ಸೋಮವಾರ, ನವೆಂಬರ್ 11, 2013

ಬೈಕ್ ಡಿಕ್ಕಿ: ಮಹಿಳೆ ಮೃತ್ಯು

ಉಡುಪಿ: ಲಕ್ಷ್ಮೀಂದ್ರನಗರದಲ್ಲಿ ಬೈಕ್ ಡಿಕ್ಕಿಯಾಗಿ, ಉಡುಪಿಯ ಸುವರ್ಣ ನ್ಯೂಸ್ ವರದಿಗಾರ ಶಶಿಧರ ಮಾಸ್ತಿಬೈಲು ಅವರ ತಾಯಿ ಮೃತಪಟ್ಟಿದ್ದಾರೆ.
ಲಕ್ಷ್ಮೀಂದ್ರನಗರ ಪ್ರಸನ್ನ ವಿನಾಯಕ ಮನೆಯ ದಿ.ಯೋಗೀಂದ್ರ ರಾವ್ ಅವರ ಪತ್ನಿ ಪ್ರೇಮಾವತಿ ಎಸ್.(೫೮) ಮೃತಪಟ್ಟವರು. ಮಣಿಪಾಲ ಪ್ರೆಸ್ ಉದ್ಯೋಗಿಯಾಗಿರುವ ಪ್ರೇಮಾವತಿಯವರು ಶನಿವಾರ ಸಂಜೆ ಕೆಲಸ ಮುಗಿಸಿ ಬಸ್ಸಲ್ಲಿ ಬಂದು ಲಕ್ಷ್ಮೀಂದ್ರ ನಗರದಲ್ಲಿ ಇಳಿದಿದ್ದರು. ರಸ್ತೆ ದಾಟುವ ವೇಳೆ ಅಭಿಷೇಕ್ ಶೆಟ್ಟಿ ಎಂಬಾತ ಮಣಿಪಾಲ ಕಡೆಯಿಂದ ಚಲಾಯಿಸಿಕೊಂಡು ಬಂದ ಬೈಕ್ ಡಿಕ್ಕಿ ಹೊಡೆದಿದ್ದು, ರಸ್ತೆಗೆ ಬಿದ್ದ ಪ್ರೇಮಾವತಿ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಮಣಿಪಾಲ ಕೆ‌ಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ಮೃತಪಟ್ಟಿದ್ದಾರೆ.
ಪ್ರೇಮಾವತಿಗೆ ಡಿಕ್ಕಿ ಹೊಡೆದ ಬೈಕ್ ಮುಂದಕ್ಕೆ ಹೋಗಿ ಪಲ್ಟಿಯಾಗಿದ್ದು, ಈ ಸಂದರ್ಭದಲ್ಲಿ ಮತ್ತೊಂದು ಬೈಕ್ ಬಂದು ಈ ಬಿದ್ದ ಬೈಕ್‌ಗೆ ಡಿಕ್ಕಿಯಾಗಿದೆ. ಅಭಿಷೇಕ್ ಶೆಟ್ಟಿ, ಅದೇ ಬೈಕ್‌ನ ಸಹಸವಾರಳಾಗಿದ್ದ ಕಾಜಲ್ ಶೆಟ್ಟಿ, ಹಾಗೂ ಮತ್ತೊಂದು ಬೈಕಲ್ಲಿದ್ದ ಇಬ್ಬರು ಕೂಡಾ ಗಾಯಗೊಂಡಿದ್ದಾರೆ.ಪ್ರೇಮಾವತಿಯವರಿಗೆ ಪುತ್ರ ಶಶಿಧರ ಮಾಸ್ತಿಬೈಲು ಹಾಗೂ ಪುತ್ರಿ ನಾಗಲಕ್ಷ್ಮೀ ಇದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ