ಮಂಗಳವಾರ, ನವೆಂಬರ್ 5, 2013

. ಸಮುದಾಯದ‌ಎಚ್ಚರದಿಂದ ಮಕ್ಕಳ ರಕ್ಷಣೆ ಸಾಧ್ಯ:ಪ್ರೇಮಾನಂದ ಕಲ್ಮಾಡಿ

ಜಿಲ್ಲಾ ಮಕ್ಕಳ ರಕ್ಷಣಾಘಟಕ ಮಂಗಳವಾರ ಮರವಂತೆಯಲ್ಲಿ  ಆಯೋಜಿಸಿದ್ದ ಮಕ್ಕಳ ರಕ್ಷಣೆ ಮತ್ತು ಪೋಷಣೆಕುರಿತು‌ಅರಿವು ಶಿಬಿರವನ್ನು ತಾ. ಪಂ.ಸದಸ್ಯೆಲಕ್ಷ್ಮೀ ಮೆಂಡನ್ ಉದ್ಘಾಟಿಸಿದರು.
ಅನಕ್ಷರತೆ, ಬಡತನ, ಮೂಢನಂಬಿಕೆ, ಅಜ್ಞಾನ, ಐಶಾರಾಮಿ ವಸ್ತುಗಳ ಆಕರ್ಷಣೆ, ಸಾಮಾಜಿಕ ಸಂಪ್ರದಾಯಗಳು, ಹೆಚ್ಚು ಹಣದ‌ಆಕರ್ಷಣೆ ಮುಂತಾದ ಕಾರಣಗಳಿಂದ ಮಕ್ಕ ಳು ಮತ್ತು ಮಹಿಳೆಯರು ಸಾಗಾಣಿಕೆಗೆತುತ್ತಾಗುತ್ತಾರೆ.ಈ ಕುಕೃತ್ಯದಲ್ಲಿ‌ಅವರ ಪರಿಚಿತರು, ಅಪರಿಚಿತರು ಭಾಗಿಗಳಾಗುತ್ತಾರೆ.ಇದರದುಷ್ಪರಿಣಾಮಕ್ಕೆಮಕ್ಕಳು ಮತ್ತುಮಹಿಳೆಯರು ಮಾತ್ರವಲ್ಲದೆ‌ಇಡೀ ಸಮುದಾಯ‌ಒಳಗಾಗುತ್ತದೆ.ಎಚ್ಚತ್ತಸಮುದಾಯದಿಂದ ಮಾತ್ರ‌ಇದನ್ನುತಡೆಗಟ್ಟಲು ಸಾಧ್ಯ‌ಎಂದು‌ಉಡುಪಿ ನೇಟಿವ್ ಸಂಸ್ಥೆಯ ಪ್ರೇಮಾನಂದಕಲ್ಮಾಡಿ ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳರಕ್ಷಣಾಘಟಕ, ಸಮಗ್ರ ಶಿಶು ಅಬಿವೃದ್ಧಿ ಯೋಜನೆ ಸಂಯುಕ್ತವಾಗಿ ಮರವಂತೆಗ್ರಾಮ ಪಂಚಾಯತ್ ಸಹಯೋಗದಲ್ಲಿ‌ಅಲ್ಲಿನ ಸಾಧನಾ ಸಮುದಾಯ ಭವನದಲ್ಲಿ‌ಅಂಗನವಾಡಿ, ಆಶಾ, ಆರೋಗ್ಯಕಾರ್ಯಕರ್ತರು ಮತ್ತು ಸ್ತ್ರೀಶಕ್ತಿ ಸ್ವಸಹಾಯ ಸಂಘUಳ ಸದಸ್ಯರಿಗೆಮಂಗಳವಾರ ಏರ್ಪಡಿಸಿದ್ದ ಅರಿವು ಶಿಬಿರದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿದ್ದರು.
ಮಹಿಳೆ ಮತ್ತು ಮಕ್ಕಳ ಸಾಗಾಣಿಕೆಯ‌ಉದ್ದೇಶ, ಕಾರಣ, ಅದರಿಂದಾಗುವದುಷ್ಪರಿಣಾಮ ಮತ್ತುತಡೆಗಟ್ಟಲು ವಹಿಸಬೇಕಾದ ಕ್ರಮಗಳ ಕುರಿತು‌ಅವರು ವಿಸ್ತೃತ ಮಾಹಿತಿ ನೀಡಿದರು.
ಕಾರ್ಯಕ್ರಮವನ್ನುತಾಲೂಕು ಪಂಚಾಯತ್ ಸದಸ್ಯೆ ಲಕ್ಷ್ಮೀ ಮೆಂಡನ್ ಉದ್ಘಾಟಿಸಿದರು.ಗ್ರಾಮ ಪಂಚಾಯತ್‌ಅಧ್ಯಕ್ಷೆ ಕೆ.ಎ. ಸುಗುಣಾ‌ಅಧ್ಯಕ್ಷತೆ ವಹಿಸಿದ್ದರು.ಮಾಜಿ‌ಅಧ್ಯಕ್ಷ‌ಎಸ್. ಜನಾರ್ದನ ಮಹಿಳಾ ಮತ್ತು ಮಕ್ಕಳ ಸಾಗಾಣಿಕೆ‌ಒಂದು ಪಿಡುಗಾಗಿಸಮಾಜವನ್ನುಕಾಡುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಮಾಹಿತಿಕಾರ್ಯಕ್ರಮ ಸಕಾಲಿಕ ಮತ್ತು ಪ್ರಸ್ತುತ‌ಎಂದರು. ಸ್ಥಳೀಯ ಪ್ರಾಥಮಿಕಕೇಂದ್ರದ ವೈದ್ಯಾಧಿಕಾರಿಡಾ. ಗಿರೀಶಗೌಡ ಮಕ್ಕಳ ಮತ್ತು ಮಹಿಳೆಯರ ಪೋಷಣೆಯ ಬಗೆಗೆ ತಿಳಿಸಿದರು.
ಅಂಗನವಾಡಿ ಮೇಲ್ವಿಚಾರಕಿ ಸವಿತಾ ಶೆಟ್ಟಿ ಸ್ವಾಗತಿಸಿದರು.ಮಕ್ಕಳ ರಕ್ಷಣಾಧಿಕಾರಿ‌ಎಲ್ಲಪ್ಪ ಪ್ರಸ್ತಾವನೆಗೈದರು.ಉಪಾಧ್ಯಕ್ಷೆ ಪ್ರೇಮಾ ಪೂಜಾರಿ, ಮಾಜಿ‌ಅಧ್ಯಕ್ಷ ಎಂ.ನರಸಿಂಹ ಶೆಟ್ಟಿ, ಅಭಿವೃದ್ಧಿ‌ಅಧಿಕಾರಿ ಹರೀಶಕುಮಾರ ಶೆಟ್ಟಿ, ಸಹಾಯಕ ಶಿಶು ಅಭಿವೃದ್ಧಿ‌ಅಧಿಕಾರಿ ಹೊನ್ನಮ್ಮ ನಾಯಕ್ ವೇದಿಕೆಯಲ್ಲಿದ್ದರು.
MARAVANTHE Oct 3 0

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ