ಸೋಮವಾರ, ನವೆಂಬರ್ 11, 2013

ನ.9 ಶನಿವಾರ :ಕೊಟೇಶ್ವರದಲ್ಲಿ ಪ್ರತಿಷ್ಠಿತ ಬ್ಯಾರೀಸ್ ಗ್ರೀನ್ ಎವೆನ್ಯೂಗೆ ಚಾಲನೆ

ಕುಂದಾಪುರ: ಎಲ್ಲದರಲ್ಲಿಯೂ ಹೊಸತನವನ್ನೇ ಆಪೇಕ್ಷಿಸುತ್ತಾ ಈಗಾಗಲೇ ಶಿಕ್ಷಣ ಕ್ಷೇತ್ರ ಮತ್ತು ವಸತಿ ಸಮುಚ್ಛಯ ನಿರ್ಮಾಣ ರಂಗದಲ್ಲಿ ಹೆಸರುವಾಸಿಯಾಗಿರುವ  ಬೆಂಗಳೂರಿನ ಬ್ಯಾರೀಸ್ ಗ್ರೂಪ್ ತನ್ನ ಹುಟ್ಟೂರಾದ ಕೋಟೇಶ್ವರದಲ್ಲಿ 'ಬ್ಯಾರೀಸ್ ಗ್ರೀನ್ ಎವೆನ್ಯೂ' ಹೆಸರಿನಲ್ಲಿ ಐಷಾರಾಮಿ ವಸತಿ ಸಮುಚ್ಛಯ ನಿರ್ಮಾಣಕ್ಕೆ ಮುಂದಾಗಿದೆ. ಕುಂದಾಪುರದ  ಕೋಟೇಶ್ವರದಲ್ಲಿ ಆಧುನಿಕ ಸೌಲಭ್ಯ ಅಪೇಕ್ಷಿತ ಜನರಿಗೆ ಈ ಗ್ರೀನ್ ಎವೆನ್ಯೂ ಇನ್ನೇನೂ ಕೆಲವೇ ತಿಂಗಳುಗಳಲ್ಲಿ ಕೈಗೆಟುಕಲಿದೆ ಎಂದು ಬ್ಯಾರೀಸ್‌ಗ್ರೂಪ್‌ನ ಮುಖ್ಯಸ್ಥ ಸಯದ್ ಮಹಮದ್ ಬ್ಯಾರಿ ಹೊಸ ಯೋಜನೆಯನ್ನು ವಿವರಿಸಿದರು.ಅವರು ಶುಕ್ರವಾರ ಸಂಜೆ ಕೊಟೇಶ್ವರ ಬಸ್ ನಿಲ್ದಾಣದ ಬಳಿಯ ಪ್ರಾಜೆಕ್ಟ್ ಸೈಟ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದರು.
ಎಲ್ಲಾ ಮನೆಗಳಿಗೂ ಸಮರ್ಪಕ ಬಿಸಿಲು, ಗಾಳಿ, ಬೆಳಕು ದೊರೆಯುವಂತೆಯೂ, ನಿವಾಸಿಗಳಿಗೆ ಆಹ್ಲಾದ ಉಂಟಾಗುವಂತೆಯೂ ವಸತಿಗಳು ರೂಪು ತಳೆಯಲಿವೆ. ಸೂರ್ಯನ ಚಲನೆಯಿಂದಾಗಿ ಋತುಮಾನಗಳಲ್ಲಾಗುವ ವ್ಯತ್ಯಾಸಗಳನ್ನು ಅನುಲಕ್ಷಿಸಿ ಈ ವಸತಿಸಮುಚ್ಛಯವನ್ನು ರೂಪುಗೊಳಿಸಲಾಗಿದೆ. ಜತೆಗೆಯೆ ಕಡಿಮೆ ನೀರು ಬಳಕೆ, ಬಳಸಿದ ನೀರಿನ ಶುದ್ಧೀಕರಣ ಮತ್ತು ಮರುಬಳಕೆ ಹಾಗೂ ಸಮರ್ಪಕ ತ್ಯಾಜ್ಯ ವಿಲೇವಾರಿಗೆ ಮಹತ್ವ ನೀಡಲಾಗಿದೆ. ಈ ಕಟ್ಟಡದಲ್ಲಿ ಕರಾವಳಿಯ ಉಪ್ಪು ನೀರಿನ ಹವೆಗೆ ಒಗ್ಗಿಕೊಳ್ಳುವ ಉತ್ಕೃಷ್ಟ ಮಟ್ಟದ ಕಬ್ಬಿಣವನ್ನು ಬಳಸಲಾಗುವುದು. ಸಮುಚ್ಛಯದ ನಿವಾಸಿಗಳ ಸರ್ವರೀತಿಯ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ ಎಂದು ವಿವರಿಸಿದ ಸಯದ್, ಮೂಲತಃ ಕುಂದಾಪುರ ಕೋಡಿಯವರಾದ ತಮ್ಮ ಹುಟ್ಟೂರ ಅಭಿಮಾನದಿಂದ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದುಹೇಳಿದರು.
ಬ್ಯಾರೀಸ್ ಗ್ರೂಪ್‌ನವರ ಮಂಗಳೂರು, ಬೆಂಗಳೂರು, ಶಿವಮೊಗ್ಗ ಇನ್ನಿತರೆಡೆಗಳಲ್ಲಿನ ಯಶಸ್ವೀ ಯೋಜನೆಗಳು ಹಾಗೂ ಮಾಂಟೆಸರಿ ಮಟ್ಟದಿಂದ ಇಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣದವರೆಗಿನ ಶೈಕ್ಷಣಿಕ ಕ್ಷೇತ್ರದ ಮೈಲಿಗಲ್ಲುಗಳ ಬಗ್ಗೆ ವಿವರಿಸಿದ ಸಯದ್‌ಬ್ಯಾರಿ ಎಲ್ಲೆಡೆಯೂ ತಾವು ಕೇವಲ ವ್ಯಾವಹಾರಿಕವಾಗಿ ವರ್ತಿಸದೇ, ಗ್ರಾಹಕರಿಗೆ ನಿಜವಾದ ಮೌಲ್ಯ ದೊರಕುವಂತೆ ಕಾರ್ಯ ನಿರ್ವಹಿಸಿದ್ದಾಗಿ ತಿಳಿಸಿದರು.
ಕೊಟೇಶ್ವರದ ಬ್ಯಾರೀಸ್ ಗ್ರೂಪ್ ಎವೆನ್ಯೂ ಯೋಜನೆಯನ್ನು ನ. ೯ ರಶನಿವಾರ, ಮದ್ಯಾಹ್ನ೧೨.೩೦ ಕ್ಕೆ ರಾಜ್ಯ ನಗರಾಭಿವೃದ್ಧಿ ಸಚಿವ ವಿನಯ್‌ಕುಮಾರ್ ಸೊರಕೆ ಚಾಲನೆಗೊಳಿಸುವರು. ಸಂಸದಕೆ. ಜಯಪ್ರಕಾಶ ಹೆಗ್ಡೆ, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಸ್ಥಳೀಯ ಗಾಮಪಂಚಾಯತ್ ಅಧ್ಯಕ್ಷ ರಾಜಶೇಖರ ಶೆಟ್ಟಿ ಮೊದಲಾದ ಗಣ್ಯರು ಉಪಸ್ಥಿತರಿರುವರು.
Bearys

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ