ಮಂಗಳವಾರ, ನವೆಂಬರ್ 5, 2013

ಉಡುಪಿಯ ಪರ್ಕಳದಲ್ಲಿ ತುಳುನಾಡ ಪಿರಂಗಿ ಪರಿಸರ ಮಾಲಿನ್ಯವಿಲ್ಲ ಅಪಾಯವೂ ಇಲ್ಲ

ಉಡುಪಿ:   ದೀಪಾವಳಿ ಅಂದ್ರೆ ದೀಪಗಳ ಹಬ್ಬ, ಅದರ ಜೊತೆ ಸಿಹಿ ತಿನಸು. ಇಷ್ಟಕ್ಕೆ ದೀಪಾವಳಿ ಮುಗಿಯೋದಿಲ್ಲ. ಹಬ್ಬದ ಖುಷಿ- ಸಂಭ್ರಮ ಹೆಚ್ಚಾಗೋದು ಪಟಾಕಿ ಸಿಡಿಸೋದ್ರಿಂದ. ಮಾರುಕಟ್ಟೆಯಲ್ಲಿ ತರಹೇವಾರಿ ಪಟಾಕಿಗಳು ಬಂದಿದೆ. ಪಟಾಕಿ ಹಸ್ಬೇಡಿ ಅಪಾಯ ಇದೆ ಅಂತ ಎಷ್ಟು ಹೇಳಿದ್ರೂ ಜನ ಕೇಳಬೇಕಲ್ಲ. ಆದರೆ ಇಲ್ಲೊಂದು ಪಟಾಕಿ ಇದೆ. ಅದನ್ನು ತುಳುನಾಡ ಫಿರಂಗಿ ಅಂತನೇ ಕರೀತಾರೆ. ಉಡುಪಿಯ ಪರ್ಕಳದ ಯುವಕರು ಈ ಸಾಂಪ್ರದಾಯಿಕ ಪಟಾಕಿ ಸಿಡಿಸುತ್ತಿದ್ದಾರೆ.
vlcsnap-2013-11-04-13h36m31s85
ಬಿದಿರಿನ ಕೋಲಿಗೆ ಒಂದು ರಂಧ್ರ ಕೊರೆಯಲಾಗುತ್ತದೆ. ಅದರೊಳಗೆ ಸ್ವಲ್ಪ ಸೀಮೆಯೆಣ್ಣೆ ಹನಿಗಳನ್ನು ಹಾಕಿ ಸೈಕಲ್ ಪಂಪಿನಲ್ಲಿ ಗಾಳಿ ತುಂಬಿಸೋದು. ಅದೇ ರಂಧ್ರಕ್ಕೆ ಬೆಂಕಿಕೊಡೋದು. ಯಾವುದೇ ಆಟಂ ಬಾಂಬ್‌ಗೆ ಕಮ್ಮಿಯಿಲ್ಲದಷ್ಟು ಶಬ್ದ. ಇದಕ್ಕೆ ಹೆಸರು ತುಳುನಾಡ ಪಿರಂಗಿ. ಬೆದ್‌ರ್ ಪಿರಂಗಿ ಅಂತ ತುಳುವಿನಲ್ಲಿ ಕರೀತಾರೆ.
vlcsnap-2013-11-04-13h37m11s224
ಈ ಪಟಾಕಿ ಸಿಡಿಸೋದ್ರಿಂದ ಪರಿಸರ ಮಾಲಿನ್ಯವೂ ಇಲ್ಲ. ಅಪಾಯವೂ ಇಲ್ಲ. ಮಕ್ಕಳಿಗೆ ಪಂಪ್ ಹೋಡಿಯೋದಕ್ಕೆ ಕಷ್ಟವಾಗ್ಬಹುದು. ಒಂದು ಲೀಟರ್ ಸೀಮೆಯೆಣ್ಣೆಯಿದ್ರೆ ೫೦೦ಕ್ಕೂ ಜಾಸ್ತಿ ಸಾರಿ ಶಬ್ದ ಬರಿಸಬಹುದು. ಸಾಂಪ್ರದಾಯಿಕ ಪಟಾಕಿಗೆ ಈಗಿನ ಯುವಕರು ಆಕರ್ಷಿತರಾಗಿರೋದು ಒಳ್ಳೆ ಬೆಳವಣಿಗೆ.
vlcsnap-2013-11-04-13h36m39s160

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ