ಬುಧವಾರ, ನವೆಂಬರ್ 13, 2013

ಉಡುಪಿ:ಬೆಂಗಳೂರಿನಲ್ಲಿ ನವೆಂಬರ್ ೧೭ರಂದು ನಡೆಯುವ ನರೇಂದ್ರ ಮೋದಿ ಸಮಾವೇಶದಲ್ಲಿ ಪಾಲ್ಗೊಳ್ಳಲು ನವೆಂಬರ್ ೧೬ರಂದು ಬೆಳಿಗ್ಗೆ ೮.೩೦ಕ್ಕೆ ಭಾರತೀಯ ಜನತಾ ಪಕ್ಷದ ಜಿಲ್ಲಾ ಉಪಾಧ್ಯಕ್ಷ ವಿಲಾಸ್ ನಾಯಕ್ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕುಂದಾಪುರದಿಂದ ಬೆಂಗಳೂರಿಗೆ ೪೫೦ ಕಿಲೋಮೀಟರ್ ದೂರವನ್ನು ಕ್ರಮಿಸಿ ಲಿಮ್ಕಾದಾಖಲೆಗೆ ಮುಂದಾಗಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಹೇಳಿದ್ದಾರೆ.
[youtuber youtube='http://www.youtube.com/watch?v=hxV-X--e2wI&feature=c4-overview&list=UUs0k8vSBwTqzHjMqn8PYrzQ']
ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ೨ಸಾವಿರ ಕಾರ್ಯಕರ್ತರೊಂದಿಗೆ ಬೈಕ್ ರ‍್ಯಾಲಿಯನ್ನು ನಡೆಸಲಿದ್ದು ನ ೧೬ರಂದು ಕುಂದಾಪುರದಲ್ಲಿ ೮.೩೦ಕ್ಕೆ ಉದ್ಘಾಟನೆ ಬಳಿಕ ಉಡುಪಿ, ಕಾರ್ಕಳ, ಧರ್ಮಸ್ಥಳ, ಸುಬ್ರಹ್ಮಣ್ಯ ಮಾರ್ಗವಾಗಿ ಬೆಂಗಳೂರಿನ ಅರಮನೆ ಮೈದಾನಕ್ಕೆ ರಾತ್ರಿ ೮ ಗಂಟೆಗೆ ತಲುಪಲಿದ್ದಾರೆ. ಈ ಹಿಂದೆ ಮೈಸೂರಿನಿಂದ ಮಂಗಳೂರಿಗೆ ೩೧೮ಕಿಲೋಮೀಟರ್ ಕ್ರಮಿಸಿ ದಾಖಲೆ ಮಾಡಿದ್ದ ಸಮರ್ಥ್‌ಶೆಣೈ ದಾಖಲೆ ಮುರಿಯಲಿದ್ದಾರೆ.ಎಂದು ತಿಳಿಸಿದರು.
ಮೂಡನಂಬಿಕೆ ವಿಚಾರದಲ್ಲಿ ಮುಖ್ಯಮಂತ್ರಿ ಮತ್ತು ಸಚಿವರ ನಡುವೆ ಭಿನ್ನಾಭಿಪ್ರಾಯ ಮೂಡಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೂಡನಂಬಿಕೆ ನಿಷೇದ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯ ಭೂತಾರಾಧನೆ, ನಾಗಾರಾಧನೆಯಂತಹ ಆರಾಧನೆ ಮೇಲೆ ಪರಿಣಾಮ ಬೀರಲಿದ್ದು ಸರ್ಕಾರ ಹಿಂದು ನಂಬಿಕೆಯನ್ನು ಕೆಣಕಬಾರದು ಎಂದು ಎಚ್ಚರಿಸಿದರು. ಜಿಲ್ಲಾ ಉಪಾಧ್ಯಕ್ಷ ವಿಲಾಸ್ ನಾಯಕ್, ಮಟ್ಟಾರು ರತ್ನಾಕರ್ ಹೆಗ್ಡೆ, ಶ್ಯಾಮಲಾಕುಂದರ್ ಮತ್ತಿತರರು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ