ದಂಪತಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿಯ ನೇಜಾರಿನಲ್ಲಿ ನಡೆದಿದೆ. ರತ್ನಾಕರ ಮತ್ತು ಪದ್ಮಾವತಿ ಆತ್ಮಹತ್ಯೆ ಮಾಡಿಕೊಂಡವರು.
[youtuber youtube='http://www.youtube.com/watch?v=vtf8-wohSdo&feature=c4-overview&list=UUs0k8vSBwTqzHjMqn8PYrzQ']
ಕೌಟುಂಬಿಕ ಸಮಸ್ಯೆಯೇ ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.

ಉಡುಪಿ ಜಿಲ್ಲೆಯ ನೇಜಾರಿನಲ್ಲಿ ಪದ್ಮಾವತಿ ಮತ್ತು ರತ್ನಾಕರ ದಂಪತಿಗಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ನಿನ್ನೆ ಸಂಜೆ ವೇಳೆಗೆ ದಂಪತಿಗಳಿಬ್ಬರು ಕಾಣೆಯಾಗಿದ್ದರು. ಸ್ಥಳೀಯರು ಮತ್ತು ಮನೆಯವರು ಹಡುಕಾಡಿ ಮಲ್ಪೆ ಪೋಲಿಸ್ ಠಾಣೆಗೆ ದೂರು ನೀಡಿದ್ದರು.ಇಂದು ಮುಸುಕಿನ ವೇಳೆ ಮನೆಯ ಸಮೀಪದ ಬಾವಿ ಬಳಿ ಚಪ್ಪಲಿ ಕಾಣಿಸಿಕೊಂಡಿದ್ದ ಸಂದರ್ಭ ಹುಡುಕಾಡಿದಾಗ ದಂಪತಿಗಳ ಮೃತದೇಹ ಬಾವಿಯಲ್ಲಿ ತೇಲುತ್ತಿದ್ದು ಕಂಡುಬಂದಿದೆ.

ರತ್ನಾಕರ ಮತ್ತು ಪದ್ಮಾವತಿ ದಂಪತಿಗಳು ಕೂಲಿನಾಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಮಗ ಸುನೀಲ್ ಗಾರೆ ಕೆಲಸ ಮಾಡುತ್ತಿದ್ದರೆ, ಮಗಳು ಸವಿತಾ ಸಮೀಪದ ಪ್ಲಾಸ್ಟಿಕ್ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಮಕ್ಕಳಿಬ್ಬರಿಗೆ ವಿವಾಹ ನಿಶ್ಚಯವಾಗಿದ್ದು ಜನವರಿ 12 ರಂದು ಮದುವೆ ದಿನ ಗೊತ್ತಾಗಿತ್ತು. ಮನೆಯಲ್ಲಿನ ಕೌಟುಂಬಿಕ ಸಮಸ್ಯೆ ಮತ್ತು ಮದುವೆಗೆ ಹಣದ ಅಡಚಣೆ ಆತ್ಮಹತ್ಯೆಗೆ ಕಾರಣವಾಗಿರಬಹುದು ಅಂತಾ ಸ್ಥಳೀಯರು ತಿಳಿಸಿದ್ದಾರೆ.

ಎರಡು ತಿಂಗಳಲ್ಲಿ ಮದುವೆ ನಡೆಯಬೇಕಾಗಿದ್ದ ಮನೆಯಲ್ಲಿ ಸೂತಕದ ಛಾಯೆ ಆವರಿಸಿಕೊಂಡಿದೆ. ಮಲ್ಪೆ ಪೋಲಿಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.














....................................
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ