ಮಂಗಳವಾರ, ನವೆಂಬರ್ 5, 2013

ಉಡುಪಿ ಕೃಷ್ಣಮಠದಲ್ಲಿ ಗೋವು ಪೂಜೆ; ಸೋದೆ ಸ್ವಾಮೀಜಿಗಳಿಂದ ಹಸುಗಳಿಗಾರತಿ ಹೂಹಾರ- ಕುಂಕು

ಉಡುಪಿ:ನರಕ ಚತುರ್ದಶಿ- ದೀಪಾವಳಿ ಸಂಭ್ರಮ ಮುಗಿದಿದ್ದು ಇಂದು ಉಡುಪಿಯಲ್ಲಿ ಬಲಿ ಪಾಡ್ಯಮಿಯನ್ನು ಆಚರಿಸಲಾಗುತ್ತಿದೆ. ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಸೋದೆ ವಿಶ್ವವಲ್ಲಭ ತೀರ್ಥಶ್ರೀಪಾದರು ಮಠದ ಗೋಶಾಲೆಯ ಗೋವುಗಳಿಗೆ ಪೂಜೆ ಸಲ್ಲಿಸಿದರು. ದೀಪಾವಳಿ ಸಂದರ್ಭ ಪ್ರತೀ ವರ್ಷ ಗೋವುಗಳಿಗೆ ಪೂಜೆ ಮಾಡುವುದು ಸಂಪ್ರದಾಯ. ಕಲಿಗಾಲದ ಕಾಮಧೇನುಗಳಿಗೆ ಹಾರ ಹಾಕಿ, ಗಂಧ- ಕುಂಕುಮವಿಟ್ಟು ಶೃಂಗಾರ ಮಾಡಲಾಯಿತು. ನಂತರ ಸ್ವಾಮೀಜಿ ಹಸುಗಳಿಗೆ ಆರತಿಯೆತ್ತಿ, ತಿಂಡಿ ತಿನಸುಗಳನ್ನು ಕೊಟ್ಟರು. ಕನಕ ಗೋಪುರ ಮತ್ತು ರಥಬೀದಿಯಲ್ಲಿ ಗೋವುಗಳಿಗೆ ಪೂಜೆ ಸಲ್ಲಿಸಲಾಯಿತು. ಗೋಶಾಲೆಯಲ್ಲಿಯೂ ಪೂಜೆ ನಡೆಸಿ ದನಗಳಿಗೆ ಬೆಳಕು ತೋರಿಸಲಾಗುತ್ತದೆ. ಗೋವು ಪೂಜೆಯಲ್ಲಿ ಮಠದ ನೂರಾರು ಭಕ್ತರು ಪಾಲ್ಗೊಂಡರು.
vlcsnap-2013-11-04-13h44m43s138
vlcsnap-2013-11-04-13h45m56s96
vlcsnap-2013-11-04-13h46m33s211
vlcsnap-2013-11-04-13h46m51s137
vlcsnap-2013-11-04-13h47m13s103
vlcsnap-2013-11-04-13h47m23s203

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ