Pages

ಮಂಗಳವಾರ, ನವೆಂಬರ್ 5, 2013

ಬೆಳಕಿನ ಹಬ್ಬ ದೀಪಾವಳಿ

ಬನ್ನಂಜೆ ಬಾಬು ಅಮೀನ್..
o
ತೈತಿನಕಲೆ ಪರ್ಬ ( ಸತ್ತವರ ಹಬ್ಬ / ನರಕ ಚತುರ್ದಶಿ )
'ದೀಪೊಲಿ' ತಿಂಗಳಲ್ಲಿ ಬರುವ ಹಬ್ಬವೇ ದೀಪಾವಳಿ. 'ತೈತಿನಕಲೆ ಪರ್ಬ' ದೀಪಾವಳಿಯ ಪ್ರಾರಂಭದ ಆಚರಣೆ. ಮರುದಿನ 'ಬಲೀಂದ್ರ ಪೂಜೆ'ದೀಪಾವಳಿಗೂ ತುಳು ನೆಲಕ್ಕೂ ಪ್ರಾಚೀನದ ನಂಟು. ಶ್ರ್‍ಅಮಿಕ ಕೃಷಿಕ ಕೂಡುಕಟ್ಟುಗಳಲ್ಲಿ ಬಳಕೆಯಲ್ಲಿರುವ 'ಬರಿ' ಜಾತಿಯಲ್ಲಿ ಮೂಲ ಗೋತ್ರವನ್ನು ಪ್ರತಿನಿಧಿಸುವುದು..ಬರಿಯು ಬಲಿಚಕ್ರವರ್ತಿಗೆ ತುಳುಭೂಮಿಯೊಂದಿಗಿದ್ದ ಅನಾದಿಯ ನಂಟನ್ನು ಉಳಿಸಿಕೊಂಡಿರುವ ಒಂದು ಸಾಂಕೇತಿಕ ಕೊಂಡಿಯಾಗಿರುವುದು ಇಂದು ಒಂದು   ಜಿಜ್ಞಾಸೆಯ ವಿಷಯ. ಮುಂದಿನ ಸಂಶೋಧಕರಿಗೆ ಸವಾಲೂ ಹೌದು. ತುಳುಭೂಮಿಯ ಮೂಲ ಜನಾಂಗದ ಅಸ್ತಿತ್ವವೇ ಬಲಿ ಚಕ್ರವರ್ತಿಯಿಂದ. ಒಂದು ಜಾನಪದ ನಂಬುಗೆಯಂತೆ ಉಡುಪಿ, ತಿರುಪತಿ ಮೊದಲಾದೆಡೆ ಇದ್ದ ಪ್ರಾಚೀನ ಮಂದಿರಗಳು ಬಲಿ ಚಕ್ರವರ್ತಿಯ ಪೂಜಾ ಕೇಂದ್ರಗಳಾಗಿದ್ದವು. ತುಳುನಾಡಿಗೆ ಆರ್ಯರ ಆಕ್ರಮಣಪೂರಿತ ಆಗಮನ , ಈ ಪ್ರದೇಶದಲ್ಲಿ ಸಂಸ್ಕೃತಿಯ ಘರ್ಷಣೆಗೆ ಕಾರಣವಾಯಿತು.ಸಂಘರ್ಷದಲ್ಲಿ ಬುದ್ಧಿವಂತನಿಗೆ ಗೆಲುವೇ ವಿನಃ ಪ್ರಾಮಾಣಿಕತೆಗಂತೂ ಆಲ್ಲ.
10nov_dipawali3
ದ್ರಾವಿಡ ಸಂಪ್ರದಾಯದ ನಂಬುಗೆಯಂತೆ ಮನೆಯಲ್ಲಿ ಯಾರು ತೀರಿಕೊಂಡರೂ ಅವರು ಮನೆ ಬಿಟ್ಟು ದೂರ ಹೋಗುವುದಿಲ್ಲ. ತುಳುವರು ಪುನರ್ ಜನ್ಮವನ್ನು ನಂಬುವುದಿಲ್ಲ ಎಂಬುವುದು ವಿಚಾರಾರ್ಹವಾಗಿರುವುದು. ನಶ್ವರವಾದ ಪಂಚಭೂತಗಳಿಂದ ನಿರ್ಮಿತಿಗೊಂಡು ದೇಹ ನಷ್ಟವಾದರೂ ಆತ ಮನೆಯಲ್ಲಿಯೇ ಇರುವನು. ಆದುದರಿಂದ ಮನೆಯಲ್ಲಿ ಮನೆಯಲ್ಲಿ ಆಳಿದ ಹಿರಿಯರ ನೆನಪಿಗಾಗಿ ;ಸತ್ತವರ ಹಬ್ಬ'. ಮರುದಿನ ಇದ್ದವರ ಹಬ್ಬ; ಮೂರನೆಯ ದಿನ ಗೋವುಗಳ ಹಬ್ಬ. ಹೀಗೆ ಎಷ್ಟೊಂದು ಅರ್ಥಪೂರ್ಣವಾಗಿ ದೀಪಾವಳಿಯ ಸಂಭ್ರಮದ ದಿನ ಹೆಣೆಯಲ್ಪಟ್ಟಿದೆ ಎನ್ನುವುದು ವಿವೇಚನೀಯವಾಗಿದೆ.
ಸತ್ತವರ ಹಬ್ಬಕ್ಕೆ ಬೂದಿಕುಂಬಳ ಪಲ್ಯ ಮಾಡಿ ಅನ್ನ, ಕಡುಬು, ಮೊದಲಾದವುಗಳನ್ನು 'ಮಿಸೆಲ್' ಇಡುವರು. ಆ ದಿನ ರಾತ್ರಿ ಅರಸಿನದ ಎಲೆಯಲ್ಲಿ ಸಿಹಿ ಕಡುಬು ತಯಾರಿಸುವರು.ಕತ್ತಲಾದ ಬಳಿಕ ಒಳಮನೆಯಲ್ಲಿ ಮಣೆಯ ಮೇಲೆ ಹೊಸ ಸೀರೆ , ಧೋತಿ, ಬಿಳಿ ಬಟ್ಟೆಯನ್ನು ಪ್ರ್‍ಏತಕ್ಕೆ ಉಡಲು ಇಡುವರು. ಪಕ್ಕದಲ್ಲಿ ಮೂರು ಕೊಡಿ ಬಾಳೆಯ ಎಲೆ ಅಡಿಕೆ ತಿನ್ನಲಿಡುವರು. ಮನೆಯ ಹೊರಗೆ ಅಡುಗೆ ಕೋಣೆಯ ಬಳಿ ಒಂದು ಪಾತ್ರೆಯಲ್ಲಿ ಬಿಸಿ ನೀರು ಇಡುವರು. ಬಡಿಸಿದಲ್ಲಿ ಒಂದು ಚೊಂಬು ನೀರಿಟ್ಟು ಮನೆಯ ಯಜಮಾನನು 'ಇಂದು ದೀಪಾವಳಿಯ ಮೊದಲ ದಿನ. ಸತ್ತವರ ಹಬ್ಬ. ಹೊರಗೆ ಬಿಸಿ ನೀರಿದೆ. ಸ್ನಾನ ಮಾಡಿ ಬಂದು ಹೊಸ ಬಟ್ಟೆ ಉಟ್ಟು ಅನ್ನ, ಕಡುಬು ಸ್ವೀಕರಿಸಿ ಈ ಸಂಸಾರವನ್ನು ಹಿರಿಯರಾದ ನೀವು ಈ ಹಿಂದಿನಂತೆಯೇ ರ್‍ಅಕ್ಷಿಸುತ್ತಿರಬೇಕು' ಎಂದು ಕ್ಯೆಮುಗಿದು ಆ ಬಳಿಕ ಎಲ್ಲರೂ ತಿರುಗಿ ನಿಲ್ಲುವರು. ಆಗ ಸತ್ತ ಹಿರಿಯರ 'ಕುಲೆ'ಗಳು ಉಂಡು ಹೋಗುವರು ಎಂಬ ನಂಬಿಕೆ ಇದೆ.
1350574815_447618680_1-Decorate-your-Doorstep-with-Readymade-Rangoli-Shakarpur
ದೀಪೊಲಿ ಪರ್ಬ  (ದೀಪಾವಳಿ ಹಬ್ಬ)
ಮರುದಿನ ಇದ್ದವರ ಹಬ್ಬ ದೀಪಾವಳಿ , ಬೆಳಗು ಮುಂಜಾನೆಯೇ ಹಬ್ಬದ ಸಡಗರ ಪ್ರಾರ್‍ಅಂಭವಾಗುವುದು. ದೊಡ್ಡ ಗುಡಾಣದ ಸುತ್ತ 'ಸೇಡಿ'ಯ ಅಲಂಕಾರ ಬರೆದು ನೀರು ತುಂಬಿಸಿ ಬಿಸಿ ನೀರು ಕಾಯಿಸುವರು. ಮನೆ ಮಂದಿಯೆಲ್ಲ ತೆಂಗಿನೆಣ್ಣೆಯನ್ನು ತಲೆ, ಮ್ಯೆಗೆ ಚೆನ್ನಾಗಿ ಹಚ್ಚಿಕೊಂಡು ಕುದಿಯುವ ಬಿಸಿ ನೀರ್‍ಅಲ್ಲಿ ಸ್ನಾನ ಮಾಡುವರು. ದಿನದ ಇಪ್ಪತ್ತನಾಲ್ಕು ಗಂಟೆಗಳೂ ಗದ್ದೆಯಲ್ಲಿ ಗೇಯಲು ಸಮಯ ಕಡಿಮೆಯಾಗುವ ಜನರಿಗೆ ಬೇರೆ ದಿನ ಸರಿಯಾಗಿ ಸ್ನಾನ ಮಾಡಲು ,ಉಣ್ಣಲು ವೇಳೇ ಇರುವುದಿಲ್ಲ. ಅದುದರಿಂದ ಮ್ಯೆಯಲ್ಲಿರುವ ಕೆಸರು ಮಣ್ಣು ಸಂಪೂರ್ಣ ತೊಳೆದು ಹೋಗಲು ಈಗ ತೈಲಾಭ್ಯಂಜನ ಸಹಕಾರಿಯಾಗುವುದು. ಮಿಂದು ಬಂದೊಡನೆ 'ಮೆತ್ತೆ ದೋಸೆ' ತಿನ್ನಲೀಯುವರು. ಮನೆಯಲ್ಲಿ ದೀಪಾವಳಿಗೆಂದೇ ಅವಲಕ್ಕಿ ಕುಟ್ಟಿ ತಯಾರಿಸುವುದೂ ಇದೆ. ಮಧ್ಯಾಹ್ನದ ಬಳಿಕ ದೊಡ್ಡ ಗುಡಾಣದಲ್ಲಿ 'ಉಡಾರ್ಗೆ' ಬೇಯಿಸುವರು.
4
ಬಲೀಂದ್ರ ಲೆಪ್ಪೂನಿ (ಬಲೀಂದ್ರ ಸ್ಮರಣೆ)
ಈ ದಿನ ಬಲೀಂದ್ರನ ಸ್ಮರಣೆಯಂತೂ ಬಲು ಸೊಗಸಾದ ಕಥಾನಕ .' ಕಡೆಲ್ ಗ್ ಪಾಂಪಾನಗ ,ಬಾನೊಗ್ ಲೆಂಚಿ ಆನಗ, ಗುರ್‍ಗುಂಜಿದ ಕಪ್ಪು ಮಾಜಿನಗ, ಮುಜಲಕ್ಕಿ ಮ್ಯೆ ಪಾಡ್ನಗ , ಕೊಟ್ರುಂಜ ಕೊಡಿ ಏರ್ನ್ಗಗ, ಉಪ್ಪು ಗೋಪುರಾನಗ ,ಬೊರ್ಗಲ್ಲ್ ಪೂವಾನಗ, ಆಟಿಡ್  ಬತ್ತಿ ಅಮಾಸೆ, ಸೋಣೊಡ್ ಬತ್ತಿ ಸಂಕ್ರಾಂದಿ ,ಬೊಂತೆಲ್ ಡ್ ಬತ್ತಿ ಕೊಡಿ ಪರ್ಬ - ಈ ಮೂಜಿ ದಿನತ ಬಲಿ ಕೊನೊದ್ ಬಲ್ತ್ ಡ್ಲ ಬಲೀಂದ್ರ ' ( ಸಮುದ್ರಕ್ಕೆ ಸೇತುವೆಯಾದಾಗ, ಆಕಾಶಕ್ಕೆ ಏಣಿಯಾದಾಗ , ಗುರುಗುಂಜಿ ಕಪ್ಪು ಚುಕ್ಕಿ ಮಾಸಿ ಹೋದಾಗ, ಮಜಲು ಹಕ್ಕಿ ಕಾಡಿಗೆ ಹಾಕುವಾಗ,  ಉಪ್ಪಿನ ಗೋಪುರವಾದಾಗ,  ಬೋರ್ಗಲ್ಲು ಹೂವಾದಾಗ ಆಟಿ ತಿಂಗಳಲ್ಲಿ ಬರುವ ಕೊಡಿ ಹಬ್ಬ ಈ ಮೂರರ ಬಲಿ ಕೊಂಡು ಓಡಿ ಹೋಗು ಬಲೀಂದ್ರ) ಎಂದು ಹೇಳಿ ಕೊನೆಗೆ ' ಕೂ...... ಎಂದು ರಾಗವಾಗಿ ಕೂಗುವರು. ಕೆಲವೆಡ್ರ್ "ಓ ಪೊಲ್ತೆಲಾ...... ಬಲಿಗಿಂಡ..... ಬಲೀಂದ್ರ.... ಬಲಿಬಲ್ಲ...... ಬಲಿಯೇ ..... ಓ ಕೂ....." ಎಂದು ಮಾತ್ರ ಕೂಗುವರು.  ಅಮಾವಾಸ್ಯೆಯ ರಾತ್ರಿಯ ಕಗ್ಗತ್ತಲ ನೀರವತೆಯಲ್ಲಿ ಹಳ್ಳಿಯ ಗದ್ದೆಗಳಲ್ಲಿ ಲಕ್ಷ ದೀಪಗಳು 'ದೀಪಕ ಮಾಲ ರಾಗವನ್ನು' ನೆನಪಿಸಿದರೆ, ಸಹಸ್ರ ದನಿಗಳಲ್ಲಿ ಬಲೀಂದ್ರ ಸ್ಮರಣೆ ತುಳುವ ಬಾನಂಗಳದಲ್ಲಿನ್ ಇಂಪಾದ ಮಾರ್ದನಿಯನ್ನು ನೀಡಿ ಬಲೀಂದ್ರ ನಿಜವಾಗಿ ಭೂಮಿಗಿಳಿದು ಬಂದನೋ ಕಲ್ಪನೆಯನ್ನು ನಮಗೆ ನೀಡುವುದರೊಂದಿಗೆ ಹಬ್ಬದುತ್ಸವವನ್ನು ನೂರ್‍ಮಡಿಗೊಳಿಸುವುದು.
1
ಇಲ್ಲಡ್ ಪೂಜೆ (ಮನೆಯಲ್ಲಿ ಪೂಜೆ)
ಗದ್ದೆಗಳಿಗೆ ದೀಪವಿಡುವ ಕೆಲಸ ಮುಗಿದ ಬಳಿಕ ಮನೆಯ ಅಂಗಳದಲ್ಲಿ ಬ್ ಬೈ ಹುಲ್ಲಿನ ಬಣವೆಯ ಬಳಿ , ಅಂಗಳದ ಮಧ್ಯ ಭಾಗದಲ್ಲಿ 'ಪಡಿಮಂಚ' ಇರಿಸುವರು. ಅದರ ಮೇಲೆ ವೀಳ್ಯ, ಅಡಿಕೆ , ತೆಂಗಿನಕಾಯಿ ಹೋಳು, ಜಗ್ ಮ ಸೊಪ್ಪು, ಕೋಲು ನಿನೆ ಇರಿಸಿ ಬಲೀಂದ್ರನ ಸ್ಮರಣೆ ಮಾಡುವರು. ಅದೇ ರ್‍ಈತಿ ಗೊಬ್ಬರದ ರಾಶಿಯನ್ನು ದೀಪ ಇರಿಸಿ ಪೂಜಿಸುವರು.
1807733937_ac57714edc_o

97
ತುಳಸಿ ಪೂಜೆ
ಈ ದಿನ 'ತುಳಸಿಗೆ ಪೊಟ್ಟು' ಬಜಿಲ್ ಹಾಕುವ ಕ್ರಮ ಇದೆ. ತೆಂಗಿನ ಹೋಳು, ಪಾನಕ , ಅವಲಕ್ಕಿ, ಅಡಿಕೆ, ವೀಳ್ಯ , ಇವಿಷ್ಟುನ್ನು ತುಳಸಿಗೆ ಹಾಕಿ ತಿರುಪತಿ ದೇವರ ಆರಾಧನೆ ಮಾಡುವರು. ಮನೆಯ ಮಾಡಿನ ಒಳಭಾಗದಲ್ಲಿ ಕಟ್ಟಿರುವ ತಿರುಪತಿ ದೇವರ 'ಮುಡಿಪು' ಬಿಚ್ಹಿ ತರುವರು. ಮನೆ ಮಂದಿಯೆಲ್ಲ ಮುಡಿಪಿಗೆ ಕಾಣಿಕೆ ಹಾಕುವರು. ತುಳಸಿಗೆ ತೆಂಗಿನಕಾಯಿ ಒಡೆಯುವರು. ಆ ಬಳಿಕ ಬರುವ ಹುಣ್ಣಿಮೆಗೆ ವಿಶೇಷ ರೀತಿಯಲ್ಲಿ ತುಳಸಿ ಪೂಜೆ ಮಾಡುವ ಕ್ರಮ ಕೆಲವೆಡೆ ಇರುವುದು.
90
ಕಯ್ ಕಂಜಿಲೆ ಪರ್ಬ ( ಗೋವುಗಳ ಹಬ್ಬ)
ದೀಪಾವಳಿಯ ಮರುದಿನ ಗೋವು ಪೂಜೆ ನಡೆಸುವರು. ಎರ್‍ಅಡು ದಿನಗಳ ಹಬ್ಬದುತ್ಸವ ಮನುಷ್ಯನಿಗಾದರೆ, ಮಾರನೆಯ ದಿನ ಗೋವುಗಳಿಗೆ ಮೀಸಲು .ಗೋವುಗಳು ರೈತರ ಜೀವನದ ಅವಿಭಾಜ್ಯ ಅಂಗ, ಗೋಪೂಜೆಯ ದಿನ ಎಲ್ಲ ಗೋವುಗಳನ್ನು ಪ್ರಾತಃ ಕಾಲ ಕೆರೆ, ತೋಡುಗಳಿಗೆ ಒಯ್ದು ಚೆನ್ನಾಗಿ ತೊಳೆದು ಮೀಯಿಸುವರು. ಆ ಬಳಿಕ ನಾಮದ ಕಡ್ಡಿಯಲ್ಲಿ ಅವುಗಳಿಗೆ ಬಗೆ ಬಗೆಯ ಅಲಂಕಾರ ಮಾಡುವರು. ಗೊಂಡೆ ಹೂ, ' ಆಳ್ಳಿಕಂಡೆ ಪೂ' ಗಳ ಮಾಲೆ ಮಾಡಿ ಗೋವುಗಳ ಕೊರಳಿಗೆ ಹಾಕುವರು. ಮುತ್ತೈದೆಯರು ಗೋವುಗಳಿಗೆ ಆರತಿ ಬೆಳಗಿ ಪೂಜಿಸಿ, ಹಣೆಗೆ ತಿಲಕ ಹಚ್ಚುವರು. ಹಸುಗಳ ಪಾದ ತೊಳೆದು ತೀರ್ಥ ಸ್ವೀಕರಿಸುವರು. ಮನೆಯಲ್ಲಿ ತಯಾರಿಸಿದ 'ಉಡಾರ್‍ಗೆ' ಕಡುಬು , ಮೂಡೆ'ಗಳನ್ನು ತಿನ್ನಲೀಯುವರು..
veek_271011_udupi2
8

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ