ಸೋಮವಾರ, ನವೆಂಬರ್ 11, 2013

ಗ್ರಂಥಗಳ ನಿಜವಾದ ಅರ್ಥದ ಅರಿವು ಮುಖ್ಯ- ಶಾಂತಿಗಾಗಿ ಸಾಹಿತ್ಯ ಅಭಿಯಾನ ಉದ್ಘಾಟಿಸಿ ಶಾಸಕ ಪ್ರಮೋದ್ ಮಧ್ವರಾಜ್ ಕರೆ

ಉಡುಪಿ:ಉಡುಪಿ ಜಿಲ್ಲಾ ಸ್ವಾಗತ ಸಮಿತಿ ವತಿಯಿಂದ ಶಾಂತಿ ಪ್ರಕಾಶನದ ರಜತಮಹೋತ್ಸವದ ಅಂಗವಾಗಿ ಶಾಂತಿಗಾಗಿ ಸಾಹಿತ್ಯ ಅಭಿಯಾನದ ಪುಸ್ತಕ ಮಳಿಗೆ ಹಾಗೂ ವಿಷನ್ ಎಕ್ಸಪೋ ಬಾನುವಾರ ಉಡುಪಿ ನಗರದಲ್ಲಿ ನಡೆಯಿತು
ಶಾಸಕ ಪ್ರಮೋದ್ ಮಧ್ವರಾಜ್ ಪುಸ್ತಕ ಮಳಿಗೆಯನ್ನು ಉದ್ಘಾಟಿಸಿದರು, ಜಿಲ್ಲಾ ಕನ್ನಡಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ವಿಷನ್ ಎಕ್ಸಪೋ ಉದ್ಘಾಟಿಸಿದರು.
ಶಾಸಕ ಪ್ರಮೋದ್ ಮಧ್ವರಾಜ್, ಕುರಾನ್ ಗ್ರಂಥವನ್ನು ಬಿಡುಗಡೆಗೊಳಿಸಿ ಮಾತನಾಡಿ, ಮನುಷ್ಯ ಹೇಗೆ ಜೀವಿಸಬೇಕು ಎಂಬುದನ್ನು ಗ್ರಂಥಗಳು ಪ್ರತಿಪಾದಿಸುತ್ತವೆ, ಆದರೆ ಗ್ರಂಥಗಳನ್ನು ಸರಿಯಾಗಿ ಅಥೈಸಿಕೊಳ್ಳದೆ ಅಜ್ಞಾನದಿಂದ ಅಪಾರ್ಥಮಾಡಿಕೊಂಡು ಜೀವನವನ್ನು ಗ್ರಂಥಗಳಿಗೆ ವ್ಯಥಿರಿಕ್ತವಾಗಿ ನಡೆಸಿಕೊಂಡು ಹೋಗುವ ಪರಿಸ್ಥಿತಿ ಇದೆ ಎಂದು ತಿಳಿಸಿದರು.
Snapshot - 3

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ