ಮಂಗಳವಾರ, ನವೆಂಬರ್ 5, 2013

ಜನರ ಕಣ್ಮನ ಸೆಳೆಯುತ್ತಿದೆ ೮ ಅಡಿ ಎತ್ತರ ಹಾಗೂ ೮ ಅಡಿ ಉದ್ದದ ನಕ್ಷತ್ರಾಕಾರದ ಗೂಡು ದೀಪ

ಕುಂದಾಪುರ: ಚಂದನ ಯುವಕ ಮಡಲ(ರಿ.) ಬೀಜಾಡಿ-ಗೋಪಾಡಿ ಇ‌ಅವರ ದಶಮ ವೈಭವದ ಪ್ರಯುಕ್ತವಾಗಿ ನಕ್ಷತ್ರಾಕಾರದ ಬ್ರಹತ್ ಗೂಡು ದೀಪವನ್ನು ಕುಂದಾಪುರ ತಾಲೂಕಿನ ಬೀಜಾಡಿ-ಹೂವಿನಕರೆ ಜಂಕ್ಷನಿನಲ್ಲಿ ಶನಿವಾರ ರಾತ್ರಿ ಅಳವಡಿಸಿದ್ದು ಜನರನ್ನು ಸೆಳೆಯುತ್ತಿದೆ.ಸುಮಾರು ೮ ಅಡಿ ಎತ್ತರ, ೮ ಅಡಿ ಉದ್ದ (ಅಗಲ)ವಿರುವ ಈ ಗಾಳಿಪಟವು ಆಕರ್ಷಕವಾಗಿದ್ದು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ. ಗಣೇಶ ಆಚಾರ್, ಮಹೇಶ ಮತ್ತು ವಿಘ್ನೇಶ್ ಆಚಾರ್ ಇವರ ಕೈ ಚಳಕದಲ್ಲಿ ಈ ಗಾಳಿಪಟ ನಿರ್ಮಾಣಗೊಂಡಿದೆ.
DSCN0713
ಚಂದನ ಯುವಕ ಮಂಡಲದ ಅಧ್ಯಕ್ಷ ಗಿರೀಶ್ ಉಪಾಧ್ಯ, ಕಾರ್ಯದರ್ಶಿ ಗೋಪಾಲ, ನಿಕಟಪೂರ್ವಾಧ್ಯಕ್ಷ ಗೋಪಿರಾಜ್, ಸ್ಥಳೀಯರಾದ ಬಿ. ಮಂಜುನಾಥ ಆಚಾರ್, ಜಿ. ನರಸಿಂಹ ಬತ್ತಡ್, ಮಂಜುನಾಥ ಮಡಿವಾಳ, ಕೆ. ಮಂಜುನಾಥ ಆಚಾರ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
DSCN0709

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ