ಬುಧವಾರ, ನವೆಂಬರ್ 20, 2013

ಉಡುಪಿ : ಹಕ್ಕುಗಳೆಂಬುವುದು ಎಲ್ಲೋ ಕಡತದ ವಿಷಯ ವಸ್ತುವಲ್ಲ. ಅದು ಪ್ರತಿಯೊಬ್ಬ ನಾಗರೀಕರ ದಿನನಿತ್ಯದ ಬದುಕಿನ ಅನಿವಾರ್ಯ ಭಾಗ. ಹಕ್ಕು ಅಂದರೇನು ಎಂದು ತಿಳಿಯದೇ ಇರುವ ಜನಸಮುದಾಯವೂ ನಮ್ಮ ನಡುವೆ ಇದ್ದಾರೆ. ಹಕ್ಕುಗಳನ್ನು ಪರಿಚಯಿಸುವ ಅದನ್ನು ಪಡೆಯುವತ್ತ ಪ್ರೇರೇಪಿಸುವ ಕೆಲಸವನ್ನು ಬ್ರೇಕ್ ಥ್ರೂ ತಂಡವು ೫ ವರ್ಷಗಳಿಂದ ಮಾಡುತ್ತಿವೆ. ಮಹಿಳಾ ಮತ್ತು ಅಭಿವೃದ್ದಿ ಇಲಾಖೆ ರಾಜೇಂದ್ರ ಬೇಕಲ್ ಇವರಿಂದ ಸಿಟಿಬಸ್ ನಿಲ್ದಾಣದ ಪಾರ್ಕಿಂಗ್ ಏರಿಯಾದಲ್ಲಿ ಇಂದು ಬೆಳಿಗ್ಗೆ " ಬೆಲ್ ಮಾಡಿ ಆಂದೋಲನ" ಹಮ್ಮಿಕೊಳ್ಳಲಾಯಿತು.
vlcsnap-2013-11-18-12h15m54s24
ಹಿಂಸೆ ಮಾಡುವವರು ಒಮ್ಮೆ ಯೋಚಿಸುವಂತಾಗಬೇಕು ಎಂಬ ಧ್ಯೇಯವನ್ನಿಟ್ಟುಕೊಂಡು ಈ ತಂಡ ಕಾರ್ಯನಿರ್ವಹಿಸುತ್ತಿದೆ. ಈ ವೀಡಿಯೋ ವ್ಯಾನ್ ನಲ್ಲಿ ಬೀದಿನಾಟಕ, ಜನಜಾಗೃತಿ ಹಾಡುಗಳು, ಫಿಲಂ ಶೋಗಳು, ಮಾಹಿತಿ ನೀಡುವ ಸರಳ ಕೈಪಿಡಿಗಳು ಹಾಗೂ ಸಾರ್ವಜನಿಕರ ಅನಿಸಿಕೆ ಹಂಚಿಕೊಳ್ಳುವ ಮುಕ್ತ ಅವಕಾಶವಿದೆ.
vlcsnap-2013-11-18-12h15m58s59
ಬ್ರೇಕ್ ಥ್ರೂ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂರಕ್ಷಣಾ ಸಂಸ್ಥೆ. ಶಿಕ್ಷಣ, ಮಾದ್ಯಮ ಮತ್ತು ಜನಪ್ರಿಯ ಸಂಸ್ಕೃತಿಗಳ ಮೂಲಕ ಸಾರ್ವಜನಿಕ ಧೋರಣೆಗಳನ್ನು ಸುಧಾರಣೆ ಮಾಡುವ ಹಾಗೂ ನ್ಯಾಯ, ಶಾಂತಿ ಘನತೆಯ ಮೌಲ್ಯಗಳನ್ನು ಬೆಳೆಸುವತತ್ತ ಕೆಲಸ ಮಾಡುತ್ತಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ