ಶುಕ್ರವಾರ, ನವೆಂಬರ್ 8, 2013

ಉಡುಪಿಯಲ್ಲಿ ನವೆಂಬರ್ ೧೦ ಕ್ಕೆ "ಮೋದಿ ಗೆಲ್ಲಿಸಿ" ಸಮಾವೇಶ

ಉಡುಪಿ:ನವೆಂಬರ್ 17 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಬಿಜೆಪಿ ಪ್ರಧಾನಿ  ಅಭ್ಯರ್ತಿ  ನರೇಂದ್ರ ಮೋದಿಯವರ "ಭಾರತ ಗೆಲ್ಲಿಸಿ "ಶಕ್ತಿ ಶಾಲಿ ಭಾರತಕ್ಕಾಗಿ ಬೃಹತ್ ಸಮಾವೇಶದ ಪ್ರಯುಕ್ತ, ಭಾರತೀಯ ಜನತಾ ಪಾರ್ಟಿ  ಉಡುಪಿ ನಗರ ಸಭೆ ವತಿಯಿಂದ ನವಂಬರ್ 10 ರಂದು  ಸಮಾವೇಶ ನಡೆಯಲಿದೆ ಎಂದು ಮಾಜಿ ಶಾಸಕ ರಘುಪತಿ ಭಟ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ನವೆಂಬರ್ 10 ರ ಮಧ್ಯಾಹ್ನ ಸುಮಾರು 3 ಗಂಟೆ ಹೊತ್ತಿಗೆ ಮಲ್ಪೆಯ ಗಾಂಧಿ ಪ್ರತಿಮೆ ಬಳಿ  ಸಮಾವೇಶ  ಕ್ಕೆ ಚಾಲನೆ ದೊರೆಯಲಿದೆ. ನಂತರ ಮಲ್ಪೆ ಸಿಟಿಜನ್ ಸರ್ಕಲ್ -ಕಲ್ಮಾಡಿ- ಕಲ್ಯಾಣಪುರ- ಅಂಬಾಗಿಲು- ಗುಂಡಿಬೈಲು- ದೊಡ್ಡಣಗುಡ್ಡೆ  ಲಕ್ಷ್ಮೀಂದ್ರ ನಗರ- ಎಂಐಟಿ -ಪರ್ಕಳ- ಮಣಿಪಾಲ- ಇಂದ್ರಾಳಿ- ಕಡಿಯಾಳಿ- ಕಲ್ಸಂಕ ಮಾರ್ಗವಾಗಿ  ಚಿತ್ತಂರಂಜನ್ ವೃತ್ತದ ಬಳಿ ಸಮಾರೋಪಹಗೊಳ್ಳಲಿದೆ.
ಸಮಾರೋಪ ಸಮಾರಂಭದಲ್ಲಿ ಚಿಕ್ಕ ಮಂಗಳೂರು ಶಾಸಕ  ಸಿಟಿ ರವಿ,ಉಡುಪಿ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ,ಯಶಪಾಲ್ ಸುವರ್ಣ,ಕಿರಣ್ ಕುಮಾರ್  ಉದಯ ಕುಮಾರ್ ಶೆಟ್ಟಿ  ಮತ್ತಿತ್ತರ ಬಿಜೆಪಿ ಮುಖಂಡರು ಭಾಗವಹಿಸಲಿದ್ದಾರೆ. ಎಂದು ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ