ಬುಧವಾರ, ನವೆಂಬರ್ 13, 2013

ಮೂಡುಬೆಳ್ಳೆ: ರಾಜ್ಯಮಟ್ಟದ ಬಾಲಕಿಯರ ಎನ್.ಎಸ್.ಎಸ್. ಶಿಬಿರ ಸಮಾರೋಪ

ಇಲ್ಲಿನ ಸಂತ ಲಾರೆನ್ಸ್ ಪ.ಪೂ. ಕಾಲೇಜಿನಲ್ಲಿ ನಡೆದ ರಾಜ್ಯ ಮಟ್ಟದ ಬಾಲಕಿಯರ ಎನ್.ಎಸ್.ಎಸ್. ಶಿಬಿರ ಸೋಮವಾರ ಸಮಾರೋಪಗೊಂಡಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಥೋಲಿಕ್ ಶಿಕ್ಷಣ ಮಂಡಳಿ, ಮಂಗಳೂರು ಇದರ ಕಾರ್ಯದರ್ಶಿಗಳಾದ   ವೆ. ರೆ. ಫಾ. ವಿಲ್ಸನ್ ವಿ. ಡಿಸೋಜ ವಹಿಸಿದ್ದರು. ಎನ್.ಎಸ್.ಎಸ್. ಜೀವನ ಮೂಲ್ಯಗಳನ್ನು ಬೆಳೆಸಿಕೊಂಡು ಉತ್ತಮ ನಾಗರಿಕರನ್ನಾಗಿ ಬದುಕುವ ಅವಕಾಶವನ್ನು ಕಲ್ಪಿಸಿಕೊಡುತ್ತದೆ.
ಕಾಲೇಜಿನವರು ರಾಜ್ಯಮಟ್ಟದ ಶಿಬಿರವನ್ನು ಆಯೋಜಿಸುವ ಮೂಲಕ ನೂರಾರು ಶಿಬಿರಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಅವಕಾಶವನ್ನೊದಗಿಸಿಕೊಟ್ಟಿದ್ದಾರೆ ಎಂದು ಅವರು ಹೇಳಿದರು. ಉಡುಪಿ ಜಿಲ್ಲಾ ಪ. ಪೂ. ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಎಸ್.ಎಸ್. ಶಿಂಧಾ ಸಮಾರೋಪ ಭಾಷಣ ಮಾಡುತ್ತಾ ಉತ್ತಮ ಆಯೋಜನೆಗಾಗಿ ಕಾಲೇಜನ್ನು ಅಭಿನಂದಿಸಿದರು.
ಕಾಲೇಜಿನ ಸಂಚಾಲಕರಾದ ರೆ. ಫಾ. ಜೋಸ್ವಿ ಫೆರ್ನಾಂಡಿಸ್, ಪ. ಪೂ. ಶಿಕ್ಷಣ ಇಲಾಖೆಯ ಲೆಕ್ಕಪತ್ರಾಧಿಕಾರಿ ಜ್ಯೋತಿ ಡಿ. ಕುಂದರ್, ಉಡುಪಿ ಜಿಲ್ಲಾ ಪ. ಪೂ. ಕಾಲೇಜು ಪ್ರಾಚಾರ್ಯರ ಸಂಘದ ಅಧ್ಯಕ್ಷ ಆರ್. ಬಿ. ನಾಯಕ್, ಕಾರ್ಯದರ್ಶಿ ಮೇಟಿ ಮುದಿಯಪ್ಪ, ಉದ್ಯಾವರ ಸರಕಾರಿ ಪ. ಪೂ. ಕಾಲೇಜಿನ ಪ್ರಾಚಾರ್ಯ ಪಿ. ಕೆ. ಮೋಹನನ್, ಕೊಲ್ಲೂರು ಸರಕಾರಿ ಪ. ಪೂ. ಕಾಲೇಜಿನ ಪ್ರಾಚಾರ್ಯರಾದ ಪ್ರಕಾಶ್, ಉಡುಪಿ ಸಿಂಡಿಕೇಟ್ ಬ್ಯಾಂಕ್ ಮುಖ್ಯ ಪ್ರಬಂಧಕ ಸುಬ್ರಹ್ಮಣ್ಯ ಭಟ್, ಕರ್ನಾಟಕ ಬ್ಯಾಂಕ್ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ರವೀಂದ್ರನಾಥ ಹಂದೆ, ಸಂತ ಲಾರೆನ್ಸ್ ಹೈಸ್ಕೂಲಿನ ಹಿರಿಯ ಶಿಕ್ಷಕಿ ಹಿಲ್ಡಾ ಅರಾನ್ಹ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ದೇವದಾಸ್ ಹೆಬ್ಬಾರ್, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಜೋಸೆಫ್ ಮಾರ್ಟಿಸ್ ಮತ್ತು ಸಹಶಿಬಿರಾಧಿಕಾರಿಗಳು ವೇದಿಕೆಯಲ್ಲಿದ್ದರು. ಕಾಲೇಜಿನ ಪ್ರಾಚಾರ್ಯರಾದ ರೆ. ಫಾ. ಪಾವ್ಲ್ ಸಿಕ್ವೇರಾ ಸ್ವಾಗತಿಸಿ, ಶಿಬಿರಾಧಿಕಾರಿ ಎಡ್ವರ್ಡ್ ಲಾರ್ಸನ್ ವಂದಿಸಿದರು. ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಕಾರ್ಯಕ್ರಮ ನಿರೂಪಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ