ಬುಧವಾರ, ನವೆಂಬರ್ 20, 2013

ಮೋದಿ ಬದಲಾಗಿದ್ದಾರೆ. ಹೌದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮಾತಿನಲ್ಲಿ ಛೂ ಬಾಣ ಇರಲಿಲ್ಲ. ಮಾತಿನ ಮೊನಚು ಜಾರಿತ್ತು. ಮೋದಿ ಒಂಥರಾ ಲೆಕ್ಷರರ್ ಥರ ಭಾಸವಾದ್ರು. ವಾಯ್ಸ್ ವೇರಿಯೇಶನ್ ಮಾಡಿ ಮಾತನಾಡುತ್ತಾ ಕಾರ್ಯಕರ್ತರಿಗೆ ಪ್ರಶ್ನೆ ಹಾಕಿದರು. ಉತ್ತರ ಅವರಿಂದಲೇ ಪಡೆದರು. ಬೆಂಗಳೂರಿನಲ್ಲಿ ನಡೆದ ಭಾರತ ಗೆಲ್ಲಿಸಿ ರ್‍ಯಾಲಿಯಲ್ಲಿ ನರೇಂದ್ರ ಮೋದಿ ಒಂದು ಗಂಟೆಗೂ ಮಿಕ್ಕಿ ಮಾತನಾಡಿದ್ರು. ಬಿಜೆಪಿ ಪ್ರಧಾನಿ ಅಭ್ಯರ್ಥಿ ಅಂತ ಘೋಷಣೆಯಾಗುವ ಹಿಂದಿದ್ದ ಖಾರದ ಮಾತುಗಳನ್ನು ಕರ್ನಾಟಕದಲ್ಲಿ ಆಡಲಿಲ್ಲ. ಮೋದಿ ಮಾತಿನ ಕೆಲ ಪಾಯಿಂಟ್ಸ್ ನಿಮಗಾಗಿ.
# ಕನ್ನಡದಲ್ಲಿ ಮಾತನಾಡಿದ ಮೋದಿ. ಭಾಷಣದ ಶುರುವಿನಲ್ಲಿ ನರೇಂದ್ರ ಮೋದಿ ಕನ್ನಡದಲ್ಲಿ ಮಾತನಾಡಲು ಪ್ರಯತ್ನಿಸಿದರು. ಲಕ್ಷಾಂತರ ಕಾರ್ಯಕರ್ತರನ್ನು ಈ ಮೂಲಕ ಸೆಳೆದರು.
# ಇತಿಹಾಸ ಕೆಣಕಿ ಕೈ ಸುಟ್ಟುಕೊಂಡಿರುವ ಮೋದಿ ಕನಕ, ಬಸವಣ್ಣ, ಚೆನ್ನಮ್ಮ, ಕೆಂಪೇಗೌಡರನ್ನು ನೆನೆದರು. ಭಾರತ ರತ್ನ ವಿಜೇತ ಸಿ‌ಎನ್‌ಆರ್ ರಾವ್‌ಗೆ ಅಭಿನಂದನೆ.
# ಮೊನ್ನೆ ವಾಂಖೆಡೆಯಲ್ಲಿ ಸಚಿನ್ ರಿಟೈರ್‍ಡ್‌ಮೆಂಟ್‌ಗಿಂತ ನೀರುಳ್ಳಿ ರೇಟಿನ ಬಗ್ಗೆಯೇ ಹೆಚ್ಚು ಚರ್ಚೆಯಾಯ್ತು. ೨೬ ರೂಪಾಯಿಗೆ ಹೊಟ್ಟೆ ತುಂಬುತ್ತೆ ಅಂತೀರ. ೩೦೦ ಗ್ರಾಂ ಈರುಳ್ಳಿ ಸಿಗುತ್ತಾ..?
# ಮೋದಿ ಮಾತಿನುದ್ದಕ್ಕೂ ಕೇಂದ್ರ ಯುಪಿ‌ಎ ಸರ್ಕಾರವನ್ನು ಜಾಡಿಸಿದ ಮೋದಿ. ಯುಪಿ‌ಎ ಪ್ರಜಾಪ್ರಭುತ್ವದ ಕುತ್ತಿಗೆ ಹಿಸುಕುತ್ತಿದೆ ಎಂದು ವಾಗ್ದಾಳಿ.
# ದೇಶದಲ್ಲಿ ಕಾಂಗ್ರೆಸ್ ಜಾಗ ಖಾಲಿಮಾಡುವ ಕಾಲಬಂದಿದೆ. ಮುಂದಿನ ಚುನಾವಣೆಯಲ್ಲಿ ಯುವಶಕ್ತಿಯ ಶಕ್ತಿ ಏನೆಂಬೂದು ಗೊತ್ತಾಗುತ್ತೆ.
# ಯುಪಿ‌ಎಯಿಂದ ಪಿಂಕ್ ರೆವಲ್ಯೂಷನ್. ಕಸಾಯಿಖಾನೆಗಳಿಗೆ ಹೆಚ್ಚಿನ ಪರ್ಮಿಷನ್. ಸರ್ಕಾರ ಕಟುಕರಿಗೆ ಇನ್ಸೆಂಟಿವ್ ಕೊಡುತ್ತಿದೆ.
# ಕಾಂಗ್ರೆಸ್ ೬೦ ವರ್ಷ ಏನೂ ಮಾಡಿಲ್ಲ. ದೇಶ ಅಮೃತ ಮಹೋತ್ಸವ ಆಚರಿಸುವ ಸಂದರ್ಭದಲ್ಲಾದ್ರೂ ಅಭಿವೃದ್ಧಿ ಕಾಣೋಣ.
# ಅರಮನೆ ಮೈದಾನದಲ್ಲಿ ಕಾರ್ಯಕರ್ತರು ಕೇಸರಿ ಸಾಗರವಾಗಿ ಕಂಡರು. ಮೋದಿ ಕ್ಷಣಕಾಲ ಮಾತು ನಿಲ್ಲಿಸಿದರು. ಇದು ಕರ್ನಾಟಕದ ಐತಿಹಾಸಿಕ ರ್‍ಯಾಲಿ ಎಂದು ಮಾತು ಮುಂದುವರೆಸಿದರು.
# ವಾಜಪೇಯಿ ಮಾದರಿಯಲ್ಲಿ ದೇಶದ ಅಭಿವೃದ್ಧಿ. ಐಟಿ ಕರ್ನಾಟಕದ ಶಕ್ತಿ ಎಂದ ಮೋದಿ.
# ಎನ್‌ಡಿ‌ಎ ಅಧಿಕಾರದಲ್ಲಿದ್ದಾಗ ಐಟಿ ಕ್ಷೇತ್ರ ೪೦ಶೇ. ಅಭಿವೃದ್ಧಿಯಾಗಿತ್ತು. ಈಗ ಶೇ.೨೦ಕ್ಕೆ ಕುಸಿದಿದೆ.
# ಯುಪಿ‌ಎಯ ರೂಪಾಯಿ ಐಸಿಯುನಲ್ಲಿದೆ.
# ಬಿಜೆಪಿ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಮಸೂದೆ ಜಾರಿಗೊಳಿಸಿತ್ತು. ಕಾಂಗ್ರೆಸ್ ಒಂದೇ ತಿಂಗಳೊಳಗೆ ಅದನ್ನು ಕಿತ್ತು ಬಿಸಾಕಿತು.
# ದೇಶದಲ್ಲಿ ಕಲ್ಲಿದ್ದಲು ನುಂಗಿದ್ರು.., ಕೋಟಿ ಕೋಟಿ ಹಣ ನುಂಗಿದ್ರು.., ಕೊನೆಗೆ ಸಂಬಂಧಪಟ್ಟ ಕಡತಗಳನ್ನೂ ನುಂಗಿ ನೀರು ಕುಡಿದ್ರು.
# ಮೌನಿ ಪ್ರಧಾನಿ.., ಮೌನ.., ಸದಾ ಮೌನ.., ಮಾತಿಲ್ಲ.., ಬರೀ ಮೌನ.., ಅಂತ ಪ್ರಧಾನಿ ಸಿಂಗ್‌ರನ್ನು ಲೇವಡಿ ಮಾಡಿದ ಮೋದಿ.
# ಲತಾ ಮಂಗೇಶ್ಕರ್ ನಾನು ಪ್ರಧಾನಿಯಾಗಲಿ ಅಂದ್ರು. ಕೇಂದ್ರ ಅವರ ಭಾರತ ರತ್ನ ಹಂಪಡೆಯಲು ಹೊರಟಿದೆ. ಈ ದೇಶದಲ್ಲಿ ಅಭಿಪ್ರಾಯ ಮಂಡಿಸುವ ಹಕ್ಕೂ ಇಲ್ವಾ..?
# ಯುಪಿ‌ಎ ಸರ್ಕಾರ ಬಹುಮತದಿಂದ ಉಳಿದಿಲ್ಲ. ಸಿಬಿ‌ಐ ಬೆಂಬಲದಿಂದ ಜೀವಂತಯಿದೆ.
ರಾಜ್ಯಕ್ಕೆ ಮೋದಿ ಬರ್‍ತಾರೆ ಅಂದಾಗ ಎಲ್ಲರೂ ನಿರೀಕ್ಷೆಯಿಟ್ಟುಕೊಂಡಿದ್ದರು. ರಾಜ್ಯ ಕಾಂಗ್ರೆಸ್‌ನ ಶಾದಿ ಭಾಗ್ಯ, ಅಹಿಂದಾ ಟೂರ್ ಯೋಜನೆಗಳಿಗೆ ಕುಟುಕುತ್ತಾರೆ ಅಂತ ಎಲ್ಲರೂ ಅಂದುಕೊಂಡಿದ್ದರು. ಮೋದಿ ಅದನ್ನು ಹುಸಿಗೊಳಿಸಿದ್ರು. ರಾಜಕೀಯ ವಿಶ್ಲೇಷಕರ ಪ್ರಕಾರ ಅದು ಜಾಣ್ಮೆಯ ಪಾಲಿಟಿಕ್ಸ್..!
[youtuber error='Not a YouTube, Vimeo or Google Video URL: ']
modhi3 modhi4 modhi2 modhi1

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ