ಶುಕ್ರವಾರ, ನವೆಂಬರ್ 1, 2013

ಕಡೆಕಾರಿನಲ್ಲಿ ತಾಳಮದ್ದಲೆ

ನಿಡಂಬೂರು ಯುವಕ ಮಂಡಲ ಕಳೆದ ಮೂವತ್ತು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಕಡೆಕಾರು ರಾಜಗೋಪಾಲಕೃಷ್ಣ ಸಂಸ್ಮರಣ ತಾಳಮದ್ದಲೆ ನವೆಂಬರ್ ೪, ೨೦೧೩ ಸೋಮವಾರ ಬಲಿಪಾಡ್ಯದಂದು ಅಪರಾಹ್ನ ೩.೩೦ರಿಂದ ನಿಡಂಬೂರು ಯುವಕ ಮಂಡಲದ ಸುವರ್ಣಮಹೋತ್ಸವ ಸ್ಮಾರಕಭವನಸಲ್ಲಿ ನಡೆಯಲಿದೆ.
ಭರತಾಗಮನ ಮತ್ತು ಶೂರ್ಪನಖಾ ಪ್ರಸಂಗ ಪ್ರಸ್ತುತಗೊಳ್ಳಲಿದ್ದು ಭಾಗವತರಾಗಿ ಪುತ್ತಿಗೆ ರಘುರಾಮ ಹೊಳ್ಳರು ಹಿಮ್ಮೇಳದಲ್ಲಿ ಅವರೊಂದಿಗೆ ಪದ್ಮನಾಭ ಉಪಾಧ್ಯಾಯ, ಲೋಕೇಶ್ ಕಟೀಲು ಸಹಕರಿಸುತ್ತಾರೆ. ಅರ್ಥಧಾರಿಗಳಾಗಿ ಸುಣ್ಣಂಬಳ ವಿಶ್ವೇಶ್ವರಭಟ್, ವಿದ್ವಾನ್ ಹಿರಣ್ಯ ವೆಂಕಟೇಶ ಭಟ್, ವಾಸುದೇವ ರಂಗಾ ಭಟ್ ಮತ್ತು ಸಂಕದಗುಂಡಿ ಗಣಪತಿಭಟ್ ಭಾಗವಹಿಸಲಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ