ಶುಕ್ರವಾರ, ನವೆಂಬರ್ 1, 2013

ತೆಕ್ಕಟ್ಟೆ : ವಿಶ್ವ ವಿನಾಯಕ ಆಂಗ್ಲ ಮಾಧ್ಯಮ ಶಾಲೆ ನಮ್ಮ ಚರಿತ್ರೆಯ ಸಿಂಹಾವಲೋಕನ ಅಗತ್ಯ - ಜಾನ್

ತೆಕ್ಕಟ್ಟೆ ( ವಿದ್ಯಾಗಿರಿ)  :  ನಮ್ಮ ಭಾಷೆ ಸಂಸ್ಕೃತಿಯ ಅಧ್ಯಯನ ಮಾಡುವುದ್ದರೊಂದಿಗೆ ಚರಿತ್ರೆಯನ್ನು ಸಿಂಹಾವಲೋಕನ ಮಾಡಬೇಕಾದ ಅನಿವಾರ್ಯತೆ ಇದೆ ಈ ನಿಟ್ಟಿನಲ್ಲಿ  ನಾಡಿನ ಭವ್ಯತೆಯನ್ನು ಅರಿಯಬೇಕಾದ ಅಗತ್ಯತೆ ಇದೆ ಎಂದು  ಪತ್ರಕರ್ತ ಜಾನ್ ಡಿಸೋಜಾ ಹೇಳಿದರು . ಅವರು ನ.೧ ರಂದು ತೆಕ್ಕಟ್ಟೆ ವಿಶ್ವ ವಿನಾಯಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿದರು.
ತೆಕ್ಕಟ್ಟೆ ರೋಟರಿ ಕ್ಲಬ್‌ನ ಅಧ್ಯಕ್ಷ  ಉದ್ಯಮಿ  ಟಿ.ಮಂಜುನಾಥ ಪ್ರಭು ಮಾತನಾಡಿ ನಮ್ಮ ತಾಯಿಯನ್ನು ಪ್ರೀತಿಯಿಂದ ನೋಡಿಕೊಳ್ಳುವಂತೆ ನಮ್ಮ  ಭಾಷೆಯ ವ್ಯಾಮೋಹ ಅಗತ್ಯ , ಭಾಷೆಯ ಸಂಘರ್ಷಕ್ಕೆ ಅವಕಾಶ  ಕಲ್ಪಿಸದೆ  ನಮ್ಮ ಜೀವನ ಭಾಷೆ ಕನ್ನಡವನ್ನಾಗಿಸಬೇಕಾದ  ಅಗತ್ಯತೆ ಇದೆ ಎಂದು ಹೇಳಿದರು .ಮುಖ್ಯ ಅತಿಥಿ ತೆಕ್ಕಟ್ಟೆ ರೋಟರಿ ಕ್ಲಬ್‌ನ ಕಾರ್ಯದರ್ಶಿ ಶ್ರೀಧರ ಆಚಾರ್ಯ , ಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ಡಾ| ಸುರೇಶ್ ಶೆಟ್ಟಿ, ಪ್ರಾಂಶುಪಾಲೆ  ನಾಗರತ್ನ.ಎನ್.ಪಾಲನ್ ಉಪಸ್ಥಿತರಿದ್ದರು .ವಿದ್ಯಾರ್ಥಿನಿ  ಕುಮಾರಿ ಭಾವನಾ ಸ್ವಾಗತಿಸಿ, ಕುಮಾರಿ ಅಕ್ಷತಾ.ಎನ್ ನಿರೂಪಿಸಿ, ಕುಮಾರಿ ಇಂಚರ ಪ್ರಾಸ್ತಾವಿಕ ಮಾತನಾಡಿ, ಕುಮಾರಿ ಅನನ್ಯ.ಕೆ.ಶೆಟ್ಟಿ  ವಂದಿಸಿದರು.
0111tke1

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ