ಗುರುವಾರ, ನವೆಂಬರ್ 7, 2013

ಉಡುಪಿಯಲ್ಲಿ ಸರ್ವಧರ್ಮ ದೀಪಾವಳಿ

vlcsnap-2013-11-06-21h31m01s22ಉಡುಪಿಯ ಕೆಥೋಲಿಕ್ ಸಭಾ ಸೌಹಾರ್ಧ ಸಮಿತಿಯಿಂದ ಸರ್ವ ಧರ್ಮ ದೀಪಾವಳಿ ಆಚರಣೆಯು ಶೋಕಾ ಮಾತಾ ಇಗರ್ಜಿಯಲ್ಲಿ ಜರಗಿತು .ಸುಮಾರು 10 ಅಡಿ ಅಗಲ, ನಾಲ್ಕು ಅಡಿ ಎತ್ತರವಿರುವ ಬೃಹತ್ ಗಾತ್ರದ ಮಣ್ಣಿನಿಂದ ತಯಾರಿಸಿದ ಹಣತೆಯನ್ನು ಉಡುಪಿಯ ಕರಾವಳಿ ಜಂಕ್ಷನ್ ನಿಂದ ಸರ್ವಿಸ್ ಬಸ್ಸು ನಿಲ್ಧಾಣದ ಮೂಲಕ ಕೆ ಎಂ ಮಾರ್ಗವಾಗಿ ಚೆಂಡೆ ವಾದ್ಯಗಳ ಮೆರವಣಿಗೆಯ ಮೂಲಕ ತಂದು ಶೋಕಾ ಮಾತಾ ಇಗರ್ಜಿಯ ಮುಂಭಾಗದಲ್ಲಿ ಪ್ರತಿಷ್ಠಾಪಿಸಿಲಾಯಿತು.vlcsnap-2013-11-06-21h31m07s81
vlcsnap-2013-11-06-21h29m55s125ಹಿರಿಯ ಯತಿಗಳಾದ ಪೇಜಾವರ ಶ್ರೀಗಳು ,ಉಡುಪಿ ಶೋಕಾಮಾತ ಇಗರ್ಜಿಯ ಧರ್ಮ ಗುರುಗಳು ರೇ ಫಾ ಫ್ರೆಡ್ ಮಸ್ಕರೇನಸ್ ,ಉದ್ಯಾವರ ಜಾಮೀಯ ಮಸೀದಿಯ ಮೌಲಾನ ಅಬ್ದುಲ್ ರಶೀದ್ ಬೃಹತ್ ಹಣತೆಗೆ ದೀಪ ಹಚ್ಚುವ ಮೂಲಕ ಸರ್ವಧರ್ಮ ದೀಪಾವಳಿ ಆಚರಣೆಗೆ ಚಾಲನೆ ನೀಡಿದರು.ನಂತರ ಜಾತೀ ಬೇದ ಭಾವ ಮರೆತು ಸಾರ್ವಜನಿಕರು ಇಗರ್ಜಿಯ ಸುತ್ತಲು ಹಣತೆಗಳಿಗೆ ದೀಪ ಹಚ್ಚುವ ಮೂಲಕ ಸರ್ವಧರ್ಮ ದೀಪಾವಳಿ ಸಂಭ್ರಮದಿಂದ ಆಚರಿಸಿದರು.vlcsnap-2013-11-06-21h29m50s77vlcsnap-2013-11-06-21h30m54s207vlcsnap-2013-11-06-21h30m59s253
vlcsnap-2013-11-06-21h28m53s15vlcsnap-2013-11-06-21h29m00s92vlcsnap-2013-11-06-21h29m06s146vlcsnap-2013-11-06-21h29m18s9vlcsnap-2013-11-06-21h29m22s59vlcsnap-2013-11-06-21h29m30s135vlcsnap-2013-11-06-21h29m36s190vlcsnap-2013-11-06-21h29m42s249vlcsnap-2013-11-06-21h29m46s35vlcsnap-2013-11-06-21h31m07s81

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ