ಗುರುವಾರ, ನವೆಂಬರ್ 7, 2013

ಮೂಡನಂಬಿಕೆ ತಡೆಗೆ ಸಹಮತ :ಪೇಜಾವರ ಶ್ರೀ

ದೇವರಿಗೆ ಪೂಜೆ ಮಾಡುವುದು ಮೂಡನಂಬಿಕೆಯಲ್ಲ..ಸಮಾಜಕ್ಕೆ ಹಾನಿಕಾರಕ ಮೂಡನಂಬಿಕೆ ನಿಲ್ಲಿಸುವು ಯೋಗ್ಯ
vlcsnap-2013-11-06-21h05m25s17
ಉಡುಪಿ: ತೀವ್ರ ವಿವಾದ ಹುಟ್ಟು ಹಾಕಿರುವ ಮೂಡನಂಬಿಕೆ ಅಚರಣೆಗಳ ಪ್ರತಿಬಂಧಕ ಮಸೂದೆ 2013ರ ಕರಡು ಪ್ರತಿಯ ಬಗ್ಗೆ ಪ್ರತಿಕ್ರಿಯಿಸಿರುವ ಉಡುಪಿ ಪೇಜಾವರ ಮಠದ ಶ್ರೀ ವಿಶ್ವತ್ತೋಮ ಶ್ರೀಪಾದರು ಮೂಡನಂಬಿಕೆ ತಡೆಗೆ ನನ್ನ ಸಂಪೂರ್ಣ ಸಹಮತವಿದೆ ಅಂದಿದ್ದಾರೆ . ಉಡುಪಿಯಲ್ಲಿ ನಡೆದ ಸರ್ವಧರ್ಮ ದೀಪಾವಳಿ ಕಾರ್ಯಕ್ರಮದ ಚಾಲನೆಗೆ ಆಗಮಿಸಿದ ಸಂಧರ್ಭದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಪೇಜಾವರ ಶ್ರೀಗಳು ಸಮಾಜಕ್ಕೆ ಹಾನಿಕಾರಕಾವಾದ ಮೂಡ ನಂಬಿಕೆಗಳನ್ನು ನಿಲ್ಲಿಸುವುದು ಯೋಗ್ಯ, ಅದರೆ ನಂಬಿಕೆಯಾವುದೂ ಮೂಡನಂಬಿಕ ಯಾವುದೂ ಅನ್ನುವುದು ತೀರ್ಮಾನ ಮಾಡುವುದು ಕಷ್ಟ .ಹೀಗಾಗಿ ಸಮಾಜಕ್ಕೆ ಅಸಖ್ಯವಾದ ಮೂಡನಂಬಿಕೆಗಳನ್ನು ನಿರ್ಭಂದ ಮಾಡಬೇಕು ,ಅದರೆ ದೇವರಿಗೆಪೂಜೆ ಮಾಡುವುದು ಮೂಡನಂಬಿಕೆ ಅನ್ನುವುದು ತಪ್ಪಾಗುತ್ತದೆ.ಹೀಗಾಗಿ ವರದಿಯನ್ನು ಸರಕಾರ ಸಂಪೂರ್ಣ ಸ್ವೀಕಾರ ಮಾಡದೇ ..ಈ ಮಸೂದೆಯನ್ನು ಸರಿಯಾಗಿ ಪರಿಶೀಲಿಸಬೇಕೆಂದುಮನವಿ ಮಾಡಿದ್ದಾರೆ.ಸದ್ಯಕ್ಕೆ ಮಸೂದೆಯ ಬಗ್ಗೆ ಗೊಂದಲಗಳಿದ್ದು ಈಗಲೇ ತಾನು ಈ ಬಗ್ಗೆ ಅಭಿಪ್ರಾಯ ನೀಡುವುದು ಸೂಕ್ತವಲ್ಲ ,ಅಂತಿಮ ಘಟ್ಟಕ್ಕೆ ಬಂದಾಗ ಈ ಬಗ್ಗೆ ಪ್ರತಿಕ್ರಿಸುತ್ತೆನೆಅಂದಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ