ಬುಧವಾರ, ನವೆಂಬರ್ 20, 2013

ಬೆಳ್ಮಣ್: ಡಾಮರೀಕೃತ ಈ ರಸ್ತೆಯಲ್ಲಿ ಡಾಮರು ಎಲ್ಲಿ ಎಂದು ಹುಡುಕಿದರು ನಮ್ಮ ಕಣ್ಣಿಗೆ ಗೊಚರಿಸುವುದಿಲ್ಲ ಏಕೆಂದರೆ ಈ ರಸ್ತೆಯ ಪರಿಸ್ಥಿತಿ ಅಷ್ಟು ದುಸ್ಥಿತಿಗೆ ತಲುಪಿದೆ. ರಸ್ತೆಗೆ ಹಾಕಲಾದ ಎಲ್ಲಾ ಜಲ್ಲಿ, ಟಾರುಗಳು ಎದ್ದು  ಚೆಲ್ಲ ಪಿಲ್ಲಿಯಾಗಿ ರಸ್ತೆಯಲ್ಲಿ ದೊಡ್ದ ದೊಡ್ಡ ಗಾತ್ರದ ಹೊಂಡ ಗುಂಡಿ ನಿರ್ಮಾಣವಾಗಿದ್ದು ಈ ರಸ್ತೆಯಲ್ಲಿ ಸಂಚಾರ ನಡೆಸುವುದೇ ಇದೀಗ ಅಸಾದ್ಯವಾಗಿದೆ.
ಕಾರ್ಕಳ ತಾಲೂಕಿನ ಬೆಳ್ಮಣ್ ಸಮೀಪದ ಸೂಡದಿಂದ ನಂದಳಿಕೆ ಗ್ರಾಮವನ್ನು ಸಂಪರ್ಕಿಸುವ ಈ ಭಗತ್ ಸಿಂಗ್ ರಸ್ತೆ ಇದೀಗ  ತೀರ ಹದಗೆಟ್ಟ ಪರಿಣಾಮ ಇಲ್ಲಿ ದೊಡ್ಡ ಪ್ರಮಾಣದ ವಾಹನಗಗಳು ಸಂಚರ ನಡೆಸುವುದು ಬಿಡಿ ಸಣ್ಣ ಪುಟ್ಟ ವಾಹನ ಸಂಚಾರ ನಡೆಸುವುದೇ ಇಲ್ಲಿ ಅಸಾಧ್ಯವಾಗಿದೆ.
ನಂದಳಿಕೆಯಿಂದ ಸೂಡ ಮಾರ್ಗವಾಗಿ ಉಡುಪಿ, ಮಂಚಕಲ್, ಪಳ್ಳಿ, ಮೂಡುಬೆಳ್ಳೆ ಪ್ರದೇಶವನ್ನು ತಲುಪಲು ಬಹು ಹತ್ತಿರದ ಮಾರ್ಗ ಇದಾಗಿತ್ತು ಅದರೆ ಇದೀಗ ಹೊಂಡ ಗುಂಡಿ ತುಂಬಿದ ರಸ್ತೆ ಇದಾದ ಪರಿಣಾಮ ಸವಾರರು ೭ -೮ ಕಿ.ಮೀ ಸುತ್ತಿ ಬಳಸಿಕೊಂಡು ಸಾಗಬೇಕಾದ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಿದೆ. ಕಳೆದ ಕೆಲ ವರ್ಷಗಳ ಹಿಂದೆ ಈ ರಸ್ತೆಗೆ ಡಾಮರೀಕರಣಗೊಂಡಾಗ ಈ ಭಾಗದ ಜನತೆ ಸಂತೋಷಗೊಂಡಿದರು ಆದರೆ ಈ ರಸ್ತೆ ತೀರ  ಹದಗೆಟ್ಟ ಪರಿಣಾಮ ಜನತೆ ನಿತ್ಯ ಕಣ್ಣೀರು ಸುರಿಸುವಂತಾಗಿದೆ.
ರಸ್ತೆಯಲ್ಲಿ ಎಲ್ಲೂ ಕೂಡ ಡಾಮರಿನ ಮಟ್ಟವೇ ಕಾಣುತಿಲ್ಲ , ಜಲ್ಲಿಕಲ್ಲು, ಚೆಲ್ಲ ಪಿಲ್ಲಿಯಾಗಿ ಬಿದ್ದಿರುವ ಪರಿಣಾಮ ಇಲ್ಲಿ ಸಂಚಾರ ನಡೆಸುವ ಸಣ್ಣ ಪುಟ್ಟ ವಾಹನ ಸವಾರರು ಕಷ್ಟಪಟ್ಟು ತಮ್ಮ ವಾಹನವನ್ನು ಸಾಗಿಸಬೇಕಾಗಿದೆ. ಸ್ವಲ್ಪ ಎಡವಿದರು ಇಲ್ಲಿ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಬೈಕ್ ಸವಾರರಂತು ನಿತ್ಯ ಬಿದ್ದೇಳುವ  ಪರಿಸ್ಥಿತಿ ಇಲ್ಲಿ ಸರ್ವೆ ಸಾಮಾನ್ಯ. ಡಾಮರಿಕೃತವಾದ ಈ ರಸ್ತೆಯನ್ನು ಕಂಡಾಗ ಇದು ಮಣ್ಣಿನ  ರಸ್ತೆಯೋ..? ಡಾಮರಿನ ರಸ್ತೆಯೋ..? ಎನ್ನುವ ಮಟ್ಟಕ್ಕೆ ಇಲ್ಲಿನರಸ್ತೆಯ ಪರಿಸ್ಥಿತಿ ತಲುಪಿದೆ.
ಈ ರಸ್ತೆಯಲ್ಲಿ ಘನ ವಾಹನಗಳು ಸಂಚರಿಸಬಾರದು ಎಂದು ನಿಯಮವನ್ನು ಮಾಡಿದರೂ ಇಲ್ಲಿ ಸಂಚಾರ ನಡೆಸುವ ಘನ ವಾಹನದ ಸಂಖ್ಯೆ  ಮಾತ್ರ ಕಮ್ಮಿಯಾಗಿಲ್ಲ. ಸೂಡ ನಂದಳಿಕೆ ಸುತ್ತ  ಮುತ್ತ ಹಲವಾರು ಕಲ್ಲಿನ ಕೋರೆಗಳಿರುವ ಕಾರಣ ಜಲ್ಲಿ ಕಲ್ಲುಗಳನ್ನು ತುಂಬಿದ ಲಾರಿ, ಟಿಪ್ಪರ್ ನಂತಹ ಘನ ವಾಹನಗಳು ಉಡುಪಿ, ಮಣಿಪಾಲವನ್ನು ತಲುಪಲು ಈ ಮಾರ್ಗ ಹತ್ತಿರದ ರಸ್ತೆಯಾದರಿಂದ ಇಲ್ಲೆ ಹೆಚ್ಚಾಗಿ ಸಂಚಾರ ನದೆಸುತ್ತದೆ. ಘನ ವಾಹನಗಳ ಆರ್ಭಟಕ್ಕೆ ಇಲ್ಲಿ ಈ ಭಗತ್ ಸಿಂಗ್ ರಸ್ತೆಯ ಜಲ್ಲಿ , ಟಾರು ಎಲ್ಲವೂ ಇದೀಗ ಕಿತ್ತು ಹೋದ ಕಾರಣ ಇಲ್ಲಿ ಸಣ್ಣ ಪುಟ್ಟ ವಾಹನ ಓಡಾಡುವುದೇ ಕಷ್ಟಕರವಾಗಿದೆ.
ಭಗತ್ ಸಿಂಗ್ ರಸ್ತೆಗೆ ಏನಾದರು ರಿಕ್ಷವನ್ನು ಬಾಡಿಗೆಗೆ ಕರೆದರೆ ಯಾರೊಬ್ಬರು ಈ ಮಾರ್ಗದಲ್ಲಿ ಸುಳಿಯಲು ಮನಸ್ಸೇ ಮಾಡುವುದಿಲ್ಲ , ಹೇಗಾದರೂ ಕಾಡಿ ಬೇಡಿ ರಿಕ್ಷವನ್ನು ಹತ್ತಿ ಬಂದರೂ ಬಾಡಿಗೆ ಮಾತ್ರ ಎರಡು ಪಟ್ಟು ಹೆಚ್ಚು ನೀಡಬೇಕಾಗುತ್ತದೆ.
ರಾತ್ರಿ ಹೊತ್ತಿನಲ್ಲಿ ಅಗತ್ಯ ಪರಿಸ್ಥಿತಿಯ ಸಂದರ್ಭದಲ್ಲಿ ವಾಹನದವರನ್ನು ಕರೆದರು ಈ ರಸ್ತೆಯ ಅವ್ಯವಸ್ಥೆಯಿಂದಾಗಿ ಯಾರೊಬ್ಬರೂ ಈ ರಸ್ತೆಯಲ್ಲಿ ಸಂಚರಿಸಲು ಮನ ಮಾಡುತ್ತಿಲ್ಲ. ಸೂಡ ಮತ್ತು ನಂದಳಿಕೆ ಗ್ರಾಮಗನ್ನು ಬಹು ಹತ್ತಿರದಿಂದ ಕೂಡಿಸುತ್ತಿದ್ದ ಈ ರಸ್ತೆ ಹದಗೆಟ್ಟ ಪರಿಣಾಮ ಇಲ್ಲಿನ ಗ್ರಾಮಸ್ಥರು ೭-೮ ಕಿ.ಮೀ ಸುತ್ತಿ ಬಳಸಿಯೇ ಸಾಗಬೇಕಾಗಿದೆ. ರಸ್ತೆಯ ತುಂಬೆಲ್ಲ ಜಲ್ಲಿ ಕಲ್ಲುಗಳು ಬಿದ್ದು ಕೊಂಡಿವೆ, ಕೆಲವೊಂದು ಕಡೆಗಳಲ್ಲಿ ಬೃಹತ್ ಗಾತ್ರದ ಹೊಂಡಳು ನಿರ್ಮಣವಾಗಿದೆ ಇದರಿಂದಾಗಿ ಈ ಭಾಗದ ಜನ್ತೆ ನಿತ್ಯ ಸಂಕಟವನ್ನು ಅನುಭವಿಸಬೇಕಾಗಿದೆ.
ಇನ್ನಾದರೂ ಸಂಬಂದ ಪಟ್ಟ ಅಧಿಕಾರಿಗಳು ಈ ರಸ್ತೆಯ ಕಡೆ ತಮ್ಮ ಚಿತ್ತವನ್ನು ಹಾಯಿಸಿ ಭಗತ್ ಸಿಂಗ್ ರಸ್ತೆ ಜನತೆಯ ಉಪಯೋಗಕ್ಕೆ ಬರುವಂತೆ ಮಾಡಬೇಕಾಗಿದೆ. ಅಲ್ಲದೆ ಸ್ಥಳೀಯ ಗ್ರಾಮ ಪಂಚಾಯತ್ ಇಲ್ಲಿ ನಿತ್ಯ ಸಂಚರಿಸುವ ಘನ ವಾಹನಗಳಿಗೆ ಬ್ರೇಕ್ ಹಾಕಬೇಕಾಗಿದೆ.
varadi: Hariprasad nandalike

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ