ಸೋಮವಾರ, ನವೆಂಬರ್ 11, 2013

ಕಾನೂನಾದರೂ ಮುರೀಬಹುದು ಸಂಪ್ರದಾಯ ಮುರಿಯೋದು ಕಷ್ಟ.., ಉಡುಪಿಯಲ್ಲಿ ಆರೋಗ್ಯ ಸಚಿವ ಖಾದರ್ ಹೇಳಿಕೆ.

ಉಡುಪಿ: ರಾಜ್ಯದಲ್ಲಿ ಮೂಢನಂಬಿಕೆ- ಮಾಟ ಮಂತ್ರ ನಿಷೇಧ ವಿಚಾರದಲ್ಲಿ ಅಭಿಪ್ರಾಯ ಕ್ರೋಡೀಕರಣವಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಗ್ಗೆ ಸ್ಪಷ್ಟ ಹೇಳಿಕೆ ನೀಡಿದ್ದಾರೆ ಎಂದು ಆರೋಗ್ಯ ಸಚಿವ ಯು.ಟಿ ಖಾದರ್ ಹೇಳಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಖಾದರ್, ಈ ವಿಚಾರದಲ್ಲಿ ಸರ್ಕಾರ ಜನರ ಭಾವನೆಗಳ ಜೊತೆಗಿದೆ ಎಂದರು. ನಂಬಿಕೆ- ಮೂಡನಂಬಿಕೆ ವಿಚಾರದಲ್ಲಿ ಪ್ರತಿಯೊಬ್ಬರದ್ದೂ ಅಭಿಪ್ರಾಯ ಬೇಧವಿರುತ್ತದೆ. ಒಂದೊಮ್ಮೆ ಕಾನೂನನ್ನಾದರೂ ಮುರೀಬಹುದು ಆದರೆ ಸಂಪ್ರದಾಯ ಮುರಿಯೋದು ಕಷ್ಟ ಎಂದರು. ಉಡುಪಿಯಲ್ಲಿ ನಡೆದ ರಾಜ್ಯಮಟ್ಟದ ಸರ್ಕಾರಿ ವೈದ್ಯರುಗಳ ಸಮಾವೇಶ ನಿನಾದದಲ್ಲಿ ಪಾಲ್ಗೊಂಡ ಸಂದರ್ಭ ಮಾಧ್ಯಗಳ ಜೊತೆ ಮಾತನಾಡಿದರು.
ಆರೋಗ್ಯ ಇಲಾಖೆಯ ವೈದ್ಯರು ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ವೈದ್ಯರ ವೇತನ ತಾರತಮ್ಯ ನೀತಿಯನ್ನು ಸರಿಪಡಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇನೆ ಎಂದು ಆರೋಗ್ಯ ಸಚಿವ ಈ ಬಗ್ಗೆ ಸಾಕಷ್ಟು ಮನವಿಗಳು ಬಂದಿದೆ. ಈ ಎಲ್ಲಾ ಪತ್ರಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ