದು ಮೂರು ಜಿಲ್ಲೆಗಳಲ್ಲಿಯೂ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿತ್ತು. ಅಧ್ಯಕ್ಷ ಸ್ಥಾನಕ್ಕೆ ಸದಾನಂದ ಶೆಟ್ಟಿ ಮತ್ತು ಮಾಲಾಡಿ ಅಜಿತ್ ಕುಮಾರ್ ರೈ ಬಣ ಸೆಣಸಿತ್ತು. ಇಂದು ನಡೆದ ಮತ ಎಣಿಕೆಯಲ್ಲಿ ಮಾಲಾಡಿ ಬಣ ಭರ್ಜರಿ ಜಯ ಸಾಧಿಸಿದೆ. ಕಾರ್ಯಕಾರಿಣಿಯಲ್ಲೂ ಮಾಲಾಡಿ ಬಣದ ಸದಸ್ಯರೆ ಅತ್ಯಧಿಕ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದಾರೆ
. ಮತಗಳ ವಿವರ
ತಾಲೂಕು-   ಸದಾನಂದ ಶೆಟ್ಟಿ   - ಅಜಿತ್ ಕುಮಾರ್ ಮಾಲಾಡಿ
ಸುಳ್ಯ                 33                      40
ಬೆಳ್ತಂಗಡಿ            56                      49
ಕಾಸರಗೋಡು  116                    244
ಉಡುಪಿ          788                    597
ಬಂಟ್ವಾಳ-        223                  475
ಕಾರ್ಕಳ-     223                   235
ಕುಂದಾಪುರ-560                    460
ಮಂಗಳೂರು
ಒಟ್ಟು   2055                         2385
ಕಾರ್ಯಕಾರಿಣಿ
ತಾಲುಕು-   ಸ್ಥಾನ   - ಸದಾನಂದ ಶೆಟ್ಟಿ -    ಮಾಲಾಡಿ ಅಜಿತ್ ಕುಮಾರ್ ರೈ
ಮಂಗಳೂರು- 20            ೦                   20
ಉಡುಪಿ   -      9              8                   1
ಕಾರ್ಕಳ   -     7              3                    5
ಕುಂದಾಪುರ - 8               3                  5
ಪುತ್ತೂರು ಅವಿರೋಧ ಆಯ್ಕೆಯಾಗಿದೆ
ಉಡುಪಿ:ಗಿರಿಜನ ಉಪಯೋಜನೆ ಮತ್ತು ವಿಶೇಷ ಘಟಕ ಯೋಜನೆಯ ಸಮರ್ಪಕ ಅನುಷ್ಟಾನಕ್ಕಾಗಿ ಸಮರ್ಪಕ ಕಾನೂನು ಜಾರಿಗೆ ಆಗ್ರಹಿಸಿ ಕರ್ನಾಟಕ ಅರಣ್ಯ ಮೂಲ ಬುಡಕಟ್ಟುಗಳ ಒಕ್ಕೂಟ ಹಕ್ಕೋತ್ತಾಯಿಸಿ ಬುಧವಾರ ಉಡುಪಿಯಲ್ಲಿ ಪ್ರತಿಭಟನೆ ನಡೆಸಿದರು.
[youtuber youtube='http://www.youtube.com/watch?v=HjSJZYGV-qw&feature=c4-overview&list=UUs0k8vSBwTqzHjMqn8PYrzQ']
ಸಾಮಾಜಿಕ ನ್ಯಾಯ, ಸಂಪನ್ಮೂಲಗಳ ಹಂಚಿಕೆ, ಮಾನವ ಅಭಿವೃದ್ಧಿಗಳನ್ನು ಸಾಧಿಸಲು ಬುಡಕಟ್ಟು ಮತ್ತು ದಲಿತ ಸಮುದಾಯಗಳಿಗೆ ಗಿರಿಜನ ಉಪಯೋಜನೆ ಮತ್ತು ವಿಶೇಷ ಘಟಕ ಯೋಜನೆ ೧೯೭೪ ಮತ್ತು ೧೯೮೦ರಲ್ಲಿ ಜಾರಿಗೆ ಬಂದಿತು, ಆದರೆ ಈ ಯೋಜನೆಗಳು ನಾಲ್ಕು ದಶಕಗಳಷ್ಟು ಕಳೆದುಹೋದರೂ ಸಮರ್ಪಕವಾದ ಅನುಷ್ಟಾನದ ಕೊರತೆ ಎದುರಿಸುತ್ತಿದೆ, ಯೋಜನೆಯ ಸಮರ್ಪಕ ಅನುಷ್ಟಾನವಾಗಬೇಕಿದ್ದರೆ ಸಮಗ್ರ ಕಾನೂನು ಜಾರಿಯಾಗಬೇಕು, ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಗಮನ ಹರಿಸಬೇಕು ಎಂದು ಆಗ್ರಹಿಸಿ ಉಡುಪಿ ಅಜ್ಜರಕಾಡಿನಿಂದ ಸರ್ವೀಸ್ ಬಸ್ಸ್ ನಿಲ್ದಾಣದವರೆಗೆ ಮೆರವಣಿಗೆ ನೆಡೆಸಿದ ಅರಣ್ಯ ಮೂಲ ಬುಡಕಟ್ಟುಗಳ ಒಕ್ಕೂಟ ಹಕ್ಕೋತ್ತಾಯಿಸಿದೆ.
Snapshot - 59
Snapshot - 57

ಬುಧವಾರ, ನವೆಂಬರ್ 13, 2013

ಉಡುಪಿ: ಬಳ್ಕೂರು ಗೋಪಾಲಾಚಾರ್ಯ ಅವರ ದಾರು ಶಿಲ್ಷ ಕ್ಷೇತ್ರದಲ್ಲಿನ ಸೇವೆಯನ್ನು ಗಮನಿಸಿ ಶ್ರೀಲಂಕಾದ ಕೊಲೊಂಬೋ ಯುನಿವರ್ಸಿಟಿ ಗೌರವ ಡಾಕ್ಟರೇಟ್ ಪದವಿಗೆ ಆಯ್ಕೆ ಮಾಡಿದೆ ಎಂದು ಕಮಲಾಕ್ಷ ಪ್ರಭು ಹೇಳಿದರು.
ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ನವೆಂಬರ್ ೨೪ರಂದು ಶ್ರೀಲಂಕಾದ ಪ್ರಧಾನಿ ಹಾಗೂ ಯುನಿವರ್ಸಿಯ ಸೆನೆಟ್ ಸದಸ್ಯರು ನಡೆಸುವ ಘಟಿಕೋತ್ಸವದಲ್ಲಿ ಪದವಿ ಪುರಸ್ಕಾರ ನಡೆಯಲಿದೆ. ಕಮಲಾಕ್ಷ ಪ್ರಭು ಅವರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಇಂದಿರಾಗಾಂಧಿ ರಾಷ್ಟ್ರೀಯ ಕಲಾರತ್ನ ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ ಸೇರಿದಂತೆ ರಾಜ್ಯ ರಾಷ್ಟ್ರಮಟ್ಟದ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ತಿಳಿಸಿದರು.

[youtuber youtube='http://www.youtube.com/watch?v=XlZrQBwfKdk&feature=c4-overview&list=UUs0k8vSBwTqzHjMqn8PYrzQ'].

ಈ ಸಂಧರ್ಭದಲ್ಲಿ ಬಳ್ಕೂರು ಗೋಪಾಲಾಚಾರ್ಯ ಮಾತನಾಡಿ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರು ನನಗೆ ಪ್ರಶಸ್ತಿ ದೊರಕಿಸುವಲ್ಲಿ ಪಾತ್ರವಹಿಸಿದ್ದಾರೆ. ಅಷ್ಟಮಠಗಳ ಯತಿಗಳು ಪ್ರೋತ್ಸಾಹ ನೀಡಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.ಸುರೇಶ್ ನಾಯಕ್, ಅಣ್ಣಪ್ಪ ಆಚಾರ್ ಮತ್ತಿತರರು ಉಪಸ್ಥಿತರಿದ್ದರು.Snapshot - 55
ಉಡುಪಿ:  ಪ್ರೌಢ  ಹಾಗೂ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು ಎಳೆಯ ಮಕ್ಕಳಲ್ಲಿ ಜೀವನ ಪದ್ದತಿಯ ಕಡೆಗೆ ಪ್ರಾಧಾನ್ಯತೆಯನ್ನು ನೀಡುತ್ತಿಲ್ಲ ಎಂಬ ಭಾವನೆ ಸಮಾಜದಲ್ಲಿ ಬೇರೂರಿದೆ ಎಂದು ವಿಧಾನಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಹೇಳಿದ್ದಾರೆ.
[youtuber youtube='http://www.youtube.com/watch?v=D_Jm9oJQiVQ&feature=c4-overview&list=UUs0k8vSBwTqzHjMqn8PYrzQ']
ಮಣಿಪಾಲ ಸರಳೆಬೆಟ್ಟಿನ ಸೇವಾಗಂಗೋತ್ರಿ ಟ್ರಸ್ಟ್‌ನ ನಚಿಕೇತ ವಿದ್ಯಾಸಂಸ್ಥೆಯ ಸೇವಾಧಾಮ ಶಿಲಾಫಲಕವನ್ನು ವಿಧಾನಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮತ್ತು ಸಭಾಂಗಣವನ್ನು ಶಂಕರ್ ಮೂರ್ತಿ ಪುಷ್ಪ ಅರಳಿಸಿ ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
Snapshot - 49
ಇಂಗ್ಲೀಷ್ ಭಾಷೆಯ ಪರಿಣಾಮದಿಂದಾಗಿ ಸಮಾಜದಲ್ಲಿ ಕನ್ನಡ ಭಾಷೆ ಮುಗಿದುಗೋಗಲಿದೆ ಎಂಬ ಉದ್ಗಾರ ಕೇಳಿಬರುತ್ತಿದೆ. ಭಾರತೀಯ ಸಂಸ್ಕೃತಿ ಮತ್ತು ಜೀವನಪದ್ದತಿಯ ಕುರಿತು ಪಠ್ಯಕ್ರಮದಲ್ಲಿ ಬದಲಾವಣೆ ತರಬೇಕಿದೆ. ಎಳೆಯವಯಸ್ಸಿನ ಮಕ್ಕಳಲ್ಲಿ ಅದರ ಕುರಿತು ತಿಳಿಹೇಳಿದಾಗ ಸಮಾಜದಲ್ಲಿ ಸ್ಥಿರತೆಯನ್ನು ಕಾಣಬಹುದು ಎಂದು ಹೇಳಿದರು.

Snapshot - 53
ಮಾಜಿ ಶಾಸಕ ಕೆ. ರಘುಪತಿ ಭಟ್, ನಗರಸಭಾ ಅಧ್ಯಕ್ಷ ಯುವರಾಜ್, ನಾರಾಯಣಮರ್ತಿ, ಮತ್ತಿತರರು ಉಪಸ್ಥಿತರಿದ್ದರು.
Snapshot - 52
Snapshot - 50
ಉಡುಪಿ:ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ ವತಿಯಿಂದ ಕರಂಬಳ್ಳಿ ವೆಂಕಟರಮಣ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ೧ವಾರಗಳ ಬನ್ನಂಜೆ ಗೋವಿಂದಾಚಾರ್ಯರ ವಿಷ್ಣುಪುರಾಣ ಪ್ರವಚನ ಸಪ್ತಾಹದ ಸಮಾರೋಪ ಕಾರ್ಯಕ್ರಮ ಮಂಗಳವಾರ ದೇವಸ್ಥಾನದ ಸಭಾಭವದಲ್ಲಿ ಸಮಾಪನಗೊಂಡಿತು.ಪದ್ಮಶ್ರಿ ಪ್ರಶಸ್ತಿ ವಿಜೇತರಾದ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ ಅವರಿಗೆ ಸಮಿತಿಯಿಂದ ತತ್ವಜ್ಞಾನ ಕೇಸರಿ ಪ್ರಶಸ್ತಿಯನ್ನು ಪ್ರದಾನಿಸಲಾಯಿತು.
[youtuber youtube='http://www.youtube.com/watch?v=bPEODKCVAIs&feature=c4-overview&list=UUs0k8vSBwTqzHjMqn8PYrzQ']
ಬಳಿಕ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ಶ್ರೀಪಾದರು ಮಾತನಾಡಿ, ಸಂಶೋಧನೆಗೆ ಹೊಸ ತಿರುವು, ಆಯಾಮವನ್ನು ಬನ್ನಂಜೆ ಗೋವಿಂದಾಚಾರ್ಯರು ನೀಡಿದ್ದಾರೆ. ಗ್ರಂಥದ ಅಧ್ಯಯನ ಹಾಗೂ ಸಂಶೋಧನೆಯನ್ನು ಸ್ವ ಇಚ್ಚೆಯಿಂದ ಅಧ್ಯಯನ ಮಾಡಿದ್ದಾರೆ ಸನ್ಮಾನ ಅಥವಾ ಪ್ರಶಸ್ತಿಗಾಗಿ ಅಲ್ಲ. ಜ್ಞಾನದ ದಾಹದಿಂದ ಅಧ್ಯಯನ ಮಾಡಿದಾಗ ಅಧ್ಯಯನ ಸಿದ್ದಿಯಾಗುತ್ತದೆ ಎಂದು ಹೇಳಿದರು. ಕರಂಬಳ್ಳಿ ದೇವಸ್ಥಾನದ ಆಡಳಿತ ಧರ್ಮದರ್ಶಿ ಮಾಜಿ ಶಾಸಕ ಕೆ. ರಘುಪತಿ ಭಟ್, ವಾಸುದೇವ ತಂತ್ರಿ, ಹೇರಂಜೆ ಕೃಷ್ಣ ಭಟ್, ರಾಮಚಂದ್ರ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.
Snapshot - 46

ಪಟ್ನಾ ಬಾಂಬ್ ಸ್ಪೋಟದಲ್ಲಿ  ಸಬಂಧಿತಳಾಗಿರುವ ಆಯಿಷಾ ಭಾನು ಲವ್ ಜೆಹಾದ್ ನಿಂದ ಈ ದೇಶದ್ರೋಹಕ್ಕೆ ಇಳಿದಿದ್ದಾಳೆ ಎಂದು ವಿಶ್ವಹಿಂದು ಪರಿಷತ್ ಮತ್ತು ಬಜರಂಗದಳ ಆರೋಪಿಸಿದೆ. ಇಂದು ಆಯಿಷಾ ಭಾನು ದೇಶದ್ರೋಹದ ಹಿನ್ನೆಲೆಯಲ್ಲಿ ಬಂಧಿತಳಾಗಿರುವ ಸುದ್ದಿ ಬಂದ ಹಿನ್ನೆಲೆಯಲ್ಲಿ ಮಂಗಳೂರುನಲ್ಲಿ ಸುದ್ದಿಗೋಷ್ಟಿಯನ್ನು ನಡೆಸಿದ ಬಜರಂಗದಳ ಮತ್ತು ವಿಶ್ವಹಿಂದು ಪರಿಷತ್ ದೇಶದಲ್ಲಿ ನಡೆಯುತ್ತಿರುವ ಭಯೋತ್ಪಾದಕ ಚಟುವಟಿಕೆಗಳಲ್ಲಿ ಹಿಂದೂ ಹೆಣ್ಣುಮಕ್ಕಳ ಬಳಕೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದೆ. ಲವ್ ಜೆಹಾದ್ ನ ಮೂಲಕ ಹಲವಾರು ಹುಡುಗಿಯರು ಇಸ್ಲಾಂಗೆ ಮತಾಂತರವಾಗಿ ದೇಶದ್ರೋಹದ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿರುವುದು ನಮ್ಮ ಸಮಾಜವನ್ನು ಆತಂಕಗೊಳಿಸುವಂತಹ ವಿಷಯವಾಗಿದೆ ಎಂದ ಅವರು ತಕ್ಷಣ ರಾಜ್ಯ ಸರಕಾರವು ಕೇರಳದ ಪೊನ್ನಾನಿಯಲ್ಲಿರುವ ಇಸ್ಲಾಂ ಮತಾಂತರ ಕೇಂದ್ರಕ್ಕೆ ದಾಳಿ ಮಾಡಿ ಅಲ್ಲಿಂದ ಹಿಂದು ಹುಡುಗಿಯರನ್ನು ರಕ್ಷಣೆ ಮಾಡಬೇಕೆಂದು ಆಗ್ರಹಿಸಿದ್ದಾರೆ. ಪತ್ರಿಕಾಗೋಷ್ಟಿಯಲ್ಲಿ ವಿಶ್ವ ಹಿಂದು ಪರಿಷತ್ನ ಜಿಲ್ಲಾ ಕಾರ್ಯದರ್ಶಿ ಗೋಪಾಲ್ ಕುತ್ತಾರ್, ಜಿಲ್ಲಾ ಕಾರ್ಯಧ್ಯಕ್ಷ ಜಗದೀಶ್ ಶೇಣವ, ಬಜರಂಗದಳ ಜಿಲ್ಲಾ ಸಂಚಾಲಕ ಭುಜಂಗ ಕುಲಾಲ್, ಜಿಲ್ಲಾ ಸುರಕ್ಷಾ ಪ್ರಮುಖ್ ಪುನೀತ್ ಕುಮಾರ್ ಉಪಸ್ಥಿತರಿದ್ದರು.
ayesha (1)
ayesha (2)
ayesha (4)
ayesha (5)
ಉಡುಪಿ: ಪಾದೂರು ಕಚ್ಚಾ ತೈಲಗಾರದ ವಿದ್ಯುತ್ ಸಂರ್ಪಕ ಮತ್ತು ಸರ್ವೆ ಕಾರ್ಯದ ವಿಷಯ ನನಗೆ ಗೊತ್ತೇ ಇಲ್ಲ ಅಂತಾ ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ. ಪಾದೂರು ತೈಲಗಾರದ ವಿದ್ಯುತ್ ಸಂರ್ಪಕ ಮತ್ತು ಸರ್ವೆ ಕಾರ್ಯ ನಡೆಸಲು ಬಂದ ಅಧಿಕಾರಿಗಳಿಗೆ ಸ್ಥಳೀಯರು ದಿಗ್ಭಂದನ ಹಾಕಿದ ಸಂದರ್ಭ ಸೊರಕೆ ಈ ಮಾತನ್ನು ಹೇಳಿದ್ದಾರೆ. ಪಾದೂರು ತೈಲಾಗಾರದ ವಿದ್ಯುತ್ ಸಂಪರ್ಕ ಮತ್ತು ಸರ್ವೆ ಕಾರ್ಯವನ್ನು ನಡೆಸಲು ಬಂದ ನಾಲ್ವರು ಅಧಿಕಾರಿಗಳಿಗೆ ಸ್ಥಳೀಯರು ದಿಗ್ಬಂಧನ ಹಾಕಿದ ಘಟನೆ ನಡೆಯಿತು. ಸೂಕ್ತ ಪರಿಹಾರ ಮತ್ತು ಯಾವುದೇ ನೋಟಿಸು ನೀಡದೆ ಸರ್ವೆ ಕಾರ್ಯ ನಡೆಸುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತ ಪಡಿಸಿದರು. ಇದೇ ದಾರಿಯಲ್ಲಿ ಸಾಗುತ್ತಿದ್ದ ಉಸ್ತುವಾರಿ ಸಚಿವ ಸೊರಕೆಯನ್ನು ಅಡ್ಡಗಟ್ಟಿದ ಸ್ಥಳೀಯರು ಸಮಸ್ಯೆಯನ್ನು ಪರಿಹರಿಸುವಂತೆ ವಿನಂತಿಸಿ ಕೊಂಡರು. ಇದಕ್ಕೆ ಉತ್ತರಿಸಿದ ಸೊರಕೆ ಈ ವಿಷಯ ನನ್ನ ಗಮನಕ್ಕೆ ಬಂದೇ ಇಲ್ಲ ಅಂದ್ ಬಿಟ್ರು.........
ಈ ಬಗ್ಗೆ ಜಿಲ್ಲಾಧಿಕಾರಿ ಕಛೇರಿಯಲ್ಲಿ ಸಭೆ ನಡೆಸಿ ಒಂದು ತೀರ್ಮಾನಕ್ಕೆ ಬರುವವರುಗೂ ವಿದ್ಯುತ್ ಸಂರ್ಪಕ ಮತ್ತು ಸರ್ವೆ ಕಾರ್ಯ ನಡೆಸಲು ಬಿಡುವುದಿಲ್ಲ ಅಂದ್ರು.
ಪಟನಾ ಬಾಂಬ್ ಸ್ಫೋಟದ ವಿಚಾರಣೆ ನಡೆಸುತ್ತಿರುವ ಬಿಹಾರ ಪೋಲಿಸರು ಮಂಗಳೂರುನ ಮಹಿಳೆಯೊಬ್ಬರನ್ನು ಬಂಧಿಸಿದ್ದಾರೆ. ಬಿಹಾರದ ಪಟನಾ ದಲ್ಲಿ ನಡೆದ ಮೋದಿ ಸಮಾವೇಶದಲ್ಲಿ ಬಾಂಬ್ ಸೋಟದ ತನಿಖೆ ನಡೆಸುತ್ತಿರುವ ಬಿಹಾರ ಪೋಲಿಸರು ಮಂಗಳೂರು ಮಹಿಳೆಯನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಮಂಗಳೂರುನ ಪಂಜಿಮೊಗರು ವಾರ್ಡ್‌ನ ಆಯೇಶಾ ಭಾನು ಬಂಧಿತ ಮಹಿಳೆಯಾಗಿದ್ದು ಆಯೇಶಾ ಭಾನು ಮೂಲತ ಮಡಿಕೇರಿಯವರಾಗಿದ್ದಾರೆ.
ಆಯೇಶಾ ಮಡಿಕೇರಿಯಲ್ಲಿದ್ದು ಈಕೆಯ ಹೆಸರು ಮೊದಲು ಆಶಾ ಆಗಿತ್ತು. ಈಕೆ ಮುಸ್ಲಿಂ ಯುವಕನೊಬ್ಬನನ್ನು ಮದುವೆಯಾಗಿದ್ದು ಮದುವೆಯಾದ ನಂತರ ಈಕೆ ತನ್ನ ಹೆಸರನ್ನು ಆಯೇಶಾ ಭಾನು ಎಂದು ಬದಲಿಸಿದ್ದಳು. ನಂತರ ಆತನನ್ನು ಬಿಟ್ಟು ಮಂಗಳೂರುನಲ್ಲಿ ಬೇರೆಯೆ ಮದುವೆಯಾಗಿ ವಾಸ್ತವ್ಯವಿದ್ದ ಆಯೇಶಾ ಭಾನು ಉಗ್ರ ಚಟುವಟಿಕೆಯಲ್ಲಿ ಭಾಗಿಯಾಘಿರುವುದು ಮಂಗಳೂರು ಜನತೆಯನ್ನು ಬೆಚ್ಚಿ ಬೀಳಿಸಿದೆ. ಈಕೆ ಬಡ ಮಹಿಳೆಯಾಗಿದ್ದು ಇತ್ತೀಚೆಗೆ ದಿಡೀರ್ ಶ್ರೀಮಂತಳಾಗಿದ್ದಳು. ಆದರೆ ಇದರ ಮರ್ಮ ಜನರಿಗೆ ಅರ್ಥವಾಗಿರಲಿಲ್ಲ. ಇದೀಗ ಈಕೆಯನ್ನು ಉಗ್ರ ಚಟುವಟಿಕೆಗೆ ಸಹಕಾರ ನೀಡುತ್ತಿದ್ದ ಆರೋಪದ ಮೇಲೆ ಬಂಧಿಸಿರುವುದರಿಂದ ಈಕೆ ಹಣಕ್ಕಾಗಿ ದೇಶದ್ರೋಹದ ಕೆಲಸ ಮಾಡಿರುವುದು ಬಹಿರಂಗವಾಗಿದೆ. ಇದೀಗ ಬಿಹಾರ ಪೋಲಿಸರು ಆಯೇಶಾಳ ಮನೆಗೆ ಭೇಟಿ ನೀಡಿದ್ದು ತನಿಖೆ ನಡೆಸುತ್ತಿದ್ದಾರೆ. ಸ್ಥಳೀಯ ಬ್ಯಾಂಕು ಕಚೇರಿಗಳಿಗೂ ತೆರಳಿ ತನಿಖೆ ನಡೆಸುತ್ತಿದ್ದಾರೆ
ಉಡುಪಿ:ಬೆಂಗಳೂರಿನಲ್ಲಿ ನವೆಂಬರ್ ೧೭ರಂದು ನಡೆಯುವ ನರೇಂದ್ರ ಮೋದಿ ಸಮಾವೇಶದಲ್ಲಿ ಪಾಲ್ಗೊಳ್ಳಲು ನವೆಂಬರ್ ೧೬ರಂದು ಬೆಳಿಗ್ಗೆ ೮.೩೦ಕ್ಕೆ ಭಾರತೀಯ ಜನತಾ ಪಕ್ಷದ ಜಿಲ್ಲಾ ಉಪಾಧ್ಯಕ್ಷ ವಿಲಾಸ್ ನಾಯಕ್ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕುಂದಾಪುರದಿಂದ ಬೆಂಗಳೂರಿಗೆ ೪೫೦ ಕಿಲೋಮೀಟರ್ ದೂರವನ್ನು ಕ್ರಮಿಸಿ ಲಿಮ್ಕಾದಾಖಲೆಗೆ ಮುಂದಾಗಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಹೇಳಿದ್ದಾರೆ.
[youtuber youtube='http://www.youtube.com/watch?v=hxV-X--e2wI&feature=c4-overview&list=UUs0k8vSBwTqzHjMqn8PYrzQ']
ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ೨ಸಾವಿರ ಕಾರ್ಯಕರ್ತರೊಂದಿಗೆ ಬೈಕ್ ರ‍್ಯಾಲಿಯನ್ನು ನಡೆಸಲಿದ್ದು ನ ೧೬ರಂದು ಕುಂದಾಪುರದಲ್ಲಿ ೮.೩೦ಕ್ಕೆ ಉದ್ಘಾಟನೆ ಬಳಿಕ ಉಡುಪಿ, ಕಾರ್ಕಳ, ಧರ್ಮಸ್ಥಳ, ಸುಬ್ರಹ್ಮಣ್ಯ ಮಾರ್ಗವಾಗಿ ಬೆಂಗಳೂರಿನ ಅರಮನೆ ಮೈದಾನಕ್ಕೆ ರಾತ್ರಿ ೮ ಗಂಟೆಗೆ ತಲುಪಲಿದ್ದಾರೆ. ಈ ಹಿಂದೆ ಮೈಸೂರಿನಿಂದ ಮಂಗಳೂರಿಗೆ ೩೧೮ಕಿಲೋಮೀಟರ್ ಕ್ರಮಿಸಿ ದಾಖಲೆ ಮಾಡಿದ್ದ ಸಮರ್ಥ್‌ಶೆಣೈ ದಾಖಲೆ ಮುರಿಯಲಿದ್ದಾರೆ.ಎಂದು ತಿಳಿಸಿದರು.
ಮೂಡನಂಬಿಕೆ ವಿಚಾರದಲ್ಲಿ ಮುಖ್ಯಮಂತ್ರಿ ಮತ್ತು ಸಚಿವರ ನಡುವೆ ಭಿನ್ನಾಭಿಪ್ರಾಯ ಮೂಡಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೂಡನಂಬಿಕೆ ನಿಷೇದ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯ ಭೂತಾರಾಧನೆ, ನಾಗಾರಾಧನೆಯಂತಹ ಆರಾಧನೆ ಮೇಲೆ ಪರಿಣಾಮ ಬೀರಲಿದ್ದು ಸರ್ಕಾರ ಹಿಂದು ನಂಬಿಕೆಯನ್ನು ಕೆಣಕಬಾರದು ಎಂದು ಎಚ್ಚರಿಸಿದರು. ಜಿಲ್ಲಾ ಉಪಾಧ್ಯಕ್ಷ ವಿಲಾಸ್ ನಾಯಕ್, ಮಟ್ಟಾರು ರತ್ನಾಕರ್ ಹೆಗ್ಡೆ, ಶ್ಯಾಮಲಾಕುಂದರ್ ಮತ್ತಿತರರು ಉಪಸ್ಥಿತರಿದ್ದರು.

ಉಡುಪಿಯಲ್ಲಿ ಮೋದಿ ಹವಾ.......ಮೋದಿ ನೂರು ಅವತಾರದ ವೇಷಧಾರಿಗಳಿಂದ ಬ್ರಹ್ಮಾವರ ಪೇಟೆಯಲ್ಲಿ ಮೆರವಣಿಗೆ

ಅಪ್ಪಟ ಬಿಳಿ ಜುಬ್ಬ........ ಕೇಸರಿ ಕೋಟು....... ಹಣ್ಣಾದ ಟ್ರಿಮ್ ಗಡ್ಡ.... ತಲೆ ಮೇಲೊಂದು ಕೆಂಬಣ್ಣ ಮಿಶ್ರಿತ ಪೇಟ..... ಈ ಗೆಟಪ್ ಅಂದ್ ಕೂಡ್ಲೆ ಕಣ್ಮುಂದೆ ಬರೋದು ನರೇಂದ್ರ ಮೋದಿ. ಈಗ ಎಲ್ ನೋಡಿದ್ರೂ ಮೋದಿ .... ಮೋದಿ.... ಮೋದಿ. ದೇಶದಾದ್ಯಂತ ಮೋದಿ ದಿನಕ್ಕೊಂದು ಅವತಾರವೆತ್ತಿದ್ರೆ ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ಮೋದಿ ಶತಾವಾತಾರ ತಾಳಿದ್ದಾರೆ. ಬ್ರಹ್ಮಾವರ ಬಿಜೆಪಿ ಕಾರ್ಯಕರ್ತರು ನೂರು ಮೋದಿಯ ವೇಷ ಧರಿಸಿ ಸಂಭ್ರಮಿಸಿದ್ದು ಮೋದಿ ಹವಾಕ್ಕೆ ಹೊಸ ಲುಕ್ ಕೊಟ್ಟಿತ್ತು.
vlcsnap-2013-11-11-21h21m40s230
ದೇಶದಾದ್ಯಂತ ಮೋದಿ ಹವಾ ಜೋರಾಗಿದೆ. ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮೋದಿ ಪ್ರಧಾನಿಯಾಗಬೇಕೆಂಬ ಬಯಕೆ ಮೋದಿ ಅಭಿಮಾನಿಗಳಲ್ಲಿ ಹೆಚ್ಚಾಗುತ್ತಿದೆ. ಕರಾವಳಿ ಜಿಲ್ಲೆಯಲ್ಲಿ ಮೋದಿ ಬಗೆಬಗೆಯ ಗೆಟಪ್ ನಿಂದ ಕಂಗೊಳಿಸುತ್ತಿದ್ದಾರೆ. ಬ್ರಹ್ಮಾವರದಂತಹ ಗ್ರಾಮೀಣ ಪ್ರದೇಶದಲ್ಲಿ ಮೋದಿ ಟ್ರೆಂಡ್ ಜೋರಾಗಿದೆ. ಬ್ರಹ್ಮಾವರ ಗ್ರಾಮಾಂತರ ಬಿಜೆಪಿ ಘಟಕದ ಕಾರ್ಯಕರ್ತರು ನೂರು ಮೋದಿ ವೇಷ ಧರಿಸಿ ಬ್ರಹ್ಮಾವರ ಪ್ರದೇಶದಲ್ಲಿ ಕಾಲ್ನಿಗೆಯಲ್ಲಿ ಕಿಲೋಮೀಟರ್ ಗಟ್ಟಲೆ ಮೆರವಣಿಗೆ ನಡೆಸಿದರು. ಮೋದಿಯ ವಿವಿಧ ಗೆಟಪ್ ನಲ್ಲಿ ಕೈಬೀಸುತ್ತಾ, ವಿವಿಧ ಭಂಗಿಯಲ್ಲಿ ಪೋಸ್ ಕೊಟ್ಟು ಸಂಭ್ರಮಿಸಿದ್ದು ವಿಶೇಷವಾಗಿತ್ತು
vlcsnap-2013-11-11-21h23m02s26
ಮೋದಿ ಭದ್ರತೆ ವಿಷಯದಲ್ಲಿ ದೇಷದಾದ್ಯಂತ ಆತಂಕ ಕಾಡುತ್ತಿದೆ. ಅಹಮದಬಾದ್ ಸ್ಪೋಟದ ನಂತರ ಮೋದಿ ಪ್ರಾಣಕ್ಕೆ ಕಂಟಕ ಎದುರಾಗುತ್ತಿದೆ. ಈ ನಿಟ್ಟಿನಲ್ಲಿ ಮೋದಿ ನಾಯಕತ್ವದ ನೂರಾರು ನಾಯಕರು ಗ್ರಾಮ ಗ್ರಾಮಗಳಲ್ಲಿ ಹುಟ್ಟಿ ಬರಬೇಕು ಎನ್ನುವುದು ಈ ನೂರು ಅವತಾರದ ಉದ್ದೇಶವಾಗಿತ್ತು.
vlcsnap-2013-11-11-21h21m35s175
ದೀಪಾವಳಿ ಸಂದರ್ಭ ಮೋದಿ ಗೂಡು ದೀಪದಲ್ಲಿ ಕಂಗೊಳಿಸಿದ್ದರು. ಹಾದಿ - ಬೀದಿಯಲ್ಲಿ ದಿನಕ್ಕೊಂದರಂತೆ ಮೋದಿ ಬಣ್ಣ ಬಣ್ಣದ ಕಟೌಟ್ ಗಳು ರಾರಾಜಿಸುತ್ತಿದೆ. ಚುನಾವಣೆ ಸಮೀಪಿಸೋದ್ರಳಗೆ ಇನ್ನಷ್ಟು ಮೋದಿ ಅವತಾರಗಳು ಹುಟ್ಟೋದ್ರಲ್ಲಿ ಸಂದೇಹವಿಲ್ಲ ಅಲ್ವಾ....
vlcsnap-2013-11-11-21h21m35s175 vlcsnap-2013-11-11-21h20m44s179 vlcsnap-2013-11-11-21h20m02s16 vlcsnap-2013-11-11-21h19m39s38 vlcsnap-2013-11-11-21h22m34s1 vlcsnap-2013-11-11-21h21m56s133