ಮಂಗಳವಾರ, ನವೆಂಬರ್ 5, 2013

ಕಾರ್ಕಳ: ಕೋಳಿ ಅಂಕಕ್ಕೆ ದಾಳಿ 9 ಜನರ ಬಂಧನ

ಹೆಬ್ರಿ:ಹಣವನ್ನು  ಪಣವಾಗಿಟ್ಟುಕೊಂಡು ಆಕ್ರಮವಾಗಿ  ಕೋಳಿ ಅಂಕ ನಡೆಸುತ್ತಿದ್ದ ಸ್ಥಳಕ್ಕೆ  ಧಿಡೀರ್ ದಾಳಿ ನಡೆಸಿದ  ಪೊಲೀಸರು 9 ಜನರನ್ನು  ಬಂಧಿಸಿದ ಘಟನೆ ನಿನ್ಬ  ನಡೆದಿದೆ.
ಹೆಬ್ರಿ ಸಮೀಪದ ವರಂಗ ಗ್ರಾಮದ ಪಡ್ಡೊಟ್ಟು ಎಂಬಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಕೋಳಿ ಅಂಕ ನಡೆಸುತ್ತಿರುವುದರ ಬಗ್ಗೆ ಸುಳಿವು ದೊರೆತ ಹೆಬ್ರಿ  ಪೊಲೀಸರು ಕೂಡಲೇ  ಸ್ಥಳಕ್ಕೆ ದಾಳಿ ನಡೆಸಿ 21  ಕೋಳಿಗಳು
ಹಾಗೂ ಸುಮಾರು 2,280 ರೂಪಾಯಿಗಳನ್ನು ವಶಪಡಿಸಿಕೊಂಡಿದ್ದಾರೆ.ಆರೋಪಿಗಳಾದ
1) ಸಂತೋಷ್ ಅಚಾರಿ (23) 2) ಪ್ರಭಾಕರ ಅಚಾರಿ (, 3) ಸುರೇಶ್ ಪೂಜಾರಿ (30) , 4) ಗುರು ಪ್ರಸಾದ್ ಪೂಜಾರಿ ( 23) ತಂದೆ ಚಿನ್ನಪ್ಪ ಪೂಜಾರಿ ವಾಸ: ಅಂಡಾರು ಗ್ರಾಮ, 5) ಜಗನ್ನಾಥ ಕುಲಾಲ್ ( 52) , 6) ಸತೀಶ್ ಹೆಗ್ಡೆ (34) 7) ಉಮೇಶ್ ದೇವಾಡಿಗ (24) ತಂದೆ ವಿಶ್ವನಾಥ ದೇವಾಡಿಗ 8) ಪ್ರಭಾಕರ ಶೇರಿಗಾರ್ 9) ಸತೀಶ್ ಪೂಜಾರಿ (30) ಎನ್ನುವವರನ್ನು ಪೊಲೀಸರ ಬಂಧಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ