ಗುರುವಾರ, ನವೆಂಬರ್ 7, 2013

ಪ್ರಮಾಣಿಕ ಆಟೋ ಡ್ರೈವರ್ಸ್....


ಮಣಿಪಾಲದಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಚಾರ ಪ್ರಕರಣ ನಡೆದ ನಂತರ ಆಟೋ ಚಾಲಕರೆಂದರೆ ತಾತ್ಸರ ಮನೋಭಾವದಿಂದ ನೋಡುವವರೆ ಹೆಚ್ಚು.ಯಾರೋ ಮಾಡಿದ ಕೃತ್ಯಕ್ಕೆ ಇಡೀ ಆಟೋ ಚಾಲಕ ಸಾಮೂದಾಯವೇ ತಲೆ ತಗ್ಗಿಸುವಂತಾಗಿತ್ತು.ಆಟೋ ಚಾಲಕರು ಕೆಟ್ಟವರಲ್ಲ ತಮ್ಮಲ್ಲೂ ಸ್ವಾಭಿಮಾನವಿದೇ...ನಿಯತ್ತಿದೆ ಅನ್ನೋದನ್ನ ಮಣಿಪಾಲದ ಆಟೋ ಚಾಲಕರು ಪದೇ ಪದೇ ತೋರಿಸಿ ಕೊಟ್ಟಿದ್ದಾರೆ.ಈ ಮೂಲಕವಾದ್ರೂ....ಇಡೀ ಆಟೋ ಚಾಲಕರ ಮೇಲಿರುವ ಕಳಂಕವನ್ನು ಹೋಗಲಾಡಿಸುವಂತಹ ಪ್ರಯತ್ನಗಳನ್ನು ಮಣಿಪಾಲದ ಆಟೋ ಚಾಲಕರು ಮಾಡುತ್ತಿದ್ದಾರೆ.
ಕಳೆದ ಹಲಾವಾರು ವರುಷಗಳಿಂದ ಮಣಿಪಾಲ ಆಟೋ ಚಾಲಕರ ಸಂಘ ತಮ್ಮ ಆಟೋಗಳಲ್ಲಿ ಪ್ರಯಾಣಿಕರು ಬಿಟ್ಟು ಹೋಗಿರುವ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಪೊಲೀಸರ ಮೂಲಕ ಸಂಭಂಧ ಪಟ್ಟವರಿಗೆ ಮುಟ್ಟಿಸಿದ್ದಾರೆ.ಮುನ್ನೆಯಷ್ಟೇ ಮಾಣಿಪಾಲದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿ ಗ್ರಾಹಂ ರೋಡ್ರಿಗಸ್ ರವರ ಸುಮಾರು 40 ಸಾವಿರ ಮೌಲ್ಯ ಮೋಬೈಲ್, ಹಸೀಬ್ ಆಲೋಕ್ ಅನ್ನುವವರ 35 ಸಾವಿರ ಮೌಲ್ಯದ ಲ್ಯಾಪ್ ಟಾಪ್ ಹಾಗೂ ವ್ಯಾಪರಿ ಐಮೋರೆಷ್ ಪಾಂಡೆ ಅನ್ನುವವರ ಪರ್ಸ್ ಸಮೇತ ಸುಮಾರು 21 ಸಾವಿರ ನಗದನ್ನು ಹರೀಶ್ ಪೂಜಾರಿ ,ಆನಂದ ಪೂಜಾರಿ ಹಾಗೂ ಲಕ್ಷ್ಮಣ ಪೂಜಾರಿ ಅನ್ನುವವರ ಆಟೋದಲ್ಲಿ ಬಿಟ್ಟು ಹೋಗಿದ್ದರು.
ಆಟೋದಲ್ಲಿ ಬಿಟ್ಟು ಹೋದ ವಸ್ತುಗಳನ್ನು ಗಮನಿಸಿದ ಆಟೋ ಚಾಲಕರು ಮಣಿಪಾಲದ ಆಟೋ ಚಾಲಕ ಸಂಘದ ಮೂಲಕ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ತಮ್ಮ ಸೊತ್ತುಗಳು ಕಳೆದು ಹೋದ ಬಗ್ಗೆ ದೂರು ನೀಡಲು ಬಂದಿದ್ದವರಿಗೆ, ಆಟೋ ಚಾಲಕರ ಸಮ್ಮುಖದಲ್ಲೇ ಉಡುಪಿ ಜಿಲ್ಲಾ ಎಸ್ ಪಿ ಬೋರಾಲಿಂಗಯ್ಯ ಪ್ರಯಾಣಿಕರ ವಸ್ತುಗಳನ್ನು ಹಸ್ತಾಂತರಿಸಿದರು.ಬೆಲೆಬಾಳುವ ವಸ್ತುಗಳನ್ನು ತಾವು ಇಟ್ಟುಕೊಳ್ಳದೇ ಪ್ರಮಾಣಿಕತೆಯಿಂದ ಹಿಂದುರುಗಿಸಿದ ಆಟೋ ಚಾಲಕರಿಗೆ ಪೊಲೀಸರು ಪ್ರಶಂಸಿದರು.
ಯಾವುದೋ ಒಂದೆರಡು ಕೆಟ್ಟ ಕೆಲಸಗಳಿಂದ ಹೋದ ತಮ್ಮ ಗೌರವನ್ನು ಹಿಂಪೆಡೆಯಲು ಮಣಿಪಾಲದ ಆಟೋ ಡ್ರೈವರ್ಸ್ ಹರಸಾಹಸ ಪಡುತ್ತಿದ್ದಾರೆ.ಎಲ್ಲಾ ಚಾಲಕರು ಇಂತಹದ್ದೇ ಪ್ರಮಾಣಿಕ ಕೆಲಸ ಕಾರ್ಯಗಳಲ್ಲಿ ತೊಡಗಿಸಿ ಕೊಂಡರೆ,ತಮ್ಮ ಮೇಲಿರುವ ಕಳಂಕವನ್ನೂ ಹೋಗಲಾಡಿಸಲು ಇದಕ್ಕಿಂತ ಉತ್ತಮ ಮಾರ್ಗ ಮತ್ತೊಂದಿರಲಿಕ್ಕಿಲ್ಲ ಅಂತಾರೆ ಪ್ರಮಾಣಿಕ ಆಟೋ ಡ್ರೈವರ್ಸ್.
P1020918

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ