ಮಂಗಳವಾರ, ನವೆಂಬರ್ 5, 2013

ವಿ.ಹಿಂ.ಪ. ಮತ್ತು ಬಜರಂಗದಳದಿಂದ ಕೋಟೇಶ್ವರದಲ್ಲಿ ಸಾಮೂಹಿಕ ಗೋಪೂಜೆ

ಕುಂದಾಪುರ:ನಮ್ಮ ಸಂಸ್ಕೃತಿಯಲ್ಲಿ ಕೆಲವೊಂದು ವಿಚಾರಗಳಿಗೆ ಪಾವಿತ್ರ್ಯ ಸ್ಥಾನವನ್ನು ನೀಡಲಾಗಿದ್ದು, ಗೋ ಮಾತೆಯನ್ನು ತಾಯಿಯ ಸ್ಥಾನದಲ್ಲಿ ಪೂಜಿಸಲಾಗುತ್ತದೆ. ಮಾನವನು ಜೀವನ ಪರ‍್ಯಂತವಾಗಿ ಕಾಮಧೇನುವಿನಿಂದ ಉಪಕೃತನಾಗುತ್ತಿದ್ದಾನೆ. ಇಂತಹ ಗೋವುಗಳ ರಕ್ಷಣೆ ಎಲ್ಲಾ ನಾಗರೀಕರ ಕರ್ತವ್ಯವಾದಾಗ ಮಾತ್ರ ಸಮಾಜದಲ್ಲಿ ಪರಿವರ್ತನೆ ಸಾಧ್ಯವಾಗುತ್ತದೆ.
ಸಮಾಜದ ರಕ್ಷಣೆಯಲ್ಲಿ ಸಮರ್ಥ ನಾಯಕನ ಪಾತ್ರವೂ ಹಿರಿದಾಗಿದ್ದು ಇದನ್ನು ಆರಿಸುವ ಮಹತ್ತರ ಜವಬ್ದಾರಿ ಪ್ರಜ್ಞಾವಂತ ನಾಗರೀಕರದ್ದಾಗಿದೆ ಎಂದು ಬಾಳೆಕುದ್ರು ಶ್ರೀ ಮಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ನೃರಸಿಂಹಾಶ್ರಮ ಸ್ವಾಮೀಜಿ ಆಶೀರ್ವಚನ ನೀಡಿದರು.
DSCN0757
ಅವರು ಸೋಮವಾರ ಕೋಟೇಶ್ವರ ಸರಸ್ವತಿ ಕಲ್ಯಾಣಮಂಟಪದಲ್ಲಿ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳ ಕೋಟೇಶ್ವರ ಘಟಕದ ನೇತೃತ್ವದಲ್ಲಿ ನಡೆದ ತೃತೀಯ ವರ್ಷದ ಸಾಮೂಹಿಕ ಗೋಪೂಜಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
DSCN0740
ವಿಶ್ವ ಹಿಂದು ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ, ಸ್ವಾತಂತ್ರ್ಯ ಪೂರ್ವದಿಂದಲೂ ಗಾಂಧೀಜಿಯವರ ಕನಸ್ಸು ಗೋ ಹತ್ಯೆಯನ್ನು ನಿಷೇದಿಸುವುದೇ ಆಗಿತ್ತು. ಆದರೇ ಇತ್ತೀಚಿನ ದಿನಗಳಲ್ಲಿ ಗಾಂಧೀಜಿಯವರು ಹಾಕಿಕೊಟ್ಟ ತತ್ವ ಆದರ್ಶಗಳನ್ನು ಮರೆಯಲಾಗುತ್ತಿದೆ. ಓಟ್ ಬ್ಯಾಂಕ್ ರಾಜಕಾರಣದ ಫಲವಾಗಿ ಗೋ ಹತ್ಯೆಯನ್ನು ನಿಷೇಧ ಮಾಡಲು ಹಿಂದೇಟು ಹಾಕುತ್ತಿರುವ ಸರಕಾರ ಲಜ್ಜೆಗೇಡಿತನ ಪ್ರದರ್ಶಿಸುತ್ತಿದೆ.
ಗೋ ಹತ್ಯೆ ನಿಷೇಧಕ್ಕೆ ಪೂರಕ ಕಾಯ್ದೆ ತರುವಲ್ಲಿ ರಾಜಕಾರಣಿಗಳು ಮನಸ್ಸು ಮಾಡುತ್ತಿಲ್ಲ ಎಂದು ಆರೋಪಿಸಿದ ಅವರು ದೇವತೆಗಳ ಅಗ್ರಸ್ಥಾನವಾಗಿರುವ ಗೋ ಮಾತೆಯ ರಕ್ಷಣೆಗೆ ನಾವೆಲ್ಲರೂ ಕಟಿಬದ್ಧರಾಗಬೇಕಾಗಿದೆ ಎಂದು ಕರೆ ನೀಡಿದರು. ಇಂತಹ ಕಾರ್ಯಕ್ರಮಗಳ ಮೂಲಕವಾಗಿ ಜನರಲ್ಲಿ ಗೋವುಗಳ ರಕ್ಷಣೆಯ ಬಗ್ಗೆ ಅರಿವು ಮೂಡುತ್ತದೆ ಎಂದರು. ಕೆ. ಹರೀಶ್ ಪೂಜಾರಿ ವಕ್ವಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
DSCN0743
ಮುಖ್ಯ ಅತಿಥಿಗಳಾಗಿ ಮಂಗಳೂರು ಬಜರಂಗದಳದ ವಿಭಾಗ ಸಂಚಾಲಕ ಶರಣ್ ಪಂಪ್‌ವೆಲ್, ಬಜರಂಗದಳದ ಉಡುಪಿ ಜಿಲ್ಲಾ ಸಂಚಾಲಕ ಸುನೀಲ್ ಕೆ.ಆರ್., ಜಿಲ್ಲಾ ಸಹಸಂಚಾಲಕರಾದ ಸುನೀತ್ ಬೈಲೂರು, ದಿನೇಶ ಕುಂದಾಪುರ, ವಿ.ಹಿಂ.ಪ. ಕೋಟೇಶ್ವರ ಘಟಕಾಧ್ಯಕ್ಷ ಗಣೇಶ ಭಟ್ ಬೀಜಾಡಿ, ಬಜರಂಗದಳ ಕೋಟೇಶ್ವರ ವಲಯಾಧ್ಯಕ್ಷ ಸುಬ್ರಮಣ್ಯ ಶೆಟ್ಟಿಗಾರ್ ಉಪಸ್ಥಿತರಿದ್ದರು.
DSCN0746
ವಿನಯ್ ವೈಯಕ್ತಿಕ ಗೀತೆ ಹಾಡಿದರು, ರಾಘವೇಂದ್ರ ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ಬಜರಂಗದಳ ತಾಲೂಕು ಸಹ ಸಂಚಾಲಕ ರವಿ ವಂದಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ