ಉಡುಪಿ:ನರಕ ಚತುರ್ದಶಿ- ದೀಪಾವಳಿ ಸಂಭ್ರಮ ಮುಗಿದಿದ್ದು ಇಂದು
ಉಡುಪಿಯಲ್ಲಿ ಬಲಿ ಪಾಡ್ಯಮಿಯನ್ನು ಆಚರಿಸಲಾಗುತ್ತಿದೆ. ಶ್ರೀಕೃಷ್ಣ ಮಠದಲ್ಲಿ ಪರ್ಯಾಯ
ಸೋದೆ ವಿಶ್ವವಲ್ಲಭ ತೀರ್ಥಶ್ರೀಪಾದರು ಮಠದ ಗೋಶಾಲೆಯ ಗೋವುಗಳಿಗೆ ಪೂಜೆ ಸಲ್ಲಿಸಿದರು.
ದೀಪಾವಳಿ ಸಂದರ್ಭ ಪ್ರತೀ ವರ್ಷ ಗೋವುಗಳಿಗೆ ಪೂಜೆ ಮಾಡುವುದು ಸಂಪ್ರದಾಯ. ಕಲಿಗಾಲದ
ಕಾಮಧೇನುಗಳಿಗೆ ಹಾರ ಹಾಕಿ, ಗಂಧ- ಕುಂಕುಮವಿಟ್ಟು ಶೃಂಗಾರ ಮಾಡಲಾಯಿತು. ನಂತರ ಸ್ವಾಮೀಜಿ
ಹಸುಗಳಿಗೆ ಆರತಿಯೆತ್ತಿ, ತಿಂಡಿ ತಿನಸುಗಳನ್ನು ಕೊಟ್ಟರು. ಕನಕ ಗೋಪುರ ಮತ್ತು
ರಥಬೀದಿಯಲ್ಲಿ ಗೋವುಗಳಿಗೆ ಪೂಜೆ ಸಲ್ಲಿಸಲಾಯಿತು. ಗೋಶಾಲೆಯಲ್ಲಿಯೂ ಪೂಜೆ ನಡೆಸಿ
ದನಗಳಿಗೆ ಬೆಳಕು ತೋರಿಸಲಾಗುತ್ತದೆ. ಗೋವು ಪೂಜೆಯಲ್ಲಿ ಮಠದ ನೂರಾರು ಭಕ್ತರು
ಪಾಲ್ಗೊಂಡರು.












ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ