ಗುರುವಾರ, ನವೆಂಬರ್ 14, 2013

ಮೂಡಬಿದಿರೆ : ಮೂಡಬಿದಿರೆಯಲ್ಲಿ ನಡೆಯಲಿರುವ ಆಳ್ವಾಸ್ ನುಡಿಸಿರಿ ವಿರಾಸತ್ ಗೆ ಸಿದ್ದತೆಗಳು ಆರಂಭಗೊಂಡಿದೆ. ಡಿಸೆಂಬರ್ ೧೯ ರಿಂದ ೨೨ ರವೆರೆಗೆ ಮುಡಬಿದಿರೆಯ ವಿದ್ಯಾಗಿರಿಯಲ್ಲಿ ನಡೆಯಲಿರುವ ವಿಶ್ವ ನುಡಿಸಿರಿ ವಿರಾಸತ್ ಗೆ ಡಾ ಬಿ ಎ ವಿವೇಕ್ ರೈ ಅವರನ್ನು ಆಯ್ಕೆ ಮಾಡಲಾಗಿದೆ. ಈ ಬಾರಿ ನುಡಿಸಿರಿಗೆ ಹತ್ತರ ಸಂಭ್ರಮ ಮತ್ತು ವಿರಾತ್ ಗೆ ೨೦ ರ ಸಂಭ್ರಮವಾಗಿರುವುದರಿಂದ ಏಕಕಾಲದಲ್ಲಿ ಈ ಬಾರಿ ಕಾರ್ಯಕ್ರಮ ಆಯೋಜಿಸಲಾಗಿದ್ದು ವಿವೇಕ್ ರೈ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ
ರಾಜ್ಯದ ಕಲಾಸಕ್ತರು, ಸಾಹಿತ್ಯಾಭಿಮಾನಿಗಳು ನಿರೀಕ್ಷೆಯಿಂದ ಕಾಯುತ್ತಿರುವ ಆಳ್ವಾಸ್ ನುಡಿಸಿರಿ ಮತ್ತು ಆಳ್ವಾಸ್ ವಿರಾಸತ್ ಸಂಭ್ರಮಕ್ಕೆ ಮತ್ತೆ ತಯಾರಿ ಆರಂಭಗೊಂಡಿದೆ. ಈ ಬಾರಿ ಡಿಸೆಂಬರ್ ೧೯ ರಿಂದ ೨೨ ರವರೆಗೆ ಈ ಸಂಭ್ರಮ ನಡೆಯುತ್ತಿದ್ದು ಈ ಬಾರಿ ನುಡಿಸಿರಿ ಮತ್ತು ವಿರಾಸತ್ ಒಂದೆ ವೇದಿಕೆಯಲ್ಲಿ ನಡೆಯುತ್ತಿರುವುದು ವಿಶೇಷವಾಗಿದೆ. ಈವರೆಗೆ ನುಡಿಸಿರಿ ಮತ್ತು ವಿರಾಸತ್ ಪ್ರತ್ಯೇಕ ಪ್ರತ್ಯೇಕವಾಗಿ ನಡೆಯುತ್ತಿದ್ದರೆ ಈ ಬಾರಿ ನುಡಿಸಿರಿಗೆ ಹತ್ತರ ಸಂಭ್ರಮ ಮತ್ತು ವಿರಾತ್ ಗೆ ೨೦ ರ ಸಂಭ್ರಮವಾಗಿರುವುದರಿಂದ ಏಕಕಾಲದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಅಧ್ಯಕ್ಷರಾಗಿ ಡಾ ಬಿ ಎ ವಿವೇಕ್ ರೈ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ ಎಂ ಮೋಹನ್ ಆಳ್ವ ತಿಳಿಸಿದ್ದಾರೆ.
ಕನ್ನಡ ಮನಸ್ಸು ಅಂದು ಇಂದು ಮುಂದು ಎಂಬ ಪರಿಕಲ್ಪನೆಯಡಿಯಲ್ಲಿ ನಡೆಯುತ್ತಿರುವ ಈ ಜಾಗತಿಕ ಸಮ್ಮೇಳನದಲ್ಲಿ ೪೦ ಸಾವಿರ ಪ್ರತಿನಿಧಿಗಳು ಭಾಗವಹಿಸಲಿದ್ದು ಪ್ರತಿದಿನ ಎರಡು ಲಕ್ಷ ಜನರಂತೆ ಒಟ್ಟು ಹತ್ತು ಲಕ್ಷ ಜನರು ಭಾಗವಹಿಸುವ ನಿರೀಕ್ಷೆಯನ್ನು ಸಂಘಟಕರು ಹೊಂದಿದ್ದಾರೆ. ೪ ವೇದಿಕೆಗಳಲ್ಲಿ ಚಿಂತನೆ , ೧೦ ವೇದಿಕೆಗಳಲ್ಲಿ ಸಾಂಸ್ಕೃತಿಕ ವೈಭವ ಆಯೋಜಿಸಲಾಗಿದೆ. ಯಕ್ಷಗಾನ, ನಾಟಕ, ಜಾನಪದ, ನೃತ್ಯ, ಸಂಗೀತ, ಬಾಲಪ್ರತಿಭೆ ಮೊದಲಾದ ಕಲಾ ಪ್ರಕಾರಗಳು ಈ ವೇದಿಕೆಯಲ್ಲಿ ಪ್ರದರ್ಶಿತಗೊಳ್ಳಲಿದೆ.
ಈ ಸಮ್ಮೇಳನದಲ್ಲಿ ಕೃಷಿ ಮತ್ತು ಜಾನಪದಕ್ಕೆ ವಿಶೇಷ ಒತ್ತು ನೀಡಿಕೊಂಡು ನಾಡು ನುಡಿಯನ್ನು ಪ್ರತಿಬಿಂಬಿಸುವ ಹಲವು ಪ್ರದರ್ಶನಗಳನ್ನು ಆಯೋಜಿಸಲಾಗಿದೆ. ಕನ್ನಡ ಸಂಸ್ಕೃತಿ ಗ್ರಾಮ, ೧೦೦೦ಕ್ಕೂ ಅಧಿಕ ಚಿತ್ರ ಕಲಾವಿದರು ಭಾಗವಹಿಸುವ ಆಳ್ವಾಸ್ ಚಿತ್ರಸಿರಿ, ಪುಸ್ತಕ ಪ್ರದರ್ಶನ, ವಸ್ತು ಪ್ರದರ್ಶನ, ಆಹಾರೋತ್ಸವವನ್ನು ಆಯೋಜಿಸಲಾಗಿದೆ.  ಒಟ್ಟು ಕಲಾರಸಿಕರನ್ನು ಮತ್ತು ಸಾಹಿತ್ಯಾಸಕ್ತರನ್ನು ಆಕರ್ಷಿಸುತ್ತಿದ್ದ ನುಡಿಸಿರಿ ಮತ್ತು ವಿರಾಸತ್ ಏಕಕಾಲದಲ್ಲಿ ಈ ಬಾರಿ ಆಯೋಜಿಸಲಾಗಿದ್ದು ಕಾರ್ಯಕ್ರಮ ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ